
ಆರೋಗ್ಯವಾಗಿರಲು ಪ್ರತಿ ದಿನ ನಾವು ಆಹಾರ ಸೇವನೆ ಮಾಡೋದು ಬಹಳ ಮುಖ್ಯ. ನಾವು ಸೇವನೆ ಮಾಡುವ ಆಹಾರ ಆರೋಗ್ಯಕರವಾಗಿರಬೇಕು ಎಂಬುದು ಕೂಡ ಮಹತ್ವ ಪಡೆಯುತ್ತದೆ. ಪೌಷ್ಟಿಕಾಂಶವಿಲ್ಲದ ಆಹಾರ ಸೇವನೆ ಮಾಡೋದ್ರಿಂದ ಅನಾರೋಗ್ಯ ನಮ್ಮನ್ನು ಕಾಡುತ್ತದೆ. ನಾವು ದೈನಂದಿನ ಜೀವನದಲ್ಲಿ ಅನೇಕ ಆಹಾರವನ್ನು ಸೇವನೆ ಮಾಡ್ತೇವೆ. ಕೆಲವು ಆಹಾರವನ್ನು ಪ್ರತಿ ದಿನ ಬಳಸ್ತೇವೆ. ನಮ್ಮ ದೇಹಕ್ಕೆ ಎಲ್ಲ ರೀತಿಯ ಪೌಷ್ಟಿಕಾಂಶ ಬೇಕು. ಹಾಗಂತ ಯಾವುದೂ ಅತಿಯಾಗಬಾರದು. ನಾವು ಕೆಲ ಆಹಾರವನ್ನು ಮಿತಿ ಮೀರಿ ಸೇವನೆ ಮಾಡಿದ್ರೆ ಆಹಾರಗಳು ವಿಷದಂತೆ ಕೆಲಸ ಮಾಡುತ್ತವೆ. ಅದು ನಮ್ಮ ಅರಿವಿಗೆ ಬಂದಿರುವುದಿಲ್ಲ. ಇದು ದೇಹವನ್ನು ಹಲವು ರೀತಿಯಲ್ಲಿ ಹಾನಿಗೊಳಿಸುತ್ತದೆ. ಈ ಆಹಾರಗಳು ಕ್ಯಾಲೋರಿ ಹೆಚ್ಚಿಸುತ್ತವೆ. ಅದ್ರಲ್ಲಿ ಸೋಡಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ಅದು ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ನಾವಿಂದು ಯಾವ ಆಹಾರವನ್ನು ನಾವು ಅತಿ ಕಡಿಮೆ ಬಳಕೆ ಮಾಡಬೇಕು ಎಂಬುದನ್ನು ನಿಮಗೆ ಹೇಳ್ತೆವೆ.
ವಿಷ (Poison) ವಾಗಿ ಕೆಲಸ ಮಾಡುತ್ತೆ ಈ ಆಹಾರ (Food) :
ಮೈದಾ (Maida ) ಹಿಟ್ಟು ಅನಾರೋಗ್ಯಕ್ಕೆ ಮೂಲ : ಮೈದಾ ಆರೋಗ್ಯ (Health) ಕ್ಕೆ ಒಳ್ಳೆಯದಲ್ಲ ಎಂಬುದನ್ನು ತಜ್ಞರು ಅನೇಕ ವರ್ಷಗಳಿಂದ ಹೇಳ್ತಿದ್ದಾರೆ. ಮೈದಾವನ್ನು ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಿದ್ದರೆ ಅದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಇದು ಅಪಧಮನಿಗಳನ್ನು ಮುಚ್ಚುತ್ತದೆ. ಹಾಗೆಯೇ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಸಂಶೋಧನೆ ಪ್ರಕಾರ ಸಂಸ್ಕರಿಸಿದ ಮೈದಾ ಹಿಟ್ಟಿನ ಸೇವನೆ ಮಾಡಿದಾಗ ಆಹಾರದಲ್ಲಿರುವ ಶೇಕಡಾ 80ರಷ್ಟು ಫೈಬರ್ ನಾಶವಾಗುತ್ತದೆ. ಇದರಿಂದ ದೇಹಕ್ಕೆ ಅಗತ್ಯವಿರುವ ಫೈಬರ್ ಸಿಗುವುದಿಲ್ಲ. ನಾರಿನಂಶವಿಲ್ಲದೆ ಕಾರಣ ಕರುಳು, ದೇಹದ ಕೊಳೆಯನ್ನು ಶುದ್ಧಿಗೊಳಿಸಿ, ವಿಷವನ್ನು ಹೊರಗೆ ಹಾಕಲು ಸಾಧ್ಯವಾಗುವುದಿಲ್ಲ. ಇದ್ರಿಂದ ನಮ್ಮ ದೇಹ ಅನಾರೋಗ್ಯದ ಗೂಡಾಗುತ್ತದೆ.
ಅಡುಗೇಲಿ ಕರಿ ಬೇವು ಬಂದ್ರೆ ಎತ್ತಿಡುತ್ತೀರಾ? ತಿಂದ್ರೆ ಆರೋಗ್ಯಕ್ಕೆಷ್ಟು ಒಳ್ಳೇದು ನೋಡಿ
ವೈಟ್ ಬ್ರೆಡ್ (White Bread) ಬಳಕೆ ಕಡಿಮೆ ಮಾಡಿ : ಸಮಯದ ಅಭಾವದ ಕಾರಣ ಅನೇಕರ ಅಡುಗೆ ಮನೆಯನ್ನು ವೈಟ್ ಬ್ರೆಡ್ ಆವರಿಸಿದೆ. ಬೆಳಿಗ್ಗೆ ಟೀ ಜೊತೆ ಬ್ರೆಡ್ ತಿಂದು ಹೋಗುವ ಪ್ರವೃತ್ತಿ ಭಾರತದಲ್ಲೂ ಈಗ ಸಾಮಾನ್ಯವಾಗ್ತಿದೆ. ಬ್ರೆಡ್ ನಿಂದ ನಾನಾ ರೀತಿಯ ಆಹಾರ ತಯಾರಿಸಿ ತಿನ್ನುವವರೂ ಇದ್ದಾರೆ. ಬ್ರೆಡ್ ಜೊತೆ ಜಾಮ್ ಚಿಕ್ಕ ಮಕ್ಕಳನ್ನು ಆಕರ್ಷಿಸುತ್ತದೆ. ಬ್ರೆಡ್ ರುಚಿಯಾಗಿರುವ ಕಾರಣ ಎಲ್ಲರೂ ಇದನ್ನು ಇಷ್ಟಪಡ್ತಾರೆ. ಆದ್ರೆ ತುಂಬಾ ರುಚಿಯಾಗಿರುವ ಈ ಬ್ರೆಡ್ ದೇಹಕ್ಕೆ ದೊಡ್ಡ ಮಟ್ಟದ ಹಾನಿ ಮಾಡುತ್ತದೆ. ಬ್ರೆಡ್‌ನಲ್ಲಿರುವ ಪೊಟ್ಯಾಸಿಯಮ್ ಬ್ರೋಮೇಟ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವೈಟ್ ಬ್ರೆಡ್ಡನ್ನು ನೀವು ಪ್ರತಿ ದಿನ ಸೇವನೆ ಮಾಡ್ತಿದ್ದರೆ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗ್ಯಾಸ್, ಮಲಬದ್ಧತೆ ಮತ್ತು ಮಧುಮೇಹದಂತಹ ಸಮಸ್ಯೆಗೆ ನೀವು ತುತ್ತಾಗುತ್ತೀರಿ.
Yoga Tips : ಮಧುಮೇಹಿಗಳು ಈ ಯೋಗ ಮಾಡಿದ್ರೆ ಹೆಚ್ಚುತ್ತೆ ಸಮಸ್ಯೆ
ಘನೀಕೃತ ಆಹಾರ ಪದಾರ್ಥಗಳಿಂದ ದೂರವಿರಿ : ಇತ್ತೀಚಿನ ದಿನಗಳಲ್ಲಿ ಫ್ರೋಜನ್ ಫುಡ್ ಸೇವನೆ ಹೆಚ್ಚಾಗಿದೆ. ಇದು ನಿಧಾನವಾಗಿ ನಮ್ಮ ದೇಹವನ್ನು ವಿಷಗೊಳಿಸುವ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಘನೀಕೃತ ಆಹಾರವನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಸೋಡಿಯಂ ಮತ್ತು ಕೃತಕ ಸಂರಕ್ಷಕಗಳನ್ನು ಬಳಸಲಾಗುತ್ತದೆ. ಈ ಎರಡೂ ಸಂಯುಕ್ತಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಹಾರವನ್ನು ಹೆಪ್ಪುಗಟ್ಟಿಸಲು ಅನೇಕ ವಿಧಾನಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ಘನೀಕೃತ ಆಹಾರದಲ್ಲಿ ವಿಟಮಿನ್ ನಾಶವಾಗುತ್ತದೆ. ಈ ಆಹಾರದಲ್ಲಿ ಶೇಕಡಾ 70ರಷ್ಟು ಸೋಡಿಯಂ ಬಳಕೆ ಮಾಡಲಾಗುತ್ತದೆ. ಅತಿಯಾದ ಸೋಡಿಯಂ ಬಳಕೆಯಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ. ಹಾಗೆಯೇ ಹೃದಯ ಕಾಯಿಲೆಯ ಅಪಾಯ ಕೂಡ ಹೆಚ್ಚಾಗುತ್ತದೆ. ಈ ಎಲ್ಲ ಆಹಾರಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ಎಂದು ತಜ್ಞರು ಹೇಳ್ತಿಲ್ಲ. ಪ್ರಮಾಣವನ್ನು ಅತಿ ಕಡಿಮೆ ಮಾಡಿ ಎಂಬುದು ಅವರ ಸಲಹೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.