
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ (Cancer) ಅಪಾಯ ಹೆಚ್ಚಾಗ್ತಿದೆ. ಚಿಕ್ಕ ಮಕ್ಕಳಿಗೆ ಕ್ಯಾನ್ಸರ್ ಕಾಣಿಸಿಕೊಳ್ತಿದೆ. ಕೆಟ್ಟ ಆಹಾರ ಪದ್ಧತಿ ಹಾಗೂ ಜೀವನ ಶೈಲಿ ಈ ಕ್ಯಾನ್ಸರ್ ಹೆಚ್ಚಾಗಲು ಕಾರಣ. ತಜ್ಞರು, ಜೆನ್ ಜೀ (Gen Z)ಗಳಲ್ಲಿ ಕ್ಯಾನ್ಸರ್ ಅಪಾಯ ಏರಿಕೆಯಾಗ್ತಿರಲು ಯಾವ ಆಹಾರ ಕಾರಣ ಎಂಬುದನ್ನು ಹೇಳಿದ್ದಾರೆ. ಜೆನ್ ಜಿಗಳು ಆ ಆಹಾರದಿಂದ ದೂರವಿದ್ರೆ ತಕ್ಕ ಮಟ್ಟಿಗೆ ಕ್ಯಾನ್ಸರ್ ನಿಂದ ರಕ್ಷಣೆ ಪಡೆಯಬಹುದು. ಆಲ್ಕೋಹಾಲ್ ಮತ್ತು ಸಂಸ್ಕರಿಸಿದ ಮಾಂಸ, ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತಿವೆ ಎಂದು ಅಮೇರಿಕನ್ ಆಹಾರ ತಜ್ಞರು ಎಚ್ಚರಿಸಿದ್ದಾರೆ.
@oncology.nutrition.rd ಹೆಸರಿನ ಟಿಕ್ ಟಾಕ್ ಖಾತೆಯಲ್ಲಿ ವೈದ್ಯರು ಕ್ಯಾನ್ಸರ್ ಬಗ್ಗೆ ಅಪಾಯಕಾರಿ ವಿಷ್ಯ ಪತ್ತೆ ಮಾಡಿರೋದಾಗಿ ಹೇಳಿದ್ದಾರೆ. ಸಂಸ್ಕರಿಸಿದ ಮಾಂಸ ಹಾಗೂ ಆಲ್ಕೋಹಾಲ್ ಸೇವನೆಯಿಂದ ಯುವಕರಲ್ಲಿ ಕ್ಯಾನ್ಸರ್ ಹೆಚ್ಚಾಗ್ತಿದೆ. 1997 ಮತ್ತು 2012 ರ ನಡುವೆ ಜನಿಸಿದ ಮಕ್ಕಳು ಸಂಸ್ಕರಿಸಿದ ಮಾಂಸ ಮತ್ತು ಆಲ್ಕೋಹಾಲ್ ನಿಂದ ದೂರವಿದ್ದಷ್ಟು ಒಳ್ಳೆಯದು ಎಂದಿದ್ದಾರೆ.
ಧೂಮಪಾನದಿಂದ ಕ್ಯಾನ್ಸರ್ : ಸಂಸ್ಕರಿಸಿದ ಮಾಂಸ ಹಾಗೂ ಆಲ್ಕೋಹಾಲ್ ಜೊತೆ ಧೂಮಪಾನ ಕೂಡ ಕ್ಯಾನ್ಸರ್ ಗೆ ಕಾರಣವಾಗ್ತಿದೆ. ಧೂಮಪಾನ ಮಾಡುವ ವ್ಯಕ್ತಿ ಮಾತ್ರವಲ್ಲ ಅದ್ರ ಹೊಗೆ ತೆಗೆದುಕೊಳ್ಳುವ ವ್ಯಕ್ತಿಯೂ ಕ್ಯಾನ್ಸರ್ ಗೆ ಬಲಿ ಆಗ್ತಿದ್ದಾನೆ. ಧೂಮಪಾನ ಮತ್ತು ಕ್ಯಾನ್ಸರ್ ನಡುವೆ ಆಳವಾದ ಸಂಬಂಧವಿದೆ ಎನ್ನುತ್ತಾರೆ ತಜ್ಞರು. ಧೂಮಪಾನ, ದೇಹದಲ್ಲಿ ಅಪಾಯಕಾರಿ ಕೋಶಗಳನ್ನು ಅಭಿವೃದ್ಧಿಪಡಿಸುತ್ತದೆ. 1990 ರ ದಶಕದಿಂದ ಕ್ಯಾನ್ಸರ್ನ ಅಪಾಯ ಹೆಚ್ಚುತ್ತಿದೆ. ಹೆಚ್ಚಿನ ಯುವಕರು ಧೂಮಪಾನ, ಮದ್ಯಪಾನಕ್ಕೆ ದಾಸರಾಗ್ತಿದ್ದಾರೆ. ಬ್ರಿಟನ್ನಲ್ಲಿ ಪ್ರತಿ ವರ್ಷ ಸುಮಾರು 44,100 ಹೊಸ ಕೊಲೊನ್ ಕ್ಯಾನ್ಸರ್ ಪ್ರಕರಣ ಪತ್ತೆ ಆಗ್ತಿದೆ.
ಕ್ಯಾನ್ಸರ್ ಗೆ ಕಾರಣವಾಗುವ ಇತರ ಆಹಾರಗಳು : ಕ್ಯಾನ್ಸರ್ ಗೆ ಕಾರಣವಾಗುವ ಇತರ ಆಹಾರಗಳಲ್ಲಿ ಕರಿದ ಆಹಾರ ಸೇರಿದೆ. ಡೀಪ್ ಫ್ರೈ ಮಾಡಿದ ಆಹಾರವನ್ನು ಸೇವನೆ ಮಾಡದಂತೆ ವೈದ್ಯರು ಸಲಹೆ ನೀಡ್ತಾರೆ. ಇದಲ್ಲದೆ ಸಕ್ಕರೆ ಬೆರೆಸಿರುವ ಪಾನೀಯಗಳು ಕೂಡ ಕ್ಯಾನ್ಸರ್ ಗೆ ಕಾರಣವಾಗುತ್ತವೆ.
ಕ್ಯಾನ್ಸರ್ ನಿಂದ ರಕ್ಷಣೆ ಹೇಗೆ? : ಕ್ಯಾನ್ಸರ್ ಬರದಂತೆ ತಡೆಯಲು ಆಹಾರದಲ್ಲಿ ನಿಯಂತ್ರಣ ಮುಖ್ಯ. ಎಲ್ಲ ಪೋಷಕಾಂಶ ಸಿಗುವ ಆರೋಗ್ಯಕರ ಆಹಾರ ಸೇವನೆ ಮಾಡ್ಬೇಕು. ಇದಲ್ಲದೆ ವ್ಯಾಯಾಮ, ಒತ್ತಡದಿಂದ ದೂರ ಇರುವುದು ಬಹಳ ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.