
ಪ್ರೀತಿ, ಮದುವೆ ನಂತ್ರದ ಹಂತವೇ ವಂಶಾಭಿವೃದ್ಧಿ. ಮನೆಯಲ್ಲಿ ಮಗುವಿನ ನಗುವಿದ್ರೆ ಆ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಿರುತ್ತದೆ. ಪ್ರತಿಯೊಬ್ಬ ಮಹಿಳೆ ಮಗುವನ್ನು ಹೆತ್ತು ಆಡಿಸುವ ಕನಸು ಕಾಣ್ತಾಳೆ. ಆದ್ರೆ ಎಲ್ಲ ಮಹಿಳೆಯರಿಗೆ ಇದು ದುಃಸ್ವಪ್ನವಾಗುತ್ತದೆ. ಅನೇಕ ಕಾರಣಗಳಿಂದ ಮಹಿಳೆಗೆ ಮಗುವನ್ನು ಹೆರಲು ಸಾಧ್ಯವಾಗೋದಿಲ್ಲ. ಮಗು ಬೇಕೇಬೇಕು ಎನ್ನುವವರು ವಿಜ್ಞಾನದ ಮೊರೆ ಹೋಗ್ತಾರೆ. ಈಗ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗಿದೆ. ಐವಿಎಫ್, ಬಾಡಿಗೆ ತಾಯಿ ಹೀಗೆ ನಾನಾ ವಿಧಗಳಿಂದ ಮಗುವನ್ನು ಪಡೆಯುವ ಅವಕಾಶವಿದೆ.
ಈಗಿನ ದಿನಗಳಲ್ಲಿ ಬಾಡಿಗೆ ತಾಯಿ ಮೂಲಕ ಮಗು ಪಡೆಯುವುದು ಹೆಚ್ಚಾಗಿದೆ. ಆದ್ರೆ ಎಲ್ಲ ದೇಶಗಳಲ್ಲಿ ಇದಕ್ಕೆ ಅನುಮತಿ ಇಲ್ಲ. ಜೊತೆಗೆ ಬಾಡಿಗೆ ತಾಯಿ ಹುಡುಕೋದು ಸುಲಭವಲ್ಲ. ಆದ್ರೆ ವಿಜ್ಞಾನಿ (Scientist) ಗಳು ಈಗ ಹೊಸ ಆವಿಷ್ಕಾರ ಮಾಡಲು ಹೊರಟಿದ್ದಾರೆ. ಬ್ರೈನ್ ಡೆಡ್ (Brain Dead) ಮಹಿಳೆಯನ್ನು ಬಾಡಿಗೆ ತಾಯಿಯಾಗಿ ಬದಲಿಸುವ ಪ್ರಕ್ರಿಯೆ ನಡೆಯುತ್ತಿದೆ. ನಾವಿಂದು ಬ್ರೈನ್ ಡೆಡ್ ಮಹಿಳೆ ಬಾಡಿಗೆ ತಾಯಿಯಾಗೋದು ಹೇಗೆ ಎನ್ನುವ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.
ಬ್ರೈನ್ ಡೆಡ್ ಮಹಿಳೆಯಿಂದ ಮಗು..! ಇದು ನಿಮ್ಮನ್ನು ಅಚ್ಚರಿಗೊಳಿಸಬಹುದು. ಬ್ರೈನ್ ಡೆಡ್ ಮಹಿಳೆ ಮೂಲಕ ಮಗು ಪಡೆಯೋದು ಮೊದಲ ನೋಟದಲ್ಲಿ ಅಸಾಧ್ಯವೆಂದೇ ಅನ್ನಿಸುತ್ತದೆ. ಬ್ರೈನ್ ಡೆಡ್ ಅಂದ್ರೆ ಅದು ಸಾವಿಗೆ ಸ್ವಲ್ಪ ಮೊದಲ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಆದ್ರೆ ಇದು ಸಾಧ್ಯವೆಂಬ ಬಗ್ಗೆ ಸಂಶೋಧನಾ ವರದಿಯೊಂದು ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಇದನ್ನು ವಿಶ್ವದ ಪ್ರಸಿದ್ಧ ಪ್ರಾಧ್ಯಾಪಕರು ಬರೆದಿದ್ದಾರೆ. ನಾರ್ವೆಯ ಓಸ್ಲೋ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ನಿರ್ದೇಶಕರಾಗಿರುವ ಪ್ರೊಫೆಸರ್ ಅನ್ನಾ ಸ್ಮಾಜ್ಡೋರ್ ಈ ಬಗ್ಗೆ ವರದಿ ಪ್ರಕಟಿಸಿದ್ದಾರೆ. ಬ್ರೈನ್ ಡೆಡ್ ಮಹಿಳೆಯನ್ನು ಬಾಡಿಗೆ ತಾಯಿಯಾಗಿ ಪರಿವರ್ತಿಸುವುದಕ್ಕೆ Whole Body Gestational Donation ಎಂದು ಹೆಸರಿಸಲಾಗಿದೆ.
ಸಂಜೆ ಚಹಾ ಕುಡೀಬಾರದಂತೆ! ಮತ್ತೇನು ಕುಡೀಬೇಕು ಅಂತ ಕೇಳ್ಬೇಡಿ!
ಬ್ರೈನ್ ಡೆಡ್ ತಾಯಿಯಿಂದ ಮಗುವನ್ನು ಪಡೆಯೋದು ಹೇಗೆ? : Whole Body Gestational Donation ಅಂದ್ರೆ ಗರ್ಭವನ್ನು ದಾನ ಮಾಡುವುದಾಗಿದೆ. ಬ್ರೈನ್ ಡೆಡ್ ಆದ ವ್ಯಕ್ತಿಯ ಅಂಗಾಂಗಗಳಾದ ಯಕೃತ್ತು, ಮೂತ್ರಪಿಂಡ, ಹೃದಯ ಇತ್ಯಾದಿ ದಾನ ಮಾಡಿದಂತೆ ಗರ್ಭವನ್ನು ದಾನ ಮಾಡುವುದಾಗಿದೆ. ಕೆಲವರು ತಮ್ಮ ಇಡೀ ದೇಹವನ್ನೇ ದಾನ ಮಾಡ್ತಾರೆ. ಗರ್ಭದಾನ ಮಾಡುವ ಮಹಿಳೆ ಜೀವಂತವಾಗಿರುವಾಗ್ಲೇ ಈ ಪತ್ರಕ್ಕೆ ಸಹಿ ಹಾಕ್ಬೇಕಾಗುತ್ತದೆ. ನಂತ್ರ ಯಾವುದಾದ್ರೂ ಸಂದರ್ಭದಲ್ಲಿ ಆಕೆ ಬ್ರೈನ್ ಡೆಡ್ ಆಗಿದ್ರೆ ಆಕೆ ಗರ್ಭವನ್ನು ದಾನ ಮಾಡಲಾಗುತ್ತದೆ. ಮಗುವಿಗೆ ಜನ್ಮ ನೀಡಲು ಆಕೆ ಗರ್ಭವನ್ನು ಬಳಸಲಾಗುತ್ತದೆ.
ಮಗುವಿಲ್ಲದ ದಂಪತಿಗೆ ಇದು ಆಶಾಕಿರಣ : ಮಗುವಿಲ್ಲದ ದಂಪತಿಗೆ ಈ ವೈದ್ಯಕೀಯ ಸಂಶೋಧನೆ ಆಶಾಕಿರಣವಾಗಿದೆ. ಐವಿಎಫ್, ದತ್ತು ಸ್ವೀಕಾರದ ಆಯ್ಕೆ ಮಾತ್ರ ಇರುವ ಸಮಯದಲ್ಲಿ ಬ್ರೈಡ್ ಡೆಡ್ ಮಹಿಳೆಯಿಂದ ಮಗು ಪಡೆಯುವುದು ಮಡಿಲು ಖಾಲಿ ಇರುವ ಮಹಿಳೆಯರ ಆಸೆ ಚಿಗುರಿಸಿದೆ. ಓಸ್ಲೋ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರದ ನಿರ್ದೇಶಕ ಪ್ರೊಫೆಸರ್ ಅನ್ನಾ ಸ್ಮಾಜ್ಡೋರ್ , ಬ್ರೈನ್ ಡೆಡ್ ಆಗಿದೆ ಎಂದು ಘೋಷಣೆ ಮಾಡಿದ ಮಹಿಳೆಯ ಗರ್ಭವನ್ನು ಮಕ್ಕಳನ್ನು ಪಡೆಯಲು ಮಕ್ಕಳಿಲ್ಲದ ದಂಪತಿ ಬಳಸಬಹುದು ಎನ್ನುತ್ತಾರೆ.
ಗಂಡ ಹೆಂಡ್ತೀನ ಒಂದು ಮಾಡುತ್ತಂತೆ ಈ ಸ್ಲೀಪ್ ಡಿವೋರ್ಸ್!
ಬ್ರೈನ್ ಡೆಡ್ ಮಹಿಳೆ ಗರ್ಭ ಪಡೆಯೋದು ಹೇಗೆ? : ಅನ್ನಾ ಸಮೇದೋರ್ ಪ್ರಕಾರ, ವೈದ್ಯಕೀಯ ಸಂಶೋಧನೆಗಾಗಿ ಅನೇಕರು ತಮ್ಮ ಅಂಗಾಂಗಗಳನ್ನು ದಾನ ಮಾಡುತ್ತಾರೆ. ಹಾಗೆಯೇ ಕೆಲ ಮಹಿಳೆಯರು ಬಾಡಿಗೆ ತಾಯ್ತನಕ್ಕೆ ಮುಂದೆ ಬರ್ತಾರೆ. ಅವರು ಬ್ರೈನ್ ಡೆಡ್ ಆದ ನಂತ್ರವೂ ನನ್ನ ಗರ್ಭವನ್ನು ಬಳಸಬಹುದು ಎಂದು ಒಪ್ಪಿಗೆ ನೀಡಬೇಕಾಗುತ್ತದೆ. ಒಪ್ಪಿಗೆ ನೀಡಿದ ಮಹಿಳೆಯನ್ನು ಮಕ್ಕಳಿಲ್ಲದ ದಂಪತಿ ಬಳಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.