ಸಹಿಸಲು ಅಸಾಧ್ಯವಾದ ಮಟುದ ಪರಿಸ್ಥಿತಿಯ ನಂತರ, ಹೇಗೆ ಸುದರ್ಶನ ಕ್ರಿಯೆಯು ಅತ್ಯಂತ ಪರಿಣಾಮಕಾರಿಯಾಗಿ ಸಾಂತ್ವನ ನೀಡಿ, ಜೀವನದಲ್ಲಾದ ಪರಿವರ್ತನೆಯ ಬಗ್ಗೆ ಸ್ಪೂರ್ತಿದಾಯಕ ಕಥೆಯನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ. ಜಾಗತಿಕ ಮಾನವತಾವಾದಿ ನಾಯಕರು ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರು ಆದ ಗುರುದೇವ ಶ್ರೀ ಶ್ರೀ ರವಿಶಂಕರರು, ಈ ಸುದರ್ಶನ ಕ್ರಿಯೆಯ ರೂವಾರಿಗಳು.
ಬೆಂಗಳೂರು(ಅ.10): ಎಲ್ಲರೂ ಸುದರ್ಶನ ಕ್ರಿಯೆಯ ಅಭ್ಯಾಸವನ್ನು ಮಾಡಬೇಕು. ಅದರಲ್ಲೂ ವಿಶೇಷವಾಗಿ ಆತಂಕ, ಒತ್ತಡದಿಂದ ಬಳಲುತ್ತಿರುವವರು ಮಾಡಲೇಬೇಕೆಂದು ಹೇಳುತ್ತೇನೆ. ಈ ಅಭ್ಯಾಸವು ಅದ್ಭುತವಾಗಿ ಕೆಲಸ ಮಾಡುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ ಗುರೂಜಿ ತಿಳಿಸಿದ್ದಾರೆ.
ಸುದರ್ಶನ ಕ್ರಿಯೆಯೆಂದಾಗಿ ಆಂತರಿಕ ಶಾಂತಿಯನ್ನು ಹೊಂದಿ, ಮರುಜೀವನ ಪಡೆದ ಘಟನೆ. 'ನಾನು ಸುದರ್ಶನ ಕ್ರಿಯೆ ಮಾಡುವುದನ್ನು ಬಿಡಲಿಲ್ಲ. ಏಕೆಂದರೆ ಕೇವಲ ಇದರಿಂದ ಮಾತ್ರ ನಾನು ಆಘಾತಕಾರಿ ದುಃಖದಿಂದ ಹೊರಬರಬಹುದು ಎಂದು ತಿಳಿದಿದ್ದೆ' ಎಂದು ಬೆಂಗಳೂರಿನ ಓರ್ವ ಮಹಿಳೆಯೊಬ್ಬರು ಹೇಳುತ್ತಾರೆ. ಅವರ ಗುರುತನ್ನು ಮರೆಮಾಚಲು ಅವರನು ಪ್ರಿಯಾ ಎಂದು ಕರೆಯೋಣ.
undefined
ಈ ನವರಾತ್ರಿಯಂದು ನಿಮ್ಮ ಸಂಕಲ್ಪಗಳನ್ನು ಸಾಕಾರಗೊಳಿಸಿ ಗುರುದೇವ್ ಶ್ರೀ ಶ್ರೀ ರವಿಶಂಕರ್
ಸಹಿಸಲು ಅಸಾಧ್ಯವಾದ ಮಟುದ ಪರಿಸ್ಥಿತಿಯ ನಂತರ, ಹೇಗೆ ಸುದರ್ಶನ ಕ್ರಿಯೆಯು ಅತ್ಯಂತ ಪರಿಣಾಮಕಾರಿಯಾಗಿ ಸಾಂತ್ವನ ನೀಡಿ, ಜೀವನದಲ್ಲಾದ ಪರಿವರ್ತನೆಯ ಬಗ್ಗೆ ಸ್ಪೂರ್ತಿದಾಯಕ ಕಥೆಯನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ. ಜಾಗತಿಕ ಮಾನವತಾವಾದಿ ನಾಯಕರು ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರು ಆದ ಗುರುದೇವ ಶ್ರೀ ಶ್ರೀ ರವಿಶಂಕರರು, ಈ ಸುದರ್ಶನ ಕ್ರಿಯೆಯ ರೂವಾರಿಗಳು.
ಮರಣವು ಘೋರವಾದ ಖಾಲಿತನವನ್ನು ಸೃಷ್ಟಿಸುತ್ತದೆ ಮತ್ತು ನಮಗೆ ಕಾಣುವಷ್ಟೇ ಜೀವನ ಅಲ್ಲ ಎಂಬ ಸತ್ಯದೊಂದಿಗೆ, ನಮ್ಮನ್ನು ಎಚ್ಚೆತ್ತುಕೊಳ್ಳುವಂತೆ ಮಾಡುತ್ತದೆ. ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ, ಅದು ನಮ್ಮ ಅಂತರಾಳದಲ್ಲಿ ಆಲ್ಲೋಲಕಲ್ಲೋಲ ವನ್ನು ಉಂಟು ಮಾಡಿ, ನಮ್ಮ ಇರುವು ಕ್ಷಣ ಭಂಗುರವೆಂದು ತೋರಿಸುತ್ತದೆ. ಅತ್ಯಂತ ದುಃಖದಿಂದಕೂಡಿದಇಂತಹ ಸಮಯದಲ್ಲಿ, ನಮ್ಮನ್ನು ಗುಣಮುಖಗೊಳಿಸುವ ಅತ್ಯುತ್ತಮ ಸಾಧನವೆಂದರೆ ಅದುವೇ 'ಸುದರ್ಶನ ಕ್ರಿಯೆ'.
ಅನೇಕರ ಜೀವನದಲ್ಲಿ, ಆಪ್ತರ ಮೃತ್ಯುವಿನಂತಹ ಅತ್ಯಂತ ಕಠಿಣ ವಾದ ಕ್ಷಣಗಳನ್ನು ಎದುರಿಸಿ, ನಕಾರಾತ್ಮಕ ಭಾವನೆಗಳನ್ನು ಮೀರಿ, ಮತ್ತೆ ತಮ್ಮ ಜೀವನವನ್ನು ಕಟ್ಟಿಕೊಂಡು, ಧೈರ್ಯದಿಂದ ಮುನ್ನಡೆ ವಂತೆ ಮಾಡುವಲ್ಲಿ ಸುದರ್ಶನ ಕ್ರಿಯೆಯ ಅಭ್ಯಾಸವು ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿದೆ.
ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, ಪತಿಯನ್ನು ಕಳೆದುಕೊಂಡು, ದುಃಖ ದಲ್ಲಿ ಮುಳುಗಿದ್ದ ಪ್ರಿಯಾ ಅವರು ಜೀವನದಲ್ಲಿ, ಈಗ ಗುರುದೇವರ ಬೋಧನೆಗಳಿಂದ, ಸಾಂತ್ವನವನ್ನು- ನೆಮ್ಮದಿಯನ್ನು. ಪ್ರಿಯಾ ಅವರು ತಮ್ಮ ಜೀವನವು ಒಮ್ಮಿಂದೊಮ್ಮೆಲೆ ತಿರುವು ವಡೆದ ಹೃದಯ ವಿದ್ರಾವಕವಾದ ಘಟನೆಯನ್ನು ನೆನೆದಾಗ ಭಾವುಕರಾಗುತ್ತಾರೆ. 'ನಮ್ಮದು ಪ್ರೇಮ ವಿವಾಹ ನಮ್ಮಿಬ್ಬರಲ್ಲಿ ಬಹಳ ಒಳ್ಳೆಯ ಹೊಂದಾಣಿಕೆಯಿತ್ತು. ಜೀವನವು ಸುಂದರವಾಗಿತ್ತು. ನನ್ನ ಪತಿಗೆ 40 ವರ್ಷದ ವಯಸ್ಸಿನಲ್ಲಿ ಕ್ಯಾನ್ಸರ್ ಖಾಯಿಲೆ ಪತ್ತೆಯಾಯಿತು. ಇದಾದ ಎರಡು ವರ್ಷಗಳ ನಂತರ ನಾನು ನನ್ನ ಪತಿಯನ್ನು ಕಳೆದುಕೊಂಡೆ. ಇದು ನನಗೆ ಅತೀ ದೊಡ್ಡ ಹೊಡೆತದಂತಾಯಿತು. ಈ ಅತ್ಯಂತ ನೋವಿನ ಸಮಯದಿಂದ ಹೊರಬರಲು ನನಗೆ ಏನಾದರೊಂದು ಖಂಡಿತ ಬೇಕಿತ್ತು. ಪತಿಯನ್ನು ಕಳೆದುಕೊಂಡು ಮನಸ್ಸು ಖಾಲಿಯಾಗಿಬಿಟ್ಟಿತ್ತು. ಅನೇಕ ವರ್ಷಗಳಿಂದ ನೆನಪಿದ್ದ ಮೊಬೈಲ್ ಸಂಖ್ಯೆಗಳೂ ಮರೆತು ಹೋಗಿದ್ದವು' ಎಂದು ಸ್ಮರಿಸಿಕೊಳ್ಳುತ್ತಾರೆ.
ಅದೃಷ್ಟವಶಾತ್ ಪ್ರಿಯಾ 2006ರಲ್ಲಿ ಆರ್ಟ್ ಆಫ್ ಲಿವಿಂಗ್ ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅತ್ಯಂತ ತಳಮಳ ವನ್ನು ಅನುಭವಿಸುತ್ತಿದ್ದ ಸಮಯದಲ್ಲಿ ಸುದರ್ಶನ ಕ್ರಿಯೆಯು ಅವರಿಗೆ ದಾರಿದೀಪವಾಯಿತು. 'ಸುದರ್ಶನ ಕ್ರಿಯೆಯನ್ನು ನಿತ್ಯವೂ ಅಭ್ಯಾಸ ಮಾಡತೊಡಗಿದೆ. ನನ್ನಲ್ಲಿ ಎಷ್ಟು ಸುಧಾರಣೆ ಕಂಡುಬಂದಿ ತೆಂದರೆ, ಆರ್ಟ್ ಆಫ್ ಲಿವಿಂಗ್ ನ ಇತರ ಅನೇಕ ಕಾರ್ಯಕ್ರಮಗಳನ್ನೂ ಮಾಡಿದೆ. ಡಿ.ಎಸ್.ಎನ್ ಕಾರ್ಯಕ್ರಮ, ಉನ್ನತ ಧ್ಯಾನದ ಶಿಬಿರ ವನ್ನು ಮಾಡಿದ್ದರಿಂದ ನನಗೆ ಅಪಾರ ಲಾಭವಾಯಿತು' ಎನ್ನುತ್ತಾರೆ. ನಿತ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದರಿಂದ ಅವರು ಕೇವಲ ಭಾವನಾತ್ಮಕವಾಗಿ ಮಾತ್ರ ಗುಣಮುಖರಾಗದೆ, ದೈಹಿಕವಾಗಿಯೂ ಗುಣಮುಖರಾಗಲು ಆರಂಭಿಸಿದರು. 'ನಾನು ಬಹಳ ವಿಶ್ವಾಸವನ್ನು ಕಳೆದುಕೊಂಡಿದೆ, ಜನರೊಡನೆ ಮಾತನಾಡಲು ನಾನು ಬಯಸುತ್ತಿರ ಲಿಲ್ಲ, ನನ್ನೊಡನೆ ಮಾತ್ರ ಇರಬೇಕೆಂದು ಬಯಸುತ್ತಿದ್ದೆ. ಅಷ್ಟೊಂದು ಭಯ-ಆತಂಕ ನನ್ನನ್ನು ಕಾಡುತ್ತಿತ್ತು. ಆದರೆ ಕ್ರಮೇಣವಾಗಿ ಸುದ 'ರ್ತನ ಕ್ರಿಯೆಯ ಸಹಾಯದಿಂದ ನಾನು ಇದರಿಂದ ಹೊರಬಂದೆ. ನನ್ನ ಆರೋಗ್ಯ ಸುಧಾರಿಸಿತು. ನನಗೆ ಸ್ಪಷ್ಟವಾಗಿ ಆಲೋಚಿಸಲು ಸಾಧ್ಯವಾಯಿತು.
World Literacy Day 2024: ಶಿಕ್ಷಣ ಕ್ಷೇತ್ರದಲ್ಲಿ ಆರ್ಟ್ ಆಫ್ ಲಿವಿಂಗ್ ಸಾಧನೆ ಕಿರುನೋಟ ಇಲ್ಲಿದೆ
ನನ್ನ ವಿಶ್ವಾಸವು ಮತ್ತೆ ಮರಳಿ ಬರುತ್ತಿರುವುದನ್ನು ನಾನು ಅರಿತೆ' ಎನ್ನುತ್ತಾರೆ. ಅವರ ದುಃಖದಲ್ಲಿಯೂ, ಸುದರ್ಶನ ಕ್ರಿಯೆಯ ಸಹಾಯದಿಂದ ಅವರು ತಮ್ಮ ಗುರಿಯನ್ನು ಕಂಡು ಕೊಂಡರು. ಅವರ ಮಗ 10ನೆಯ ತರಗತಿಯಲ್ಲಿದ್ದ, ಮಗಳಿಗೆ ಕೇವಲ ಆರು ವರ್ಷ. 'ನನ್ನ ಮಕ್ಕಳಿಗಾಗಿ ನಾನು ಏನಾದರೂ ಮಾಡಬೇಕಿದ್ದರಿಂದ ನಾನು ಹತಾಷೆಗೆ ಒಳಗಾಗಲಿಲ್ಲ. ನಾನು ಬಹಳ ಶಿಕ್ಷಣವನ್ನೇನೂ ಪಡೆದಿರಲಿಲ್ಲ. ಆದರೆ ಮಕ್ಕಳಿಗಾಗಿ ಗಳಿಸಬೇಕೆಂದು ತಿಳಿದಿತ್ತು. ಆಗ ನಾನು ಪೂರ್ವ ಪ್ರಾಥಮಿಕ ತರಗತಿಗೆ ಶಿಕ್ಷಕಿಯಾಗಿ ಕೆಲಸ ಮಾಡಲು ಆರಂಭಿಸಿದೆ'. ಇಂದು ವಿಶ್ವ ಮಾನಸಿಕ ಆರೋಗ್ಯ ದಿನ 'ಎಲ್ಲರೂ ಸುದರ್ಶನ ಕ್ರಿಯೆಯ ಅಭ್ಯಾಸವನ್ನು ಮಾಡಬೇಕೆಂದು ಪ್ರೇರೇಪಿಸುತ್ತೇನೆ. ಅದರಲ್ಲೂ ವಿಶೇಷವಾಗಿ ಆತಂಕ, ಒತ್ತಡದಿಂದ ಬಳಲುತ್ತಿರುವವರು ಮಾಡಲೇಬೇಕೆಂದು ಹೇಳುತ್ತೇನೆ. ಈ ಅಭ್ಯಾಸವು ಅದ್ಭುತವಾಗಿ ಕೆಲಸ ಮಾಡುತ್ತದೆ. ಅದನ್ನು ನೀವೇ ಸ್ವತಃ ಮಾಡಿ ಅನುಭವಿಸದ ತನಕ ಅದರ ಮೌಲ, ನಿಮಗೆ ತಿಳಿಯುವುದಿಲ್ಲ. ನನಗೆ ಬೇಕಾದ ಎಲ್ಲಾ ಬಲವೂ ಸುದರ್ಶನ ಕ್ರಿಯೆಯಿಂದ ಧ್ಯಾನದಿಂದ ಬಂದಿದೆ. ಕ್ರಿಯೆಯನ್ನು ಮಾಡಿ ನಿಮ್ಮ ಜೀವನವನ್ನು ಬದಲಿಸಿಕೊಳ್ಳಿ. ಆದರಿಂದಾಗಿ ನೀವು ಪ್ರಶಾಂತರಾಗಿರುತ್ತೀರಿ. ನಿಮಗೆ ಬಲ ಬರುತ್ತದೆ, ಸ್ಪಷ್ಟವಾದ ಮನಸ್ಸಿನಿಂದ ಸವಾಲುಗಳನ್ನು ಎದುರಿಸಬಲ್ಲಿರಿ. ಇದನ್ನು ಎಲ್ಲಾ ಶಾಲೆಗಳಲ್ಲೂ ಪರಿಚಯಿಸಬೇಕೆಂಬುದೇ ನನ್ನ ಅಭಿಪ್ರಾಯ. ಇಂದಿನ ಪೀಳಿಗೆಗೆ ಇದು ಅತ್ಯಾ ವಶ್ಯಕವಾದದ್ದು ಎಂದು ತಮ್ಮ ಮಾತುಗಳನ್ನು ಹಂಚಿಕೊಳ್ಳುತ್ತಾರೆ.
ಸುದರ್ಶನ ಕ್ರಿಯೆಯು ಪರಿವರ್ತನಾತ್ಮಕ ಸಾಧನವೆಂದು ಹೇಳುವಲ್ಲಿ ಇವರಈಕಥೆಯು, ಒಂದು ಘನವಾದ ನಿದರ್ಶನವಾಗಿದೆ. ಇದರ ಅಭ್ಯಾಸದಿಂದ, ಆಂತರಿಕ ಶಾಂತಿಯನ್ನು ಕಂಡುಕೊಂಡು, ಜೀವನದ ಸವಾಲುಗಳನ್ನು ಎದೆಗುಂದದೆ ಎದುರಿಸುವಲ್ಲಿ ವ್ಯಕ್ತಿಗಳು ಹೇಗೆ ಸಶಕ್ತರಾಗುತ್ತಾರೆ ಎಂದು ಇದು ತೋರಿಸುತ್ತದೆ. ಅತ್ಯಂತ ಕರಾಳ ಸ್ವಾವೇಶಗಳನ್ನು ಎದುರಿಸುತ್ತಿರುವವರಿಗೆ, ಆಳವಾದ ದುಃಖದಿಂದ ಮೇಲೆದ್ದು, ನವ ಜೀವನವನ್ನು ಕಂಡುಕೊಳ್ಳಬಹುದೆಂಬ ಸ್ಫೂರ್ತಿಯನ್ನು ಪ್ರಿಯಾ ಅವರ ಅನುಭವವು ನೀಡುತ್ತದೆ.