ಕೋವಿಡ್-19: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 16,159 ಹೊಸ ಪ್ರಕರಣ, 28 ಮಂದಿ ಸಾವು

Published : Jul 06, 2022, 02:48 PM ISTUpdated : Jul 06, 2022, 02:50 PM IST
ಕೋವಿಡ್-19: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 16,159 ಹೊಸ ಪ್ರಕರಣ, 28 ಮಂದಿ ಸಾವು

ಸಾರಾಂಶ

ಕೊರೋನಾ (Corona) ಹಾವಳಿ ಕಡಿಮೆಯಾಯ್ತು ಎಂದು ಜನಸಾಮಾನ್ಯರು ಅಂದುಕೊಳ್ಳುತ್ತಿರುವಾಗ್ಲೇ ದಿಢೀರ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 16,159 ಹೊಸ ಕೋವಿಡ್ ಪ್ರಕರಣಗಳು ಮತ್ತು 28 ಸಾವುಗಳು (Death) ದಾಖಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ ಮೊನ್ನೆಗಿಂತ ನಿನ್ನೆ ಹೊಸ ಕೋವಿಡ್ ಸೋಂಕು (Covid virus) ಪ್ರಕರಣಗಳು ಹೆಚ್ಚಾಗಿದ್ದು, ಹೊಸ 16 ಸಾವಿರದ 159 ಪ್ರಕರಣಗಳು ದಾಖಲಾಗಿದೆ. 28 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಮಹಾರಾಷ್ಟ್ರ (Maharastra)ದಲ್ಲಿ 3,098 ಪ್ರಕರಣಗಳು ದಾಖಲಾಗಿದ್ದು, 2,662 ಪ್ರಕರಣಗಳೊಂದಿಗೆ ತಮಿಳುನಾಡು, 2,603 ಪ್ರಕರಣಗಳೊಂದಿಗೆ ಕೇರಳ, 1,973 ಪ್ರಕರಣಗಳೊಂದಿಗೆ ಪಶ್ಚಿಮ ಬಂಗಾಳ ಮತ್ತು 839 ಪ್ರಕರಣಗಳೊಂದಿಗೆ ಕರ್ನಾಟಕ (Karnataka)ದಲ್ಲಿ ಗರಿಷ್ಠ ಪ್ರಕರಣಗಳು ದಾಖಲಾಗಿವೆ. ಒಟ್ಟು 69.15 ಪ್ರತಿಶತ ಹೊಸ ಪ್ರಕರಣಗಳು ಈ ಐದು ರಾಜ್ಯಗಳಿಂದ ವರದಿಯಾಗಿವೆ, ಮಹಾರಾಷ್ಟ್ರ ಮಾತ್ರ 19.17 ಪ್ರತಿಶತ ಹೊಸ ಪ್ರಕರಣಗಳಿಗೆ ಕಾರಣವಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 4,54,465 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 737 ಹೆಚ್ಚಾಗಿದೆ.

ಮಹಾರಾಷ್ಟ್ರ ಕೋವಿಡ್ ಪ್ರಕರಣ ಹೆಚ್ಚಳ
ಮಹಾರಾಷ್ಟ್ರದಲ್ಲಿ ಮಂಗಳವಾರ 3,098 ಹೊಸ ಸೋಂಕುಗಳು ದಾಖಲಾಗಿರುವುದರಿಂದ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಸಾವಿನ ಸಂಖ್ಯೆ 1,47,949 ಆಗಿದ್ದು, ರಾಜ್ಯದಲ್ಲಿ ಆರು ಹೊಸ ಸಾವುಗಳು (Death) ದಾಖಲಾಗಿವೆ ಎಂದು ಆರೋಗ್ಯ ಬುಲೆಟಿನ್ ತಿಳಿಸಿದೆ. ಸೋಮವಾರಕ್ಕಿಂತ 104 ಪ್ರತಿಶತದಷ್ಟು ಸೇರ್ಪಡೆಯಾಗಿದೆ, ಆದರೆ ಸಾವಿನ ಸಂಖ್ಯೆ ಮೂರರಿಂದ ಆರಕ್ಕೆ ದ್ವಿಗುಣಗೊಂಡಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಗಮನಸೆಳೆದಿದ್ದಾರೆ.

ಕೋವಿಡ್‌ ಸೋಂಕು ತಗುಲಿದವರಲ್ಲಿ ದೀರ್ಘಾವಧಿಯ ನರ ಸಮಸ್ಯೆ

ಕಳೆದ 24 ಗಂಟೆಗಳಲ್ಲಿ ಚೇತರಿಕೆಯ ಸಂಖ್ಯೆ 4,207 ರಷ್ಟು ಏರಿಕೆಯಾಗಿದ್ದು, 78,21,140 ಕ್ಕೆ ತಲುಪಿದೆ, ರಾಜ್ಯವು 20,820 ಸಕ್ರಿಯ ಕ್ಯಾಸೆಲೋಡ್‌ನೊಂದಿಗೆ ಉಳಿದಿದೆ ಎಂದು ಅವರು ಹೇಳಿದರು. ಮುಂಬೈ 6,409 ಪ್ರಕರಣಗಳೊಂದಿಗೆ ಸಕ್ರಿಯವಾಗಿ ಅಗ್ರಸ್ಥಾನದಲ್ಲಿದೆ, ಪುಣೆ ಜಿಲ್ಲೆಯಲ್ಲಿ 5,335 ಮತ್ತು ಥಾಣೆ ಜಿಲ್ಲೆಯಲ್ಲಿ 4,037 ಪ್ರಕರಣಗಳು ಇವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಪುಣೆಯಲ್ಲಿ ಮಂಗಳವಾರ 1,196 ಪ್ರಕರಣಗಳು ವರದಿಯಾಗಿವೆ, ನಂತರ ನಾಸಿಕ್ (167), ನಾಗ್ಪುರ (160), ಅಕೋಲಾ (87), ಔರಂಗಾಬಾದ್ (65), ಕೊಲ್ಲಾಪುರ (60) ಮತ್ತು ಲಾತೂರ್ ಸರ್ಕಲ್ (50). ಆರು ಸಾವುಗಳು ಪುಣೆ ಸರ್ಕಲ್‌ನಲ್ಲಿ ಮೂರು, ಮುಂಬೈ ಸರ್ಕಲ್‌ನಲ್ಲಿ ಎರಡು ಮತ್ತು ಕೊಲ್ಹಾಪುರ ಸರ್ಕಲ್‌ನಲ್ಲಿ ಒಂದು ಸಾವು ಸಂಭವಿಸಿದೆ ಎಂದು ಅವರು ಹೇಳಿದರು

ಲಸಿಕಾ ಅಭಿಯಾನ ಚುರುಕು
ದೇಶದಲ್ಲಿ ಇದುವರೆಗೆ ಕೋವಿಡ್ -19 ವೈರಸ್ ಕಾಣಿಸಿಕೊಂಡ ನಂತರ 4 ಕೋಟಿಯ 29 ಲಕ್ಷದ 7 ಸಾವಿರದ 327 ಮಂದಿ ಗುಣಮುಖರಾಗಿದ್ದು ಇಲ್ಲಿಯವರೆಗೆ 5 ಲಕ್ಷದ 25 ಸಾವಿರದ 270 ಮಂದಿ ಮೃತಪಟ್ಟಿದ್ದಾರೆ. ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ 198.20 ಕೋಟಿಗೂ ಅಧಿಕ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 15,394 ರೋಗಿಗಳು ಚೇತರಿಸಿಕೊಂಡಿರುವುದರಿಂದ ಭಾರತದ ಚೇತರಿಕೆಯ ಪ್ರಮಾಣವು ಈಗ 98.53 ಪ್ರತಿಶತದಷ್ಟಿದೆ, ಇದು ದೇಶಾದ್ಯಂತ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,29,07,327ಕ್ಕೆ ತಲುಪಿದೆ.

ದೀರ್ಘಾವದಿಯ ಕೋವಿಡ್ ಅಪಾಯ ಪುರುಷರಿಗಿಂತ ಮಹಿಳೆಯರಿಗೆ ಶೇ.22ರಷ್ಟು ಹೆಚ್ಚು !

3 ದಿನಗಳ ಬಳಿಕ ಕರ್ನಾಟಕದಲ್ಲಿ ಕೋವಿಡ್‌ ಹೆಚ್ಚಳ, ಇಬ್ಬರು ಸೋಂಕಿತರು ಸಾವು
ಸತತ ಮೂರು ದಿನಗಳ ಇಳಿಕೆ ಬಳಿಕ ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳು ಏರಿಕೆಯಾಗಿದ್ದು, ಮಂಗಳವಾರ 839 ಜನರಲ್ಲಿ ಕೊರೋನಾ ದೃಢಪಟ್ಟಿದ್ದು, 913 ಮಂದಿ ಗುಣಮುಖರಾಗಿದ್ದಾರೆ. ಕಲಬುರಗಿಯಲ್ಲಿ 33 ವರ್ಷದ ಪುರುಷ, ಕೋಲಾರದಲ್ಲಿ 85 ವರ್ಷದ ವೃದ್ಧ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಸದ್ಯ 6398 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ/ಆರೈಕೆಯಲ್ಲಿದ್ದಾರೆ. 

84 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.3.4 ರಷ್ಟು ದಾಖಲಾಗಿದೆ. ಸೋಮವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಆರು ಸಾವಿರ ಹೆಚ್ಚು ನಡೆಸಲಾಗಿದೆ. ಹೀಗಾಗಿ, ಹೊಸ ಪ್ರಕರಣಗಳು ಕೂಡಾ 90 ಹೆಚ್ಚಳವಾಗಿವೆ.(ಸೋಮವಾರ 749, ಸಾವು ಒಂದು). ಸಕ್ರಿಯ ಸೋಂಕಿತರ ಪೈಕಿ 97 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, 6301 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ. ರಾಜ್ಯದಲ್ಲಿ ಈವರೆಗೆ 39.7 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿದ್ದು, 39.2 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 40,080 ಮಂದಿ ಸಾವಿಗೀಡಾಗಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!