ಮೊಬೈಲ್‌ ಪ್ರಿಯರೇ ಎಚ್ಚರ: ವಾರಕ್ಕೆ ಅರ್ಧಗಂಟೆ ಫೋನ್‌ನಲ್ಲಿ ಮಾತಾಡಿದ್ರೂ ಬಿ.ಪಿ. ಹೆಚ್ಚಳ, ಅಕಾಲಿಕ ಮರಣ ಸಾಧ್ಯತೆ

By Kannadaprabha News  |  First Published May 6, 2023, 8:20 AM IST

ಅಧಿಕ ರಕ್ತದೊತ್ತಡ ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸಲು ಪ್ರಮುಖ ಕಾರಣವಾಗಿದ್ದು ಇದು ಜಾಗತಿಕವಾಗಿ ಜನರ ಅಕಾಲಿಕ ಮರಣಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.


ನವದೆಹಲಿ (ಮೇ 6, 2023): ವಾರದಲ್ಲಿ 30 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಮೊಬೈಲ್‌ ಫೋನ್‌ನಲ್ಲಿ ಮಾತನಾಡಿದರೆ ರಕ್ತದೊತ್ತಡ ಹೆಚ್ಚಾಗುವ ಅಪಾಯ ಶೇ.12ರಷ್ಟಿದೆ ಎಂದು ಇತ್ತೀಚಿನ ವೈದ್ಯಕೀಯ ಅಧ್ಯಯನವೊಂದು ಹೇಳಿದೆ. ಸಂವಹನಕ್ಕೆ ಮೊಬೈಲ್‌ ಅನಿವಾರ್ಯವಾಗಿರುವ ಸಮಯದಲ್ಲಿ ಈ ವರದಿ ಜನರನ್ನು ಆತಂಕಕ್ಕೀಡು ಮಾಡಿದೆ.

ರಕ್ತದೊತ್ತಡ ಇಲ್ಲದ ಸುಮಾರು 2,12,046 ಮಂದಿಯನ್ನು ಬಳಸಿಕೊಂಡು ಚೀನಾದ ವೈದ್ಯಕೀಯ ವಿಶ್ವವಿದ್ಯಾಲಯವೊಂದು ಈ ಸಂಶೋಧನೆಯನ್ನು ನಡೆಸಿದ್ದು, ವಾರದಲ್ಲಿ 30 ನಿಮಿಷಕ್ಕಿಂತ ಕಡಿಮೆ ಕಾಲ ಮೊಬೈಲ್‌ ಮಾತನಾಡದವರಿಗಿಂತ, ಮಾತನಾಡುವವರಲ್ಲಿ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿದೆ ಹೇಳಿದೆ. ಅಧಿಕ ರಕ್ತದೊತ್ತಡ ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸಲು ಪ್ರಮುಖ ಕಾರಣವಾಗಿದ್ದು ಇದು ಜಾಗತಿಕವಾಗಿ ಜನರ ಅಕಾಲಿಕ ಮರಣಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Tap to resize

Latest Videos

ಇದನ್ನು ಓದಿ: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ 15 ವರ್ಷದ ಬಾಲಕಿ

ಪ್ರಪಂಚದ ಜನಸಂಖ್ಯೆಯಲ್ಲಿ 10 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಮುಕ್ಕಾಲು ಭಾಗ ಜನರು ಮೊಬೈಲ್‌ ಫೋನ್‌ಗಳನ್ನು ಹೊಂದಿದ್ದಾರೆ. ಮೊಬೈಲ್‌ ಫೋನ್‌ಗಳು ಕಡಿಮೆ ಮಟ್ಟದ ರೇಡಿಯೋಫ್ರೀಕ್ವೆನ್ಸಿ ಶಕ್ತಿಯನ್ನು ಹೊರಸೂಸುತ್ತವೆ. ಇವು ಕೆಲ ಸಮಯದ ನಿರಂತರ ಬಳಕೆ ರಕ್ತದೊತ್ತಡ ಸಮಸ್ಯೆಯನ್ನು ಉಂಟು ಮಾಡುತ್ತವೆ ಎಂಬುದು ಅಧ್ಯಯನದಲ್ಲಿ ಕಂಡು ಬಂದಿದೆ.

ಮೊಬೈಲ್‌ ಫೋನ್‌ಗಳನ್ನು ದೂರ ಇಟ್ಟು ಹ್ಯಾಂಡ್ಸ್‌ ಫ್ರೀ (ಇಯರ್‌ ಫೋನ್‌, ಸ್ಪೀಕರ್‌) ಬಳಕೆ ಮಾಡಿದರೆ ಈ ಅಪಾಯ ತಗ್ಗಬಹುದೇ ಎಂಬುದರ ಕುರಿತಾಗಿ ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದು ಅಧ್ಯಯನ ವರದಿಯ ಲೇಖಕ ಶಿನ್‌ಹುಯ್‌ ಕಿನ್‌ ಹೇಳಿದ್ದಾರೆ.

ಇದನ್ನೂ ಓದಿ: ಮೊಬೈಲ್ ಬ್ಯಾಟರಿ ಸ್ಫೋಟಕ್ಕೆ ವ್ಯಕ್ತಿ ಬಲಿ: ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಶವ..!

click me!