ಜ್ವರ ಬಂದ್ರೆ ಸಾಕು ಡೋಲೋ 650 ತಗೊಳ್ತೀರಾ...ಅತಿಯಾದ್ರೆ ಏನಾಗುತ್ತೆ, ಯಾರು ಎಷ್ಟು ಸೇವಿಸಬೇಕು; ತಜ್ಞರು ಸೂಚಿಸಿದ ಟಿಪ್ಸ್ ಇಲ್ಲಿವೆ

Published : May 04, 2025, 11:34 AM ISTUpdated : May 05, 2025, 11:13 AM IST
ಜ್ವರ ಬಂದ್ರೆ ಸಾಕು ಡೋಲೋ 650 ತಗೊಳ್ತೀರಾ...ಅತಿಯಾದ್ರೆ ಏನಾಗುತ್ತೆ, ಯಾರು ಎಷ್ಟು ಸೇವಿಸಬೇಕು; ತಜ್ಞರು ಸೂಚಿಸಿದ ಟಿಪ್ಸ್ ಇಲ್ಲಿವೆ

ಸಾರಾಂಶ

ಡೋಲೋ 650 ತಜ್ಞರ ಮಾರ್ಗದರ್ಶನವಿಲ್ಲದೆ ಬಳಸುವುದರಿಂದ ಯಕೃತ್ತು ವೈಫಲ್ಯಕ್ಕೆ ಕಾರಣವಾಗಬಹುದು. ಸುರಕ್ಷಿತ ಡೋಸೇಜ್ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. 

ನೋವು ಮತ್ತು ಜ್ವರ ಬಂತೆಂದರೆ ಪ್ರತಿಯೊಬ್ಬರ ಮೊದಲ ಆದ್ಯತೆ ಡೋಲೋ 650.  ಡೋಲೋ 650 ಎಂಬ ಪ್ಯಾರಸಿಟಮಾಲ್ ಬ್ರಾಂಡ್  ಸಾಮಾನ್ಯವಾಗಿ ಎಲ್ಲೆಡೆ ಬಳಸಲಾಗುತ್ತದೆ. ಸರಿಯಾಗಿ ಬಳಸಿದರೆ ಸರಿ. ಆದರೆ ಅತಿಯಾದ ಬಳಸುವುದರಿಂದ, ವಿಶೇಷವಾಗಿ ಯಾವುದೇ ತಜ್ಞರ ಮಾರ್ಗದರ್ಶನವಿಲ್ಲದೆ ತೆಗೆದುಕೊಂಡರೆ ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ತೀವ್ರ ಹಾನಿಯನ್ನುಂಟುಮಾಡುತ್ತದೆ. ವಿಶ್ವದಾದ್ಯಂತ ಪ್ಯಾರಸಿಟಮಾಲ್ ಅನ್ನು ಮಿತಿಮೀರಿದ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಿರುವುದರಿಂದ ಯಕೃತ್ತು ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಪ್ರಮುಖ ವೈದ್ಯಕೀಯ ನಿಯತಕಾಲಿಕೆಗಳು "ಕೆಲವು ದೇಶಗಳಲ್ಲಿ ಇಂತಹ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಿಗೆ ಇದು ಕಾರಣವಾಗಿದೆ" ಎಂದು ಎಚ್ಚರಿಸಿದೆ.

ಭಾರತದಲ್ಲಿಯಂತೂ ಯಾರಾದರೂ ಜ್ವರದಿಂದ ಬಳಲುತ್ತಿದ್ದಾರೆಂದರೆ ನಿಮಗೆ ಕಣ್ಣು ಮಿಟುಕಿಸದೆ ಡೋಲೋ 650 ಸ್ಟ್ರಿಪ್ ನೀಡುತ್ತಾರೆ. ಇದು ಈಗ ಬಹುತೇಕ ಮನೆಮಾತಾಗಿದೆ. ವಿಶೇಷವಾಗಿ COVID-19 ನಂತರ ಡೋಲೋ 650 ಭಾರತದ ಜನಪ್ರಿಯ ಮಾತ್ರೆಯಾಗಿದೆ.  

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ, "ಡಾ. ಪಾಲ್" ಎಂದು ಕರೆಯಲ್ಪಡುವ ಡಾ. ಪಳನಿಯಪ್ಪನ್ ಮಾಣಿಕ್ಕಂ ಇತ್ತೀಚೆಗೆ ಒಂದು ವೈರಲ್ ಪೋಸ್ಟ್‌ವೊಂದರಲ್ಲಿ ಈ ಕುರಿತು ಭಾರತೀಯರು ಡೋಲೋ 650 ಅನ್ನು ಕ್ಯಾಡ್ಬರಿ ಜೆಮ್ಸ್‌ನಂತೆ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದರು.  
ಆದರೆ ಈ ಹಾಸ್ಯದ ಹಿಂದೆ, ಈ ಔಷಧವನ್ನು ಎಷ್ಟು ಅಜಾಗರೂಕತೆಯಿಂದ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಭಾರತ ಮತ್ತು ವಿದೇಶಗಳಲ್ಲಿರುವ ವೈದ್ಯರಲ್ಲಿ  ಕಳವಳವಿದೆ.

ವರ್ಲ್ಡ್ ಜರ್ನಲ್ ಆಫ್ ಹೆಪಟಾಲಜಿಯಲ್ಲಿನ ವಿಮರ್ಶೆಯಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. "ಪ್ಯಾರಸಿಟಮಾಲ್ ಮಿತಿಮೀರಿದ ಸೇವನೆಯು ... ಯುನೈಟೆಡ್ ಸ್ಟೇಟ್ಸ್‌ನಲ್ಲಿ ಯಕೃತ್ತಿನ ಹಾನಿಗೆ ಸಾಮಾನ್ಯ ಕಾರಣವಾಗಿದೆ." ಇದೇ ರೀತಿಯ ಎಚ್ಚರಿಕೆಗಳನ್ನು ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ , ಎಕ್ಸ್‌ಪರ್ಟ್ ರಿವ್ಯೂ ಆಫ್ ಕ್ಲಿನಿಕಲ್ ಫಾರ್ಮಕಾಲಜಿ ಮತ್ತು ಯುಕೆಯಲ್ಲಿನ ದಿ ಇಂಟೆನ್ಸಿವ್ ಕೇರ್ ಸೊಸೈಟಿಯಲ್ಲಿ ಪ್ರತಿಧ್ವನಿಸಲಾಗಿದೆ. ಕೆಲವು ದೇಶಗಳಲ್ಲಿ ತೀವ್ರ ಯಕೃತ್ತು ವೈಫಲ್ಯ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ಯಾರಸಿಟಮಾಲ್‌ಗೆ ಸಂಬಂಧಿಸಿದೆ ಎಂಬುದನ್ನು ಇವು ಗಮನಿಸಿವೆ. 

ಈ ಸಮಸ್ಯೆಗೆ ಇನ್ನೊಂದು ಕಾರಣವೆಂದರೆ ಔಷಧಿ ಲಭ್ಯತೆ. ಭಾರತದಲ್ಲಿ ನೀವು ಯಾವುದೇ ಔಷಧಾಲಯಕ್ಕೆ ಹೋಗಿ ಪ್ರಿಸ್ಕ್ರಿಪ್ಷನ್ ಇಲ್ಲದೆ ಡೋಲೋ 650 ಅನ್ನು ಖರೀದಿಸಬಹುದು. ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ ಬಾಯಿ ಮಾತಿನಲ್ಲಿ ಪ್ರಚಾರವಾಗಿ ದುರುಪಯೋಗಕ್ಕೆ ಕಾರಣವಾಯಿತು. 

ಪ್ಯಾರೆಸಿಟಮಾಲ್ ಮತ್ತು ಯಕೃತ್ತು
ಪ್ಯಾರಾಸಿಟಮಾಲ್, ಹೆಚ್ಚಿನ ಔಷಧಿಗಳಂತೆ ಯಕೃತ್ತಿನಲ್ಲಿ ಪ್ರಕ್ರಿಯೆಯಾಗುತ್ತದೆ. ಯಕೃತ್ತು ನಮ್ಮ ದೇಹದ ಮುಖ್ಯ ರಾಸಾಯನಿಕ ಕಾರ್ಖಾನೆಗಳಂತೆ ಕಾರ್ಯನಿರ್ವಹಿಸುತ್ತದೆ. ನಾವು ತೆಗೆದುಕೊಳ್ಳುವ ಹೆಚ್ಚಿನ ಔಷಧಿಗಳನ್ನು ಅದು ಒಡೆಯುತ್ತದೆ ಎನ್ನುತ್ತಾರೆ ಅವರು. ಪ್ಯಾರಾಸಿಟಮಾಲ್ ಅಥವಾ ಅಸೆಟಾಮಿನೋಫೆನ್ ಇದಕ್ಕೂ ಹೊರತಲ್ಲ. ಸಾಮಾನ್ಯ ಪ್ರಮಾಣದಲ್ಲಿ ತೆಗೆದುಕೊಂಡರೆ ಇದು ಸುರಕ್ಷಿತವಾಗಿದೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಒಮ್ಮೆಗೇ ಅಥವಾ ಹಲವು ದಿನಗಳ ಕಾಲ ನಿರಂತರವಾಗಿ ತೆಗೆದುಕೊಂಡರೆ ಇದು ವಿಷಕಾರಿಯಾಗಬಹುದು. ಪ್ಯಾರಸಿಟಮಾಲ್ ಯಕೃತ್ತಿನಲ್ಲಿರುವ ಗ್ಲುಟಾಥಿಯೋನ್ ಎಂಬ ಕಿಣ್ವದ ಮೇಲೆಯೂ ಪರಿಣಾಮ ಬೀರುತ್ತದೆ. 

ಯಕೃತ್ತಿನಲ್ಲಿ ಗ್ಲುಟಾಥಿಯೋನ್ ಖಾಲಿಯಾದಾಗ ವಿಷಕಾರಿ ವಸ್ತುಗಳು ಸಂಗ್ರಹವಾಗಲು ಪ್ರಾರಂಭಿಸುತ್ತವೆ. ಈ ವಸ್ತುಗಳು ಯಕೃತ್ತಿನ ಕೋಶಗಳನ್ನು ಹಾನಿಗೊಳಿಸುತ್ತವೆ, ಇದರಿಂದಾಗಿ ಅವು ಸಾಯುತ್ತವೆ. ಈ ಪ್ರಕ್ರಿಯೆಯನ್ನು ನಾವು ನೆಕ್ರೋಸಿಸ್ ಎಂದು ಕರೆಯುತ್ತೇವೆ. ಈ ಹಾನಿ ಕೇವಲ ಯಕೃತ್ತಿನಲ್ಲಿ ಉಳಿಯುವುದಿಲ್ಲ.ಬಿಡುಗಡೆಯಾಗುವ ವಿಷಕಾರಿ ವಸ್ತುಗಳು ಮತ್ತು ಸ್ವತಂತ್ರ ರಾಡಿಕಲ್‌ಗಳು ರಕ್ತಪ್ರವಾಹದ ಮೂಲಕ ಪ್ರಯಾಣಿಸಿ ಇತರ ಅಂಗಗಳ ಮೇಲೂ ಪರಿಣಾಮ ಬೀರಲು ಪ್ರಾರಂಭಿಸಬಹುದು ಎಂದು ಎಂದು ವೈದ್ಯರು ನಿಯತಕಾಲಿಕೆಯೊಂದರಲ್ಲಿ ತಿಳಿಸಿದ್ದಾರೆ. 

ಭಾರತದಲ್ಲಿ, ಆತ್ಮಹತ್ಯೆ ಪ್ರಯತ್ನಗಳಲ್ಲಿ ಪ್ಯಾರೆಸಿಟಮಾಲ್ ಅನ್ನು ಬಳಸುವುದು ಕಡಿಮೆ ಸಾಮಾನ್ಯವಾಗಿದೆ ಎಂದು ಹೇಳಿರುವ  ಡಾ. ಪೋಲವರಪು  ಬೆನ್ನು ನೋವು, ಜ್ವರ ಅಥವಾ ದೇಹದ ನೋವುಗಳಿಗೆ ಜನರು ವೈದ್ಯರನ್ನು ಸಂಪರ್ಕಿಸದೆ ಈ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಅವರು ಸತತವಾಗಿ ಹೀಗೆ ಮಾಡಿದಾಗ ಅದು ಅಷ್ಟೇ ಹಾನಿಕಾರಕವಾಗಿದೆ. ಯುಕೆಯಲ್ಲಿ ತರಬೇತಿ ಪಡೆಯುತ್ತಿರುವಾಗ ಅಲ್ಲಿ, ಪ್ಯಾರಸಿಟಮಾಲ್ ಮಿತಿಮೀರಿದ ಪ್ರಮಾಣವು ಆತ್ಮಹತ್ಯೆಗೆ ಪ್ರಯತ್ನಿಸುವ ಸಾಮಾನ್ಯ ವಿಧಾನಗಳಲ್ಲಿ ಒಂದಾಗಿದೆ. ಜನರು 20, 30, 40 ಮಾತ್ರೆಗಳನ್ನು ಕೌಂಟರ್‌ನಲ್ಲಿ ಖರೀದಿಸಿ ಒಂದೇ ಬಾರಿಗೆ ತೆಗೆದುಕೊಳ್ಳುತ್ತಿದ್ದರು. ಆ ರೀತಿಯ ಮಿತಿಮೀರಿದ ಪ್ರಮಾಣವು ತ್ವರಿತವಾಗಿ ತೀವ್ರವಾದ ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು  ಮತ್ತು ಸಾವಿಗೆ ಸಹ ಕಾರಣವಾಗಬಹುದು. ದಿನಕ್ಕೆ 8 ಗ್ರಾಂ ಗಿಂತ ಹೆಚ್ಚಿನ ಪ್ರಮಾಣ - 650 ಮಿಗ್ರಾಂನ ಸುಮಾರು 15 ರಿಂದ 20 ಮಾತ್ರೆಗಳೂ ಮಾರಕವಾಗಬಹುದು ಎಂದು ಅವರು  ತಿಳಿಸಿದ್ದಾರೆ. ಈ ಕಾರಣದಿಂದಾಗಿ, ಯುಕೆಯಂತಹ ದೇಶಗಳು ಈಗ ಪ್ರಿಸ್ಕ್ರಿಪ್ಷನ್ ಇಲ್ಲದೆಯೂ ಸಹ ನೀವು ಒಮ್ಮೆಗೆ ಎಷ್ಟು ಪ್ಯಾರಸಿಟಮಾಲ್ ಖರೀದಿಸಬಹುದು ಎಂಬುದನ್ನು ಮಿತಿಗೊಳಿಸಿವೆ. ಆತ್ಮಹತ್ಯೆ ಪ್ರಯತ್ನಗಳನ್ನು ಕಡಿಮೆ ಮಾಡಲು ಅವರು ಕಟ್ಟುನಿಟ್ಟಾದ ಮಿತಿಗಳನ್ನು ಪರಿಚಯಿಸಿದರು ಎಂದು ಅವರು ವಿವರಿಸಿದ್ದಾರೆ.  

ಪ್ಯಾರೆಸಿಟಮಾಲ್ ಎಷ್ಟು ಪ್ರಮಾಣದಲ್ಲಿ ಸುರಕ್ಷಿತ?
ಪ್ಯಾರೆಸಿಟಮಾಲ್‌ನ ನಿಯಮ ಸರಳವಾಗಿದೆ ಎಂದು ತಿಳಿಸಿರುವ ವೈದ್ಯರು, ಸುರಕ್ಷಿತ ದೈನಂದಿನ ಮಿತಿಯನ್ನು ಮೀರಬಾರದು ಮತ್ತು ಆ ಮಿತಿಯು ನಿಮ್ಮ ದೇಹದ ತೂಕವನ್ನು ಅವಲಂಬಿಸಿರುತ್ತದೆ. ಸುಮಾರು 60 ರಿಂದ 70 ಕಿಲೋ ತೂಕವಿರುವ ಸರಾಸರಿ ವಯಸ್ಕರಿಗೆ ಗರಿಷ್ಠ ಸುರಕ್ಷಿತ ಡೋಸ್ ದಿನಕ್ಕೆ 4 ಗ್ರಾಂ ಆಗಿದೆ. ಅಂದರೆ ದಿನಕ್ಕೆ ನಾಲ್ಕು ಬಾರಿ ನೀವು ಪ್ರತಿ 6 ಗಂಟೆಗಳಿಗೊಮ್ಮೆ ಒಂದು ಗ್ರಾಂ ಟ್ಯಾಬ್ಲೆಟ್ ತೆಗೆದುಕೊಳ್ಳಬಹುದು. ಯಾರಾದರೂ ಕಡಿಮೆ ತೂಕ ಹೊಂದಿದ್ದರೆ  ಉದಾಹರಣೆಗೆ 30 ಅಥವಾ 40 ಕೆಜಿ ಅಥವಾ ಮಕ್ಕಳು ಮೇಲಿನ ಡೋಸ್ ಅನ್ನೇ ತೆಗೆದುಕೊಂಡರೆ ಆಗ ಅದು ಅಪಾಯಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.  

ಹೆಚ್ಚು ಸೇವನೆಯಿಂದ ಏನಾಗಬಹುದು? 
ತಪ್ಪಾಗಿ ಡೋಸ್ ತೆಗೆದುಕೊಂಡರೆ ಅದು ಯಕೃತ್ತನ್ನು ಬಹಳ ಬೇಗನೆ ಹಾನಿಗೊಳಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಇದು 24 ಗಂಟೆಗಳ ಒಳಗೆ ಸಾವಿಗೆ ಕಾರಣವಾಗಬಹುದು. 

ಅಪಾಯದಲ್ಲಿದ್ದೇವೆಂದು ಸೂಚಿಸುವ ಎಚ್ಚರಿಕೆಯ ಚಿಹ್ನೆಗಳು 

* ನಿಮ್ಮ ಕಣ್ಣುಗಳು ಅಥವಾ ಮೂತ್ರವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ, ಅದು ಕಾಮಾಲೆ. ನಿಮ್ಮ ಹೊಟ್ಟೆಯ ಬಲಭಾಗದಲ್ಲಿ ನೋವು ಇದ್ದರೆ, ಅಥವಾ ನಿಮಗೆ ನಿದ್ರೆ ಬರಲು ಪ್ರಾರಂಭಿಸಿದರೆ ಅದು ಗಂಭೀರವಾಗಿದೆ. ಅಂದರೆ ನಿಮ್ಮ ಯಕೃತ್ತು ಹೆಣಗಾಡುತ್ತಿದೆ ಎಂದರ್ಥ. ಅಂತಹ ರೋಗಿಗಳಿಗೆ ವಿಶೇಷ ಯಕೃತ್ತಿನ ಕೇಂದ್ರದಲ್ಲಿ ತುರ್ತು ಆರೈಕೆಯ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

* ಆದ್ದರಿಂದ ಸ್ಪಷ್ಟ ಕಾರಣವಿಲ್ಲದೆ ನೋವು ನಿವಾರಕಗಳನ್ನು ತೆಗೆದುಕೊಳ್ಳಬೇಡಿ. ಅದಕ್ಕೆ ಕಾರಣವೇನೆಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. 

ಡೋಲೋ 650 ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆಯೇ?
ಹಿರಿಯ ಮೂತ್ರಪಿಂಡಶಾಸ್ತ್ರಜ್ಞ ಮತ್ತು ಎನ್‌ಟಿಆರ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಟಿ. ರವಿ ರಾಜು, ಡೋಲೋ 650 ಕೇವಲ ಒಂದು ಬ್ರಾಂಡ್ ಹೆಸರು. ನೀವು ನಿಜವಾಗಿಯೂ ತೆಗೆದುಕೊಳ್ಳುತ್ತಿರುವುದು ಪ್ಯಾರಸಿಟಮಾಲ್ ಮತ್ತು ನಾವು ದಶಕಗಳಿಂದ ಅದನ್ನೇ ಬಳಸುತ್ತಿದ್ದೇವೆ. ಇದು  ಕೋವಿಡ್ ಸಮಯದಲ್ಲಿ 650 ಮಿಗ್ರಾಂ ಡೋಸ್ ಜನಪ್ರಿಯವಾಯಿತು. ಈ ಸಮಯದಲ್ಲಿ ದಿನಕ್ಕೆ 4 ಬಾರಿ  650 ಮಿಗ್ರಾಂ ಡೋಸ್ ರೂಢಿಯಾಯಿತು. ಇದನ್ನು ಪ್ರಾಥಮಿಕವಾಗಿ ಜ್ವರ ನಿವಾರಕ (ಜ್ವರ ಕಡಿಮೆ ಮಾಡುವ) ಆಗಿ ಬಳಸಲಾಗುತ್ತದೆ. ಇದು ಸೌಮ್ಯವಾದ ನೋವು ನಿವಾರಕ ಗುಣಲಕ್ಷಣಗಳನ್ನು ಮಾತ್ರ ಹೊಂದಿದೆ. ಪ್ಯಾರಸಿಟಮಾಲ್  ಸಾಮಾನ್ಯವಾಗಿ ಮೂತ್ರಪಿಂಡಕ್ಕೆ ಹಾನಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. 


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಸಿ ಜನರಲ್ ಆಸ್ಪತ್ರೆಗೆ ಬಂತು CBNAAT ಯಂತ್ರ; 90 ನಿಮಿಷದಲ್ಲಿ ಕ್ಷಯ ರೋಗ ಪತ್ತೆ-ದಿನೇಶ್ ಗುಂಡೂರಾವ್
ಕನ್ನಡಿಲೀ ನಿಮ್ಮ ಮುಖ ನೋಡಿಕೊಂಡಾಗ ಹೀಗೆ ಕಾಣ್ತಿದ್ರೆ ಲಿವರ್ ಅಪಾಯದಲ್ಲಿದೆ ಎಂದರ್ಥ