ಸ್ಯಾಂಡ್​ವಿಚ್​ ತಿನ್ನುವಾಗ ಕ್ಯಾನ್ಸರ್ ಪತ್ತೆ! ಚಿಕ್ಕ ನಿರ್ಲಕ್ಷ್ಯ ಜೀವಕ್ಕೇ ಅಪಾಯ: ಕೆಲವೇ ದಿನಗಳ ಅತಿಥಿಯ ಮನಕಲಕುವ ಘಟನೆ...

Published : Mar 17, 2025, 04:58 PM ISTUpdated : Mar 17, 2025, 06:46 PM IST
ಸ್ಯಾಂಡ್​ವಿಚ್​ ತಿನ್ನುವಾಗ ಕ್ಯಾನ್ಸರ್ ಪತ್ತೆ!  ಚಿಕ್ಕ ನಿರ್ಲಕ್ಷ್ಯ ಜೀವಕ್ಕೇ ಅಪಾಯ: ಕೆಲವೇ ದಿನಗಳ ಅತಿಥಿಯ ಮನಕಲಕುವ ಘಟನೆ...

ಸಾರಾಂಶ

ಜರ್ಮನಿಯ ಡೆಸ್ ಲಾಂಗ್‌ಸ್ಟಾಫ್‌ಗೆ (39) ಸ್ಯಾಂಡ್‌ವಿಚ್ ತಿನ್ನುವಾಗ ಅನ್ನನಾಳದ ಕ್ಯಾನ್ಸರ್ (ನಾಲ್ಕನೇ ಹಂತ) ಇರುವುದು ಪತ್ತೆಯಾಗಿದೆ. ಆಹಾರ ನುಂಗಲು ಕಷ್ಟವಾದಾಗ ವೈದ್ಯರನ್ನು ಸಂಪರ್ಕಿಸಿದಾಗ ವಿಷಯ ತಿಳಿದಿದೆ. ಕ್ಯಾನ್ಸರ್ ಯಕೃತ್ತಿಗೂ ಹರಡಿದ್ದು, ಬದುಕುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ. ಚಿಕಿತ್ಸೆಗಾಗಿ ತಾಯಿ ಸಹಾಯ ಯಾಚಿಸುತ್ತಿದ್ದಾರೆ. ಸಣ್ಣ ಸಮಸ್ಯೆಗಳನ್ನೂ ನಿರ್ಲಕ್ಷಿಸದೆ ತಕ್ಷಣ ಪರೀಕ್ಷಿಸಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕ್ಯಾನ್ಸರ್​ ಎನ್ನುವ ಮಹಾಮಾರಿ ಯಾವಾಗ, ಹೇಗೆ ದೇಹವನ್ನು ಆಕ್ರಿಸಿಕೊಂಡುಬಿಡುತ್ತದೆ ಎನ್ನುವುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಇದಕ್ಕೆ ವೈದ್ಯರು ಹಲವಾರು ರೀತಿಯ ಕಾರಣಗಳನ್ನು ನೀಡಿದರೂ, ಕೆಲವೊಮ್ಮೆ ಎಲ್ಲವೂ ಚೆನ್ನಾಗಿರುವಂತೆ ಕಂಡರೂ, ಕ್ಯಾನ್ಸರ್​ ಮೊದಲ ಹಂತದಲ್ಲಿ ತಿಳಿಯುವುದೇ ಕಷ್ಟ. ಇದೇ  ಕಾರಣದಿಂದ ಎಷ್ಟೋ ಮಂದಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಉಂಟಾಗಿದೆ. ಅಂಥದ್ದೇ ಒಂದು ಘಟನೆ ಈಗ ವರದಿಯಾಗಿದೆ. ಇಲ್ಲೊಬ್ಬ ವ್ಯಕ್ತಿಗೆ ಸ್ಯಾಂಡ್​ವಿಚ್​ ತಿನ್ನುವಾಗ ತಮಗೆ ಕ್ಯಾನ್ಸರ್​ ಇದೆ ಎಂದು ತಿಳಿದಿದೆ. ಅದು ನಾಲ್ಕನೇ ಹಂತಕ್ಕೆ ಹೋಗಿರುವುದು ತಿಳಿದಿದ್ದು, ಕೆಲವೇ ದಿನಗಳ ಅತಿಥಿ ಎಂದು ತಿಳಿದಿದೆ. 

ಇವರ ಹೆಸರು ಡೆಸ್ ಲಾಂಗ್‌ಸ್ಟಾಫ್‌.  ಜರ್ಮನಿಯವರು. ವಯಸ್ಸು 39. ಸಾಸೇಜ್ ಸ್ಯಾಂಡ್‌ವಿಚ್ ತಿನ್ನುವ ಸಂದರ್ಭದಲ್ಲಿ ಅವರಿಗೆ ಅದು ನುಂಗಲು ಆಗಲಿಲ್ಲ. ಅದು ಗಂಟಲಿನಲ್ಲಿ ಸಿಲುಕಿಕೊಂಡಿತು. ಕೊನೆಗೆ ನೀರು ಕುಡಿಯಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಯಿತು. ಕೂಡಲೇ ಅವರು ವೈದ್ಯರ ಬಳಿ ಹೋದರು. ಆಗ ಅವರಿಗೆ ಪರೀಕ್ಷೆ ಮಾಡಿದಾಗ, ಅವರಿಗೆ ಕ್ಯಾನ್ಸರ್​ ಇರುವುದು ತಿಳಿದಿದೆ. ಅದು ಅನ್ನನಾಳದ ಕ್ಯಾನ್ಸರ್​. ಅದು ಇದಾಗಲೇ ನಾಲ್ಕನೆಯ ಹಂತ ತಲುಪಿರುವುದು ತಿಳಿದಿದೆ. ಕ್ಯಾನ್ಸರ್​ ಯಕೃತ್ತಿಗೂ ಹರಡಿರುವ ಹಿನ್ನೆಲೆಯಲ್ಲಿ ಡೆಸ್ ಅವರು ಕೆಲವೇ ದಿನಗಳ ಅತಿಥಿ ಎಂದು ತಿಳಿಸಿದ್ದಾರೆ ವೈದ್ಯರು.  ಐದು ವರ್ಷದ ಮಗನನ್ನು ಹೊಂದಿರುವ ಏಕಾಂಗಿ ಅಪ್ಪನಾಗಿರುವ ಇವರು ಇದೀಗ ಕ್ಯಾನ್ಸರ್​ ವಿರುದ್ಧ ಹೋರಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈ ಹಂತದಲ್ಲಿ  ಕ್ಯಾನ್ಸರ್ ಸಾಮಾನ್ಯವಾಗಿ ಗುಣಪಡಿಸಲಾಗದು ಎಂದಿರುವ ವೈದ್ಯರು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. 

ರಕ್ತದ ಗುಂಪು ಪರೀಕ್ಷೆ ಮಾಡಿರುವಿರಾ? ಯಾರ ಊಹೆಗೂ ನಿಲುಕದ 'ಬಾಂಬೆ ಬ್ಲಡ್​ ಗ್ರೂಪ್​' ನಿಮ್ಮದಾಗಿರಬಹುದು!

ಇವರಿಗೆ  ಎಂಡೋಸ್ಕೋಪಿಗೆ ಒಳಗಾಗುವಂತೆ ಸಲಹೆ ನೀಡಲಾಯಿತು. ಆ ಸಂದರ್ಭದಲ್ಲಿ, ಸ್ಯಾಂಡ್​ವಿಚ್​ ಗಂಟಲಲ್ಲಿ ಸಿಲುಕಿದ್ದರಿಂದ  ಅವರು ರಕ್ತವನ್ನು ವಾಂತಿ ಮಾಡಲು ಪ್ರಾರಂಭಿಸಿದರು ಮತ್ತು ನಂತರ ಅವರ ಮಲದಲ್ಲಿ ರಕ್ತವನ್ನು ಗಮನಿಸಲಾಯಿತು. ಕೊನೆಗೆ ಅವರ ಅನ್ನನಾಳದಲ್ಲಿ 35 ಸೆಂ.ಮೀ. ಗಡ್ಡೆ ಪತ್ತೆಯಾಗಿದೆ. ಇಷ್ಟಾದರೂ ಅವರಿಗೆ ಇದರ ಅರಿವು ಬಂದೇ ಇರಲಿಲ್ಲ. ಊಟ ಸೇವಿಸುವಾಗಲೂ ಸಣ್ಣಪುಟ್ಟ ಸಮಸ್ಯೆಯಾಗುತ್ತಿದ್ದರೂ ಅದನ್ನು ಅವರು ಕಡೆಗಣಿಸಿದ್ದರು. ಆದರೆ ಸ್ಯಾಂಡ್​ವಿಚ್​ ತಿನ್ನುವಾಗ ತುಂಬಾ ಹಿಂಸೆಯಾಗಿದ್ದರಿಂದ ಅವರು ವೈದ್ಯರ ಬಳಿ ಹೋಗಿದ್ದರು. ಆರಂಭದಲ್ಲಿ, ಗಡ್ಡೆಯನ್ನು ತೆಗೆದುಹಾಕಲು ಕೀಹೋಲ್ ಶಸ್ತ್ರಚಿಕಿತ್ಸೆಗೆ ವೈದ್ಯರು ಆದೇಶಿಸಿದರು. ಆದರೆ ಕ್ಯಾನ್ಸರ್​  ಯಕೃತ್ತಿಗೆ ಹರಡಿರುವ ಕಾರಣ, ಇದು ಕಷ್ಟಸಾಧ್ಯ ಎನ್ನಲಾಗಿದೆ.  

ಲಾಂಗ್‌ಸ್ಟಾಫ್ ಅವರ ದೇಹದ ಬಿಳಿ ರಕ್ತ ಕಣಗಳು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡಲು ಇಮ್ಯುನೊಥೆರಪಿಯನ್ನು ಪ್ರಾರಂಭಿಸಿದ್ದಾರೆ, ಜೊತೆಗೆ ಮತ್ತೊಂದು ರೀತಿಯ ಕಿಮೊಥೆರಪಿಯನ್ನು ಸಹ ಪ್ರಾರಂಭಿಸಿದ್ದಾರೆ. ಆದಾಗ್ಯೂ, ಈ ಚಿಕಿತ್ಸೆಗಳು ಗುಣಪಡಿಸುವುದಿಲ್ಲ ಎಂದು ಅವರು ಒಪ್ಪಿಕೊಳ್ಳುತ್ತಾರೆ. ತಾವು ಹೆಚ್ಚೆಂದರೆ 11-12 ತಿಂಗಳ ಅತಿಥಿ ಎಂದಿರುವ ಅವರು,  ಚಿಕಿತ್ಸೆಗಾಗಿ ಅವರ ತಾಯಿ ಅಭಿಯಾನ ಆರಂಭಿಸಿದ್ದಾರೆ. ಆದ್ದರಿಂದ ದೇಹದಲ್ಲಿ ಯಾವುದೇ ರೀತಿಯ ಚಿಕ್ಕ ಬದಲಾವಣೆಯಾದರೂ, ದೇಹದ ಭಾಗಗಳಲ್ಲಿ ಗಡ್ಡೆ ಪತ್ತೆಯಾದರೆ ಶೀಘ್ರದಲ್ಲಿ ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅದರಲ್ಲಿಯೂ  ಅನ್ನನಾಳ ಬಹುದೊಡ್ಡ ಮುಖ್ಯ ಅಂಗವಾಗಿರುವ ಕಾರಣ, ಆಹಾರ ನುಂಗುವಾಗ ಉಂಟಾಗುವ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. 

ಬದಲಾಗ್ತಿರೋ ಹವಾಮಾನಕ್ಕೆ ಬೆಟ್ಟದ ನೆಲ್ಲಿ: ಆರೋಗ್ಯಕರ ಪೇಯ ಹೇಳಿಕೊಟ್ಟ ಡಾ.ಪದ್ಮಿನಿ ಪ್ರಸಾದ್​

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ