ರಾತ್ರಿ ಊಟ ಮಾಡಿ ಸ್ಪಲ್ಪ ವಾಕ್ ಮಾಡಿ, ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ನೋಡಿ

Published : Jul 06, 2022, 03:37 PM IST
ರಾತ್ರಿ ಊಟ ಮಾಡಿ ಸ್ಪಲ್ಪ ವಾಕ್ ಮಾಡಿ, ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ನೋಡಿ

ಸಾರಾಂಶ

ಬೆಳಗ್ಗೆದ್ದು ವಾಕ್‌ (Walk) ಮಾಡೋ ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ಆದ್ರೆ ರಾತ್ರಿ ಊಟ ಮಾಡಿದ್ಮೇಲೆ ವಾಕ್ ಮಾಡೋಣ ಅಂದ್ರೆ ಸೋಮಾರಿತನ ಮಾತ್ರ ಬಿಡಲ್ಲ. ರಾತ್ರಿ ಊಟವಾದ (Night food) ಮೇಲೆ ಸುಮ್ನೆ ಮೊಬೈಲ್ ಸ್ಕ್ರೋಲ್ ಮಾಡೋದನ್ನು ಬಿಟ್ಬಿಡಿ. ಬದಲಿಗೆ ಸ್ಪಲ್ಪ ವಾಕ್ ಮಾಡಿ ನೋಡಿ. 

ದೈನಂದಿನ ಜೀವನದಲ್ಲಿ ಎಲ್ಲರೂ ಬಿಝಿಯಾಗಿದ್ದಾರೆ. ಬಿಡುವಿಲ್ಲದ ಜೀವನಶೈಲಿ (Lifestyle)ಯಿಂದ ಸರಿಯಾದ ಊಟ, ನಿದ್ದೆ (Sleep), ವ್ಯಾಯಾಮ ಯಾವುದಕ್ಕೂ ಸಹ ಸಮಯ ಸಿಗುವುದಿಲ್ಲ. ಇದರಿಂದಾಗಿಯೇ ಆರೋಗ್ಯ ಸಮಸ್ಯೆ (Health Problem)ಗಳು ಸಹ ಹೆಚ್ಚಾಗ್ತಿವೆ. ಹೀಗೆ ಹೆಚ್ಚಿನ ಜನಸಂಖ್ಯೆಯನ್ನು ಕಾಡುವ ಸಮಸ್ಯೆಗಳಲ್ಲೊಂದು ಅಧಿಕ ತೂಕ (Weight). ತೂಕವನ್ನು ಇಳಿಸಿಕೊಳ್ಬೇಕು ಅಂತ ಎಲ್ರೂ ಬಯಸ್ತಾರೆ. ಆದ್ರೆ ಸಮಯದ ಅಭಾವದಿಂದ ವರ್ಕ್‌ಟ್‌ ಮಾಡೋಕೆ ಆಗ್ತಿಲ್ಲ ಅಂತಾರೆ.  ನೀವು ನಿಯಮಿತವಾಗಿ ಜಿಮ್‌ಗೆ ಹೋಗಲು ಸಾಧ್ಯವಾಗದಿದ್ದರೆ, ರಾತ್ರಿಯ ಊಟದ ನಂತರ ಚುರುಕಾದ ನಡಿಗೆ ಅಭ್ಯಾಸವನ್ನು ಮಾಡಿಕೊಳ್ಳಬಹುದು. ಊಟದ ನಂತರ ನಡೆಯುವುದು ಮಲಗುವ ಸಮಯ ಮತ್ತು ರಾತ್ರಿಯ ಊಟದ ನಡುವಿನ ಸಮಯದ ಅಂತರವನ್ನು ಹೆಚ್ಚಿಸುತ್ತದೆ, ಇದು ಅತ್ಯಂತ ಅವಶ್ಯಕವಾಗಿದೆ. ರಾತ್ರಿ ಊಟದ ನಂತರ ವಾಕಿಂಗ್ (Walking) ಮಾಡುವುದರಿಂದ ಆಗುವ ಹೆಚ್ಚಿನ ಆರೋಗ್ಯ ಪ್ರಯೋಜನಗಳು ಇಲ್ಲಿವೆ.

ಊಟದ ನಂತರ ವಾಕಿಂಗ್ ಮಾಡೋದ್ರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಊಟದ ನಂತರ ನಡೆಯುವುದರಿಂದ ನಿಮ್ಮ ದೇಹವು ಹೆಚ್ಚು ಗ್ಯಾಸ್ಟ್ರಿಕ್ ಕಿಣ್ವಗಳನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ. ಹೊಟ್ಟೆಯು ಹೀರಿಕೊಳ್ಳುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ನಮ್ಮ ಜೀರ್ಣಕ್ರಿಯೆ (Digestion)ಯನ್ನು ಸುಧಾರಿಸುತ್ತದೆ. ಹೊಟ್ಟೆ ಉಬ್ಬುವುದು, ಮಲಬದ್ಧತೆ ಮೊದಲಾದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಸೀಫುಡ್ ಸಿಕ್ಕಾಪಟ್ಟೆ ಇಷ್ಟಾನ ? ಹೀಗೆ ತಿಂದ್ರೆ ತೂಕ ಇಳಿಸೋದು ಸುಲಭ

ಚಯಾಪಚಯವನ್ನು ಹೆಚ್ಚಿಸುತ್ತದೆ: ಚಯಾಪಚಯವನ್ನು ಹೆಚ್ಚಿಸಲು ಸುಲಭವಾದ ಮಾರ್ಗವೆಂದರೆ ಊಟವಾದ ನಂತರ ತಕ್ಷಣವೇ ಮಲಗುವ ಬದಲು ನಡೆಯಲು ಹೋಗುವುದು. ಇದು ನೀವು ವಿಶ್ರಾಂತಿ ಸಮಯದಲ್ಲಿ ಹೆಚ್ಚಿನ ಕ್ಯಾಲೊರಿ (Calorie)ಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ದೇಹವನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ರಾತ್ರಿಯ ಊಟದ ನಂತರ ನಡೆಯುವುದರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಇದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರ ಹಾಕಲ್ಪಡುತ್ತದೆ. ಇದು ನಿಮ್ಮ ಆಂತರಿಕ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಬಲವಾದ ರೋಗನಿರೋಧಕ ಶಕ್ತಿಯು ಕೋವಿಡ್‌ನಂತಹ ಸೋಂಕುಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ಊಟವಾದ 30 ನಿಮಿಷಗಳ ನಂತರ ರಕ್ತದಲ್ಲಿನ ಸಕ್ಕರೆಯ ಹೆಚ್ಚಳವು ಪ್ರಾರಂಭವಾಗುತ್ತದೆ. ಆದರೆ ರಾತ್ರಿಯ ಊಟದ ನಂತರ ನೀವು ವಾಕ್ ಮಾಡಲು ಹೋದರೆ, ದೇಹವು ಕೆಲವು ಗ್ಲೂಕೋಸ್ ಅನ್ನು ಬಳಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ವಿಪರೀತ ತಿನ್ನುವುದನ್ನು ಕಡಿಮೆ ಮಾಡುತ್ತದೆ: ಪೂರ್ಣ ಊಟ ಮಾಡಿದ ನಂತರವೂ ನೀವು ಆಗಾಗ ಏನಾದರೂ ತಿನ್ನುತ್ತಾ ಇರುತ್ತೀರಾ ? ಹಾಗಿದ್ರೆ ನೀವು ಊಟದ ನಂತರ ವಾಕ್ ಮಾಡಲು ಪ್ರಯತ್ನಿಸಬೇಕು. ಮಧ್ಯರಾತ್ರಿಯ ಲಘು ಆಹಾರವು ಸಾಮಾನ್ಯವಾಗಿ ಅನಾರೋಗ್ಯಕರವಾಗಿರುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ರೆ ಊಟದ ನಂತರ ನಡೆಯುವ ಅಭ್ಯಾಸ ಯಾವುದೇ ರೀತಿಯ ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ. ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯವಾಗುತ್ತದೆ.

ಬೇಗ ಸಣ್ಣಗಾಗ್ಬೇಕಾ ? ಅರಿಶಿನ ಸೇರಿಸಿದ ಹಾಲು ಕುಡೀರಿ ಸಾಕು

ಉತ್ತಮವಾಗಿ ನಿದ್ರಿಸಲು ಸಹಾಯ ಮಾಡುತ್ತದೆ: ನೀವು ದೈಹಿಕವಾಗಿ ಸದೃಢವಾಗಿರುವುದರ ಜೊತೆಗೆ, ರಾತ್ರಿಯ ಊಟದ ನಂತರ ನಡೆಯುವುದರಿಂದ ನಿಮ್ಮ ಮಾನಸಿಕ ಆರೋಗ್ಯಕ್ಕೂ ಪ್ರಯೋಜನಗಳಿವೆ. ನಿಮಗೆ ರಾತ್ರಿ ಮಲಗಲು ತೊಂದರೆಯಾಗಿದ್ದರೆ, ಪ್ರತಿದಿನ ರಾತ್ರಿ ಊಟದ ನಂತರ ವಾಕ್ ಮಾಡಲು ಹೋಗಿ. ವಾಕಿಂಗ್ ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ ಮತ್ತು ಇದರಿಂದ ನೀವು ಹೆಚ್ಚು ಚಡಪಡಿಕೆಯಿಲ್ಲದೆ ಬೇಗನೇ ನಿದ್ರಿಸಬಹುದು.

ಖಿನ್ನತೆ ಕಡಿಮೆಯಾಗುತ್ತದೆ: ವಾಕಿಂಗ್ ಒತ್ತಡವನ್ನು ತೊಡೆದುಹಾಕಲು ಮತ್ತು ನಿಮ್ಮ ದೇಹದಲ್ಲಿ ಎಂಡಾರ್ಫಿನ್ ಅನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಹೀಗಾಗಿ, ರಾತ್ರಿಯ ಊಟದ ನಂತರ ನಡೆಯುವುದರಿಂದ ಖಿನ್ನತೆ ದೂರವಾಗುತ್ತದೆ. ಇದರಿಂದ ಮನಸ್ಸು ಸಂತೋಷವಾಗಿರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!