
ನವದೆಹಲಿ: ಭಾರತದಲ್ಲಿ ಹೊಸ ಸೋಂಕಿತರ ದಾಖಲಾತಿಯು ಕಡಿಮೆಯಾಗುತ್ತಿದ್ದು, ಮಂಗಳವಾರ 112 ಜನರಿಗೆ ಸೋಂಕು ದೃಢಪಟ್ಟಿದೆ. 3 ಜನರ ಸಾವಾಗಿದೆ (Death) ಹಾಗೂ ಇದರೊಂದಿಗೆ ಸಕ್ರಿಯ ಸಂಖ್ಯೆ 3490ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿ ಇದುವರೆಗೂ 220 ಕೋಟಿ ಡೋಸ್ ಕೋವಿಡ್ ಲಸಿಕೆ (Vaccine) ನೀಡಲಾಗಿದೆ. ಭಾರತ ದೇಶದ ಕೋವಿಡ್ ಅಂಕಿ ಅಂಶಗಳ ಪ್ರಕಾರ ಇದುವರೆಗೂ 4.46 ಕೋಟಿ ಮಂದಿ ಕೋವಿಡ್ ಸೋಂಕಿಗೆ ಒಳಪಟ್ಟಿದ್ದು, 4.41 ಕಲೋಟಿ ಜನ ಗುಣಮುಖರಾಗಿದ್ದಾರೆ. ಮತ್ತು 5.30 ಲಕ್ಷ ಮಂದಿ ಕೋವಿಡ್‌ನಿಂದ ಮೃತರಾಗಿದ್ದಾರೆ.
ಭಾರತದಲ್ಲಿ ಕೋವಿಡ್ ಪ್ರಕರಣಗಳ ಪ್ರಮಾಣ ಇಳಿಮುಖ
ಚೀನಾ ಸೇರಿ ಪ್ರಪಂಚದ ವಿವಿಧ ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿರುವ ವೇಳೆಯಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣಗಳ ಪ್ರಮಾಣ ತೀವ್ರವಾಗಿ ಇಳಿಮುಖವಾಗಿದೆ. ಕಳೆದ ವಾರ ಕೇವಲ 1103 ಪ್ರಕರಣ ದಾಖಲಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕು (Virus), ಸಾವು 32 ತಿಂಗಳ (ಸುಮಾರು 2.5 ವರ್ಷ) ಕನಿಷ್ಠ ಎನ್ನಿಸಿಕೊಂಡಿವೆ.
ಚೀನಾದಲ್ಲಿ ಕೋವಿಡ್ ಅಬ್ಬರ; ಮುಂದಿನ 3 ತಿಂಗಳಲ್ಲಿ ಶೇ.60 ಚೀನಿಯರಿಗೆ ಸೋಂಕು ಸಾಧ್ಯತೆ
ನವೆಂಬರ್ ಮೊದಲ ವಾರದಿಂದಲೂ ಇಳಿಕೆ ಹಾದಿಯಲ್ಲಿರುವ ಕೋವಿಡ್ ಕೇಸುಗಳು ಡಿ.12-18ನೇ ತಾರೀಖಿನ ವಾರದಲ್ಲಿ ಕನಿಷ್ಠಕ್ಕಿಳಿದಿವೆ. ಈ ಅವಧಿಯಲ್ಲಿ 1103 ಪ್ರಕರಣ ದಾಖಲಾಗಿದ್ದು, ಕೇವಲ 12 ಮಂದಿ ಮಾತ್ರ ಸೋಂಕಿಗೆ ಬಲಿಯಾಗಿದ್ದಾರೆ. ಅದರಲ್ಲೂ 3 ದಿನಗಳು ಶೂನ್ಯ ಸಾವು ದಾಖಲಾಗಿದೆ. ಇಷ್ಟುಕಡಿಮೆ ಪ್ರಕರಣಗಳು 2020ರ ಮಾಚ್‌ರ್ 23-29ನೇ ತಾರೀಖಿನ ವಾರದ ಬಳಿಕ ಅತಿ ಕನಿಷ್ಠವಾಗಿದೆ. 2020ರ ಆ ವಾರದಲ್ಲಿ 736 ಪ್ರಕರಣಗಳು ದಾಖಲಾಗಿದ್ದವು. ಇದರ ನಂತರದ ವಾರದಲ್ಲಿ 3,154 ಪ್ರಕರಣಗಳು ದಾಖಲಾಗಿದ್ದವು ಹಾಗೂ ಸೋಂಕು ಏರುತ್ತಲೇ ಹೋಗಿತ್ತು. ಜು.18-24ನೇ ತಾರೀಖಿನ ವಾರದಲ್ಲಿ 1.36 ಲಕ್ಷ ಪ್ರಕರಣ ದಾಖಲಾಗಿತ್ತು. ಆದರೆ ಇದಾದ 5 ತಿಂಗಳಿನಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳ ಪ್ರಮಾಣ ಇಳಿಕೆಯ ಹಾದಿಯಲ್ಲಿದೆ.
ಸಾವೂ ಕನಿಷ್ಠ:
ಈ ನಡುವೆ ಡಿ.12ರಿಂದ 18ನೇ ದಿನಾಂಕದ ವಾರದಲ್ಲಿ ಕೇವಲ 12 ಮಂದಿ ಸಾವಿಗೀಡಾಗಿದ್ದು, ಇದು 2020ರ ಮಾ.16-22ನೇ ತಾರೀಖಿನ ವಾರಕ್ಕಿಂತ ಕನಿಷ್ಠ ಸಾವಿನ ಪ್ರಮಾಣವಾಗಿದೆ. ಅರ್ಥಾತ್ ಇದೂ 32 ತಿಂಗಳ ಕನಿಷ್ಠವಾಗಿದೆ.
ಚೀನಾದಲ್ಲಿ ಗಂಟೆಗಳ ಲೆಕ್ಕದಲ್ಲಿ ಸೋಂಕು ದುಪ್ಪಟ್ಟು; ಐಸಿಯು, ಶವಾಗಾರ ಭರ್ತಿ !
ಬೆಂಗಳೂರಿನಲ್ಲಿ ಕೊರೋನಾ ಸಕ್ರಿಯ ಕೇಸ್ ಕುಸಿತ
ಬೆಂಗಳೂರಿನಲ್ಲಿ ಮಂಗಳವಾರ 12 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.1.42 ದಾಖಲಾಗಿದೆ. ಸೋಂಕಿನಿಂದ 12 ಗುಣಮುಖರಾಗಿದ್ದು, ಯಾರೂ ಮೃತಪಟ್ಟ ವರದಿಯಾಗಿಲ್ಲ. ನಗರದಲ್ಲಿ 1,228 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ ಒಬ್ಬರು ಆಸ್ಪತ್ರೆಯಲ್ಲಿ, ಉಳಿದವರು ಮನೆಯಲ್ಲಿ ಚಿಕಿತ್ಸೆ (Treatment) ಪಡೆಯುತ್ತಿದ್ದಾರೆ.
ಒಟ್ಟು 286 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 30 ಮಂದಿ ಮೊದಲ ಡೋಸ್, 33 ಮಂದಿ ಎರಡನೇ ಡೋಸ್ ಮತ್ತು 223 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 1114 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ (Test) ನಡೆಸಲಾಗಿದ್ದು, ಈ ಪೈಕಿ 952 ಆರ್‌ಟಿಪಿಸಿಆರ್ ಹಾಗೂ 162 ಮಂದಿಗೆ ರಾರಯಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಕೊರೋನಾ ವೈರಸ್ ಮಾನವ ನಿರ್ಮಿತ, ಚೀನಾದ ವುಹಾನ್ ಲ್ಯಾಬ್‌ನಿಂದಲೇ ಸೋರಿಕೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.