ನೀರು ಕುಡಿಯುವುದು ಅಂದ್ರೆ ಈಕೆಗೋ ಅಲರ್ಜಿ. ಬರೀ ಬಬಲ್ ಟೀ, Fruit Juice, Alchohol ಪಾನೀಯಗಳನ್ನು ಕುಡಿದ ಈಕೆಯ ಕಿಡ್ನಿಯಲ್ಲಿತ್ತು 300 ಕಲ್ಲು!
ಆಕೆಗೆ ನೀರು ಕುಡಿಯುವುದೆಂದರೆ ವಿಷ ಸೇವಿಸಿದ ಅನುಭವ. ಇಷ್ಟವೇ ಇರಲಿಲ್ಲ. ಆದರೆ, ದೇಹಕ್ಕೆ ಬೇಕಲ್ಲ. ಸರಿ ತನ್ನನ್ನು ತಾನು ಹೈಡ್ರೇಟ್ ಮಾಡಿಕೊಳ್ಳಲು ನೀರು ಕುಡಿಯುವ ಬದಲಾಗಿ ಬಬಲ್ ಟೀ (Bubble Tea), ಹಣ್ಣಿನ ರಸ ಮತ್ತು ಆಲ್ಕೊಹಾಲ್‌ಯುಕ್ತ ಪಾನೀಯಗಳನ್ನು ಬಳಸುತ್ತಿದ್ದ, ತೈವಾನ್‌ನ 20 ವರ್ಷದ ಮಹಿಳೆಯ ಮೂತ್ರಪಿಂಡದಲ್ಲಿ 300ಕ್ಕೂ ಹೆಚ್ಚು ಕಲ್ಲುಗಳು ಪತ್ತೆಯಾಗಿವೆ.
ತೈವಾನ್ ವೈದ್ಯರು (Taiwan Doctor) ಮಹಿಳೆಯ ಮೂತ್ರಪಿಂಡದಿಂದ 300ಕ್ಕೂ ಹೆಚ್ಚು ಕಲ್ಲುಗಳನ್ನು (Kidney Stones) ತೆಗೆದು ಹಾಕಿದ್ದಾರೆ. ಅವರು ನೀರಿನ ಬದಲಿಗೆ ಸಿಹಿ ಪಾನೀಯಗಳಿಂದ ಮಾತ್ರ ತನ್ನನ್ನು ಹೈಡ್ರೇಟ್ ಮಾಡಿಕೊಳ್ಳುತ್ತಿದ್ದರು. ಕ್ಸಿಯಾವೋ ಯು (Xiao Yu) ಎಂಬ 20 ವರ್ಷದ ಮಹಿಳೆ ಕಳೆದ ವಾರ ಜ್ವರ ಮತ್ತು ಆಕೆಯ ಕೆಳ ಬೆನ್ನಿನಲ್ಲಿ ತೀವ್ರ ನೋವಿನಿಂದ ಬಳಲುತ್ತಿದ್ದರಿಂದ ತೈವಾನ್ ನಗರದ ಚಿ ಮೆಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕ್ಸಿಯಾವೋ ಯು ಸಮಸ್ಯೆ ಪತ್ತೆ ಮಾಡಲು ವೈದ್ಯರು ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿದ್ದು, ಅದರಲ್ಲಿ ಆಕೆಯ ಬಲ ಮೂತ್ರಪಿಂಡದಲ್ಲಿ ದ್ರವದಿಂದ ಊದಿಕೊಂಡಿದೆ. ಅದರಲ್ಲಿ ನೂರಾರು ಕಲ್ಲುಗಳಿವೆ ಎಂದು ತೋರಿಸಿದೆ. CT ಸ್ಕ್ಯಾನ್ ಪ್ರಕಾರ, ಕಲ್ಲುಗಳು 5mm ಮತ್ತು 2cm ಗಾತ್ರದಲ್ಲಿವೆ ಎಂದು ವೈದ್ಯರು ಪತ್ತೆ ಹಚ್ಚಿದ್ದಾರೆ. ನಂತರದ ರಕ್ತ ಪರೀಕ್ಷೆಯಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆಯೂ ಹೆಚ್ಚಾಗಿರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ.
undefined
ಇದಕ್ಕೆ ಕಾರಣವೇನು ಎಂದು ಪರಿಶೀಲಿಸಿದಾಗ ಆಕೆ ನೀರನ್ನು ಕುಡಿಯುತ್ತಲೇ ಇರಲಿಲ್ಲ. ಬದಲಿಗೆ ಬಬಲ್ ಟೀ, ಹಣ್ಣಿನ ರಸ ಮತ್ತು ಆಲ್ಕೊಹಾಲ್‌ಯುಕ್ತ ಪಾನೀಯ ಕುಡಿಯುವ ಮೂಲಕ ತನ್ನನ್ನು ತಾನು ಹೈಡ್ರೇಟ್ ಮಾಡಿಕೊಳ್ಳುತ್ತಿದ್ದ ಕುರಿತು ವೈದ್ಯರಿಗೆ ತಿಳಿಸಿದ್ದಾಳೆ. ಇದು ಹಲವು ವರ್ಷಗಳಿಂದ ಅಭ್ಯಾಸ ಮಾಡಿಕೊಂಡಿರುವುದರಿಂದ ದೀರ್ಘಕಾಲದ ನಿರ್ಜಲೀಕರಣಕ್ಕೆ ಕಾರಣವಾಗಿದೆ. ಅವಳ ಮೂತ್ರಪಿಂಡದಲ್ಲಿ ಖನಿಜಗಳ ಸಂಗ್ರಹವಾಗಿವೆ.
Health Tips: ಕಿಡ್ನಿ ಸಮಸ್ಯೆ ಬಾರದಿರಲು… ಆಯುರ್ವೇದದ ಈ ಸಲಹೆ ಪಾಲಿಸಲೇಬೇಕು…
ವೈದ್ಯರು ಪರ್ಕ್ಯುಟೇನಿಯಸ್ ನೆಫ್ರೊಲಿಥೊಟೊಮಿ (Percutaneous nephrolithotomy)ಎಂಬ 2-ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು, ಆಕೆಯ ಮೂತ್ರಪಿಂಡದಿಂದ ಸುಮಾರು 300 ಕಲ್ಲುಗಳನ್ನು ಹೊರತೆಗೆದಿದ್ದಾರೆ. ಮಹಿಳೆ ಸ್ಥಿತಿ ಸ್ಥಿರವಾದ ನಂತರ ಆಕೆಯನ್ನು ಬಿಡುಗಡೆ ಮಾಡಲಾಗಿದೆ.
ಬಬಲ್ ಟೀ ಎಂದರೆ ಏನು?
ಬಬಲ್ ಟೀ 1980ರ ದಶಕದಲ್ಲಿ ತೈವಾನ್‌ನಲ್ಲಿ ಹುಟ್ಟಿಕೊಂಡಿತು. ನಂತರದ ದಿನಗಳಲ್ಲಿ ಜಾಗತಿಕವಾಗಿ ಹೆಚ್ಚು ಪ್ರಸಿದ್ಧಿ ಪಡೆಯಿತು. ಪ್ರಸ್ತುತ ದಿನಗಳಲ್ಲಿ ಇದು ಪಾಶ್ಚಿಮಾತ್ಯ, ಯುರೋಪಿಯನ್ ಮತ್ತು ಏಷ್ಯಾದ ದೇಶಗಳಲ್ಲಿ ಅತ್ಯಂತ ಜನಪ್ರಿಯ ಪಾನೀಯವಾಗಿದೆ. ಹೆಚ್ಚು ಹದಿಹರೆಯದವರು ಈ ಚಹಾ ಇಷ್ಟಪಡುತ್ತಾರೆಂಬುದು ವಿಶೇಷ. ಇದು ಬಬಲ್ ಟೀ, ಬೋಬಾ ಟೀ, ಪರ್ಲ್ ಟೀ ಅಥವಾ ಟ್ಯಾಪಿಯೋಕಾ ಟೀ (Tapioca tea)ಎಂದು ಸಹ ಕರೆಯಲ್ಪಡುತ್ತದೆ. ಇದನ್ನು ಹಾಲು ಅಥವಾ ಹಸಿರು ಎಲೆಗಳನ್ನು ಬಳಸಿ ತಯಾರಿಸಲಾಗುತ್ತದೆ.
ಬಬಲ್ ಟೀ ಹೆಚ್ಚು ಸಕ್ಕರೆ (Sugar) ಮತ್ತು ಅನಾರೋಗ್ಯಕರ ಪಾನೀಯವಾಗಿದ್ದರೂ, ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುವ ಬಬಲ್ ಟೀ ಮತ್ತು ಹಸಿರು ಚಹಾವನ್ನು ಸೇವಿಸುವುದರಿಂದ ಮೆದುಳು ಹೆಚ್ಚು ಚುರುಕಾಗುತ್ತದೆ ಮತ್ತು ದೇಹಕ್ಕೆ ಶಕ್ತಿ ದೊರಕುತ್ತದೆ.
Kidney Stones: ಕಿಡ್ನಿ ಕಲ್ಲಿನ ಸಮಸ್ಯೆಯೇ? ಯೋಗದಲ್ಲಿದೆ ಪರಿಹಾರ
ಮೂತ್ರಪಿಂಡದ ಕಲ್ಲುಗಳಿಗೆ ಕಾರಣಗಳು:
ಕಡಿಮೆ ನೀರಿನ ಸೇವನೆ ಮತ್ತು ತೂಕ ನಷ್ಟ ಶಸ್ತ್ರಚಿಕಿತ್ಸೆ ಅಥವಾ ಹೆಚ್ಚು ಉಪ್ಪು ಅಥವಾ ಸಕ್ಕರೆಯೊಂದಿಗೆ ಆಹಾರ ತಿನ್ನುವುದು ಹೆಚ್ಚು ಅಥವಾ ತುಂಬಾ ಕಡಿಮೆ ವ್ಯಾಯಾಮ ಸೇರಿದಂತೆ ಕೆಲವು ಕಾರಣಗಳಿಂದ ಉಂಟಾಗಬಹುದು. ಮೂತ್ರದಲ್ಲಿನ ಮಿನರಲ್ಸ್ ಕಡಿಮೆ ಮಾಡಲು ಹೆಚ್ಚು ನೀರಿನ ಸೇವನೆ ಅಗತ್ಯ. ದೇಹಕ್ಕೆ ಸಾಕಷ್ಟು ನೀರಿನ ಕೊರತೆಯಿದ್ದರೆ, ಮೂತ್ರದ ಮಿನರಲ್ಸ್ ಸುಲಭವಾಗಿ ಸಂಗ್ರಹವಾಗಿ ಕಲ್ಲಿನ ರಚನೆಯ ಅಪಾಯ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರಲ್ಲಿ ಮೂರು ಪಟ್ಟು ಹೆಚ್ಚು ಮೂತ್ರಪಿಂಡದ ಕಲ್ಲುಗಳು ಉಂಟಾಗುವ ಸಾಧ್ಯತೆಗಳಿವೆ.
- ಸಿಂಧು ಕೆ ಟಿ, ಕುವೆಂಪು ವಿಶ್ವವಿದ್ಯಾಲಯ