
ಚಳಿಗಾಲ ಆರಂಭವಾಗಿದೆ. ದೀಪಾವಳಿ ಸಂಭ್ರಮ ಮನೆ ಮಾಡಿದೆ. ಜನರು ದೀಪದ ಜೊತೆ ಪಟಾಕಿ ಸಿಡಿಸಿ ಹಬ್ಬ ಆಚರಣೆ ಮಾಡ್ತಿದ್ದಾರೆ. ಚಳಿಗಾಲ ಹಾಗೂ ದೀಪಾವಳಿ ನಂತ್ರ ದೇಶದ ಅನೇಕ ರಾಜ್ಯಗಳ ವಾತಾವರಣದಲ್ಲಿ ಬದಲಾವಣೆಯಾಗ್ತಿದೆ. ಬದಲಾಗುತ್ತಿರುವ ಹವಾಮಾನದ ಮೊದಲ ಪರಿಣಾಮ ನಮ್ಮ ಆರೋಗ್ಯದ ಮೇಲಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ಗಾಳಿ ವಿಷವಾಗ್ತಿದೆ. ವಾತಾವರಣ ಕಲುಷಿತವಾಗ್ತಿದ್ದಂತೆ ಏನೆಲ್ಲ ಸಮಸ್ಯೆಗಳು ಕಾಡುತ್ತವೆ ಮತ್ತು ಅದಕ್ಕೆ ಪರಿಹಾರವೇನು ಎಂಬುದನ್ನು ನಾವಿಂದು ಹೇಳ್ತೇವೆ.
ಹವಾಮಾನ (Weather) ಹದಗೆಡ್ತಿದ್ದಂತೆ ಕಾಡುತ್ತೆ ಈ ಎಲ್ಲ ಆರೋಗ್ಯ (Health) ಸಮಸ್ಯೆ : ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಸಾಮಾನ್ಯವಾಗಿ ವಾತಾವರಣ ಕಲುಷಿತಗೊಳ್ಳುತ್ತದೆ. ಚಳಿ (Cold) ಹೆಚ್ಚಾಗುವ ಜೊತೆಗೆ ವಿಷಯುಕ್ತ ಗಾಳಿ ದೇಹ ಸೇರುವುದ್ರಿಂದ ಅನೇಕ ರಾಜ್ಯಗಳ ಜನರು ಉಸಿರಾಟದ ತೊಂದರೆ ಎದುರಿಸಬೇಕಾಗುತ್ತದೆ. ಶೀತ, ಕೆಮ್ಮಿನ ಸಮಸ್ಯೆ ಕೂಡ ಈ ಸಂದರ್ಭದಲ್ಲಿ ಕಾಡುವುದು ಹೆಚ್ಚು. ಅಸ್ತಮಾ ಸಮಸ್ಯೆಯಿರುವವರು ಸಾಕಷ್ಟು ಕಷ್ಟ ಎದುರಿಸಬೇಕಾಗುತ್ತದೆ. ಚಳಿಗಾಲದಲ್ಲಿ ದಮ್ಮು, ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪುವವರು ಹೆಚ್ಚು.
ಚಳಿಗಾಲದಲ್ಲಿ (Winter) ಕಾಡುವ ಅನಾರೋಗ್ಯ ಸಮಸ್ಯೆಗೆ ಇಲ್ಲಿದೆ ಪರಿಹಾರ : ಆಯುರ್ವೇದ ತಜ್ಞರ ಪ್ರಕಾರ, ಚಳಿಗಾಲದಲ್ಲಿ ಆರೋಗ್ಯ ಹಾಳಾದ್ರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಸಾವಿರಾರು ವರ್ಷಗಳ ಹಿಂದೆಯೇ ಆಯುರ್ವೇದದಲ್ಲಿ, ಬದಲಾಗುತ್ತಿರುವ ಋತುಗಳಲ್ಲಿ ಕಾಡುವ ಅನಾರೋಗ್ಯಕ್ಕೆ ಅನೇಕ ಪರಿಹಾರಗಳನ್ನು ಹೇಳಲಾಗಿದೆ. ಆಯುರ್ವೇದದ ಪ್ರಕಾರ, ಈ ಋತುವಿನಲ್ಲಿ ಆಹಾರದ ಬಗ್ಗೆ ಮಾತ್ರ ಕಾಳಜಿವಹಿಸಿದ್ರೆ ಸಾಲದು. ಇನ್ನೂ ಅನೇಕ ವಿಷ್ಯಗಳ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ.
ಈ ರೀತಿಯಾಗಿ ನಿಮ್ಮ ಸ್ಕ್ರೀನ್ ಟೈಮ್ ಕಡಿಮೆ ಮಾಡೋದನ್ನು ಕಲಿಯಿರಿ
ಮೂಗಿಗೆ ಹಾಕಿ ಈ ಎಣ್ಣೆ : ಚಳಿಗಾಲದಲ್ಲಿ ನೀವು ಎಳ್ಳಿನ ಎಣ್ಣೆ, ತುಪ್ಪ ಅಥವಾ ಔಷಧೀಯ ಎಣ್ಣೆಯನ್ನು ಬಳಸಬೇಕು. ಈ ಎಣ್ಣೆಯ ಒಂದೆರಡು ಹನಿಯನ್ನು ಮೂಗಿಗೆ ಮತ್ತು ಹೊಕ್ಕಳಿಗೆ ಹಾಕಬೇಕು. ಇದ್ರಿಂದ ದೇಹದ ರೋಗನಿರೋಧಕ ಶಕ್ತಿ (Immunity Power) ಹೆಚ್ಚಾಗುತ್ತದೆ. ದೇಹವನ್ನು ಆರೋಗ್ಯವಾಗಿಡಲು ಇದು ತುಂಬಾ ಸಹಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.
ಅರಿಶಿನ (Turmeric) ಬಳಸಲು ಮರೆಯಬೇಡಿ : ಅರಿಶಿನ ಮಸಾಲೆ ಪದಾರ್ಥವಾಗಿದೆ. ಅದನ್ನು ಅಡುಗೆಗೆ ಮಾತ್ರವಲ್ಲ ಔಷಧಿ (Medicine) ರೂಪದಲ್ಲೂ ಬಳಕೆ ಮಾಡಲಾಗುತ್ತದೆ. ನೀವು ಚಳಿಗಾಲದಲ್ಲಿ ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ಅರಿಶಿನದ ಹಾಲಿಗೆ ನೀವು ಬೆಲ್ಲವನ್ನು ಸೇರಿಸಿ ಕುಡಿದ್ರೆ ಲಾಭ ದುಪ್ಪಟ್ಟಾಗುತ್ತದೆ ಎನ್ನುತ್ತಾರೆ ತಜ್ಞರು. ರೋಗ ನಿರೋಧಕ ಶಕ್ತಿ ಹೆಚ್ಚಾಗುವುದ್ರಿಂದ ನಿಮ್ಮ ದೇಹ ರೋಗದಿಂದ ದೂರವಿರುತ್ತದೆ. ಹಾಲಿನಲ್ಲಿ ಅರಿಶಿನವನ್ನು ಸೇವಿಸುವುದರಿಂದ ನೆಗಡಿ, ಕೆಮ್ಮು ಮತ್ತು ಶೀತದಿಂದ ಪರಿಹಾರ ಸಿಗುತ್ತದೆ. ಅಲರ್ಜಿ ಸಮಸ್ಯೆ ಇರುವವರು ಕೂಡ ಹಾಲಿಗೆ ಅರಿಶಿನ ಬೆರೆಸಿ ಕುಡಿಯಬೇಕು. ಬಿಸಿ ನೀರಿಗೆ ಅರಿಶಿನ ಹಾಕಬೇಕು. ಯಾವುದೇ ಕಾರಣಕ್ಕೂ ಹಾಲಿಗೆ ಅರಿಶಿನ ಹಾಕಿದ ನಂತ್ರ ಹಾಲನ್ನು ಬಿಸಿ ಮಾಡಬಾರದು. ಇದಲ್ಲದೆ ನೀವು ಅರ್ಧ ಚಮಚ ಅರಿಶಿನ ಮತ್ತು 1/4 ಚಮಚ ಉಪ್ಪನ್ನು ಉಗುರುಬೆಚ್ಚಗಿನ ನೀರಿನಲ್ಲಿ ಸೇರಿಸಿ ಗಾರ್ಗಲ್ ಮಾಡಿ. ಇದು ಆಂಟಿ-ಬ್ಯಾಕ್ಟೀರಿಯಲ್ ಮತ್ತು ಆಂಟಿ-ವೈರಲ್ ಗುಣಲಕ್ಷಣಗಳನ್ನು ಹೊಂದಿದ್ದು, ಸೋಂಕುಗಳಿಂದ ನಮ್ಮನ್ನು ರಕ್ಷಿಸಲು ನೆರವಾಗುತ್ತದೆ.
ನಾನ್‌ವೆಜ್ ತಿನ್ನೋದು ಓಕೆ, ಆದ್ರೆ ಡೆಂಗ್ಯೂ ಇದ್ದಾಗ ಅಪ್ಪಿತಪ್ಪಿಯೂ ಮುಟ್ಬೇಡಿ
ಚಳಿಗಾಲದಲ್ಲಿರಲಿ ಕಷಾಯ ಸೇವನೆ : ಬದಲಾಗುತ್ತಿರುವ ಹವಾಮಾನ ಮತ್ತು ಮಾಲಿನ್ಯದಿಂದ ಮೂಗು ಮತ್ತು ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಕಾಡುವುದು ಮಾಮೂಲಿ. ಇದ್ರಿಂದ ಶೀಘ್ರ ಪರಿಹಾರ ಬೇಕೆಂದ್ರೆ ನೀವು ತುಳಸಿ, ಶುಂಠಿ, ಕರಿಮೆಣಸು ಮತ್ತು ಅಮೃತ ಬಳ್ಳಿಯನ್ನು ಸೇರಿಸಿ ಕಷಾಯವನ್ನು ತಯಾರಿಸಿ. ಅದಕ್ಕೆ ಕಲ್ಲುಸಕ್ಕರೆ ಬೆರೆಸಿ ಕುಡಿಯಬೇಕು. ಇದು ಅಲರ್ಜಿ ಮತ್ತು ಉಸಿರಾಟದ ಸಮಸ್ಯೆಯಿಂದ ಹೊರಬರಲು ನೆರವಾಗುತ್ತದೆ.
ಈ ಪ್ರಾಣಾಯಾಮ, ಯೋಗ (Yoga) ಮಾಡಿ : ಯೋಗ ಹಾಗೂ ಪ್ರಾಣಾಯಾಮಗಳು ಆರೋಗ್ಯವನ್ನು ವೃದ್ಧಿಸುತ್ತವೆ. ನೀವು ಚಳಿಗಾಲದಲ್ಲಿ ನಾಡಿ ಶುದ್ಧಿ, ಅನುಲೋಮ್ ವಿಲೋಮ್, ಕಪಾಲಭಾತಿ ಮತ್ತು ಭಸ್ತ್ರಿಕಾ ಸೇರಿದಂತೆ ಉಸಿರಾಟಕ್ಕೆ ಸಂಬಂಧಿಸಿದ ಪ್ರಾಣಾಯಾಮ ಮಾಡಬೇಕು. ಇದ್ರಿಂದ ಸೂಕ್ತ ಪ್ರಮಾಣದಲ್ಲಿ ಆಮ್ಲಜನಕ ನಿಮ್ಮ ದೇಹ ಸೇರುತ್ತದೆ. ರಕ್ತ ಸಂಚಾರ ಸರಾಗವಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.