ಈ 5 ಅಭ್ಯಾಸಗಳು ಆಲ್ಕೋಹಾಲ್’ಗಿಂತಲೂ ಡೆಂಜರಸ್! ಲಿವರ್ ಡ್ಯಾಮೇಜ್ ಗ್ಯಾರಂಟಿ

Published : Jul 18, 2026, 01:33 PM IST
Liver damage

ಸಾರಾಂಶ

ಲಿವರ್ ಡ್ಯಾಮೇಜ್ ಮಾಡುವ ಮುಖ್ಯವಾದ ಒಂದು ವಸ್ತು ಅಂದ್ರೆ ಅದು ಮದ್ಯ ಅಥವಾ ಆಲ್ಕೋಹಾಲ್ ಎನ್ನಲಾಗುತ್ತೆ. ಆದರೆ ಅದಕ್ಕಿಂತಲೂ ವೇಗವಾಗಿ ಇನ್ನೂ ಕೆಲವು ಪದಾರ್ಥಗಳು ನಿಮ್ಮ ಲಿವರ್ ನ್ನು ಡ್ಯಾಮೇಜ್ ಮಾಡುತ್ತೆ. ಆ ಅಭ್ಯಾಸಗಳನ್ನು ಈಗಲೇ ಅವಾಯ್ಡ್ ಮಾಡುವ ಮೂಲಕ ನೀವು ಆರೋಗ್ಯವನ್ನು ಕಾಪಾಡಬೇಕು.

ಮದ್ಯಕ್ಕಿಂತಲೂ ಹೆಚ್ಚು ಅಪಾಯಕಾರಿ

ಲಿವರ್ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಇದು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವುದು, ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮತ್ತು ಶಕ್ತಿಯನ್ನು ಸಂಗ್ರಹಿಸುವಂತಹ ಅನೇಕ ಮುಖ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಸಾಮಾನ್ಯವಾಗಿ ಲಿವರ್‌ಗೆ ದೊಡ್ಡ ಶತ್ರು ಅಂದ್ರೆ ಮದ್ಯ ಎಂದು ಹೇಳಲಾಗುತ್ತದೆ. ಆದರೆ ಕೇವಲ ಮದ್ಯಪಾನ ಮಾತ್ರವಲ್ಲ, ನಮ್ಮ ದೈನಂದಿನ ಜೀವನದಲ್ಲಿರುವ ಕೆಲವು ಸಾಮಾನ್ಯ ಅಭ್ಯಾಸಗಳು ಮತ್ತು ಆಹಾರ ಪದಾರ್ಥಗಳೂ ಲಿವರ್‌ಗೆ ಗಂಭೀರ ಹಾನಿ ಉಂಟುಮಾಡಬಹುದು.

ಅಗತ್ಯಕ್ಕಿಂತ ಹೆಚ್ಚು ಪೇನ್‌ಕಿಲ್ಲರ್ ಸೇವನೆ

ಸಣ್ಣ ನೋವು ಬಂದರೂ ತಕ್ಷಣ ಪೇನ್‌ಕಿಲ್ಲರ್ ಸೇವಿಸುವವರಿದ್ದಾರೆ. ಆದರೆ ಇಂತಹ ಔಷಧಿಗಳನ್ನು ಮಿತಿಮೀರಿಸಿ ಬಳಸುವುದರಿಂದ ಲಿವರ್ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ. ದೀರ್ಘಕಾಲ ಹೀಗೆ ಮುಂದುವರಿದರೆ ಲಿವರ್ ಹಾನಿಯ ಅಪಾಯ ಹೆಚ್ಚಾಗಬಹುದು.

ಹೆಚ್ಚು ಸಕ್ಕರೆ ಮತ್ತು ಫ್ರಕ್ಟೋಸ್ ಇರುವ ಆಹಾರ

ಕೋಲ್ಡ್ ಡ್ರಿಂಕ್ಸ್, ಪ್ಯಾಕೆಟ್ ಜ್ಯೂಸ್, ಕೇಕ್ ಮತ್ತು ಕ್ಯಾಂಡಿಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತದೆ. ಇವುಗಳನ್ನು ನಿರಂತರವಾಗಿ ಸೇವಿಸಿದರೆ ಲಿವರ್‌ನಲ್ಲಿ ಕೊಬ್ಬು ಸಂಗ್ರಹವಾಗಿ ನಾನ್-ಅಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಪ್ರೊಸೆಸ್ಡ್ ಮತ್ತು ಜಂಕ್ ಫುಡ್

ಬರ್ಗರ್, ಪಿಜ್ಜಾ, ಚಿಪ್ಸ್ ಮುಂತಾದ ಆಹಾರಗಳಲ್ಲಿ ಟ್ರಾನ್ಸ್ ಫ್ಯಾಟ್ ಮತ್ತು ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚು ಇರುತ್ತದೆ. ಇವು ಲಿವರ್‌ನಲ್ಲಿ ಉರಿಯೂತ ಹೆಚ್ಚಿಸಿ ಕೊಬ್ಬು ಜಮೆಯಾಗುವಂತೆ ಮಾಡುತ್ತವೆ. ಪರಿಣಾಮವಾಗಿ ಲಿವರ್ ಕಾರ್ಯಕ್ಷಮತೆ ಕುಗ್ಗಬಹುದು.

ವೈದ್ಯರ ಸಲಹೆಯಿಲ್ಲದೆ ಸಪ್ಲಿಮೆಂಟ್ ಸೇವನೆ

ತೂಕ ಇಳಿಕೆ ಅಥವಾ ಫಿಟ್ನೆಸ್ ಹೆಸರಿನಲ್ಲಿ ಅನೇಕ ಸಪ್ಲಿಮೆಂಟ್‌ಗಳನ್ನು ಜನರು ಸೇವಿಸುತ್ತಾರೆ. ಕೆಲವು ಸಪ್ಲಿಮೆಂಟ್‌ಗಳಲ್ಲಿ ಲಿವರ್‌ಗೆ ಹಾನಿಕಾರಕ ಅಂಶಗಳಿರಬಹುದು. ಆದ್ದರಿಂದ ವೈದ್ಯರ ಸಲಹೆಯಿಲ್ಲದೆ ಸಪ್ಲಿಮೆಂಟ್ ಅಥವಾ ಸ್ಟೆರಾಯ್ಡ್‌ಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ.

ಹೆಪಟೈಟಿಸ್ ಸೋಂಕನ್ನು ನಿರ್ಲಕ್ಷಿಸುವುದು

ಹೆಪಟೈಟಿಸ್ B ಮತ್ತು C ವೈರಸ್‌ಗಳು ಲಿವರ್‌ಗೆ ತೀವ್ರ ಹಾನಿ ಉಂಟುಮಾಡಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಶಾಶ್ವತ ಲಿವರ್ ಡ್ಯಾಮೇಜ್ ಸಂಭವಿಸಬಹುದು. ಲಸಿಕೆ, ಸ್ವಚ್ಛತೆ ಮತ್ತು ಸುರಕ್ಷಿತ ಆರೋಗ್ಯ ಅಭ್ಯಾಸಗಳು ಇದರಿಂದ ರಕ್ಷಿಸಬಹುದು.

ಲಿವರ್ ಆರೋಗ್ಯ ಕಾಪಾಡಲು ಏನು ಮಾಡಬೇಕು?

ಸಮತೋಲನ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಸಾಕಷ್ಟು ನೀರು ಕುಡಿಯುವುದು ಮತ್ತು ವೈದ್ಯರ ಸಲಹೆಯಿಲ್ಲದೆ ಔಷಧಿ ಅಥವಾ ಸಪ್ಲಿಮೆಂಟ್‌ಗಳನ್ನು ಬಳಸದಿರುವುದು ಅತ್ಯಂತ ಮುಖ್ಯ. ಆರೋಗ್ಯಕರ ಲಿವರ್ ಆರೋಗ್ಯಕರ ಜೀವನದ ಆಧಾರವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರೆಂಟ್ ಲವ್ ಮಾಡೋದಿಲ್ಲ.. ನಿಮ್ಮ ಮನೆಯ ಗೋಡೆಯಲ್ಲೇ ಅಡಗಿರಬಹುದು ಯಮ!
ಮೆಟ್ಟಿಲು ಹತ್ತುವಾಗ ಏಕೆ ಉಸಿರಾಟ ತೊಂದರೆ ಆಗುತ್ತೆ? ಈ ಲಕ್ಷಣ ಕಂಡುಬಂದ್ರೆ ಎಚ್ಚರ!