Self Care Tips: ಪ್ರತಿನಿತ್ಯ ಸಂಜೆ 6 ಗಂಟೆಯ ನಂತರ ಹೀಗೆ ಮಾಡಿ, ಲೈಫ್ ಫುಲ್ ಹ್ಯಾಪಿ

By Suvarna NewsFirst Published Dec 23, 2021, 5:13 PM IST
Highlights

ಬೆಳಗ್ಗೆ (Morning) ನಗು ನಗುತ್ತಾ ದಿನ ಆರಂಭಿಸಿದವರು ಸಂಜೆ ಆಫೀಸ್ (Office) ಕೆಲಸ ಮುಗಿಯುತ್ತಲೇ ಸಿಡುಕುತ್ತಿರುತ್ತಾರೆ. ಆಫೀಸ್ ಕೆಲ್ಸ, ವರ್ಕ್ ಪ್ರೆಶರ್ ಡಿಸ್ಟರ್ಬ್ (Disturb) ಮಾಡ್ತಿದ್ಯಾ..ಹಾಗಿದ್ರೆ ಸಂಜೆ 6 ಗಂಟೆಯ ನಂತರ ಹೀಗೆ ಮಾಡಿ.. ಲೈಫ್ (Life) ಫುಲ್ ಹ್ಯಾಪಿ.

ಆಫೀಸ್ ಕೆಲ್ಸ, ವರ್ಕ್ ಪ್ರೆಶರ್, ಜೀವನ ಸಿಕ್ಕಾಪಟ್ಟೆ ಬೋರಿಂಗ್ ಅನಿಸ್ತಿದ್ಯಾ..ಅಥವಾ ಯಾವಾಗ್ಲೂ ಒತ್ತಡ, ಹಿಂಸೆ ಅನುಭವಿಸ್ತಿದ್ದೀರಾ..ಹಾಗಿದ್ರೆ ಆಫೀಸ್ ಕೆಲಸ ಮುಗಿದ ನಂತರ ಸಮಯವನ್ನು ಉತ್ತಮವಾಗಿ ಕಳೆಯುವುದು ಮುಖ್ಯ. ನಾವು ದಿನಪೂರ್ತಿ ಚೆನ್ನಾಗಿರಲು ಬೆಳಗ್ಗಿನ ದಿನಚರಿಯಲ್ಲಿ ಹೇಗೆ ಯೋಗ, ದೇವರ ಪ್ರಾರ್ಥನೆ ಮೊದಲಾದ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುತ್ತೇವೆಯೋ ಹಾಗೆಯೇ ಸಂಜೆಯ ಹೊತ್ತು ಸಹ ಹಲವು ಉತ್ತಮ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು. ಕೆಲಸ ಮುಗಿಸಿದ ಕೂಡಲೇ ಹಾಗೇ ಸುಮ್ಮನೆ ಇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ಆ ವರ್ಕ್ ಝೋನ್‌ನಿಂದ ಹೊರಗೆ ಬರುವುದಿಲ್ಲ. ಮನಸ್ಸಿನ ತುಂಬಾ ಅದೇ ಒತ್ತಡಗಳು ತುಂಬಿರುತ್ತವೆ. ಹೀಗಾಗಿ ಮನಸ್ಸನ್ನು ರಿಫ್ರೆಶ್ ಮಾಡಿಕೊಳ್ಳುವುದು ಅತೀ ಮುಖ್ಯ.

ಕೆಲಸದ ಒತ್ತಡದ ನಂತರ ಕೆಲವು ಆರೋಗ್ಯಕರ ಚಟುವಟಿಕೆಗಳನ್ನು ಮಾಡುವುದರಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಆರೋಗ್ಯಕರ ಜೀವನಕ್ಕಾಗಿ ಪ್ರತಿದಿನ ಸಂಜೆ 6 ಗಂಟೆಯ ನಂತರ ನೀವು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

Self Care Tips: ದೇಹಕ್ಕಾಗಿ ನೀವು ದುಡಿದರೆ, ನಿಮಗಾಗಿ ದೇಹ ದುಡಿಯುವುದು!

ಪರಿಸರದಲ್ಲಿ ಓಡಾಡಿ

ಆಫೀಸು ಕೆಲಸ ಮುಗಿದೊಡಗೆ ಮನೆ (Home)ಯ ಸುತ್ತಮುತ್ತಲ ಹಸಿರ ಪರಿಸರದಲ್ಲಿ ಅಥವಾ ಮನೆಯ ಸಮೀಪದ ಪಾರ್ಕ್‌ನಲ್ಲಿ ಸುಮ್ಮನೆ ಓಡಾಡಿ. ಜತೆಗೆ ಮೊಬೈಲ್ (Mobile), ಲ್ಯಾಪ್ ಟಾಪ್ ಏನನ್ನೂ ತೆಗೆದುಕೊಳ್ಳಬೇಡಿ. ಸುಮ್ಮನೆ ಗಿಡ ಮರಗಳ ಮಧ್ಯೆ ಓಡಾಡುತ್ತಾ ಪ್ರಕೃತಿಯ ಸೌಂದರ್ಯ ಸವಿಯಿರಿ. ಇದು ನಿಮ್ಮ ಮನಸಿಗೆ ಮುದ ಕೊಡುತ್ತದೆ. ಆ ಶಾಂತತೆ ಮನಸ್ಸಿಗೆ ಆಹ್ಲಾದಕರವೆನಿಸುತ್ತದೆ.

ಪುಸ್ತಕಗಳನ್ನು ಓದಿ

ಕೆಲಸ ಮುಗಿಸಿದ ಬಿಡುವಿನಲ್ಲಿ ಪುಸ್ತಕ (Book)ಗಳನ್ನು ಓದಿ. ದೇಶ ಸುತ್ತು ಕೋಶ ಓದು ಎಂಬಂತೆ..ಪುಸ್ತಕದ ಓದಿನಿಂದ ಹತ್ತೂರು ತಿರುಗಿದಷ್ಟು ಜ್ಞಾನ ಲಭಿಸುತ್ತದೆ. ಪುಸ್ತಕ ಓದು ಮನಸ್ಸಿನ ಒತ್ತಡ, ಜಂಜಾಟವನ್ನು ಹೋಗಲಾಡಿಸಿ ಮನಸ್ಸನ್ನು ತಿಳಿಗೊಳಿಸುತ್ತದೆ. ಪ್ರತಿದಿನ, ಕೆಲವೇ ಪುಟಗಳನ್ನು ಓದಲು ಕುಳಿತರೂ ಸಾಕು. ಇದು ನಿಮ ಜೀವನದೆಡೆಗಿನ ದೃಷ್ಟಿಕೋನವನ್ನು ಬದಲಾಯಿಸಲು ಸಹಾಯ ಮಾಡುತ್ತದೆ.

ಹವ್ಯಾಸಗಳತ್ತ ಗಮನಕೊಡಿ

ನೀವು ಚಿತ್ರ ಬಿಡಿಸುವುದು ಅಥವಾ ಅಡುಗೆ (Cooking) ಮಾಡಲು ಇಷ್ಟಪಡುತ್ತಿದ್ದರೆ ಕೆಲಸದ ಮುಗಿಸಿದ ಬಳಿಕ ಇಂಥಹಾ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮ ವಿವೇಕದ ಮೇಲೆ ಚೆನ್ನಾಗಿ ಕೆಲಸ ಮಾಡುತ್ತದೆ. ನಿಮಗೆ ಗೊತ್ತಿಲ್ಲ, ನೀವು ಅದರಲ್ಲಿ ಎಷ್ಟು ಒಳ್ಳೆಯದನ್ನು ಪಡೆಯಬಹುದು ಎಂದರೆ ಭವಿಷ್ಯದಲ್ಲಿ ಅದು ನಿಮಗೆ ಆದಾಯದ ಮೂಲವಾಗಬಹುದು.

Worst Lifestyle Habits: ಇಂಥಹಾ ಅಭ್ಯಾಸಗಳು ನೀವು ವಯಸ್ಸಾಗಿ ಕಾಣುವಂತೆ ಮಾಡುತ್ತದೆ

ನೃತ್ಯ ಅಥವಾ ಜಿಮ್‌ಗೆ ಜಾಯಿನ್ ಆಗಿ

ನಿಮ್ಮ ಇಡೀ ದಿನದ ಕುಳಿತುಕೊಳ್ಳುವ ಕೆಲಸದ ನಂತರ, ಸಂಜೆಯ ವೇಳೆ ನೃತ್ಯ ತರಗತಿಗೆ ಹೋಗಿ ಅಥವಾ ಜಿಮ್‌ (Gym)ಗೆ ಸೇರಿಕೊಳ್ಳಿ. ಇದರಿಂದ ದೇಹದ ಆರೋಗ್ಯ (Health)ವನ್ನೂ ಕಾಪಾಡಿಕೊಳ್ಳುವುದರ ಜತೆಗೆ ಫಿಟ್ ಆಗಿರುವಿರಿ.

ಸ್ನೇಹಿತರು ಅಥವಾ ಕುಟುಂಬದೊಂದಿಗೆ ಬೆರೆಯಿರಿ

ಪ್ರತಿದಿನ ಕೆಲಸದ ನಂತರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಮನಸ್ಸು ಹಗುರವಾಗುತ್ತದೆ. ಅಥವಾ ಸ್ನೇಹಿತ (Friends)ರಿಗೆ ಕರೆ ಮಾಡಿ ಮಾತನಾಡಿ. ಊರ ಹರಟೆಯೆಲ್ಲಾ ಹೊಡೆಯುತ್ತಾ ನೀವು ಗಂಟೆಗಟ್ಟಲೆ ಮಾತನಾಡಬೇಕಿಲ್ಲ. ಕೇವಲ 5-10 ನಿಮಿಷ ಮಾತನಾಡಿದರೆ ಸಾಕು ಮನಸ್ಸು ಹಗುರವಾಗುತ್ತದೆ. 

ಭಾಷಾ ಕೋರ್ಸ್‌ಗೆ ಸೇರಿಕೊಳ್ಳಿ

ಹೊಸ ಹೊಸ ಕೌಶಲ್ಯಗಳು ಕಲಿಯುವುದು ಎಂದಿಗೂ ವ್ಯರ್ಥವಾಗುವುದಿಲ್ಲ. ಹೀಗಾಗಿ ಸಂಜೆಯ ಹೊತ್ತಿಗೆ ಭಾಷಾ ಕಲಿಕೆ ಅಥವಾ ಭಾಷಾ ಕೋರ್ಸ್‌ಗೆ ಜಾಯಿನ್ ಆಗಿ. ಇದರಿಂದ ಮನಸ್ಸು ವರ್ಕ್ ಝೋನ್‌ನಿಂದ ಹೊರಬಂದು ರಿಫ್ರೆಶ್ ಆಗುತ್ತದೆ. ಬೇರೆ ಭಾಷೆಯನ್ನು ಕಲಿತುಕೊಂಡರೆ ನೀವು ಭವಿಷ್ಯದಲ್ಲಿ ಈ ಟ್ಯಾಲೆಂಟ್‌ನ್ನು ಇಟ್ಟುಕೊಂಡೇ ಉದ್ಯೋಗವನ್ನು ಪಡೆದು ಹಣವನ್ನೂ ಗಳಿಸಬಹುದು.

click me!