Health Tips: ಈ ಖಾದ್ಯ ತೈಲಗಳಲ್ಲಿದೆ ವಿಷಕಾರಿ ಅಂಶ, ಬಳಕೆ ಮಾಡೋದ್ರಿಂದ ಹಾನಿಯೇ ಹೆಚ್ಚು!

By Suvarna News  |  First Published Oct 7, 2023, 5:49 PM IST

ಅಡುಗೆಯಲ್ಲಿ ಬಳಸುವ ತೈಲಗಳೇ ನಮ್ಮ ಆರೋಗ್ಯವನ್ನು ಹಾನಿ ಮಾಡಬಲ್ಲವು. ಇವುಗಳನ್ನು ದೀರ್ಘಕಾಲ ಬಳಸುವುದರಿಂದ ಮಧುಮೇಹ, ಕ್ಯಾನ್ಸರ್‌, ಹೃದ್ರೋಗ ಸೇರಿದಂತೆ ಹಲವು ರೀತಿಯ ಅಪಾಯ ಹೆಚ್ಚಬಹುದು. ವಿಷಕಾರಿ ಅಂಶದಿಂದ ಮನುಷ್ಯನ ಮೇಲೆ ಭಾರೀ ಪ್ರಭಾವ ಬೀರುವ ಪ್ರಮುಖ ಐದು ಖಾದ್ಯ ತೈಲಗಳು ಇವು. 
 


ದಿನನಿತ್ಯ ಅಡುಗೆ ತಯಾರಿಸಲು ನಾವು ಹಲವು ರೀತಿಯ ಎಣ್ಣೆಗಳನ್ನು ಬಳಕೆ ಮಾಡುತ್ತೇವೆ. ಮುಖ್ಯವಾಗಿ ಸೂರ್ಯಕಾಂತಿ ಎಣ್ಣೆ ಎಲ್ಲೆಡೆ ವ್ಯಾಪಕವಾಗಿ ಬಳಕೆಯಲ್ಲಿದೆ. ಜತೆಗೇ, ಹಲವು ರೀತಿಯ ಎಣ್ಣೆಗಳನ್ನು ಬಳಕೆ ಮಾಡುವುದು ಸಾಮಾನ್ಯ. ಆದರೆ, ಈ ಖಾದ್ಯ ತೈಲಗಳು ಆರೋಗ್ಯಕ್ಕೆ ಎಷ್ಟು ಪೂರಕವಾಗಿವೆ ಎಷ್ಟು ಹಾನಿಕಾರಕವಾಗಿವೆ ಎನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆ. ಈಗಂತೂ ಪ್ಯಾಕೆಟ್‌ ಖಾದ್ಯ ತೈಲಗಳಲ್ಲಿ ಹಲವು ರೀತಿಯ ಪೆಟ್ರೋಲಿಯಂ ಅಂಶ ಮಿಕ್ಸ್‌ ಆಗಿರುತ್ತದೆ ಎನ್ನುವುದು ಸರ್ವೇಸಾಮಾನ್ಯವಾಗಿ ಕೇಳಿಬರುವ ಮಾತು. ಹೀಗಾಗಿ, ಬಹಳಷ್ಟು ಜನ ಗಾಣದ ಎಣ್ಣೆಗಳಿಗೆ ಮೊರೆ ಹೋಗಿದ್ದಾರೆ. ಗಾಣದ ತೈಲವನ್ನೇ ಬಳಕೆ ಮಾಡಿದರೂ ಆರೋಗ್ಯದ ಮೇಲೆ ಕೆಲವು ಕೆಟ್ಟ ಪರಿಣಾಮಗಳು ಉಂಟಾಗಬಹುದು. ಏಕೆಂದರೆ, ಈ ಕೆಲವು ಖಾದ್ಯ ತೈಲಗಳಲ್ಲಿರುವ ವಿವಿಧ ಅಂಶಗಳು ಮಾನವನ ದೇಹದ ಮೇಲೆ ಉತ್ತಮ ಪರಿಣಾಮ ಬೀರುವುದಿಲ್ಲ. ಇವುಗಳ ಬಳಕೆಯಿಂದ ಹಾನಿಯೇ ಹೆಚ್ಚಾಗಬಹುದು. ಹೀಗಾಗಿ, ಯಾವ ಖಾದ್ಯ ತೈಲದಲ್ಲಿ ಯಾವ ರೀತಿಯ ವಿಷಕಾರಿ ಅಂಶವಿದೆ ಎಂದು ನೋಡಿಕೊಳ್ಳಿ.

•    ಕಾಟನ್‌ ಸೀಡ್‌ ಆಯಿಲ್ (Cotton Seed Oil) ಅಥವಾ ಹತ್ತಿ ಬೀಜದ ಎಣ್ಣೆ
ಹತ್ತಿ ಬೀಜದ ಎಣ್ಣೆಯನ್ನು ಚಿಪ್ಸ್‌, ಸಂಸ್ಕರಿತ (Processed) ಆಹಾರಗಳಲ್ಲಿ (Food) ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಹತ್ತಿ ಬೆಳೆಯ ಸಂರಕ್ಷಣೆಗೆ ವಿಪರೀತ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡಲಾಗುತ್ತದೆ. ಹತ್ತಿಯನ್ನು ಸಂರಕ್ಷಿಸಲು ಅನೇಕ ವಿಷಕಾರಿ (Toxic) ಅಂಶಗಳನ್ನು ನೇರವಾಗಿ ಸ್ಪ್ರೇ ಮಾಡಲಾಗುತ್ತದೆ. ಇವು ಬೀಜಗಳಲ್ಲಿ ನೆಲೆಯೂರಿ ತೈಲವನ್ನು ವಿಷಕಾರಿಯನ್ನಾಗಿ ಮಾಡುತ್ತವೆ. ಜತೆಗೆ, ಇದರಲ್ಲಿರುವ ಗಾಸಿಪೊಲ್‌ ಎನ್ನುವ ಅಂಶ ಮಾನವ ದೇಹಕ್ಕೆ (Human Body) ವಿಷಕಾರಿಯಾಗಬಹುದು. ಸಂತಾನಹೀನತೆ (Fertility), ವೀರ್ಯದ ಸಂಖ್ಯೆ ಕುಸಿಯುವುದು, ಗರ್ಭ ಧರಿಸಿದಾಗ ಸಮಸ್ಯೆ ಆಗುವುದು, ಲಿವರ್‌ ಸಮಸ್ಯೆ, ಉಸಿರಾಟದ ಸಮಸ್ಯೆಗಳು ಕಂಡುಬರಬಹುದು.

Tap to resize

Latest Videos

ಹೃದಯ, ಮೂಳೆ ಸ್ಟ್ರಾಂಗ್ ಆಗಬೇಕು ಅಂದ್ರೆ ಬ್ರೇಕ್ ಫಾಸ್ಟ್ ಗೆ ಇವನ್ನ ತಿನ್ನಿ

•    ಸೋಯಾಬೀನ್‌ ಎಣ್ಣೆ (Soybean)
ಹುದುಗುಬರಿಸಿದ ಸಾವಯವ ಸೋಯಾಬೀನ್‌ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಇದೇ ಮಾತನ್ನು ಅಮೆರಿಕದ ಸೋಯಾಬೀನ್‌ ಹಾಗೂ ಸೋಯಾಬೀನ್‌ ಎಣ್ಣೆಗೆ ಹೇಳಲು ಸಾಧ್ಯವಿಲ್ಲ. ಏಕೆಂದರೆ, ಅವು ಶೇಕಡ 90 ರಷ್ಟು ಪ್ರಮಾಣದಲ್ಲಿ ಸಂಸ್ಕರಿತವಾಗಿರುತ್ತವೆ ಹಾಗೂ ಅವು ಜೀನ್‌ ಮಾರ್ಪಾಡಿಗೆ (Gene Modification) ಒಳಪಟ್ಟಿವೆ. ಇದರ ಬಳಕೆಯಿಂದ ಮಧುಮೇಹದ (Diabetes) ಅಪಾಯ ಹೆಚ್ಚುತ್ತದೆ. ಇದರ ಪ್ರಭಾವ ಇನ್ಸುಲಿನ್‌ ಮೇಲೆ ಉಂಟಾಗುವುದರಿಂದ ಟೈಪ್‌ 2 ಮಧುಮೇಹ ಉಂಟಾಗುತ್ತದೆ. ಲಿವರ್‌, ಹೃದಯಕ್ಕೆ ಹಾನಿಯಾಗುತ್ತದೆ. ರೋಗ ನಿರೋಧಕ (Immune) ಶಕ್ತಿ ಕುಂದುತ್ತದೆ.

•    ಸ್ಯಾಫ್ಲವರ್‌ (Safflower) ಅಥವಾ ಕುಸುಬೆ ಎಣ್ಣೆ
ಸ್ಥಳೀಯವಾಗಿ ಕುಸುಬೆ ಎಂದು ಕರೆಯಲ್ಪಡುವ ಸ್ಯಾಫ್ಲವರ್‌ ಎಣ್ಣೆಯಲ್ಲಿ ಒಮೆಗಾ 6 ಫ್ಯಾಟಿ ಆಸಿಡ್‌ ಇದೆ. ಸಂಶೋಧಕರ ಪ್ರಕಾರ, ಒಮೆಗಾ-3 ಫ್ಯಾಟಿ ಆಸಿಡ್‌ ಇಲ್ಲದಿರುವುದು ಹಾಗೂ ಒಮೆಗಾ 6 ಫ್ಯಾಟಿ ಆಸಿಡ್‌ ಹೊಂದಿರುವ ಇದು ಮಾನವ ದೇಹಕ್ಕೆ ಹಾನಿಕರ. ಇದರ ಬಳಕೆಯಿಂದ ರಕ್ತದಲ್ಲಿ ಸಕ್ಕರೆ ಮಟ್ಟ (Blood Sugar Level) ಹೆಚ್ಚಾಗುವುದು ದೃಢಪಟ್ಟಿದೆ. ಜತೆಗೆ, ಕ್ಯಾನ್ಸರ್‌ (Cancer), ಹೃದ್ರೋಗ ಉಂಟಾಗುವ ಸಾಧ್ಯತೆ ಹೆಚ್ಚು. ಶಸ್ತ್ರಕ್ರಿಯೆ ಬಳಿಕ ರಕ್ತಸ್ರಾವವಾಗುವ ಸಮಸ್ಯೆ ಹೆಚ್ಚಬಹುದು. 

•    ಕ್ಯಾನೋಲಾ ಎಣ್ಣೆ (Canola)
ರಾಪ್‌ಸೀಡ್‌ ಸಸ್ಯದಿಂದ ಇದನ್ನು ಪಡೆಯಲಾಗುತ್ತದೆ. ಅಸಲಿಗೆ ಕ್ಯಾನೋಲಾ ಎನ್ನುವ ಸಸ್ಯವಿಲ್ಲ. ರಾಪ್‌ ಸೀಡ್‌ ಸಸ್ಯವನ್ನು ಅತ್ಯಧಿಕ ಸಂಸ್ಕರಣೆಗೆ (Process) ಒಳಪಡಿಸಲಾಗುತ್ತದೆ, ಉಷ್ಣದಲ್ಲಿ ಎಣ್ಣೆ ತೆಗೆಯಲಾಗುತ್ತದೆ. ಈ ಸಮಯದಲ್ಲಿ ಇದರಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್‌ ಕೆಟ್ಟ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಇದರಲ್ಲೂ ಒಮೆಗಾ 6 ಫ್ಯಾಟಿ ಆಸಿಡ್‌ ಇರುತ್ತದೆ. ಈ ಸಸ್ಯಗಳ ಜೀನ್‌ ಅನ್ನೂ ಸಹ ಅತ್ಯಧಿಕವಾಗಿ ಮಾರ್ಪಡಿಸಲಾಗಿದೆ. ಇದರ ಬಳಕೆಯಿಂದ ಸ್ಮರಣೆಗೆ (Memory) ಸಂಬಂಧಿಸಿದ ಸಮಸ್ಯೆ ಹೆಚ್ಚಬಹುದು.

ನವರಾತ್ರಿ ಉಪವಾಸ ಮಾಡ್ತೀರಿ ಅಂತಾದ್ರೆ ಇವನ್ನು ಫಾಲೋ ಮಾಡಿ, ಆರಾಮಾಗಿರಿ

•    ಸೂರ್ಯಕಾಂತಿ (Sunflower) ಎಣ್ಣೆ
ಅಡುಗೆ ಮನೆಯಲ್ಲಿ ವ್ಯಾಪಕವಾಗಿ ಬಳಕೆಯಾಗುವ ತೈಲ ಸೂರ್ಯಕಾಂತಿ. ಇದರಲ್ಲಿ ಅಲ್ಡಿಹೈಡ್ಸ್‌ (Aldehydes) ಎನ್ನುವ ವಿಷಕಾರಿ ಅಂಶವಿದ್ದು, ಇದು ಮಾನವನ ಡಿಎನ್‌ ಎ (DNA) ಅನ್ನು ಹಾನಿಗೊಳಪಡಿಸುತ್ತದೆ. ಅಧ್ಯಯನಗಳ ಪ್ರಕಾರ, ಇದರ ಬಳಕೆಯಿಂದ ಕ್ಯಾನ್ಸರ್‌, ಹೃದ್ರೋಗ (Heart Disease), ಅಲ್ಜೀಮರ್ಸ್‌, ಸ್ಥೂಲಕಾಯದ (Obesity) ಅಪಾಯ ಹೆಚ್ಚುತ್ತದೆ. 

click me!