ಹಲವು ಚಮತ್ಕಾರಗಳ ‘ಬ್ರೊಕೊಲಿ’, ಈ ಸೂಪರ್ ಫುಡ್ ಉತ್ತಮ ಆರೋಗ್ಯಕ್ಕೆ ಸಹಾಯಕಾರಿ

By Suvarna NewsFirst Published Sep 24, 2022, 5:15 PM IST
Highlights

ಬ್ರೊಕೊಲಿಯು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಮತ್ತು ಚರ್ಮಕ್ಕೆ ಸಹಕಾರಿಯಾಗಿದೆ‌.

ಬ್ರೊಕೊಲಿಯು ಖನಿಜಗಳು, ಜೀವಸತ್ವಗಳು, ಫೈಬರ್ ಮತ್ತು ನಿರೋಧಕ ಶಕ್ತಿ ಹೊಂದಿದ್ದು ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದೆ. ಮಧುಮೇಹ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವವರೆಗೂ ಹಿಡಿದು ಬ್ರೊಕೊಲಿಯ ಅನೇಕ ಪ್ರಯೋಜನಗಳ ದೀರ್ಘವಾದ ಪಟ್ಟಿಯನ್ನು ಹೊಂದಿವೆ. ಇದು ಬಲವಾದ ಪೌಷ್ಟಿಕಾಂಶದ ಪ್ರೊಫೈಲ್ ಹೊಂದಿದ್ದು, ಕೇವಲ 1 ಕಪ್ ಬೇಯಿಸಿದ  ಬ್ರೊಕೊಲಿಯುಲ್ಲಿ ಅಗತ್ಯವಾದ ಪೋಷಕಾಂಶಗಳು ತುಂಬಿರುತ್ತದೆ. ಬ್ರೊಕೊಲಿಗೆ ಸೂಪರ್ ಫುಡ್ ಎಂಬ ಖ್ಯಾತಿ ಇದ್ದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಮಾನವನ ಆರೋಗ್ಯದ ಅನೇಕ ಅಂಶಗಳನ್ನು ಬೆಂಬಲಿಸುವ ಅತ್ಯಧಿಕ ಪೋಷಕಾಂಶಗಳು ಇದರಲ್ಲಿವೆ.

ಜೀರ್ಣಕ್ರಿಯೆಗೆ ಮನೆಮದ್ದು:

ಬ್ರೊಕೊಲಿ (Broccoli) ಕರುಳಿನಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ. ಹೀಗಾಗಿ ಬ್ರೊಕೊಲಿಯಂತಹ ಫೈಬರ್ ಭರಿತ ಆಹಾರವು, ಕರುಳಿನ ಕಾರ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಬ್ರೊಕೊಲಿಯು ಕರುಳಿನ ಬ್ಯಾಕ್ಟೀರಿಯಾದಿಂದ ಬಳಸಬಹುದಾದ ಮತ್ತು ಒಟ್ಟಾರೆ ಕರುಳಿನ ಆರೋಗ್ಯವನ್ನು ಸುಧಾರಿಸುವ ಇತರ ವಿಶಿಷ್ಟ ಸಂಯುಕ್ತಗಳನ್ನು ಸಹ ಒಳಗೊಂಡಿದ್ದು, ಮಲಬದ್ಧತೆಯನ್ನು ಸಹ ತಡೆಯುತ್ತದೆ.

ಹೃದಯದ ರಕ್ಷಣೆಯಲ್ಲಿ ಮಹತ್ವದ ಪಾತ್ರ:

ಬ್ರೊಕೊಲಿ ಸೇವನೆಯಿಂದ ನಮ್ಮ ಹೃದಯದ ಪಂಪಿಂಗ್ (Heart Pumping) ಸುಧಾರಿಸುತ್ತದೆ. ಹಾಗೂ ಇದು ಅಪಧಮನಿಗಳ ಹಾನಿಯನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ರಕ್ಷಿಸುತ್ತದೆ. ಅದಲ್ಲದೆ ಇದರಿಂದ ಹೃದಯಾಘಾತ ಅಥವಾ ಪಾರ್ಶ್ವವಾಯುವನ್ನು ತಡೆಗಟ್ಟಬಹುದು.  ಸ್ಟ್ರೋಕ್  (Strock) ಒಳಗಾದ ವ್ಯಕ್ತಿಯಲ್ಲಿನ  ಅಪಧಮನಿಗಳ ಉರಿಯೂತವನ್ನು ಬ್ರೊಕೊಲಿ ತರಕಾರಿ ಕಡಿಮೆ ಮಾಡುತ್ತದೆ. ಹಾಗೆ ರಕ್ತದೊತ್ತಡದ ಮಟ್ಟವನ್ನು ಸುಧಾರಿಸುತ್ತದೆ . ಇನ್ನು  ಬ್ರೊಕೊಲಿಯಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಇದಲ್ಲದೆ, ಇದು ಫೈಬರ್ ಅನ್ನು ದೇಹಕ್ಕೆ ನೀಡಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು  ಹೃದಯಾಘಾತವನ್ನು ತಡೆಯುತ್ತದೆ.

ಮೂಳೆ, ಹಲ್ಲುಗಳ ಗಟ್ಟಿಯಾಗಲು ಸಹಾಯಕಾರಿ:

ಬ್ರೊಕೊಲಿ ಹಲವಾರು ಪೋಷಕಾಂಶಗಳನ್ನು ಒಳಗೊಂಡಿದ್ದು, ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ಇದು ವಿಟಮಿನ್ ಕೆ, (Vitamin K) ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ ಮತ್ತು ಕ್ಯಾಲ್ಸಿಯಂ (Calcium) ಜೊತೆಗೆ ತಾಮ್ರ, ಕಬ್ಬಿಣ, ಸತು, ವಿಟಮಿನ್ ಎ ಮತ್ತು ಸಿ, ಮತ್ತು ಬಿ ಜೀವಸತ್ವಗಳನ್ನು ಹೊಂದಿದೆ. ವಿಟಮಿನ್ ಕೆ ಮೂಳೆಗಳನ್ನು ಕ್ಯಾಲ್ಸಿಯಂಗಿಂತ ಉತ್ತಮವಾಗಿ ನಿರ್ಮಿಸುತ್ತದೆ. ಈ ವಿಟಮಿನ್, ಕ್ಯಾಲ್ಸಿಯಂ ಜೊತೆಗೆ, ನಿಮ್ಮ ಹಲ್ಲುಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Men Fertility Health: ನಪುಂಸಕತೆ ಬೇಡವಾದ್ರೆ ಕೊಬ್ಬು ಕರಗಿಸಿಕೊಳ್ಳಿ

ಅರಿವಿನ ಸಾಮರ್ಥ್ಯ ಹೆಚ್ಚಳಕ್ಕೆ ರಾಮಬಾಣ:

ಬ್ರೊಕೊಲಿಯಲ್ಲಿರುವ  ಪ್ರಮುಖ ಪೋಷಕಾಂಶಗಳು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಬ್ರೊಕೊಲಿಯಲ್ಲಿನ ವಿಟಮಿನ್ ಕೆ ಮತ್ತು ಕೋಲಿನ್ ಮೆದುಳಿನ (MInd)ಅರಿವಿನ ಸಾಮರ್ಥ್ಯವನ್ನು,   ಸ್ಮರಣೆಯನ್ನು ಸುಧಾರಿಸುತ್ತದೆ. ಮೆದುಳು ಮತ್ತು ನರ ಅಂಗಾಂಶದ ಕಾರ್ಯಕ್ಕೆ ಸಂಬಂಧಿಸಿವೆ. ಜೊತೆಗೆ ವಯಸ್ಸಿಗೆ ಸಂಬಂಧಿಸಿದ ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಬ್ರೊಕೊಲಿ ಸಹಾಯಕವಾಗಿದೆ. ಇನ್ನು ಬ್ರೊಕೊಲಿಯು ಯೋಗ್ಯ ಪ್ರಮಾಣದ ಫೋಲಿಕ್ ಆಮ್ಲವನ್ನು ಹೊಂದಿದ್ದು, ಖಿನ್ನತೆಯನ್ನು (Stress) ತಡೆಯಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ದಿವ್ಯ ಔಷಧ:

ಬ್ರೊಕೊಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಮುಖ ಕಾರಣ, ಅದರಲ್ಲಿ ಹೇರಳವಾಗಿರು ವಿಟಮಿನ್ ಸಿ ಅಂಶ. ಬ್ರೊಕೊಲಿಯನ್ನು ಕೇವಲ 3 ದಿನಗಳವರೆಗೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅದಲ್ಲದೆ ಅಲರ್ಜಿಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಬ್ರೊಕೊಲಿಯು ಆಸ್ತಮಾದಂತಹ (Asthama) ಇತರ ಅಲರ್ಜಿಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಸಹ ಸಹಾಯ ಮಾಡುತ್ತದೆ.  ಹಾಗೆ ನಾವು ಪ್ರತಿದಿನ ಉಸಿರಾಡುವಾಗ ಇತರ ಮಾಲಿನ್ಯಕಾರಕಗಳಿಂದ ರಕ್ಷಣೆ ನೀಡುತ್ತದೆ.

ಇದನ್ನೂ ಓದಿ: Women Health: ಸುಸ್ತು, ಆಯಾಸ ಎನ್ನೋ ಮಹಿಳೆಯರು ಇದನ್ನೋದಿ

ಬ್ರೊಕೊಲಿ ಕಾಂಡವು 2-3 ಗ್ರಾಂ ಫೈಬರ್ ಅನ್ನು ಒದಗಿಸುತ್ತದೆ. ಅದಲ್ಲದೆ ಇದರ ಕಾಂಡವು ಜೀರ್ಣಕ್ರಿಯೆಯನ್ನು (Digestion) ಸರಿದೂಗಿಸುವುದರ ಜತೆ ಕರುಳಿನಲ್ಲಿ ಆರೋಗ್ಯಕ್ಕೆ ಬೇಕಾದಂತಹ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ. ಬ್ರೊಕೊಲಿಯಿಂದ ನಮ್ಮ ಆರೋಗ್ಯಕ್ಕೆ ತುಂಬಾ ಉಪಯೋಗವಿದ್ದು, ಇದನ್ನು ಸಲಾಡ್​ನಿಂದ ಸೂಪ್​ವರೆಗೆ ಆಹಾರ ಕ್ರಮಕ್ಕೆ ವಿವಿಧ ರೀತಿಯಲ್ಲಿ ಸೇರಿಸಬಹುದು.

click me!