
ಮನುಷ್ಯನ ಆರೋಗ್ಯಕ್ಕೆ ನಿದ್ರೆ (Sleep) ತುಂಬಾ ಅವಶ್ಯಕ. ಆರೋಗ್ಯಕರ ಜೀವನಕ್ಕೆ ಕನಿಷ್ಠ ಏಳೆಂಟು ಗಂಟೆಗಳ ನಿದ್ದೆ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ. ಕೆಲವೊಬ್ಬರು ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸ (Habit) ಹೊಂದಿರುತ್ತಾರೆ. ಬೆಳಗ್ಗೆ ಬೇಗ ಏಳುವ ಅಭ್ಯಾಸ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಉತ್ತಮ ಎಂದು ಪರಿಗಣಿಸಲಾಗಿದೆ. ಬೆಳಗ್ಗೆ ಬೇಗ ಏಳೋದ್ರಿಂದ ಆರೋಗ್ಯಕ್ಕೆ (Health) ಸಿಗೋ ಪ್ರಯೋಜನಗಳು ಹಲವಾರು. ಬೆಳ್ಳಂಬೆಳಗ್ಗೆ ಎದ್ದರೆ ದಿನವಿಡೀ ಫ್ರೆಶ್ ಆಗಿರಲು ಸಾಧ್ಯವಾಗುತ್ತದೆ. ಮಾತ್ರವಲ್ಲ ಇಡೀ ದಿನ ಸಂಪೂರ್ಣವಾಗಿ ಚಟುವಟಿಕೆಯಿಂದ ಇರಬಹುದು. ಆದ್ರೆ ಹೀಗೆ ಯಾವಾಗ್ಲೂ ಬೆಳಗ್ಗೆ ಬೇಗ ಏಳೋ ಅಭ್ಯಾಸದಿಂದ ತೊಂದ್ರೇನೂ ಇದೆ ಅನ್ನೋದು ನಿಮ್ಗೊತ್ತಾ?
ಬೇಗ ಏಳುವುದು ಯಾಕೆ ಯಾವಾಗಲೂ ಆರೋಗ್ಯಕರವಲ್ಲ
ಅನೇಕ ಜನರು, ಹೆಚ್ಚಾಗಿ ಯುವಕರು, ಬೇಗ ಏಳುವುದನ್ನು ಇಷ್ಟಪಡುವುದಿಲ್ಲ ಆದರೆ ಜೀವನಶೈಲಿ (Lifestyle), ಒತ್ತಡ, ಕೆಲಸದ ರೀತಿ ಮೊದಲಾದ ಕಾರಣಗಳಿಂದ ತಡವಾಗಿ ಏಳುತ್ತಾರೆ. ಆದರೆ ಇನ್ನು ಕೆಲವೊಮ್ಮೆ ಯಾರೋ ಸಲಹೆ ಕೊಟ್ಟರು ಅನ್ನೋ ಕಾರಣಕ್ಕೆ ಬೆಳಗ್ಗೆ ಬೇಗ ಏಳಲು ಶುರು ಮಾಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು. ಬೆಳಗ್ಗೆ ತಡವಾಗಿ ಏಳುವ ಅಭ್ಯಾಸ ದೀರ್ಘಕಾಲದವರೆಗೆ ಇರುವಾಗ ದೇಹವು ಗಡಿಯಾರದ ಕೆಲಸದಂತೆ ಹೊಂದಿಕೊಳ್ಳುತ್ತದೆ. ಯಾವುದೇ ತೀವ್ರವಾದ ಅಥವಾ ಹಠಾತ್ ಬದಲಾವಣೆಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮ ಮೇಲೆ ಪರಿಣಾಮ ಬೀರಬಹುದು.
ಮಧ್ಯಾಹ್ನ ನಿದ್ದೆ ಮಾಡಿದ್ರೆ ಸೋಮಾರಿಯಾಗಲ್ಲ, ಸೂಪರ್ ಆ್ಯಕ್ಟಿವ್ ಆಗ್ತಾರೆ
ನಿದ್ರೆ-ಎಚ್ಚರ ಮತ್ತು ಇತರ ಚಟುವಟಿಕೆಗಳು ಮೆದುಳಿನೊಳಗೆ ಕಾರ್ಯನಿರ್ವಹಿಸುವ ದೇಹದ ಆಂತರಿಕ ಗಡಿಯಾರದಿಂದ ನಿಯಂತ್ರಿಸಲ್ಪಡುವ ಮಾದರಿಯಾಗುತ್ತವೆ. ಈ ಗಡಿಯಾರವು ನಮ್ಮ ಹಸಿವು, ಮಾನಸಿಕ ಜಾಗರೂಕತೆ, ಮನಸ್ಥಿತಿ, ದೇಹದ ಕಾರ್ಯಗಳು ಮತ್ತು ಅಂಗಗಳನ್ನು ಪ್ರತಿದಿನವೂ ನಿರ್ವಹಿಸುತ್ತದೆ. ಇದರಲ್ಲಿ ದಿಢೀರ್ ಬದಲಾವಣೆ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು. ಅದು ಯಾವ ರೀತಿ ಎಂಬ ಮಾಹಿತಿ ಇಲ್ಲಿದೆ.
ಮಯೋಕಾರ್ಡಿಯಲ್ ಇನ್‌ಫ್ರಾಕ್ಷನ್‌ಗಳು: ನೀವು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಹಠಾತ್ ಬೆಳಗ್ಗೆ ಬೇಗ ಏಳಬೇಕಿದ್ದರೆ ಹೃದಯ ಸ್ನಾಯುಗಳ ಸಮಸ್ಯೆ ಉಂಟಾಗಬಹುದು.
ಮಧುಮೇಹ: ದಿನಚರಿಯಲ್ಲಿನ ಹಠಾತ್ ಬದಲಾವಣೆಯು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ತೀವ್ರ ಇಳಿಕೆಗೆ ಕಾರಣವಾಗಬಹುದು, ಇದು ಮಧುಮೇಹಕ್ಕೂ ಕಾರಣವಾಗುತ್ತದೆ.
ನೆನಪಿನ ಶಕ್ತಿ ಕಡಿಮೆಯಾಗುತ್ತದೆ: ಮಲಗುವ, ಏಳುವ ಸಮಯವನ್ನು ಬದಲಾಯಿಸುವುದರಿಂದ ಮೆದುಳು (Brain) ಗೊಂದಲಮಯ ಸಂಕೇತಗಳನ್ನು ಪಡೆಯುತ್ತದೆ. ದೇಹದ ಗಡಿಯಾರದಲ್ಲಿನ ಬದಲಾವಣೆಯಿಂದ ನೆನಪಿನ ಶಕ್ತಿ (Memory power) ಯನ್ನು ಕುಂಠಿತಗೊಳಿಸುತ್ತದೆ.
ಅಬ್ಬಬ್ಬಾ..ದಿಂಬಿನ ಬೆಲೆ ಭರ್ತಿ 45 ಲಕ್ಷ ರೂ; ವಿಶ್ವದ ದುಬಾರಿ ಪಿಲ್ಲೋದಲ್ಲಿ ಅಂಥದ್ದೇನಿದೆ ?
ದೇಹದ ಒತ್ತಡ: ನಮ್ಮ ದೇಹ (Body)ವು ಒಂದು ನಿರ್ದಿಷ್ಟ ಚಕ್ರದಲ್ಲಿ ಓಡಲು ಒಗ್ಗಿಕೊಳ್ಳುತ್ತದೆ ಮತ್ತು ಅದು ಬದಲಾವಣೆಯಾದ ನಂತರ, ದೇಹವು ಒತ್ತಡಕ್ಕೆ ಸಿಲುಕುತ್ತದೆ. ಇದು ಇತರ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮೆಲಟೋನಿನ್, ನಮ್ಮ ದೇಹದ ದೈನಂದಿನ ಕಾರ್ಯಚಟುವಟಿಕೆಗೆ ಕಾರಣವಾದ ಹಾರ್ಮೋನ್, ಬೆಳಕಿಗೆ ಪ್ರತಿಕ್ರಿಯಾತ್ಮಕವಾಗಿದೆ. ರಾತ್ರಿಯಲ್ಲಿ, ಅದು ಕತ್ತಲೆಯಾದಾಗ, ಮೆಲಟೋನಿನ್ ಉತ್ಪಾದನೆಯು ಹೆಚ್ಚಾಗುತ್ತದೆ. ಇದರಿಂದ ನಿದ್ರೆ ಬರುತ್ತದೆ.
ಸೂರ್ಯ ಉದಯಿಸುತ್ತಿದ್ದಂತೆ ಸ್ರವಿಸುವಿಕೆಯು ಕಡಿಮೆಯಾಗುತ್ತದೆ ಮತ್ತು ಮೆದುಳು ವೇಗವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಅಂತೆಯೇ, ದಿನದಲ್ಲಿ ಹಸಿವಿನಂತಹ ಹಲವಾರು ಇತರ ಕಾರ್ಯಗಳಿಗಾಗಿ ಹಾರ್ಮೋನುಗಳು ಸ್ರವಿಸುತ್ತವೆ. ಮತ್ತು ಈ ಚಕ್ರವು ಪದೇ ಪದೇ ಬದಲಾವಣೆಯಾದಾಗ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.