ಚಿಕ್ಕ ಮಕ್ಕಳ ತಲೆ ಮೇಲೆ ಬಿಳಿ ಕೂದಲು ಕಾಣಸಿಗ್ತಿದೆ. ಅದಕ್ಕೆ ಪರಿಹಾರ ಏನು ಅಂತ ಪಾಲಕರು ಚಿಂತಿಸ್ತಿದ್ದಾರೆ. ಬಾಬಾ ರಾಮ್ ದೇವ್ ಸುಲಭ ಟಿಪ್ಸ್ ನಿಮ್ಮ ಮುಂದಿಟ್ಟಿದ್ದಾರೆ.
ವಯಸ್ಸು 35ರ ಗಡಿ ದಾಡ್ತಿದ್ದಂತೆ ತಲೆ ಕೂದಲು (hair) ತನ್ನ ಬಣ್ಣ ಬದಲಿಸೋಕೆ ಶುರು ಮಾಡುತ್ತೆ. ಇದು ವಯಸ್ಸಾದಂತೆ ಆಗುವ ಸಾಮಾನ್ಯ ಬದಲಾವಣೆ. ಆದ್ರೆ ಇತ್ತೀಚಿನ ದಿನಗಳಲ್ಲಿ 10 ವರ್ಷದ ಮಕ್ಕಳ (children) ತಲೆ ಮೇಲೆ ಬಿಳಿ ಕೂದಲು ಕಾಣ ಸಿಗ್ತಿದೆ. ಇದು ಪಾಲಕರನ್ನು ಚಿಂತೆಗೀಡು ಮಾಡಿದೆ. ಕಪ್ಪು ಹಾಗೂ ದಟ್ಟ ಕೂದಲನ್ನು ಪ್ರತಿಯೊಬ್ಬರೂ ಬಯಸ್ತಾರೆ. ಪುರುಷ ಇರಲಿ ಇಲ್ಲ ಮಹಿಳೆ, ಇಬ್ಬರೂ ತಮ್ಮ ತಲೆ ತುಂಬ ಕೂದಲಿರಬೇಕು ಎನ್ನುವ ಜೊತೆಗೆ ಕೂದಲು ಬೆಳ್ಳಗಾಗ್ಬಾರದು ಅಂದ್ಕೊಳ್ತಾರೆ. ಚಿಕ್ಕ ಮಕ್ಕಳಿಗೆ ಬಿಳಿ ಕೂದಲು ಕಾಣಿಸಿಕೊಂಡ್ರೆ ಟೆನ್ಷನ್ ಹೆಚ್ಚಾಗೋದು ಸಹಜ. ಮಾರುಕಟ್ಟೆಯಲ್ಲಿ ಕೂದಲ ಬಣ್ಣ ಬದಲಿಸುವ ಅನೇಕ ರಾಸಾಯನಿಕಗಳಿವೆ. ಆದ್ರೆ ಅವು ತಾತ್ಕಾಲಿಕ. ನಿಮ್ಮ ತಲೆ ಮೇಲಾಗಿರುವ ಶಾಶ್ವತ ಬಿಳಿ ಕೂದಲನ್ನು ಅವು ಮರೆ ಮಾಚುತ್ತವೆಯೇ ವಿನಃ ಬಿಳಿ ಕೂದಲನ್ನು ಕಪ್ಪು ಮಾಡೋದಿಲ್ಲ. ಚಿಕ್ಕ ವಯಸ್ಸಿನಲ್ಲೇ ನಿಮ್ಮ ತಲೆ ಕೂದಲಿನಲ್ಲೂ ಒಂದೊಂದು ಬಿಳಿ ಕೂದಲು ಕಾಣಿಸ್ತಾ ಇದೆ ಎಂದಾದ್ರೆ ಇಲ್ಲವೇ 40ರ ಗಡಿ ದಾಟುವವರೆಗೂ ನಿಮ್ಮ ಕೂದಲು ಕಪ್ಪಗೆ ಇರಬೇಕು ಎನ್ನುವವರು ಯೋಗ ಗುರು ಬಾಬಾ ರಾಮ್ ದೇವ್ ಹೇಳುವ ಟಿಪ್ಸ್ ಫಾಲೋ ಮಾಡ್ಬೇಕು.
ಕೂದಲು ಬೆಳ್ಳಗಾಗಲು ಕಾರಣ : ಬಾಬಾ ರಾಮ್ ದೇವ್ (, Baba Ramdev) ಪ್ರಕಾರ, ಈಗಿನ ಮಕ್ಕಳ ಕೂದಲು ಬೆಳ್ಳಗಾಗಲು ಕಾರಣ ಒತ್ತಡ. ಮಕ್ಕಳ ಮೇಲೆ ಓದಿನ ಒತ್ತಡ (Stress )ಹೆಚ್ಚು ಬೀಳ್ತಿರೋದು ಒಂದಾದ್ರೆ ಇನ್ನೊಂದು ಅವರ ಆಹಾರ. ಹಾಗೆಯೇ ಅನುವಂಶಿಕತೆ ಮತ್ತು ವಿಟಮಿನ್, ಮಿನರಲ್ ಪ್ರಮಾಣ ಕಡಿಮೆ ಇರುವುದು ಇದಕ್ಕೆ ಕಾರಣ.
ಕಿಡ್ನಿಯಲ್ಲಿ ಸ್ಟೋನ್ ಆಗದಿರಲು ಬೆಳಗ್ಗೆ ಈ ಕೆಲಸಗಳನ್ನ ಮಾಡಿ
ಕೂದಲು ಕಪ್ಪಾಗಲು ಏನು ಮಾಡ್ಬೇಕು? : ಬಾಬಾ ರಾಮ್ ದೇವ್ ಯೋಗದ ಬಗ್ಗೆ ಮಾತ್ರವಲ್ಲ ನಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ವಿಷ್ಯಗಳನ್ನು ಹಂಚಿಕೊಳ್ತಿರುತ್ತಾರೆ. ಅವರು ಕೂದಲಿನ ಆರೋಗ್ಯದ ಬಗ್ಗೆ ಕೆಲ ಟಿಪ್ಸ್ ನೀಡಿದ್ದಾರೆ.
ಅಲೋವೇರಾ – ನೆಲ್ಲಿಕಾಯಿ ಜ್ಯೂಸ್ : ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗ್ತಿದೆ ಎನ್ನುವವರು ನೆಲ್ಲಿಕಾಯಿ ಮತ್ತು ಅಲೋವೇರ ಜ್ಯೂಸ್ ಸೇವನೆ ಮಾಡ್ಬೇಕು. ನೆಲ್ಲಿಕಾಯಿ ರಸ ನಿಮ್ಮ ಕೂದಲನ್ನು ಕಪ್ಪು ಮಾಡುತ್ತದೆ. ಇನ್ನು ಅಲೋವೇರಾ ಕೂದಲನ್ನು ಬಲಗೊಳಿಸುವುದಲ್ಲದೆ ಹೊಳಪು ನೀಡುತ್ತದೆ.
ಯೋಗಾಸನ : ಬಿಳಿ ಕೂದಲಿನ ಸಮಸ್ಯೆಗೆ ಕೆಲ ಯೋಗಾಸನಗಳು ಸಹಾಯ ಮಾಡುತ್ತವೆ. ಸರ್ವಾಂಗಾಸನ ಮತ್ತು ಶೀರ್ಷಾಸನವನ್ನು ನಿಯಮಿತವಾಗಿ ಮಾಡ್ತಾ ಬಂದ್ರೆ ನಿಮ್ಮ ಕೂದಲು ಕಪ್ಪಾಗುತ್ತದೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ. ಈ ಆಸನಗಳು ರಕ್ತದ ಹರಿವನ್ನು ಹೆಚ್ಚು ಮಾಡುತ್ತವೆ. ಪ್ರತಿ ನಿತ್ಯ ನೀವು ಈ ಆಸನಗಳನ್ನು ಮಾಡ್ತಾ ಬಂದ್ರೆ ನಿಮ್ಮ ಕೂದಲು ಬೇಗ ಬೆಳ್ಳಗಾಗೋದನ್ನು ಕೂಡ ತಪ್ಪಿಸಬಹುದು.
ಚರ್ಮಕ್ಕೆ ವಯಸ್ಸಾಗದಂತೆ ತಡೆಯುವ ಹೈಲುರಾನಿಕ್ ಆಮ್ಲ ಹೇರಳವಾಗಿರುವ
ಆಹಾರ : ಬಹುಬೇಗ ನಿಮ್ಮ ಕೂದಲು ಬೆಳ್ಳಗಾಗ್ತಿದೆ ಎಂದಾದ್ರೆ ನಿಮ್ಮ ಆಹಾರದ ಬಗ್ಗೆಯೂ ನೀವು ಗಮನ ಹರಿಸಬೇಕು. ಫಾಸ್ಟ್ ಫುಡ್ ಸೇರಿದಂತೆ ಕರಿದ ಪದಾರ್ಥಗಳು ನಿಮ್ಮ ಆರೋಗ್ಯದ ಜೊತೆ ಕೂದಲಿನ ಬಣ್ಣಗೆಡಿಸುತ್ತಿದೆ. ಕೂದಲು ಕಪ್ಪಾಗ್ಬೇಕು ಎಂದಾದ್ರೆ ಡಯಟ್ ನಲ್ಲಿ ಹಸಿ ತರಕಾರಿ, ಹಸಿರು ಸೊಪ್ಪು, ಹಣ್ಣುಗಳನ್ನು ಅಗತ್ಯವಾಗಿ ಸೇವನೆ ಮಾಡ್ತಾ ಬನ್ನಿ.
ಉಗುರಿನಲ್ಲಿದೆ ಕೂದಲ ಆರೋಗ್ಯ : ಬಾಬಾ ರಾಮ್ ದೇವ್ ಪ್ರಕಾರ ನಿಮ್ಮ ಕೂದಲಿನ ಆರೋಗ್ಯಕ್ಕೆ ನಿಮ್ಮ ಕೈ ಉಗುರು ನೆರವಾಗುತ್ತದೆ. ನೀವು ಪ್ರತಿ ದಿನ ನಿಮ್ಮ ಉಗುರುಗಳನ್ನು ಪರಸ್ಪರ ಉಜ್ಜಬೇಕು. ಇದು ಕೂಡ ನಿಮ್ಮ ಕೂದಲನ್ನು ಕಪ್ಪು ಮಾಡಲು ಸಹಾಯ ಮಾಡುತ್ತದೆ.