ಗುಂಡು ಒಳಗೆ ಹೋಗ್ತಿದ್ದಂತೆ ಜನರು ಪ್ರಪಂಚ ಮರೆಯುತ್ತಾರೆ. ಕೆಲವೊಮ್ಮೆ ಎಷ್ಟೇ ಕುಡಿದ್ರೂ ಅಮಲೇರೋದಿಲ್ಲ. ಆದ್ರೆ ಪ್ರಪಂಚದಲ್ಲಿ ಕೆಲ ಅಪಾಯಕಾರಿ ಮದ್ಯವಿದೆ. ಒಂದು ಗುಟುಕು ಸೇವನೆ ಮಾಡಿದ್ರೂ ಸಾಕು, ಇಡೀ ದಿನ ಗುಂಗಲ್ಲಿ ತಿರಗ್ತಿರ್ತೇವೆ.
ಮದ್ಯ ಪ್ರಿಯರ ಸಂಖ್ಯೆ ಹೆಚ್ಚಾಗ್ತನೆ ಇದೆ. ಯುವಜನರು ಮದ್ಯಕ್ಕೆ ಹೆಚ್ಚು ದಾಸರಾಗ್ತಿದ್ದಾರೆ. ವಾರಾಂತ್ಯದಲ್ಲಿ ಪಾರ್ಟಿ ಮಾಡುವ ಜನರು ಆಲ್ಕೋಹಾಲ್ ಕಿಕ್ಕಿನಲ್ಲಿ ತೂರಾಡ್ತಾರೆ. ಮೊದಲ ಬಾರಿ ಮದ್ಯ ಸೇವನೆ ಮಾಡಿದಾಗ ಸಿಗುವ ಕಿಕ್ ಹೋಗ್ತಾ ಹೋಗ್ತಾ ಕಡಿಮೆಯಾಗುತ್ತದೆ. ದೇಹ ಅದಕ್ಕೆ ಹೊಂದಿಕೊಳ್ಳುವ ಕಾರಣ ಒಂದು ಪೆಗ್ ಕುಡಿಯುತ್ತಿದ್ದವರು ಕಿಕ್ ಏರಲಿಲ್ಲ ಅಂತಾ ಎರಡಕ್ಕೆ ಬರ್ತಾರೆ. ಇದು ಮೂರು, ನಾಲ್ಕಾಗುತ್ತದೆ. ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬುದು ತಿಳಿದಿದ್ರೂ ಜನರು, ಒತ್ತಡ, ನೋವು, ಖುಷಿ ಹೆಸರಿನಲ್ಲಿ ಸೇವನೆ ಮಾಡ್ತಿರುತ್ತಾರೆ.
ಮದ್ಯ (Alcohol) ದಲ್ಲಿ ಸಾಕಷ್ಟು ವಿಧವಿದೆ. ದುಬಾರಿ (Expensive) ಬೆಲೆಯ ಕೆಲ ಮದ್ಯ ವಾಸನೆ ಬರೋದಿಲ್ಲ. ಹಾಗೇ ಬೇಗ ತಲೆಗೆ ಏರೋದಿಲ್ಲ. ಇನ್ನು ಕೆಲ ಮದ್ಯಗಳು ಬೇಗ ಕಿಕ್ಕೇರುತ್ತವೆ. ಜೊತೆಗೆ ಗಬ್ಬು ವಾಸನೆ ಮೂಗಿಗೆ ಹೊಡೆಯುತ್ತದೆ. ಪ್ರಪಂಚದಲ್ಲಿ ಕೆಲ ಮದ್ಯಗಳು ಹೆಚ್ಚು ಅಪಾಯಕಾರಿಯಾಗಿವೆ. ಒಂದು ಚಮಚ ಮದ್ಯ ಸೇವನೆ ಮಾಡಿದ್ರೂ ಸಾಕು ಕಿಕ್ (Kick) ಏರುತ್ತದೆ. ಇದು ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ನಾವಿಂದು ಅತಿ ಬೇಗ ನಶೆ ಏರಿಸುವ ಮದ್ಯದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ.
undefined
ಅತಿ ಬೇಗ ನಶೆ ಏರಿಸುತ್ತೆ ಈ ಮದ್ಯ :
ಬಾಲ್ಕನ್ 176 ವೋಡ್ಕಾ : ಈ ಟ್ರಿಪಲ್ ಡಿಸ್ಟಿಲ್ಡ್ ವೋಡ್ಕಾವನ್ನು ಸ್ಕ್ಯಾಂಡಿನೇವಿಯನ್ ಪಾನೀಯಗಳಲ್ಲಿ ಪ್ರಬಲವೆಂದು ಪರಿಗಣಿಸಲಾಗಿದೆ. ಇದು ಬಣ್ಣರಹಿತವಾಗಿದೆ, ರುಚಿಯಿಲ್ಲ, ಜೊತೆಗೆ ಇದು ಯಾವುದೇ ವಾಸನೆ ಹೊಂದಿರುವುದಿಲ್ಲ. ಅದನ್ನು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ. ಆದ್ರೆ ಇದು ಸಾಕಷ್ಟು ಪ್ರಬಲವಾಗಿದೆ. ಈ ಬಾಟಲಿ ಮೇಲೆ 13 ವಿಭಿನ್ನ ಲೇಬಲ್ ಎಚ್ಚರಿಕೆಗಳನ್ನು ನೀಡಲಾಗಿದೆ. ಈ ಮದ್ಯದ ಅತಿಯಾದ ಸೇವನೆಯು ನಿಮ್ಮ ಸಾವಿಗೆ ಕಾರಣವಾಗಬಹುದು ಎಂದು ಅಲ್ಲಿ ಎಚ್ಚರಿಸಲಾಗಿದೆ. ಹಾಗಾಗಿ ಈ ಮದ್ಯ ಸೇವಿಸುವ ಸಹವಾಸಕ್ಕೆ ಹೋಗ್ಬೇಡಿ.
ನಿಮ್ಮೊಳಗೊಬ್ಬ ಟಾಕ್ಸಿಕ್ ಪರ್ಫೆಕ್ಷನಿಸ್ಟ್ ಇದ್ದಾನಾ? ಅವನು ಎಚ್ಚೆತ್ತುಕೊಳ್ಳದಂತೆ ನೋಡ್ಕೊಳಿ
ಸನ್ಸೆಟ್ ರಮ್ : ಇದು ವಿಶ್ವದ ಅತ್ಯಂತ ಶಕ್ತಿಶಾಲಿ ರಮ್ ಆಗಿದೆ. ಸನ್ ಸೆಟ್ ರಮ್ ಗೆ 2016ರಲ್ಲಿ ವಿಶ್ವದ ಅತ್ಯುತ್ತಮ ಓವರ್‌ಪ್ರೂಫ್ ರಮ್ ಪ್ರಶಸ್ತಿ ಸಿಕ್ಕಿದೆ. ಈ ಬಾಟಲಿಯ ಲೇಬಲ್ ಮೇಲೆ ಮಿಕ್ಸ್ ಮಾಡಿ ಸೇವನೆ ಮಾಡ್ಬೇಕೆಂದು ಬರೆಯಲಾಗಿದೆ. ಇದನ್ನು ಅತಿಯಾಗಿ ಸೇವನೆ ಮಾಡೋದ್ರಿಂದ ಗಂಟಲಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಯಾವುದೇ ಕಾರಣಕ್ಕೂ ನೇರವಾಗಿ ಕುಡಿಯಬೇಡಿ. ಇದ್ರಿಂದ ಅನಾರೋಗ್ಯ ನಿಮ್ಮನ್ನು ಕಾಡುತ್ತದೆ.
ಬಕಾರ್ಡಿ 151 : ಇದು ಆಲ್ಕೊಹಾಲ್ ನಿಂದ ಕೂಡಿದ ರಮ್ ಆಗಿದೆ. ಬರ್ಮುಡಾದಲ್ಲಿ ನೆಲೆಗೊಂಡಿರುವ ಹ್ಯಾಮಿಲ್ಟನ್‌ನ ಬಕಾರ್ಡಿ ಲಿಮಿಟೆಡ್ ಇದನ್ನು ತಯಾರಿಸುತ್ತದೆ. ಈ ರಮ್ ಸ್ಟೇನ್ಲೆಸ್ ಸ್ಟೀಲ್ ಫೈರ್ ಅರೆಸ್ಟರ್‌ನೊಂದಿಗೆ ಬರುತ್ತದೆ. ಕ್ಯೂಬಾ ಲಿಬ್ರೆ ಮತ್ತು ಡೈಕ್ವಿರಿಸ್‌ನಂತಹ ಕಾಕ್‌ಟೇಲ್‌ಗಳನ್ನು ತಯಾರಿಸಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಈ ಮದ್ಯವನ್ನು ಎಂದೂ ಹಾಗೇ ಸೇವನೆ ಮಾಡ್ಬೇಡಿ. ಇದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.
ಗುಡ್ ಆಲ್ ಸೇಲರ್ ವೋಡ್ಕಾ : ಸ್ವಿಡನ್ ನಲ್ಲಿ ಈ ವೋಡ್ಕಾ ಪ್ರಸಿದ್ಧವಾಗಿದೆ. ಇದನ್ನು ಸಾವಯವ ಧಾನ್ಯಗಳು ಮತ್ತು ವ್ಯಾಟರ್ನ್ ಕೊಳದ ಶುದ್ಧ ನೀರಿನಿಂದ ತಯಾರಿಸಲಾಗುತ್ತದೆ. ಕಾಕ್ಟೈಲ್‌ಗಳನ್ನು ತಯಾರಿಸಲು ಇದನ್ನು ಸಣ್ಣ ಪ್ರಮಾಣದಲ್ಲಿ ಬಳಸಲಾಗುತ್ತದೆ. ಇದು ವಿಶ್ವದಾದ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿಲ್ಲ.
Traveling Tips : ಹೆಲ್ತ್ ಪಾಸ್ಪೋರ್ಟ್ ಅಂದ್ರೇನು? ಏನಿರುತ್ತೆ ಇದ್ರಲ್ಲಿ?
ಪಿನ್ಸರ್ ಶಾಂಘೈ ಸ್ಟ್ರೆಂಥ್ : ಇದು ಸ್ಕಾಟಿಷ್ ವೋಡ್ಕಾ. ಈ ಪಾನೀಯವನ್ನು ಹಾಲು ಥಿಸಲ್ ಮತ್ತು ಎಲ್ಡರ್‌ಫ್ಲವರ್‌ನಿಂದ ತಯಾರಿಸಲಾಗುತ್ತದೆ. ಇದನ್ನು ಲಿವರ್ ಗೆ ಒಳ್ಳೆಯದು ಎನ್ನಲಾಗುತ್ತದೆ. ಆದ್ರೆ ಕೆಲವೇ ಸೆಕೆಂಡಿನಲ್ಲಿ ಇದು ನಿಮ್ಮನ್ನು ಅತಿ ಹೆಚ್ಚು ನಶೆಗೆ ಕರೆದೊಯ್ಯುತ್ತದೆ. ಇದನ್ನು ಅಪ್ಪಿತಪ್ಪಿಯೂ ಅತಿಯಾಗಿ ಕುಡಿಯಬಾರದು. ಹಾಗೆ ಮಾಡಿದ್ರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.