ಚಳಿಗಾಲದಲ್ಲಿ ಆರೋಗ್ಯ ಹದಗೆಡೋದು ಸಾಮಾನ್ಯ. ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆವಹಿಸಬೇಕು. ಮನೆಯಲ್ಲಿರುವ ಕೆಲ ವಸ್ತುವಿನಲ್ಲೇ ಮದ್ದಿದೆ. ಅಡುಗೆ ಮನೆಯಲ್ಲಿರುವ ಒಂದು ಮಸಾಲೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ.
ಓಂಕಾಳು, ಭಾರತದ ಅಡುಗೆ ಮನೆಯಲ್ಲಿ ಇದ್ದೇ ಇರುತ್ತೆ. ಇದನ್ನು ಅನೇಕ ಅಡುಗೆಗಳಿಗೆ ಬಳಸಲಾಗುತ್ತದೆ. ಸಮೋಸಾ, ಕಚೋರಿ, ಚಕ್ಕಲು ಸೇರಿದಂತೆ ಕೆಲ ಆಹಾರಕ್ಕೆ ಓಂಕಾಳು ಇಲ್ಲದೆ ಹೋದ್ರೆ ಅದ್ರ ರುಚಿ ಹಾಳಾಗುತ್ತದೆ. ಓಂಕಾಳು ರುಚಿ ಹಾಗೂ ಸುಹಾಸನೆಯಲ್ಲಿ ಮುಂದಿದೆ. ಓಂಕಾಳು ದೇಹವನ್ನು ಬಿಸಿಗೊಳಿಸುತ್ತದೆ. ಜನರು ಚಳಿಗಾಲದಲ್ಲಿ ಓಂಕಾಳಿನ ಸೇವನೆ ಮಾಡುತ್ತಾರೆ. ಈಗ ಚಳಿಗಾಲ ಶುರುವಾಗಿದೆ. ನೀಮ್ಮ ದೇಹ ಬೆಚ್ಚಗಿರಬೇಕೆಂದ್ರೆ ಹಾಗೂ ಅನಾರೋಗ್ಯಕ್ಕೆ ಒಳಗಾಗಬಾರದು ಎಂದಾದ್ರೆ ಅಜ್ವೈನ ನೀರನ್ನು ಸೇವನೆ ಮಾಡಿ. ನೀವು ಚಳಿಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿ ಕೂಡ ಅಜ್ವೈನವನ್ನು ಸೇವನೆ ಮಾಡಬಹುದು. ಅನೇಕ ಅಗತ್ಯ ಪೋಷಕಾಂಶಗಳು ಅಜ್ವೈನದಲ್ಲಿ ಕಂಡುಬರುತ್ತವೆ. ಇದು ಹೊಟ್ಟೆಯನ್ನು ಆರೋಗ್ಯಕರವಾಗಿಡಲು ಮಾತ್ರವಲ್ಲದೆ ಚರ್ಮಕ್ಕೂ ಉಪಯುಕ್ತವಾಗಿದೆ. ಮಲಬದ್ಧತೆ, ಹೊಟ್ಟೆನೋವು, ಗ್ಯಾಸ್ ಸಮಸ್ಯೆ ಸೇರಿದಂತೆ ಅನೇಕ ರೋಗಕ್ಕೆ ಓಂಕಾಳಿನ ನೀರನ್ನು ಕುಡಿಯಬೇಕು. ಓಂಕಾಳಿನ ಆರೋಗ್ಯ ಪ್ರಯೋಜನಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೆವೆ.
ಅಜ್ವೈನ (Ajwain) ದ ಸೇವನೆಯಿಂದ ಆಗುತ್ತೆ ಇದೆಲ್ಲ ಪ್ರಯೋಜನ :
ಜೀರ್ಣಕ್ರಿಯೆ (Digeston) ಗೆ ಅಜ್ವೈನ ನೀರು ಒಳ್ಳೆಯದು : ಜೀರ್ಣಕ್ರಿಯೆಗೆ ಅಜ್ವೈನ ಬಹಳ ಒಳ್ಳೆಯದು. ಅಧ್ಯಯನದ ಪ್ರಕಾರ, ಅಜ್ವೈನ್ ಗ್ಯಾಸ್ಟ್ರಿಕ್ (Gastric) ಆಮ್ಲ ಮತ್ತು ಜೀರ್ಣಕಾರಿ ಕಿಣ್ವಗಳನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವ ಕೆಲಸ ಮಾಡುತ್ತದೆ. ಜೀರ್ಣಕ್ರಿಯೆ ಕಷ್ಟವಾಗ್ತಿದೆ, ಹೊಟ್ಟೆಯಲ್ಲಿರುವ ಸೋಂಕು (Infection )ಇದಕ್ಕೆ ಕಾರಣ ಎನ್ನುವುದಾದ್ರೆ ನೀವು ಓಂಕಾಳಿನ ನೀರನ್ನು ಕುಡಿಯಬೇಕು.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಓಂಕಾಳಿನ ನೀರು : ಅಜ್ವೈನ ನೀರು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲನ್ನು ದೇಹದಿಂದ ಹೊರಗೆ ಹಾಕುತ್ತದೆ. ಇಲಿಗಳ ಮೇಲೆ ಇದ್ರ ಬಗ್ಗೆ ಅಧ್ಯಯನ ನಡೆದಿತ್ತು. ಅಧ್ಯಯನದಲ್ಲಿ ಓಂಕಾಳಿನ ಬೀಜಗಳು ಕೆಟ್ಟ ಕೊಲೆಸ್ಟ್ರಾಲ್ ಟ್ರೈಗ್ಲಿಸರೈಡ್ ಮತ್ತು ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಪತ್ತೆಯಾಗಿದೆ. ಓಂಕಾಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗೆ ಮಾತ್ರವಲ್ಲ ಹೃದಯಕ್ಕೆ ಪ್ರಯೋಜನಕಾರಿಯಾದ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗಲು ನೆರವಾಗುತ್ತದೆ.
ರಕ್ತದೊತ್ತಡವನ್ನು (Blood Pressure) ನಿಯಂತ್ರಿಸುತ್ತದೆ ಓಂಕಾಳಿನ ನೀರು : ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ರಕ್ತದೊತ್ತಡ ಕೂಡ ಒಂದು. ರಕ್ತದೊತ್ತಡದಿಂದ ಹೃದಯಾಘಾತವಾಗುವ ಸಾಧ್ಯತೆಯಿರುತ್ತದೆ. ಓಂಕಾಳಿನ ಸೇವನೆಯಿಂದ ಸಾಕಷ್ಟು ಪ್ರಯೋಜನವಿದೆ. ಓಂಕಾಳು ಸೇವನೆಯಿಂದ ಕ್ಯಾಲ್ಸಿಯಂ ಹೃದಯಕ್ಕೆ ಹೋಗುವುದನ್ನು ತಡೆಯುತ್ತದೆ. ರಕ್ತನಾಳಗಳನ್ನು ವಿಸ್ತರಿಸುವ ಕೆಲಸ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಶ್ವಾಸಕೋಶಕ್ಕೆ (Lungs) ಪ್ರಯೋಜನಕಾರಿ ಅಜ್ವೈನ್ : ಓಂ ಕಾಳು ಶ್ವಾಸಕೋಶಗಳನ್ನು ಉತ್ತಮವಾಗಿಡುತ್ತದೆ. ಕೆಮ್ಮು ಮತ್ತು ಕಫವನ್ನು ತಡೆಗಟ್ಟುವಲ್ಲಿ ಇದು ಪರಿಣಾಮಕಾರಿ. ಅಜ್ವೈನ ಸೇವನೆ ಮಾಡುವುದ್ರಿಂದ ಅಸ್ತಮ ಸಮಸ್ಯೆ ಕಡಿಮೆಯಾಗುತ್ತದೆ.
ತೂಕ ಕಡಿಮೆ (Weight Loss) ಮಾಡಲು ಸಹಕಾರಿ ಓಂಕಾಳಿನ ನೀರು : ಖಾಲಿ ಹೊಟ್ಟೆಯಲ್ಲಿ ಅಜವೈನ್ ನೀರನ್ನು ಸೇವಿಸುವುದರಿಂದ ದೇಹದಲ್ಲಿ ಕೊಬ್ಬು ಕಡಿಮೆಯಾಗುತ್ತದೆ. ತೂಕ ನಿಯಂತ್ರಣದಲ್ಲಿ ಇಡಬೇಕು ಎನ್ನುವುದಾದ್ರೆ ನೀವು ಅಜ್ವೈನ ನೀರನ್ನು ಕುಡಿಯಿರಿ.
Personal Care: ಸುಸ್ತಾಗಿ ಬಂದವರನ್ನು ರಿಲ್ಯಾಕ್ಸ್ ಮಾಡುತ್ತೆ ಈ ಮಸಾಜ್ ಆಯಿಲ್
ಮುಟ್ಟಿನ ಸಂದರ್ಭದಲ್ಲಿ ಅಜ್ವೈನ ನೀರು ಕುಡಿಯಿರಿ : ಅರ್ಧ ಗ್ಲಾಸ್ ಅಜ್ವೈನ ನೀರನ್ನು ಕುಡಿಯುವುದರಿಂದ ಮುಟ್ಟಿನ ನೋವಿನಿಂದ ಮುಕ್ತಿ ಪಡೆಯಬಹುದು. ಮುಟ್ಟಿನ ಸಮಯದಲ್ಲಿ ಕಂಡು ಬರುವ ಸೆಳೆತ ಕೂಡ ಇದ್ರಿಂದ ಕಡಿಮೆಯಾಗುತ್ತದೆ.
ವಾಂತಿ – ವಾಕರಿಕೆಗೆ ಓಂಕಾಳು ಮದ್ದು : ಹೊಟ್ಟೆಯಲ್ಲಿ ಯಾವುದೇ ಸಮಸ್ಯೆಯಾದ್ರೂ ಅದಕ್ಕೆ ಓಂಕಾಳು ಬಹಳ ಒಳ್ಳೆಯದು. ಫುಡ್ ಪಾಯಿಸನ್ ಕಾಡ್ತಿದ್ದರೆ ಅಥವಾ ವಾಂತಿ, ವಾಕರಿಕೆ ಸಮಸ್ಯೆ ನಿಮ್ಮನ್ನು ಕಾಡ್ತಿದ್ದರೆ ನೀವು ಓಂಕಾಳಿನ ನೀರನ್ನು ಕುಡಿಯಿರಿ.
ಕಫ ಕಟ್ಕೊಂಡ್ರೆ ನಿರ್ಲಕ್ಷ್ಯ ಬೇಡ, ಇದು ತಂದೊಡ್ಡುವ ಸಮಸ್ಯೆ ಒಂದೆರಡಲ್ಲ
ಅಜ್ವೈನ ನೀರನ್ನು ತಯಾರಿಸೋದು ಹೇಗೆ? : ಒಂದು ಲೋಟ ನೀರಿಗೆ ಅರ್ಧ ಚಮಚ ಓಂಕಾಳನ್ನು ಹಾಕಿ ಚೆನ್ನಾಗಿ ಕುದಿಸಿ. ನೀರು ಅರ್ಧ ಲೋಟಕ್ಕೆ ಬಂದ ಮೇಲೆ ಅದನ್ನು ತಣ್ಣಗಾಗಲು ಬಿಡಿ. ನಂತ್ರ ಅದಕ್ಕೆ ಉಪ್ಪು ಅಥವಾ ಸಕ್ಕರೆಯನ್ನು ಹಾಕಿ ಕುಡಿಯಬಹುದು.