ಟಾಯ್ಲೆಟ್‌ನಲ್ಲಿ ಫೋನ್ ಬಳಸುವ ಅಭ್ಯಾಸ ನಿಮಗಿದೆಯಾ? ಸಮಸ್ಯೆ ಖಂಡಿತಾ ಇದೆ

Published : Feb 24, 2025, 07:27 PM ISTUpdated : Feb 25, 2025, 10:36 AM IST
ಟಾಯ್ಲೆಟ್‌ನಲ್ಲಿ ಫೋನ್ ಬಳಸುವ ಅಭ್ಯಾಸ ನಿಮಗಿದೆಯಾ? ಸಮಸ್ಯೆ ಖಂಡಿತಾ ಇದೆ

ಸಾರಾಂಶ

ನೀವು ಶೌಚಾಲಯದಲ್ಲಿ ಕುಳಿತುಕೊಂಡು ಫೋನ್ ಬಳಸುತ್ತೀರಾ? ನಿಮಗೆ ಗೊತ್ತಿಲ್ಲದೆ ಈ ಆರೋಗ್ಯ ಸಮಸ್ಯೆ ಕಾಡಲಿದೆ. ಟಾಯ್ಲೆಟ್‌ನಲ್ಲಿ ಫೋನ್ ಬಳಕೆ ಮಾಡಿದರೆ ಎದುರಾಗುವ ಅಪಾಯವೇನು?

ಸ್ಮಾರ್ಟ್‌ಫೋನ್ ಬಿಟ್ಟು ಒಂದು ನಿಮಿಷವೂ ಇರಲಾರದ ಪರಿಸ್ಥಿತಿ. ಹೀಗಾಗಿ ಹಲವರು ಶೌಚಾಲಯದಲ್ಲೂ ಫೋನ್ ಬಳಕೆ ಮಾಡುತ್ತಾರೆ. ಪ್ರಮುಖಾಗಿ ಟಾಯ್ಲೆಟ್‌ನಲ್ಲಿ ಕುಳಿತುಕೊಳ್ಳುವಾಗ ಫೋನ್ ಬಳಕೆ ಮಾಡುವ ಅಭ್ಯಾಸ ಹಲವರಿಗಿದೆ. ಶೌಚಾಲಯದಲ್ಲಿ ಇರುವಷ್ಟು ಹೊತ್ತು ಸುಮ್ಮನೆ ಕುಳಿತುಕೊಳ್ಳುವುದಕ್ಕಿಂತ ಕನಿಷ್ಠ ಫೋನ್ ನೋಡುತ್ತಾ ಸಮಯ ಕಳೆಯಬಹುದು ಅನ್ನೋದು ಲೆಕ್ಕಾಚಾರ. ಆದರೆ ಇದು ಆರೋಗ್ಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಒಂದು ಕೆಟ್ಟ ಅಭ್ಯಾಸ ಆರೋಗ್ಯವನ್ನೇ ಏರುಪೇರು ಮಾಡಲಿದೆ. ಅನಾರೋಗ್ಯ ಸಮಸ್ಯೆಗಳು ತೀವ್ರಗೊಳ್ಳುವುದು ಮಾತ್ರವಲ್ಲ, ಮಾನಸಿಕವಾಗಿ ಕುಗ್ಗಿ ಹೋಗುವ ಸಾಧ್ಯತೆ ಹೆಚ್ಚು.

ನೀವು ಟಾಯ್ಲೆಟ್ ಸೀಟಿನಲ್ಲಿ ಕುಳಿತುಕೊಂಡು ಹೆಚ್ಚು ಸಮಯ ಫೋನ್ ಬಳಸುತ್ತೀರಿ ಎಂದಿದ್ದರೆ, ಈ ಅಭ್ಯಾಸ ಬದಲಾಯಿಸುವುದು ಉತ್ತಮ. ಕಾರಣ ಈ  ಅಭ್ಯಾಸವು ನಿಮ್ಮನ್ನು ಅನಾರೋಗ್ಯಕ್ಕೆ ತಳ್ಳಬಹುದು. ಆರಂಭದಲ್ಲಿ ನೀವು ಫೋನ್ ಬಳಕೆ ಮೂಲಕ ಸಮಯ ಕಳೆದರೆ ಬಳಿಕ ಅನಿವಾರ್ಯವಾಗಿ ಬಿಡುತ್ತದೆ. ಇವೆಲ್ಲಾ ಅಭ್ಯಾಸದ ರೀತಿ. ಆದರೆ ಇದಕ್ಕಿಂತ ಮುಖ್ಯವಾಗಿ ವಿಶ್ವದಲ್ಲೇ ಹೆಚ್ಚುತ್ತಿರುವ ಆರೋಗ್ಯ ಸಮಸ್ಸೆಯೊಂದು ಕಾಡಲಿದೆ.  

ಭಾರತೀಯ ರೈಲ್ವೆ ಇತಿಹಾಸ ಬದಲಿಸಿದ ಒಬ್ಬ ಸಾಮಾನ್ಯ ಪ್ರಯಾಣಿಕನ ಪತ್ರ!

ವಯಸ್ಕರಲ್ಲಿ ಮೂಲವ್ಯಾಧಿ ಮತ್ತು ಗುದನಾಳದ ಫಿಸ್ಟುಲಾಗಳ ಪ್ರಕರಣಗಳು ಅಪಾಯಕಾರಿಯಾಗಿ ಹೆಚ್ಚುತ್ತಿರುವ ಬಗ್ಗೆ ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಫೋನ್‌ಗಳನ್ನು ಬಳಸುವಾಗ ದೀರ್ಘಕಾಲದವರೆಗೆ ಟಾಯ್ಲೆಟ್‌ನಲ್ಲಿ ಕುಳಿತುಕೊಳ್ಳುವುದು ಇದಕ್ಕೆ ಕಾರಣವೆಂದು ಹೇಳುತ್ತಿದ್ದಾರೆ. 

ಟಾಯ್ಲೆಟ್‌ನಲ್ಲಿ ಅತಿಯಾದ ಫೋನ್ ಬಳಕೆಯಿಂದ ಉಂಟಾಗುವ ರೋಗಗಳು
ಇಂಡಿಯಾ ಟುಡೇ ವರದಿಯ ಪ್ರಕಾರ, ಮುಂಬೈನ ಗ್ಲೆನೆಗಲ್ಸ್ ಆಸ್ಪತ್ರೆಯ ಹಿರಿಯ ರೋಬೋಟಿಕ್ ಮತ್ತು ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ. ಜಿಗ್ನೇಶ್ ಗಾಂಧಿ, ಜೀವನಶೈಲಿಯ ಅಭ್ಯಾಸಗಳು ಮತ್ತು ಟಾಯ್ಲೆಟ್‌ಗಳಲ್ಲಿ ಅತಿಯಾದ ಫೋನ್ ಬಳಕೆಯಿಂದ ಜನರಲ್ಲಿ ಕಾಯಿಲೆಗಳು ಉಂಟಾಗುತ್ತಿವೆ ಎಂದು ಹೇಳಿದ್ದಾರೆ.

ಇಎಸ್‌ಐಸಿ ಆಸ್ಪತ್ರೆಯ ಡಾ. ರವಿ ರಂಜನ್ ಅವರು, 1 ವರ್ಷದಲ್ಲಿ 500 ಕ್ಕೂ ಹೆಚ್ಚು ಮೂಲವ್ಯಾಧಿ ಮತ್ತು ಫಿಸ್ಟುಲಾಗಳ ಪ್ರಕರಣಗಳನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ. ಕಳಪೆ ಜೀವನಶೈಲಿ, ಕಡಿಮೆ ನೀರು ಸೇವನೆ, ಜಂಕ್ ಫುಡ್ ಸೇವನೆ ಮತ್ತು ಮೊಬೈಲ್ ಫೋನ್‌ಗಳಲ್ಲಿ ಹೆಚ್ಚು ಸಮಯ ಕಳೆಯುವುದು ಇದಕ್ಕೆ ಕಾರಣ.

ಕಳಪೆ ಆಹಾರ ಮತ್ತು ದೀರ್ಘಕಾಲದವರೆಗೆ ಟಾಯ್ಲೆಟ್‌ನಲ್ಲಿ ಕುಳಿತುಕೊಳ್ಳುವುದರಿಂದ ಮಲಬದ್ಧತೆ ಸಮಸ್ಯೆಗಳು ಉಂಟಾಗುತ್ತವೆ ಎಂದು ಡಾ. ಬಿರ್ಬಲ್ ಹೇಳಿದ್ದಾರೆ. ಇದು ನೋವಿನ ಊತಕ್ಕೆ ಕಾರಣವಾಗುತ್ತದೆ, ಅದು ನಂತರ ಮೂಲವ್ಯಾಧಿ ಮತ್ತು ಗುದನಾಳದ ಫಿಸ್ಟುಲಾಗಳಾಗಿ ಬದಲಾಗುತ್ತದೆ. ಇದನ್ನು ತಪ್ಪಿಸಲು, ಫೈಬರ್-ಭರಿತ ಆಹಾರವನ್ನು ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಟಾಯ್ಲೆಟ್‌ನಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದನ್ನು ತಪ್ಪಿಸುವುದು ಮುಖ್ಯ ಎಂದು ತಜ್ಞರು ಹೇಳಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಕಾಲೇಜಿನ ಟಾಯ್ಲೆಟ್ ನೋಡಿ ಮೂರ್ಛೆ ಹೋದ ಅಧ್ಯಕ್ಷ!
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..
ಹಾಲು ಮತ್ತು ಬೆಲ್ಲದ ಜೊತೆ ಸಿಹಿಗೆಣಸು ತಿನ್ನೋದ್ರಿಂದ ಸಿಗುತ್ತೆ ಸಾಕಷ್ಟು ಲಾಭ