ಭೂಮಿಗೆ ಬಂದ ಬಳಿಕ ಗಗನಯಾತ್ರಿಗಳಿಗೆ ಯಾಕೆ ನಡೆಯಲು ಸಾಧ್ಯವಾಗೋದಿಲ್ಲ?

ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಇತರರು ಮಾರ್ಚ್ 19 ರಂದು ಭೂಮಿಗೆ ಮರಳಲಿದ್ದಾರೆ. 9 ತಿಂಗಳ ನಂತರ ಭೂಮಿಗೆ ಬರುತ್ತಿರುವ ಇವರು, ಇಲ್ಲಿನ ಗುರುತ್ವಾಕರ್ಷಣ ಶಕ್ತಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಅನ್ನೋದರ ಬಗ್ಗೆಯೇ ಚಿಂತೆ ಮಾಡಲಾಗುತ್ತಿದೆ. ಮೈಕ್ರೋಗ್ರ್ಯಾವಿಟಿಯ ಪರಿಣಾಮದಿಂದ ಗಗನಯಾತ್ರಿಗಳಿಗೆ ನಡೆಯಲು ಸಾಧ್ಯವಾಗುವುದಿಲ್ಲ.

sunita-williams-return-to-earth-march-19-effects-of-microgravity san

ಬೆಂಗಳೂರು (ಮಾ.19): ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್, ಮತ್ತು ನಿಕ್ ಹೇಗ್ ಮಾರ್ಚ್ 19 ರಂದು ಭೂಮಿಗೆ ಮರಳಲಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 3.27ಕ್ಕೆ ಅವರ ಸ್ಪ್ಲಾಶ್‌ಡೌನ್ ನಿರೀಕ್ಷಿಸಲಾಗಿದೆ. ಸುನೀತಾ ವಿಲಿಯಮ್ಸ್‌ ಅಭಿಮಾನಿಗಳು ಹಾಗೂ ಭಾರತೀಯರು ಸುರಕ್ಷಿತವಾಗಿ ಭೂಮಿಗೆ ಮರಳಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ 9 ತಿಂಗಳ ನಂತರ ಭೂಮಿಗೆ ಬರುತ್ತಿರುವ ಇವರು, ಇಲ್ಲಿನ ಗುರುತ್ವಾಕರ್ಷಣೆ ಶಕ್ತಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಅನ್ನೋದರ ಬಗ್ಗೆಯೇ ಚಿಂತೆ ಮಾಡುತ್ತಿದ್ದಾರೆ. ಗಗನಯಾತ್ರಿಗಳು ಭೂಮಿಗೆ ಮರಳಿದ ನಂತರ ಎದುರಿಸುವ ಪ್ರಮುಖ ಸವಾಲೆಂದರೆ, ಅವರಿಗೆ ನಡೆಯಲು ಸಾಧ್ಯವಾಗೋದಿಲ್ಲ. ಅನೇಕ ಗಗನಯಾತ್ರಿಗಳಿಗೆ ಕನಿಷ್ಠ ನಿಲ್ಲಲು ಕೂಡ ಸಾಧ್ಯವಾಗೋದಿಲ್ಲ. ಒಂದು ಹೆಜ್ಜೆ ಇಡೋಕು ಅವರು ಕಷ್ಟಪಡುತ್ತಾರೆ. ಗಗನಯಾತ್ರಿಗಳಿಗೆ ಈ ಹಂತದಲ್ಲಿ ಸಹಾಯಕರ ಅಗತ್ಯವಿರುತ್ತದೆ. ಮೈಕ್ರೋಗ್ರ್ಯಾವಿಟಿಯ ಪರಿಣಾಮದಿಂದ ಅವರಿಗೆ ಈ ರೀತಿ ಆಗುತ್ತದೆ.

ಭೂಮಿಯಲ್ಲಿ, ನಮ್ಮ ಎಲುಬುಗಳು ಮತ್ತು ಸ್ನಾಯುಗಳು ನಿರಂತರವಾಗಿ ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತವೆ, ನಮ್ಮ ದೇಹವನ್ನು ಬಲವಾಗಿ ಹಿಡಿದಿಡಲು ಮತ್ತು ಚಲಿಸಲು ಸಹಾಯ ಮಾಡುತ್ತವೆ. ಅಂತರಿಕ್ಷದಲ್ಲಿ, ತೂಕರಹಿತ ಪರಿಸ್ಥಿತಿಗಳಲ್ಲಿ ಈ ಪ್ರತಿರೋಧವು ಗಮನಾರ್ಹವಾಗಿ ಕಡಿಮೆ ಆಗಿರುತ್ತದೆ. ದೇಹದ ತೂಕವನ್ನು ಹಿಡಿದುಕೊಳ್ಳುವ ಅಗತ್ಯವಿಲ್ಲದ ಕಾರಣ, ನಾವು ನಡೆಯುವ ವೇಳೆ ಪ್ರಮುಖ ಪಾತ್ರವಹಿಸುವ ಕೆಳಮಟ್ಟದ ಬೆನ್ನು, ತೊಡೆ, ಮತ್ತು ಕಾಲುಗಳ ಸ್ನಾಯುಗಳು ದುರ್ಬಲವಾಗುತ್ತದೆ ಮತ್ತು ದ್ರವ್ಯವನ್ನು ಕಳೆದುಕೊಳ್ಳುತ್ತವೆ. ಮೈಕ್ರೋಗ್ರಾವಿಟಿಯಲ್ಲಿ ಎಲುಬು ವ್ಯವಸ್ಥೆಯೇ ಹಾನಿಗೊಳಗಾಗುತ್ತದೆ. ಗಗನಯಾತ್ರಿಗಳು ಪ್ರತಿದಿನ 1-2% ಅವರ ಎಲುಬಿನ ದ್ರವ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ಅಂದಾಜಿಸಲಾಗಿದೆ. ಹಾಗೇನಾದರೂ ಅವರು ಭೂಮಿಗೆ ಇಳಿದ ಬೆನ್ನಲ್ಲೇ ನಡೆಯುವ ಪ್ರಯತ್ನ ಮಾಡಿದರೆ, ಅವರ ಮೂಳೆಗಳು ಕಡ್ಡಿಗಳ ಹಾಗೆ ಕಟ್‌ ಆಗುತ್ತದೆ.

Latest Videos

ಗಗನಯಾತ್ರಿಗಳು ಭೂಮಿಗೆ ಮರಳಿದಾಗ ತಲೆತಿರುಗುವುದು, ತಲೆ ತಿರುಗಿ ಬೀಳುವಂಥ ಅನುಭವ ಕೂಡ ಎದುರಿಸುತ್ತಾರೆ. ಏಕೆಂದರೆ ನಿಲ್ಲುವಾಗ ರಕ್ತದ ಒತ್ತಡದಲ್ಲಿ ಅಚಾನಕ್ ಕುಸಿತವಾಗುತ್ತದೆ. ಇದು ದೇಹವು ಭೂಮಿಯ ಗುರತ್ವಾಕರ್ಷಣ ಶಕ್ತಿಯಲ್ಲಿ ರಕ್ತದ ಹರಿವನ್ನು ನಿಯಂತ್ರಿಸಲು ತನ್ನ ಸಾಮರ್ಥ್ಯವನ್ನು ಮರುಸ್ಥಾಪಿಸಲು ಸಮಯ ಬೇಕಾಗುತ್ತದೆ.

ಮತ್ತೊಂದು ಕಾರಣವೆಂದರೆ ದಿಕ್ಕು ತೋರದಂಥ ಪರಿಸ್ಥಿತಿ ಎದುರಿಸುತ್ತಾರೆ. ಸಮಯವೆಷ್ಟು, ನಾವು ಎಲ್ಲಿದ್ದೇವೆ, ನಾವು ಯಾರು ಅನ್ನೋ ಗೊಂದಲದ ಮನಸ್ಥಿತಿ ಅವರ ತಲೆಯಲ್ಲಿ ಮೂಡುತ್ತದೆ. ಗಗನಯಾತ್ರಿಗಳು ಭೂಮಿಗೆ ಮರಳಿದಾಗ, ಅವರ ದೇಹ ಸಮತೋಲನದೊಂದಿಗೆ ಹೋರಾಡಬಹುದು, ಏಕೆಂದರೆ ಅವರ ವೆಸ್ಟಿಬ್ಯುಲರ್ ವ್ಯವಸ್ಥೆ ತೂಕರಹಿತ ಪರಿಸ್ಥಿತಿಗೆ ಹೊಂದಿಕೊಂಡಿದೆ. ಅವರ ಮೆದುಳು ಮರುಹೊಂದಿಸಲು ಮತ್ತು ಒಳಕಿವಿಯಿಂದ ಸರಿಯಾದ ಸಂಕೇತಗಳನ್ನು ವ್ಯಾಖ್ಯಾನಿಸಲು ಸಮಯ ಬೇಕಾಗುತ್ತದೆ. ಅಂತರಿಕ್ಷದಲ್ಲಿ ಸುಲಭವಾಗಿದ್ದ ಚಲನೆಗಳು ಭೂಮಿಯಲ್ಲಿ ಕಷ್ಟಕರವಾಗುತ್ತವೆ, ಏಕೆಂದರೆ ಮೆದುಳು ಗುರುತ್ವಾಕರ್ಷಣ ಆಧಾರಿತ ಪರಿಸರದಲ್ಲಿ ಕೆಲಸ ಮಾಡಲು ಇಲ್ಲಿನ ಸ್ಥಿತಿಗೆ ಹೊಂದಿಕೊಳ್ಳಬೇಕಾಗುತ್ತದೆ.

ಭೂಮಿಯ ಮೇಲೆ ಕೊನೆಯ ಬಾರಿ ಕ್ಷುದ್ರಗ್ರಹ ಬಿದ್ದಿದ್ದು ಯಾವಾಗ?

ಮೈಕ್ರೋಗ್ರಾವಿಟಿಯ ಪರಿಣಾಮದಿಂದ ಚೇತರಿಸಿಕೊಳ್ಳಲು ಮತ್ತು ಭೂಮಿಯ ಗುರುತ್ವಾಕರ್ಷಣ ಶಕ್ತಿಗೆ ಹೊಂದಿಕೊಳ್ಳಲು, ಗಗನಯಾತ್ರಿಗಳು ದೊಡ್ಡ ತರಬೇತಿಯನ್ನು ಪಡೆಯುತ್ತಾರೆ. ಅವರು ಚಿಕಿತ್ಸೆ ಕೂಡ ಪಡೆಯುತ್ತಾರೆ. ಇದು ಸ್ನಾಯು ಶಕ್ತಿ ಮತ್ತು ಎಲುಬಿನ ದ್ರವ್ಯವನ್ನು ಪುನಃ ನಿರ್ಮಿಸಲು ವ್ಯಾಯಾಮವನ್ನು ಒಳಗೊಂಡಿದೆ. ಅವರು ಸಮತೋಲನ ತರಬೇತಿಯನ್ನು ಪಡೆಯುತ್ತಾರೆ, ಇದು ವೆಸ್ಟಿಬ್ಯುಲರ್ ವ್ಯವಸ್ಥೆಯನ್ನು ಭೂಮಿಯ ಗುರುತ್ವಾಕರ್ಷಣ ಶಕ್ತಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಅಂತರಿಕ್ಷದಲ್ಲಿ ಹೃದಯಸಂಬಂಧಿ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ ಶಾರೀರಿಕ ಚಟುವಟಿಕೆಗಳು ಹೃದಯದ ಕಾರ್ಯಕ್ಷಮತೆಯನ್ನು ಪುನಃ ಪಡೆಯಲು ಅಗತ್ಯವಿದೆ.

ಸುನಿತಾ ವಿಲಿಯಮ್ಸ್ ಆಗಮನಕ್ಕೆ ಕ್ಷಣಗಣನೆ; ಫ್ಲೋರಿಡಾದ ಸಮುದ್ರದ ಮೇಲೆ ಇಳಿಯಲಿದೆ ನೌಕೆ

click me!