ಖುಷ್ ಖುಷಿಯಾಗಿರ್ಬೇಕಾ? ಸೋಷಿಯಲ್ ಮೀಡಿಯಾ ಬಳಸೋದ ಬಿಡಿ!

By Suvarna NewsFirst Published Dec 18, 2023, 12:55 PM IST
Highlights

ಸೋಷಿಯಲ್ ಮೀಡಿಯಾ ಬಳಸೋದ ಕಡಿಮೆ ಮಾಡಿದ್ರೆ ಸಾಕು ಮಾನಸಿಕ ಆರೋಗ್ಯ ಸುಧಾರಿಸುವ ಜೊತೆಗೆ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಲು ಸಾಧ್ಯ ಎಂದು ರೂಹ್ರ್ ಯೂನಿವರ್ಸಿಟಿ ಬೊಚಂ ಮತ್ತು ಜರ್ಮನಿಯ ಜರ್ಮನ್ ಸೆಂಟರ್ ಫಾರ್ ಮೆಂಟಲ್ ಹೆಲ್ತ್  ಸಂಶೋಧನೆ ಬಹಿರಂಗಪಡಿಸಿದೆ.

ಬೆಳಗ್ಗೆ ಎದ್ದಾಗಿನಿಂದ, ರಾತ್ರ ಮಲಗುವವರೆಗೂ ಸೋಷಿಯಲ್ ಮೀಡಿಯಾ ಯಾರು ಬಳಸುವುದಿಲ್ಲ ಹೇಳಿ? ಮಕ್ಕಳು ಮೊಬೈಲ್ ಅಡಿಕ್ಷನ್ ಅಂತ ಹೇಳುವ ಪೋಷಕರ ಕೈಯಲ್ಲಿ ಸದಾ ಮೊಬೈಲ್ ಇರುತ್ತೆ. ಮಕ್ಕಳು ಏನೋ ಹೇಳುತ್ತಿದ್ದಾರೆಂದರೂ ಮೊಬೈಲ್ ಬಿಟ್ಟು ಕೇಳಿಸಿಕೊಳ್ಳುಷ್ಟು ಸಹನೆ ಪೋಷಕರಿಗೇ ಇಲ್ಲವಾಗಿದೆ. ಅಂತ ಅಡಿಕ್ಷನ್ ಸಹಜವಾಗಿ ಮನೆಯವರ ಬಾಂಧವ್ಯ ಕಡಿಮೆ ಮಾಡುತ್ತದೆ. ಬಾಂಧವ್ಯ ಕಡಿಮೆಯಾಗಿದೆ ಅಂದ್ರೆ ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. 

ಇಂಥ ಸಾಮಾಜಿಕ ಮಾಧ್ಯಮಗಳನ್ನು ಬಳಕೆ  ಪ್ರತಿದಿನ 30 ನಿಮಿಷ ಕಡಿಮೆ ಮಾಡಿಕೊಳ್ಳುವ ಮೂಲಕ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವ ಜೊತೆಗೆ, ಕೆಲಸದಲ್ಲಿ ಸಕ್ರಿಯವಾಗಿ ಭಾಗಿಯಾಗಬಹುದು. ಪದೇ ಪದೇ ಸೋಷಿಯಲ್ ಮೀಡಿಯಾ ಬಳಸುವವರು ತಮ್ಮ ಕೆಲಸದಲ್ಲಿ ಏಕಾಗ್ರತೆ ವಹಿಸಲು ಕಷ್ಟವೆಂದು ಇದೀ ಸಂಶೋಧನೆಯೊಂದು ಪ್ರೂವ್ ಮಾಡಿದೆ. 

ರೂಹ್ರ್ ಯುನಿವರ್ಸಿಟಿ ಬೊಚಂ ಮತ್ತು ಜರ್ಮನಿಯ ಜರ್ಮನ್ ಸೆಂಟರ್ ಫಾರ್ ಮೆಂಟಲ್ ಹೆಲ್ತ್‌ನ ಸಂಶೋಧಕರು, ಸೋಷಿಯಲ್ ಮೀಡಿಯಾ ಕಡಿಮೆ ಬಳಸುವವರಲ್ಲಿ ಕೆಲಸದ ಒತ್ತಡ ಮತ್ತು ಆನ್‌ಲೈನ್‌ನಲ್ಲಿ ಇಲ್ಲದಿದ್ದಾಗ ಏನನ್ನೋ ಕಳೆದುಕೊಳ್ಳತ್ತಿದ್ದೇವೆ ಎಂದೇ ಅನಿಸುತ್ತದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಬಾತ್ ರೂಮ್, ಟಾಯ್ಲೆಟ್‌ಗೆ ಹೋಗುವಾಗಲು ಏನೋ ಮಿಸ್ ಮಾಡಿಕೊಳ್ಳುವ ಆತಂಕದಿಂದ ಮೊಬೈಲೇ ತೆಗೆದುಕೊಂಡೇ ಹೋಗುವಂತಾಗಿದೆ. 

YearEnder 2023: ಈ ವರ್ಷ ಬಾಹ್ಯಾಕಾಶದಿಂದ ತೆಗೆದ ಭೂಮಿಯ ಐದು ಸುಂದರ ಚಿತ್ರಗಳಿವು!

ಸಾಮಾಜಿಕ ಮಾಧ್ಯಮದಿಂದ ದೂರ ಇರುವುದರಿಂದ ಜನರಲ್ಲಿ ಕೆಲಸಕ್ಕೆ ಹೆಚ್ಚು ಸಮಯ ಸಿಗುವ ಜೊತೆಗ, ಏಕಾಗ್ರತೆ ಹೆಚ್ಚುತ್ತದೆ ಎಂಬುವುದು ಅಧ್ಯಯನದಿಂದ ತಿಳಿದು ಬಂದಿದೆ. ಈ ಸಂಶೋಧನಾ ವರದಿ ಬಿಹೇವಿಯರ್ ಆ್ಯಂಡ್ ಇನ್ ಫಾರ್ಮೇಷನ್ ಟೆಕ್ನಾಲಜಿ ಎಂಬ ಜರ್ನಲ್‌ನಲ್ಲಿ ಪ್ರಕಟಗೊಂಡಿದ್ದು, ಕೆಲಸದಿಂದ ನಿರಂತರ ವಿಚಲಿತಗೊಳ್ಳುತ್ತಿದ್ದರೆ ನಮ್ಮ ಮೆದುಳು ಅದನ್ನು ಸಮರ್ಪಕವಾಗಿ ಎದುರಿಸಲು ಸಾಧ್ಯವಿಲ್ಲ ಎಂದು ಸಂಶೋಧಕರಲ್ಲಿ ಒಬ್ಬರಾದ ಜೂಲಿಯಾ  ಬ್ರೈಲೊವ್ಸ್ಕಿಯಾ ತಿಳಿಸಿದ್ದಾರೆ.

'ತಮ್ಮ ಕೆಲಸ ಬಿಟ್ಟು ಸಾಮಾಜಿಕ ಮಾಧ್ಯಮಗಳನ್ನು ವೀಕ್ಷಿಸುವವರು ತಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಹೆಚ್ಚು ಕಷ್ಟಪಡುತ್ತಾರೆ ಮತ್ತು ಅವರ ಕೆಲಸದ ಫಲಿತಾಂಶ ಉತ್ತಮವಾಗಿರುವುದಿಲ್ಲ,' ಎಂದು ಬ್ರೈಲೋವ್ಸ್ಕಯಾ ಹೇಳಿದರು.

ಸಂಶೋಧನಾ ತಂಡವು 166 ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಂಡು, ಅವರನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪು ತಮ್ಮ ಸಾಮಾಜಿಕ ಮಾಧ್ಯಮ ಬಳಕೆ ಅಭ್ಯಾಸವನ್ನು ಹಾಗೆ ಮುಂದುವರೆಸುವಂತೆ ಮತ್ತು ಇನ್ನೊಂದು ಗುಂಪು ಏಳು ದಿನಗಳವರೆಗೆ ದಿನಕ್ಕೆ 30 ನಿಮಿಷ ಸೋಷಿಯಲ್ ಮೀಡಿಯಾ  ಕಡಿಮೆ ಬಳಸುವಂತೆ ಅಧ್ಯಯನಕ್ಕಾಗಿ ಸೂಚಿಸಲಾಗಿತ್ತು. 

ಪ್ರಯೋಗದ ಪ್ರಾರಂಭಿಸುವ  ಮೊದಲು ಮತ್ತು ನಂತರ ಉದ್ಯೋಗಿಗಳ  ಕೆಲಸದ ಹೊರೆ, ಕೆಲಸದ ತೃಪ್ತಿ, ಬದ್ಧತೆ, ಮಾನಸಿಕ ಆರೋಗ್ಯ, ಒತ್ತಡದ ಮಟ್ಟಗಳ ಸೇರಿ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು.  ಒಂದು ವಾರದ ನಂತರ  ಸಾಮಾಜಿಕ ಮಾಧ್ಯಮದಲ್ಲಿ ದಿನಕ್ಕೆ 30 ನಿಮಿಷಗಳಷ್ಟು ಕಡಿಮೆ ಸಮಯವನ್ನು ಕಳೆಯುವ ಗುಂಪು ಅವರ ಕೆಲಸದ ತೃಪ್ತಿ ಮತ್ತು ಮಾನಸಿಕ ಆರೋಗ್ಯ ಮೊದಲಿಗಿಂತ ಗಮನಾರ್ಹವಾಗಿ ಸುಧಾರಿಸಿರುವುದು  ಕಂಡು ಬಂದಿದೆ. ಸೋಶಿಯಲ್ ಮೀಡಿಯಾ ಕಡಿಮೆ ಹೊತ್ತು ಬಳಸುವವ ಮನಸ್ಥಿತಿ ಉತ್ತಮವಾಗಿಸಬಹುದು ಎಂದು ಸಂಶೋಧನೆ ತಿಳಿಸಿದ್ದು, ಹೆಚ್ಚು ಕಾಲ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವ್ಯಸನಕಾರಿ ನಡವಳಿಕೆಗೆ ಕಾರಣವಾಗಬಹುದು ಎಂದು ಸಂಶೋಧನೆ ತಿಳಿಸಿದೆ.

ಬಾತ್​ ಟಬ್​ನಲ್ಲಿ ಪುಟ್ಟಗೌರಿ ಸಾನ್ಯಾ ಬೋಲ್ಡ್ ಪೋಸ್: We Want in Bikini ಎಂದ ಫ್ಯಾನ್ಸ್‌!

 

- ಸಿಂಧು ಕೆ ಟಿ, ಕುವೆಂಪು ವಿಶ್ವವಿದ್ಯಾಲಯ

click me!