ಸುಗಂಧ ದ್ರವ್ಯ ಅಲರ್ಜಿಯೆ? ಮನೆಯಲ್ಲೇ 'ಬಾಡಿ ಮಿಸ್ಟ್' ತಯಾರಿ ಹೇಳಿಕೊಟ್ಟಿದ್ದಾರೆ ನಟಿ ಅದಿತಿ ಪ್ರಭುದೇವ

By Suvarna News  |  First Published Dec 17, 2023, 5:13 PM IST

ದೇಹಕ್ಕೆ ಅಹ್ಲಾದ ನೀಡುವ ಬಾಡಿ ಮಿಸ್ಟ್​ ಅನ್ನು ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬ ಮಾಹಿತಿ ನೀಡಿದ್ದಾರೆ. ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ. ಇಲ್ಲಿದೆ ವಿಡಿಯೋ. 
 


ಕೆಲವರಿಗೆ ಸುಗಂಧ ದ್ರವ್ಯದ ಪರಿಮಳ ಎಂದರೆ ಅಲರ್ಜಿ ಎನಿಸುತ್ತದೆ. ಎಷ್ಟೇ ಒಳ್ಳೆಯ ಪರಿಮಳ ಇದ್ದರೂ ಅದನ್ನು ಸಹಿಸುವುದು ಕೆಲವರಿಗೆ ಆಗಿ ಬರುವುದಿಲ್ಲ. ಇನ್ನು ಕೆಲವೊಮ್ಮೆ ಒಳ್ಳೆಯ ಪರಿಮಳ ಇರುವ ಸೇಂಟ್​ ಬಾಟಲಿ ತಂದುಕೊಂಡು ಮೈಮೇಲೆ ಸ್ಪ್ರೇ ಮಾಡಿದರೆ ಆಗ ಅದರ ವಾಸನೆಗೆ ತಲೆನೋವು ಬರುವುದೂ ಇದೆ. ಎಲ್ಲವೂ ಸರಿಯಿದ್ದರೂ, ಇಂಥ ಬಾಡಿ ಸ್ಪ್ರೇಗಳಿಗೆ ರಾಸಾಯನಿಕ ಹಾಕುವ ಕಾರಣ, ಅದು ದೀರ್ಘ ಅವಧಿಗೆ ಹಲವಾರು ರೀತಿಯಲ್ಲಿ ಸಮಸ್ಯೆ ತಂದೊಡ್ಡಬಲ್ಲುದು, ಚರ್ಮದ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ ಮನೆಯಲ್ಲಿಯೇ ರಾಸಾಯನಿಕಮುಕ್ತವಾಗಿ ದೇಹಕ್ಕೂ ಒಳ್ಳೆಯದು ಎನಿಸುವ, ತಲೆನೋವನ್ನೂ ಬರಿಸದ ಬಾಡಿ ಮಿಸ್ಟ್​ ತಯಾರಿ ಮಾಡುವುದನ್ನು ಹೇಳಿಕೊಟ್ಟಿದ್ದಾರೆ  ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್​ (Aditi Prabhudev).

ಅಂದಹಾಗೆ ಅದಿತಿ ಅವರು, ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ.  ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.  

Latest Videos

undefined

ಫಳಫಳ ಹೊಳೆಯುವ ತ್ವಚೆ- ಕೂದಲಿಗೆ ನ್ಯಾಚುಲರ್​ ಪೇಸ್ಟ್ ತಯಾರಿಕೆ ಹೇಗೆ? ಅದಿತಿ ಪ್ರಭುದೇವ ಟಿಪ್ಸ್​ ಕೇಳಿ

ಅವರು ಬಾಡಿಮಿಸ್ಟ್​ ಮಾಡಿಕೊಳ್ಳುವ ಸುಲಭ ವಿಧಾನವನ್ನು ಹೇಳಿಕೊಟ್ಟಿದ್ದಾರೆ. ಇದಕ್ಕೆ ಬೇಕಿರುವುದು ಡಿಸ್ಟಿಲ್​ ವಾಟರ್​, ಇಷ್ಟವಾಗಿರುವ ಎಸೆನ್ಷಿಯಲ್​ ಆಯಿಲ್​ ಮತ್ತು ಸ್ಪ್ರೇ ಬಾಟಲ್​ ಇಷ್ಟೇ ಸಾಕು. ಒಂದು ವೇಳೆ ಡಿಸ್ಟಿಲ್​ ವಾಟರ್​ ಇಲ್ಲದೇ ಇದ್ದರೆ ಅದನ್ನು ಹೇಗೆ ರೆಡಿ ಮಾಡಬಹುದು ಎಂಬ ಬಗ್ಗೆ ನಟಿ ಹೇಳಿಕೊಟ್ಟಿದ್ದಾರೆ. ಒಂದು ಪಾತ್ರೆಯಲ್ಲಿ ಸ್ವಲ್ಪವೇ ನೀರು ಹಾಕಿ ಅದರ ಮಧ್ಯೆ ಒಂದು ಬಟ್ಟಲುಇಡಬೇಕು. ಬಟ್ಟಲು ನೀರಿನಲ್ಲಿ ತೇಲಬಾರದು. ಅಷ್ಟು ಕಡಿಮೆ ನೀರು ಇಡಬೇಕು. ಆ ಬಳಿಕ ಆ ಪಾತ್ರೆಯನ್ನು ಮುಚ್ಚಬೇಕು. ಪಾತ್ರೆಯ ಮುಚ್ಚಳವನ್ನು ಉಲ್ಟಾ ಮಾಡಿ, ಅದರ ಮೇಲೆ ಐಸ್​ ಕ್ಯೂಬ್​ ಇಡಬೇಕು. ನೀರು ಕುದಿಯುತ್ತಿದ್ದಂತೆಯೇ ಐಸ್​ ಕ್ಯೂಬ್​ ನೀರು ಕೆಳಗಡೆ ಸ್ಟಾಕ್​ ಆಗುತ್ತದೆ. ಇದೇ ಡಿಸ್ಟಿಲ್​ ವಾಟರ್​. ಇದನ್ನು ಒಂದು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಅದಕ್ಕೆ ನಿಮ್ಮಿಷ್ಟದ ಎಸೆನ್ಷಿಯಲ್​ ಆಯಿಲ್​ ಅನ್ನು 10-20 ಡ್ರಾಪ್ಸ್​ ಹಾಕಬೇಕು. ನಂತರ ಅದನ್ನು ಬಾಡಿಗೆ ಸ್ಪ್ರೇ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಯಾವುದೇ ಕಿರಿಕಿರಿ ಇಲ್ಲದೇ ಪರ್ಫ್ಯುಮ್​ ತಯಾರಿಸಿಕೊಳ್ಳಬಹುದು ಎನ್ನುತ್ತಾರೆ ನಟಿ. 

ಇದೇ ವಿಡಿಯೋದಲ್ಲಿ ನಟಿ ತ್ವಚೆಯ ಪೇಸ್ಟ್​ ಮಾಡುವುದು ಹೇಗೆ ಎನ್ನುವುದನ್ನು ಹೇಳಿಕೊಟ್ಟಿದ್ದಾರೆ. ಕಡಲೆ ಬೇಳೆ, ಮಸೂರು ದಾಲ್​, ತೊಗರಿ ಬೇಳೆ. ಹೆಸರು ಕಾಳು, ಸ್ವಲ್ಪ ಅಕ್ಕಿ, ಕಸ್ತೂರಿ ಮಂಜಲ್​, ಸೀಗೆ ಕಾಯಿ, ಬೆಟ್ಟದ ನೆಲ್ಲಿಕಾಯಿ, ರೀತಾ, ಬಾದಾಮಿ, ನೀಮ್​ ಮತ್ತು ರೋಸ್​ ಪೌಡರ್​, ಸ್ಯಾಂಡಲ್​ವುಡ್​ ಪೌಡರ್​. ಕೆಲವೊಂದು ವಸ್ತುಗಳು ಇಲ್ಲದಿದ್ದೂ ಪರವಾಗಿಲ್ಲ. ಮೊದಲು ಇವೆಲ್ಲಾ ಬೇಕು. ಇಲ್ಲಿ ಎಲ್ಲಾ ಕಾಳುಗಳನ್ನು ಸಮ ಪ್ರಮಾಣದಲ್ಲಿ ಬಳಸಲಾಗಿದೆ. ಪೌಡರ್​ಗಳನ್ನು 2-3 ಚಮಚ ಹಾಕಬೇಕು. ನಿಧಾನ ಉರಿಯಲ್ಲಿ 5-6 ನಿಮಿಷ ಫ್ರೈಮಾಡಿಕೊಳ್ಳಬೇಕು. ನಂತರ ಬಾದಾಮಿಯನ್ನು ಫ್ರೈ ಮಾಡಿಕೊಳ್ಳಬೇಕು. ಕಸ್ತೂರಿ ಮೇಥಿಯನ್ನು ಬೇಕಿದ್ದರೆ ಹಾಕಬಹುದು. ಇವುಗಳೆಲ್ಲಾ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಮಿಕ್ಸ್​ ಮಾಡಿ ತಣ್ಣಗಾದ ಮೇಲೆ ಒಂದು ಜಾರ್​ನಲ್ಲಿ ಶೇಖರಣೆ ಮಾಡಿ ಇಡಬಹುದು. ಬೇಕಿದ್ದರೆ ಮುಲ್ತಾನಿ ಮಿಟ್ಟಿ ಹಾಕಬಹುದು. ಸ್ನಾನಕ್ಕೆ ಹೊರಡುವ 5-10 ನಿಮಿಷ ಮುಂಚೆ ನೀರಿನಲ್ಲಿ, ರೋಸ್ ವಾಟರ್​ನಲ್ಲಿ ಅಥವಾ ಅಲೋವಿರಾ ಜೆಲ್​ನಲ್ಲಿ ಪೇಸ್ಟ್​ ಮಾಡಿಕೊಳ್ಳಬೇಕು. ಇದನ್ನು ಬಳಸುವುದರಿಂದ ಬ್ಯೂಟಿಫುಲ್​ ರಿಸಲ್ಟ್​ ಬರುತ್ತದೆ ಎಂದಿದ್ದಾರೆ. 

ಜೊತೆಯಲಿ ಜೊತೆಜೊತೆಯಲಿ... ರೆಟ್ರೋ ಸ್ಟೈಲ್​ನಲ್ಲಿ ಬಿಗ್​ಬಾಸ್​ ಅನುಪಮಾ ಮಿಂಚಿಂಗ್​: ವಿಡಿಯೋಗೆ ಫ್ಯಾನ್ಸ್​ ಫಿದಾ

 

click me!