ಫ್ರಾನ್ಸ್‌ನ ಶಸ್ತ್ರಚಿಕಿತ್ಸಕರು ಮಹಿಳೆಯೊಬ್ಬರ ತೋಳಿನ ಮೇಲೆ ಯಶಸ್ವಿಯಾಗಿ ಮೂಗನ್ನು ಬೆಳೆಸಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ತನ್ನ ಮೂಗನ್ನು ಕಳೆದುಕೊಂಡ ಅವರ ಮುಖಕ್ಕೆ ಕಸಿ ಮಾಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಪ್ಯಾರಿಸ್: ವೈದ್ಯಲೋಕದಲ್ಲಿ ಅಚ್ಚರಿಗಳು ಹೊಸದೇನಲ್ಲ. ಹೊಸ ಹೊಸ ಪ್ರಯತ್ನಗಳು, ಶಸ್ತ್ರಚಿಕಿತ್ಸೆಗಳು ನಡೆಯುತ್ತಲೇ ಇರುತ್ತವೆ. ವರ್ಷಗಳು ಕಳೆದಂತೆ ವೈದ್ಯಲೋಕ ಹೆಚ್ಚು ಅಪ್‌ಡೇಟ್ ಆಗುತ್ತಾ ಹೋಗುತ್ತಿದೆ. ಅಂಗಾಗಗಳು ಇಲ್ಲದವರು ಸಹ ಸುಲಭವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ಪ್ಯಾರಿಸ್‌ನಲ್ಲಿ ಕ್ಯಾನ್ಸರ್ ಪೀಡಿತರಾಗಿ ಮೂಗನ್ನು ಕಳೆದುಕೊಂಡಿದ್ದ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಕ್ಯಾನ್ಸರ್ ರೋಗದಿಂದ ಮೂಗನ್ನೇ (Nose) ಕಳೆದುಕೊಂಡ ಮಹಿಳೆ (Woman)ಯೊಬ್ಬರಿಗೆ ಫ್ರಾನ್ಸ್‌ನ ಶಸ್ತ್ರಚಿಕಿತ್ಸಕರು ಯಶಸ್ವಿ ಕಸಿ ಮಾಡಿದ್ದಾರೆ. ಟೌಲೌಸ್‌ನ ಮಹಿಳೆ 2013 ರಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ರೇಡಿಯೊಥೆರಪಿ ಮತ್ತು ಕೀಮೋಥೆರಪಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಇದರಿಂದಾಗಿ ಅವರು ತಮ್ಮ ಮೂಗಿನ ಒಂದು ಭಾಗವನ್ನೇ ಕಳೆದುಕೊಂಡಿದ್ದರು. ಇದಾದ ಬಳಿಕ ಹಲವು ವರ್ಷಗಳ ವರೆಗೆ ಮುಖದಲ್ಲಿ ಮೂಗಿಲ್ಲದೇ ಕಳೆದ ಮಹಿಳೆಗೆ ತನ್ನದೇ ದೇಹದಲ್ಲಿ (Body) ಬೆಳೆದ ಮೂಗನ್ನು ಶಸ್ತ್ರಚಿಕಿತ್ಸಕರು ಕಸಿ ಮಾಡಿದ್ದಾರೆ. ಮಹಿಳೆಯ ತೋಳಿನಲ್ಲಿಯೇ ಮೂಗನ್ನು ಬೆಳೆಸಿ, ಅದನ್ನು ಮುಖಕ್ಕೆ ಯಶಸ್ವಿಯಾಗಿ ಕಸಿ ಮಾಡಿರುವ ಹೊಸ ರೀತಿಯ ಪ್ರಯತ್ನವನ್ನು ಫ್ರಾನ್ಸ್‌ನ ಶಸ್ತ್ರಚಿಕಿತ್ಸಕರು ಮಾಡಿದ್ದಾರೆ. ಈ ಮೂಲಕ ವೈದ್ಯಕೀಯ ಲೋಕದಲ್ಲಿ ಅಪರೂಪದಲ್ಲೇ ಅಪರೂಪವಾದ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ.
Asthma attack ಆದಾಗ ಪ್ರಥಮ ಚಿಕಿತ್ಸೆ ಹೇಗಿರಬೇಕು? ಡಾಕ್ಟರ್ ಏನ್ ಹೇಳ್ತಾರೆ ನೋಡಿ
ಮಹಿಳೆಯ ತೋಳಿನಲ್ಲಿ ಮೂಗು ಬೆಳೆದಿರುವ ಫೋಟೋ ವೈರಲ್
ಈ ಹೊಸ ಪ್ರಯತ್ನದ ಬಗ್ಗೆ ಟೌಲೌಸ್ ಯೂನಿವರ್ಸಿಟಿ ಹಾಸ್ಪಿಟಲ್ ಫೇಸ್‌ಬುಕ್‌ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಅಗ್ತಿದೆ. ಮಹಿಳೆಯ ತೋಳಿನಲ್ಲಿ (Arm) ಮೂಗು ಬೆಳೆದಿರುವ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, ಅದನ್ನು ಮಹಿಳೆಯ ಮುಖಕ್ಕೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ತೋಳಿನಲ್ಲಿ ಮೂಗನ್ನು ಬೆಳೆಸಿದ್ದು ಹೇಗೆ ?
ಮೂಗಿನ ಈ ಶಸ್ತ್ರಚಿಕಿತ್ಸೆಯನ್ನು ಹಂತ ಹಂತವಾಗಿ ನಡೆಸಲಾಯಿತು. ಮೊದಲಿಗೆ 3ಡಿ ಮುದ್ರಿತ ಜೈವಿಕ ವಸ್ತುಗಳಿಂದ ತಯಾರಿಸಿದ ಮೂಗನ್ನು ಮಹಿಳೆಯ ತೋಳಿಗೆ ಅಳವಡಿಸಲಾಯಿತು. ನಂತರ ಅದು ಮಹಿಳೆಯ ಚರ್ಮದಿಂದ (Skin) ಸುತ್ತುವರಿಯುವಂತೆ ಮಾಡಲಾಯಿತು. ಶಸ್ತ್ರಚಿಕಿತ್ಸಕರು ಮಹಿಳೆಯ ತೋಳಿನಲ್ಲಿ ಮೂಗನ್ನು ಬೆಳೆಯಲು 2 ತಿಂಗಳು ಕಾಲ ಕಾದರು. ಬಳಿಕ ಆ ಮೂಗನ್ನು ಮಹಿಳೆಯ ಮುಖಕ್ಕೆ ಕಸಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೈಕ್ರೋ ಸರ್ಜರಿ ಮತ್ತು ತೋಳಿನ ಚರ್ಮದಲ್ಲಿರುವ ರಕ್ತನಾಳಗಳನ್ನು ಮಹಿಳೆಯ ಮುಖದ ರಕ್ತನಾಳಗಳಿಗೆ ಸಂಪರ್ಕಿಸಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಚೀನಾ ಜೊತೆ ಕೈಜೋಡಿಸಿದ ಪಾಕ್, ಕೊರೋನಾಗಿಂತ ಮಾರಕವಾದ 'ಡೆಡ್ಲಿ ವೈರಸ್' ಸಂಶೋಧನೆ!
ಚೇತರಿಸಿಕೊಳ್ಳುತ್ತಿರುವ ಮಹಿಳೆ ವೈದ್ಯಕೀಯ ತಂಡದ ಸಾಧನೆ
10 ದಿನಗಳ ಆಸ್ಪತ್ರೆಯಲ್ಲಿದ್ದು ಮತ್ತು ಮೂರು ವಾರಗಳ ಪ್ರತಿಜೀವಕಗಳ ನಂತರ, ರೋಗಿಯು (Patient) ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ರೀತಿಯ ಶಸ್ತ್ರಚಿಕಿತ್ಸೆಯನ್ನು ಇಂತಹ ದುರ್ಬಲವಾದ ಮತ್ತು ಕಳಪೆ ನಾಳೀಯ ಪ್ರದೇಶದಲ್ಲಿ ಹಿಂದೆಂದೂ ನಡೆಸಲಾಗಿಲ್ಲ. ಹೀಗಿದ್ದೂ ಅದೃಷ್ಟವಶಾತ್ ಯಶಸ್ವಿ ಕಸಿ ಸಾಧ್ಯವಾಗಿದೆ ಎಂದು ಚಿಕಿತ್ಸೆ (Treatment) ನೀಡಿದ ವೈದ್ಯರ ತಂಡ (Doctors team) ಹೇಳಿಕೊಂಡಿದೆ..
ಈ ರೀತಿಯ ಅಂಗಗಳ ಪುನರ್ ನಿರ್ಮಾಣವನ್ನು ಮತ್ತು ಕಸಿ ಮಾಡಿರುವುದು ಇದೇ ಮೊದಲು ಮತ್ತು ಇದು ಮೂಳೆಗಳ ಪುನರ್ ನಿರ್ಮಾಣದಲ್ಲಿ ಪರಿಣತಿ ಹೊಂದಿರುವ ಬೆಲ್ಜಿಯಂನ ವೈದ್ಯಕೀಯ ಸಾಧನಗಳ ತಯಾರಕರಾದ ಸೆರ್ಹಮ್ ಕಂಪನಿಯೊಂದಿಗೆ ವೈದ್ಯಕೀಯ ತಂಡಗಳ ಸಹಯೋಗದಿಂದಾಗಿ ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.
ಕೇರಳದ ಒಂದು ಮೊಟ್ಟೆಯ ಕಥೆ: ಕೂದಲು ಬರಲಿಲ್ಲವೆಂದು ವೈದ್ಯನ ಹೆಸರು ಬರೆದಿಟ್ಟು ಸೂಸೈಡ್..!