ಈಗಿನ ಜೀವನ ಶೈಲಿ ಹಾಗೂ ಒತ್ತಡದ ಜೀವನದಲ್ಲಿ ಕೂದಲು ಉದುರೋದು ಮಾಮೂಲಿಯಾಗಿದೆ. ಆದ್ರೆ ಎಲ್ಲ ಕಡೆ ಕೂದಲು ಉದುರದೆ ಕೆಲ ಭಾಗದಲ್ಲಿ ವಿಪರೀತ ಉದುರಿ ತೇಪೆಯಾಗಿದ್ರೆ ಅದು ಖಾಯಿಲೆಯ ಲಕ್ಷಣ. ಅದಕ್ಕೆ ಸೂಕ್ತ ಚಿಕಿತ್ಸೆ ಅನಿವಾರ್ಯ.
ಕೂದಲು ನಮ್ಮ ಆರೋಗ್ಯ ಹೇಳುತ್ತದೆ. ಅನೇಕ ಬಾರಿ ನಮ್ಮ ದೇಹ ಖಾಯಿಲೆಗೆ ಒಳಗಾಗಿದ್ರೆ ಕೂದಲು ಉದುರಲು ಶುರುವಾಗುತ್ತದೆ. ಅದ್ರ ಪರಿವೆ ನಮಗಿರೋದಿಲ್ಲ. ಈಗಿನ ದಿನಗಳಲ್ಲಿ ಬೋಳು ತಲೆ ಸಮಸ್ಯೆ ಹೆಚ್ಚಾಗಿದೆ. ಮತ್ತೆ ಕೆಲವರಿಗೆ ಕೂದಲು ವಿಪರೀತಗಾಗಿ ಉದುರುವುದಲ್ಲದೆ ಒಂದು ಭಾಗದಲ್ಲಿ ಖಾಲಿ ತೇಪಗಳು ಕಂಡು ಬರುತ್ತವೆ. ತಲೆಯ ಮಧ್ಯೆ ಕಾಣುವ ಈ ಚರ್ಮ ಮುಜುಗರಕ್ಕೀಡು ಮಾಡುತ್ತದೆ. ಆತಂಕವನ್ನುಂಟು ಮಾಡುತ್ತದೆ. ನಿಮಗೂ ಅಲ್ಲಲ್ಲಿ ಈ ತೇಪವಿದ್ರೆ ಅದ್ರ ಬಗ್ಗೆ ಗಂಭೀರವಾಗಿ. ಕೂದಲು ಉದುರಿ ಈ ತೇಪ ಕಾಣಲು ಕಾರಣವೇನು ಎಂಬುದನ್ನು ನಾವಿಂದು ಹೇಳ್ತೆವೆ.
ಅಲೋಪೆಸಿಯಾ ಏರಿಟಾ (Alopecia Areata) ಕಾಯಿಲೆ: ನಿಮ್ಮ ಕೂದಲು (Hair) ಉದುರಿ ಅಲ್ಲಲ್ಲಿ ತೇಪವಾಗಿದ್ದರೆ ಇದು ಅಲೋಪೆಸಿಯಾ ಏರಿಟಾ ಕಾಯಿಲೆಯ ಲಕ್ಷಣ. ಬರೀ ತಲೆ (Head) ಮಾತ್ರವಲ್ಲ ಈ ಖಾಯಿಲೆಯಿಂದ ಬಳಲುತ್ತಿರುವವರ ದೇಹದ ಎಲ್ಲ ಭಾಗದ ಕೂದಲು ಉದುರುತ್ತದೆ. ಈ ಖಾಯಿಲೆಯಲ್ಲಿ ಯಾವುದೇ ನೋವು (Pain) ಕಾಣಿಸಿಕೊಳ್ಳುವುದಿಲ್ಲ. ಇದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಪ್ರತಿರಕ್ಷಣಆ ವ್ಯವಸ್ಥೆ ಕೂದಲ ಕಿರುಚೀಲದ ಮೇಲೆ ದಾಳಿ ಮಾಡಿದಾಗ ಈ ಸಮಸ್ಯೆ ಕಾಡಲು ಶುರುವಾಗುತ್ತದೆ.
undefined
ಚಿಂತೆ ಯಾಕೋ ಬೆನ್ನು ಬಿಡೋಲ್ಲ ಅಂತಿದ್ದರೆ, ಈ ಟಿಪ್ಸ್ ಫಾಲೋ ಮಾಡಿ ನೆಮ್ಮದಿಯಿಂದ ಇರಿ
ಅಲೋಪೆಸಿಯಾ ಏರಿಟಾ ಕಾಯಿಲೆ ಲಕ್ಷಣಗಳು : ಕೂದಲು ಉದುರುವಿಕೆ, ಉಗುರುಗಳ ಆಕಾರ, ವಿನ್ಯಾಸ ಅಥವಾ ಬಣ್ಣದಲ್ಲಿನ ಬದಲಾವಣೆ, ಒತ್ತಡ ಅಥವಾ ಆತಂಕ ಇವು ಅಲೋಪೆಸಿಯಾ ಏರಿಟಾದ ಲಕ್ಷಣವಾಗಿದೆ. ಇದ್ದಕ್ಕಿದ್ದಂತೆ ಥೈರಾಯ್ಡ್, ವಿಟಲಿಗೋ, ಲೂಪಸ್, ಸೋರಿಯಾಸಿಸ್, ಐಬಿಡಿ ಸಂಧಿವಾತ ಕಾಣಿಸಿಕೊಂಡ್ರೆ ನೀವು ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.
ಅಲೋಪೆಸಿಯಾ ಏರಿಟಾ ಸಮಸ್ಯೆಗೆ ಮನೆ ಮದ್ದು : ಅಲೋಪೆಸಿಯಾ ಏರಿಟಾ ಕಾಣಿಸಿಕೊಂಡ್ರೆ ವೈದ್ಯರು ಕೂದಲು ಮತ್ತೆ ಬೆಳೆಯಲು ನೆರವಾಗುವ ಕೆಲ ಔಷಧಿಗಳನ್ನು ಶಿಫಾರಸ್ಸು ಮಾಡ್ತಾರೆ. ಅವು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿರೋದಿಲ್ಲ. ಕೂದಲು ಮತ್ತೆ ಬೆಳೆಯಲು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಉರಿಯೂತ ಕಡಿಮೆ ಮಾಡಲು ಇವು ನೆರವಾಗುತ್ತವೆ. ಕೂದಲಿಗೆ ಅಗತ್ಯವಿರುವ ಪೋಷಕಾಂಶವನ್ನು ಇವು ನೀಡುತ್ತದೆ.
ಪ್ರೋಬಯೋಟಿಕ್ಸ್ : ಜೀರ್ಣಕ್ರಿಯೆ ಸರಿಯಾಗಿದ್ರೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪ್ರೋಬಯೋಟಿಕ್ಸ್ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ ಅನೇಕ ರೋಗಕ್ಕೆ ಚಿಕಿತ್ಸೆ ನೀಡುತ್ತದೆ. ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಇದ್ರ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಅಧ್ಯಯನಕ್ಕೆ ಅವರು ಇಲಿಯನ್ನು ಬಳಸಿದ್ದರು. ಇಲಿಗಳಿಗೆ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ನೀಡಿದ ನಂತ್ರ ಪ್ರಯೋಜನಕಾರಿ ಬದಲಾವಣೆ ಕಂಡು ಬಂತು. ಕೂದಲು ಬೆಳವಣಿಗೆಯಾಗಲು ಶುರುವಾಯ್ತು.
ಸತು : ಅಲೋಪೆಸಿಯಾ ಎರಿಟಾಗೆ ಸತು ಉತ್ತಮ ಔಷಧಿಯಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಡರ್ಮಟಾಲಜಿಯಲ್ಲಿ 2016 ರ ಪ್ರಕಟವಾದ ಅಧ್ಯಯನದ ಪ್ರಕಾರ, ಸತು ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಕೂದಲು ಬೆಳವಣಿಗೆಯಲ್ಲಿ ವೃದ್ಧಿಯಾಗುತ್ತದೆ. ಕುಂಬಳಕಾಯಿ ಬೀಜ, ಕಡಲೆ, ಗೋಡಂಬಿ, ಮೊಸರು ಮತ್ತು ಪಾಲಕ ಸೇವನೆ ಮಾಡಿದ್ರೆ ನಿಮಗೆ ಅಗತ್ಯವಿರುವ ಸತು ಸಿಗುತ್ತದೆ.
ಜಿನ್ಸೆಂಗ್ : ಅರ್ಯಾಲಿಯೇಸಿ ಜನಾಂಗಕ್ಕೆ ಸೇರಿದ ಒಂದು ಗಿಡಮೂಲಿಕೆ ಇದಾಗಿದೆ. ಉರಿಯೂತ ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಕೊರಿಯಾ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್ ಈ ಬಗ್ಗೆ ಸಂಶೋಧನೆ ನಡೆಸಿದೆ. 2012 ರ ಅಧ್ಯಯನದ ಪ್ರಕಾರ ಕೆಂಪು ಜಿನ್ಸೆಂಗ್, ಅಲೋಪೆಸಿಯಾ ಏರಿಟಾಗೆ ಉತ್ತಮ ಮತ್ತು ನೈಸರ್ಗಿಕ ಚಿಕಿತ್ಸೆ ಎಂಬುದು ಗೊತ್ತಾಗಿದೆ.
ಸ್ತ್ರೀರೋಗ ತಜ್ಞರತ್ರ ಮಾತಾಡ್ವಾಗ ಸಂಕೋಚ ಬೇಡ
ಲ್ಯಾವೆಂಡರ್ ಎಸೆನ್ಸಿಯಲ್ ಆಯಿಲ್ : ಲ್ಯಾವೆಂಡರ್ ಆಯಿಲ್, ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಇಲಿಗಳ ಮೇಲೆ 2016 ರ ಅಧ್ಯಯನ ನಡೆದಿದೆ. ಇಲಿಗಳ ಮೇಲಿನ ಬೋಳು ತೇಪೆಗಳಿಗೆ ಲ್ಯಾವೆಂಡರ್ ಎಣ್ಣೆಯನ್ನು ಅನ್ವಯಿಸಿದಾಗ ಕೂದಲಿನ ಬೆಳವಣಿಗೆ ಕಂಡು ಬಂತು.