ಸಕ್ಕರೆ (Sugar) ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರೂ ಸಿಹಿ (Sweet) ಅಂದ್ರೆ ಸಾಕು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ನೆನಪಿರ್ಲಿ, 2 ವರ್ಷ ತುಂಬುವ ಮೊದಲ ಮಕ್ಕಳಿಗೆ ಮಾತ್ರ ಸಕ್ಕರೆಯನ್ನು ಕೊಡೋಕೆ ಹೋಗ್ಬೇಡಿ.
ಸಕ್ಕರೆ, ಸಕ್ಕರೆಯಿಂದ ಮಾಡಿದ ಸಿಹಿ ಪದಾರ್ಥಗಳನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಅದು ಪುಟ್ಟ ಮಕ್ಕಳಾದ್ರೂ ಅಷ್ಟೇ ಹಿರಿಯರಾದ್ರೂ ಅಷ್ಟೇ. ಮಕ್ಕಳ ಹತ್ರ ತರಕಾರಿ, ಹಣ್ಣುಗಳ ಪ್ಲೇಟ್ ತೆಗೆದುಕೊಂಡು ಹೋಗಿ, ನೋಡಿದ ಕೂಡ್ಲೇ ಮುಖ ಸಿಂಡರಿಸಿ ಬಿಡ್ತಾರೆ. ಅದೇ ಸಿಹಿತಿಂಡಿ ತೆಗೆದುಕೊಂಡು ಹೋದ್ರೆ, ಕಣ್ಣರಳಿಸಿಕೊಂಡು ಬೇಗ ಬೇಗ ತಿಂದು ಪ್ಲೇಟ್ ಖಾಲಿ ಮಾಡ್ತಾರೆ. ಹಾಗಂತ ಪುಟ್ಟ ಮಕ್ಕಳಿಗೆ ದಿನಾಲೂ ಸಿಹಿ ಕೊಡೋ ಅಭ್ಯಾಸ ಮಾಡಿಬಿಟ್ಟೀರಾ. ಮಕ್ಕಳ ಆರೋಗ್ಯಕ್ಕೆ ಸಿಹಿ ಸೇವನೆ ಸ್ಪಲ್ಪಾನೂ ಒಳ್ಳೆಯದಲ್ಲ. ಅದರಲ್ಲೂ ಮಕ್ಕಳಿಗೆ 2 ವರ್ಷ ತುಂಬುವ ಮೊದಲು ಸಕ್ಕರೆಯನ್ನು ಕೊಡಲೇಬಾರದು.
ಮಕ್ಕಳ ಪೋಷಣೆ ಮಾಡುವಾಗ ಹಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಅದರಲ್ಲಿ ಮುಖ್ಯವಾದುದು ಮಕ್ಕಳ ಆಹಾರಕ್ರಮ. ಮಕ್ಕಳ ಆರೋಗ್ಯಕ್ಕೆ ಯಾವ ರೀತಿಯ ಆಹಾರ ಸೂಕ್ತ, ಯಾವುದು ಸೂಕ್ತವಲ್ಲ ಎಂಬುದು ತಿಳಿದುಕೊಳ್ಳುವುದು ಮುಖ್ಯ. ಚಿಕ್ಕಂದಿನಲ್ಲಿ ಮಕ್ಕಳಿಗೆ ಕೊಡುವ ಆಹಾರವೇ ಅವರ ಆರೋಗ್ಯ ಹದಗೆಡಲು ಕಾರಣವಾಗಬಹುದು. ಮಕ್ಕಳಿಗೆ ದೊಡ್ಡವರಂತೆ ಯಾವುದೇ ಆಹಾರ ತಿಂದರೂ ಜೀರ್ಣಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಹೀಗಾಗಿ ಮಕ್ಕಳಿಗೆ ಆಹಾರ ನೀಡುವ ಮೊದಲೇ ಸಾಕಷ್ಟು ಯೋಚಿಸಬೇಕು.
undefined
ಚಿಕ್ಕ ಮಕ್ಕಳಿಗೆ ಸಕ್ಕರೆ (Sugar) ಹಾಗೂ ಉಪ್ಪನ್ನು ನೀಡಲೇಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಅದರಲ್ಲೂ ಶಿಶುಗಳಿಗೆ ಆಹಾರದಲ್ಲಿ ಯಾವುದೇ ರೀತಿಯಲ್ಲಿ ಸಕ್ಕರೆ ಸೇರಿಸಬಾರದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಮಕ್ಕಳು ಹುಟ್ಟಿದ ಆರು ತಿಂಗಳ ವರೆಗೆ ಅವರಿಗೆ ತಾಯಿಯ ಎದೆಹಾಲನ್ನು ಮಾತ್ರ ನೀಡಬೇಕು. ಒಂದು ವರ್ಷದ ವರೆಗೆ ಬರೀ ತಾಯಿ ಹಾಲನ್ನು ಮಾತ್ರ ನೀಡಬಹುದು. ಜತೆಗೆ ಹಣ್ಣು (Fruit) ಹಾಗೂ ತರಕಾರಿಯನ್ನು ಸಹ ಪುಡಿ ಮಾಡಿ ನೀಡಬಹುದು.
Healthy Food For Children: ದೊಡ್ಡವರು ತಿನ್ನುವ ಆಹಾರವನ್ನೆಲ್ಲಾ ಮಕ್ಕಳಿಗೂ ಕೊಡಬಹುದಾ ?
ಸಕ್ಕರೆಯೆಂಬ ಬಿಳಿ ವಿಷ
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸಕ್ಕರೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸಲಾಗುತ್ತದೆ. ಟೀ (Tea), ಕಾಫಿಗೆ ಸೇರಿಸಲು, ಸಿಹಿ ತಿಂಡಿ ತಯಾರಿಸಲು ಹೀಗೆ ಬೇರೆ ಬೇರೆ ರೀತಿಯಲ್ಲಿ ಸಕ್ಕರೆಯನ್ನು ಬಳಸುತ್ತಾರೆ. ಮನೆಯ ಹೊರಗಡೆ ನಾವು ಸೇವಿಸುವ ಚಾಕೋಲೇಟ್ (Chocolate), ಮಿಠಾಯಿ, ತಂಪು ಪಾನೀಯ ಇವೆಲ್ಲವೂ ಸಕ್ಕರೆಯನ್ನು ಒಳಗೊಂಡಿರುತ್ತದೆ. ಹಲವು ರಾಸಾಯನಿಕ ಪದಾರ್ಥಗಳನ್ನು ಸೇರಿಸಿ ತಯಾರಿಸುವ ಸಕ್ಕರೆ, ಬಿಳಿವಿಷವೆಂದೇ ಕರೆಯಲ್ಪಡುತ್ತದೆ.
ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರ ಮೇಲೂ ಸಕ್ಕರೆ ಸೇವನೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಮಕ್ಕಳಿಗೆ ಸಕ್ಕರೆ ನೀಡುವುದು, ಅವರ ಮೆದುಳಿನ ಕಾರ್ಯ ಕ್ಷಮತೆಯ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು. ನೆನಪಿನ ಶಕ್ತಿಯನ್ನು ಕುಂಠಿತಗೊಳಿಸಬಹುದು. ಪುಟ್ಟ ಮಕ್ಕಳಿಗೆ ಸಕ್ಕರೆಯನ್ನು ನೀಡುವುದರಿಂದ ಬಾಲ್ಯದಲ್ಲೇ ಸ್ಥೂಲಕಾಯತೆ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಹಲ್ಲಿನ ಕೊಳೆತ ಸೇರಿದಂತೆ ಹಲವಾರು ಆರೋಗ್ಯ (Healtj) ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
Parenting Tips: ಮಕ್ಕಳು ಹಾಲು ಕುಡಿದ್ರೆ ವಾಂತಿ, ಗಂಭೀರ ಕಾಯಿಲೆ ಬರುತ್ತಾ?
ಚಿಕ್ಕಂದಿನಲ್ಲೇ ಮಕ್ಕಳಿಗೆ ಉತ್ತಮ ಆಹಾರ ನೀಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ದೀರ್ಘಕಾಲದ ಕಾಯಿಲೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಸಿಹಿ ನೀಡಿ ಅಭ್ಯಾಸ ಮಾಡುವುದರಿಂದ ಅವರು ಹಣ್ಣು, ತರಕಾರಿಗಳ ಸೇವನೆಯನ್ನೇ ಬಿಟ್ಟು ಬಿಡುತ್ತಾರೆ. ಬದಲಾಗಿ ಸಿಹಿ ತಿಂಡಿ, ತಿನಿಸುಗಳ ಪದಾರ್ಥಗಳಿಗೆ ಒಗ್ಗಿ ಹೋಗುತ್ತಾರೆ. ಹೀಗಾಗಿ ಮಕ್ಕಳಿಗಾಗಿ ಆಹಾರ ಮತ್ತು ಪಾನೀಯಗಳನ್ನು ಖರೀದಿಸುವಾಗ ಪೌಷ್ಟಿಕಾಂಶದ ಅಂಶಗಳ ಲೇಬಲ್‌ನಲ್ಲಿ ಸೇರಿಸಲಾದ ಸಕ್ಕರೆಗಳ ಪ್ರಮಾಣವನ್ನು ಪರಿಶೀಲಿಸಿ. ಸಕ್ಕರೆ ಪಾನೀಯಗಳ ಬದಲು ಮಕ್ಕಳಿಗೆ ನೀರು ಅಥವಾ ಹಾಲನ್ನು ಕೊಡುವುದುನ್ನು ರೂಢಿಸಿಕೊಳ್ಳಿ. ಮನೆಯಲ್ಲಿ ಮಗುವಿಗೆ ಆಹಾರ ತಯಾರಿಸುವಾಗ ಸಕ್ಕರೆ ಸೇರಿಸದೆ ಆಹಾರವನ್ನು ತಯಾರಿಸಿ.ಆರಂಭದಲ್ಲಿ ಮಗು (Baby) ಇಂಥಹಾ ಆಹಾರ ಸೇವಿಸಲು ಹಿಂಜರಿದರೂ ಕ್ರಮೇಣ ಸಕ್ಕರೆ ಸೇರಿಸದ ಆಹಾರವನ್ನು ಸೇವಿಸುವುದು ಅಭ್ಯಾಸವಾಗಿ ಹೋಗುತ್ತದೆ.