ಗಂಟಲಿನಲ್ಲಿ ಕಫ ಕಟ್ಟಿಕೊಂಡ್ರೆ ಸಾಕಷ್ಟು ನೋವಾಗುತ್ತದೆ. ಇದ್ರಿಂದ ಅನೇಕ ಸಮಸ್ಯೆ ಕಾಡುವುದಿದೆ. ಚಳಿಗಾಲದಲ್ಲಿ ಈ ಗಂಟಲಿನ ಸಮಸ್ಯೆ ಹೆಚ್ಚು. ಗಂಟಲಿನಲ್ಲಿ ಕಫ ಕಟ್ಟಿಕೊಂಡಿದ್ರೆ ತಕ್ಷಣ ಸೂಕ್ತ ಮನೆ ಮದ್ದು ಮಾಡಿಕೊಳ್ಳೋದು ಒಳ್ಳೆಯದು.
ಚಳಿಗಾಲ ಶುರುವಾಯ್ತು ಅಂದ್ರೆ ರೋಗಗಳು ಶುರುವಾಯ್ತು ಎಂದೇ ಅರ್ಥ. ಹೊರಗಿನ ವಾತಾವರಣ ತಣ್ಣಗಿರುವ ಕಾರಣ ನಮ್ಮ ದೇಹ ಅನಾರೋಗ್ಯಕ್ಕೆ ಒಳಗಾಗುತ್ತದೆ. ಈ ಋತುವಿನಲ್ಲಿ ಅನೇಕ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಗಂಟಲಿನಲ್ಲಿ ಕಫ ಕಾಣಿಸಿಕೊಳ್ಳುವುದು ಕೂಡ ಚಳಿಗಾಲದಲ್ಲಿ ಸಾಮಾನ್ಯವಾಗಿದೆ. ಗಂಟಲಿನಲ್ಲಿ ಕಫ ಬಂದಾಗ ತುಂಬಾ ನೋವಾಗುತ್ತದೆ. ಗಂಟಲಿನಲ್ಲಿ ಕಫ ಕಾಣಿಸಿಕೊಂಡ್ರೆ ಅದನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಿಕೊಳ್ಳುವುದು ಬಹಳ ಮುಖ್ಯ. ಗಂಟಲಿನಲ್ಲಿ ಕಾಣಿಸಿಕೊಳ್ಳುವ ಕಫ ಸಮಸ್ಯೆಗೆ ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಗಂಟಲಿ (Throat) ನಲ್ಲಿ ಕಾಣಿಸಿಕೊಳ್ಳುವ ಕಫ (Cough) ಕ್ಕೆ ಮನೆ ಮದ್ದು (Home Remedy) :
undefined
ಗಾರ್ಗಲ್ (Gargle ) ಮಾಡಿ ಪರಿಹಾರ ಕಂಡುಕೊಳ್ಳಿ : ಗಂಟಲಿನಲ್ಲಿ ಸಂಗ್ರಹವಾಗಿರುವ ಕಫದ ಸಮಸ್ಯೆಯನ್ನು ಹೋಗಲಾಡಿಸಲು ಗಾರ್ಗಲ್ ಮಾಡುವುದು ಒಳ್ಳೆಯ ಮನೆ ಮದ್ದಾಗಿದೆ. ಗಾರ್ಗಲ್ ಮಾಡೋದ್ರಿಂದ ಅನೇಕ ಲಾಭವನ್ನು ನೀವು ಪಡೆಯಬಹುದು. ಒಂದು ಗ್ಲಾಸ್ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ. ಈ ನೀರನ್ನು ಬಳಸಿಕೊಂಡು ನೀವು ಗಾರ್ಗಲ್ ಮಾಡಬೇಕು. ಬೆಳಿಗ್ಗೆ ಮತ್ತು ಸಂಜೆ ಬೆಚ್ಚಗಿನ ನೀರಿನಿಂದ ಗಾರ್ಗಲ್ ಮಾಡುವುದರಿಂದ ನಿಮ್ಮ ಗಂಟಲಿನಲ್ಲಿ ಸಂಗ್ರಹವಾಗಿರುವ ಕಫವನ್ನು ಹೊರಹಾಕಬಹುದು. ಗಂಟಲು ನೋವು, ಗಂಟಲಿನಲ್ಲಿ ಸೋಂಕು ಸೇರಿದಂತೆ ಅನೇಕ ಸಮಸ್ಯೆಗೆ ಗಾರ್ಗಲ್ ಒಳ್ಳೆಯದು.
ನಿಂಬೆ ಹಣ್ಣಿನ ರಸ ಹಾಗೂ ಈರುಳ್ಳಿ (Onion) ಬಳಸಿ ನೋಡಿ : ಗಂಟಲಿನಲ್ಲಿರುವ ಕಫವನ್ನು ಹೋಗಲಾಡಿಸಲು ಈರುಳ್ಳಿ ಮತ್ತು ನಿಂಬೆ ರಸವನ್ನು ನೀವು ಬಳಸಬಹುದು. ಈ ಮನೆ ಮದ್ದಿಗಾಗಿ ನೀವು ಒಂದು ಈರುಳ್ಳಿಯನ್ನು ಸಿಪ್ಪೆ ತೆಗೆದು ಕತ್ತರಿಸಿ. ನಂತ್ರ ಅದರ ರಸವನ್ನು ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ. ಈ ಮಿಶ್ರಣವನ್ನು ನೀವು ಕುಡಿಯಬೇಕು. ಈ ಮಿಶ್ರಣಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯಬಹುದು. ಇದು ಕಫ ಹೋಗಲಾಡಿಸಲು ನೆರವಾಗುತ್ತದೆ. ಗಂಟಲಿನಲ್ಲಿರುವ ಕಫ ಇದ್ರಿಂದ ಕರಗುತ್ತದೆ.
ಗಂಟಲ ಕಫಕ್ಕೆ ಕರಿಮೆಣಸನ್ನು (Pepper) ಬಳಸಿ : ಗಂಟಲಿನಲ್ಲಿ ಸಂಗ್ರಹವಾದ ಕಫದ ಸಮಸ್ಯೆಯನ್ನು ಕಡಿಮೆ ಮಾಡಲು ನೀವು ಕರಿಮೆಣಸನ್ನು ಬಳಕೆ ಮಾಡಬಹುದು. ಇದು ನಿಮಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಗಂಟಲಿನಲ್ಲಿ ಕಫ ಕಾಣಿಸಿಕೊಂಡಾಗ ನೀವು ಕರಿಮೆಣಸನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಕರಿಮೆಣಸಿನ ಪುಡಿಗೆ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸಬೇಕು. ಇದು ಗಂಟಲಿನಲ್ಲಿರುವ ಕಫವನ್ನು ಕರಗಿಸುತ್ತದೆ. ಹಾಗೆಯೇ ಎದೆಯ ಭಾಗ ಹಗುರವಾದ ಅನುಭವ ನೀಡುತ್ತದೆ.
ನಿಂಬೆ ಹಣ್ಣಿನ ಟೀ (Lemon Tea) ಸೇವನೆ ಮಾಡಿ : ಗಂಟಲಿನ ಕಫವನ್ನು ಹೊರಹಾಕಲು ನಿಂಬೆ ಹಣ್ಣಿನಿಂದ ಮಾಡಿದ ಟೀಯನ್ನು ನೀವು ಸೇವನೆ ಮಾಡಬೇಕು. ಲೆಮನ್ ಟೀ ತುಂಬಾ ಪ್ರಯೋಜನಕಾರಿಯಾಗಿದೆ. ನಿಂಬೆ ಹಣ್ಣು ಸಿಟ್ರಿಕ್ ಆಮ್ಲವನ್ನು ಹೊಂದಿರುತತದೆ. ಅದು ನಿಮ್ಮ ಗಂಟಲಿನಲ್ಲಿ ಸಂಗ್ರಹವಾಗಿರುವ ಕಫವನ್ನು ಹೊರಹಾಕುತ್ತದೆ.
ಟ್ಯಾಟೂ ಹಾಕಿದ ನಂತರ ರಕ್ತ ದಾನ ಏಕೆ ಮಾಡೋದಿಲ್ಲ?
ಶುಂಠಿ ಮತ್ತು ಜೇನು ತುಪ್ಪ : ಶುಂಠಿ ಮತ್ತು ಜೇನುತುಪ್ಪ ಸೇವನೆ ಮಾಡುವುದ್ರಿಂದ ಶೀತದ ಜೊತೆಗೆ ಕಫದ ಸಮಸ್ಯೆ ಕಡಿಮೆಯಾಗುತ್ತದೆ. ನೀವು ಒಣಗಿದ ಶುಂಠಿಯನ್ನು ಪುಡಿ ಮಾಡಬೇಕು. ಈ ಶುಂಠಿ ಪುಡಿಗೆ ಎರಡರಿಂದ ಮೂರು ಚಮಚ ಜೇನುತುಪ್ಪವನ್ನು ಸೇರಿಸಬೇಕು. ಈ ಪೇಸ್ಟ್ ಅನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಬೇಕು. ಶುಂಠಿ ಹಾಗೂ ಜೇನುತುಪ್ಪ ಸೇವನೆ ಮಾಡುವುದ್ರಿಂದ ಗಂಟಲಲ್ಲಿ ಕಟ್ಟಿಕೊಂಡಿರುವ ಕಫ ಕಡಿಮೆಯಾಗುತ್ತದೆ.
DIWALI 2022: ಹಬ್ಬದ ಖುಷೀಲಿ ಹೆಚ್ಚು ಡ್ರೈಫ್ರೂಟ್ಸ್ ತಿನ್ಬೇಡಿ, ತೂಕ ಹೆಚ್ಚಾಗ್ಬೋದು
ಅರಿಶಿನ : ನೀವು ಅರಿಶಿನವನ್ನು ಕೂಡ ಬಳಸಬಹುದು. ಒಂದು ಚಮಚ ಅರಿಶಿನವನ್ನು ಗಂಟಲಿಗೆ ಹಾಕಿ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ. ಅದ್ರ ರಸ ನಿಧಾನವಾಗಿ ಗಂಟಲಿಗೆ ಹೋಗ್ತಿದ್ದಂತೆ ಅದ್ರ ಪರಿಣಾಮ ಶುರುವಾಗುತ್ತದೆ.