ಹಸಿ ಮಾವು ಬೇಸಿಗೆ ಸಮಯದಲ್ಲಿ ನಮ್ಮನ್ನು ರಕ್ಷಿಸಲು ಸಹಕಾರಿ. ವಿಟಮಿನ್ ಸಿಯ ಉತ್ತಮ ಮೂಲವಾಗಿರುವುದರಿಂದ ಹಸಿ ಮಾವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೃದಯ ರೋಗಕ್ಕೂ ಇದು ನೆರವಾಗುತ್ತದೆ.
ಮಾವಿನಕಾಯಿ ಹೆಸರು ಕೇಳ್ತಿದ್ದಂತೆ ಅನೇಕರ ಬಾಯಲ್ಲಿ ನೀರು ಬರುತ್ತದೆ. ಮಾವಿನ ಕಾಯಿಗೆ ಉಪ್ಪು, ಮೆಣಸು ಹಾಕಿ ತಿನ್ನುತ್ತಿದ್ದರೆ ಎಷ್ಟು ಹೋಳು ಒಳಗೆ ಹೋಯ್ತು ಎನ್ನುವ ಪರಿವೆ ಇರೋದಿಲ್ಲ. ಮಾವಿನ ಹಣ್ಣು ಬರುವ ಒಂದು ತಿಂಗಳು ಮೊದಲೇ ಮಾವಿನ ಕಾಯಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುತ್ತದೆ. ಕೆಲವರ ಮನೆ ಮುಂದೆಯೇ ನೀವು ಮಾವಿನ ಕಾಯಿಯನ್ನು ನೋಡ್ಬಹುದು. ಹಣ್ಣುಗಳ ರಾಜಾ ಎಂದೇ ಪ್ರಸಿದ್ಧಿ ಪಡೆದಿರುವ ಮಾವಿನ ಹಣ್ಣು ಮಾತ್ರ ತಿನ್ನೋಕೆ ರುಚಿಯಲ್ಲ, ಮಾವಿನ ಕಾಯಿ ಕೂಡ ರುಚಿ ಜೊತೆ ಆರೋಗ್ಯ ವೃದ್ಧಿಸುತ್ತದೆ.
ಮಾವಿನ ಕಾಯಿ (Raw Mangoes) ಯಲ್ಲಿ ಅನೇಕ ಆಹಾರ (Food) ವನ್ನು ತಯಾರಿಸಬಹುದು. ಮಾವಿನ ಕಾಯಿ ರೈಸ್ ಬಾತ್, ಮಾವಿನ ಕಾಯಿ ಚಟ್ನಿ, ಮಾವಿನ ಕಾಯಿ ಗೊಜ್ಜು, ಮಾವಿನ ಕಾಯಿ ಅಪ್ಪೆಹುಳಿ, ಮಾವಿನ ಕಾಯಿ ಉಪ್ಪಿನಕಾಯಿ ಹೀಗೆ ಒಂದಾ ಎರಡಾ ಅನೇಕ ರುಚಿ ರುಚಿ ಅಡುಗೆಯನ್ನು ನಾವು ಸಿದ್ಧಪಡಿಸಬಹುದು.
undefined
Men Health: ನಿಂತುಕೊಂಡಲ್ಲ.. ಪುರುಷರು ಹೀಗೆ ಮೂತ್ರ ವಿಸರ್ಜನೆ ಮಾಡಿದ್ರೆ ಬೆಸ್ಟ್
ನೀವು ಹಸಿ ಮಾವಿನ ಕಾಯಿಯನ್ನು ತಿನ್ನಲು ಇಷ್ಟಪಡುವವರಾಗಿದ್ದರೆ ಅದ್ರಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ. ಹಸಿ ಮಾವಿನ ಕಾಯಿ ಪೋಷಕಾಂಶ (Nutrients) ಗಳ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಜೀವಸತ್ವಗಳು, ಖನಿಜಗಳು, ಆಹಾರದ ಫೈಬರ್ ಮತ್ತು ಕ್ಯಾರೊಟಿನಾಯ್ಡ್ಗಳು ಇದರಲ್ಲಿ ಕಂಡುಬರುತ್ತವೆ.
ಹಸಿ ಮಾವಿನ ಕಾಯಿಯಿಂದ ಪಾನೀಯ (Drink) ಕೂಡ ತಯಾರು ಮಾಡ್ತಾರೆ. ಇದು ಬೇಸಿಲ ಬೇಸಿಗೆಯಿಂದ ನಮ್ಮನ್ನು ರಕ್ಷಿಸುವ ಕೆಲಸ ಮಾಡುತ್ತದೆ. ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಇದು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಸಿ ಮಾವಿನ ಕಾಯಿಯಲ್ಲಿ ಕ್ಯಾಲೋರಿ ಪ್ರಮಾಣ ಕಡಿಮೆ ಇರುತ್ತದೆ. ಇದು ಚಯಾಪಚಯವನ್ನು ಉತ್ತೇಜಿಸುತ್ತದೆ. ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Healthy Food: ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡಿದ್ರೆ ಕೂಲ್ ಆಗಿರ್ತೀರಿ
ಹಸಿ ಮಾವಿನ ಕಾಯಿ ಸೇವನೆಯಿಂದ ಆಗುವ ಪ್ರಯೋಜನಗಳು :
ರೋಗನಿರೋಧಕ ಶಕ್ತಿ (Immunity Power) ಹೆಚ್ಚಳ : ಹಸಿ ಮಾವಿನ ಕಾಯಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಗತ್ಯ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಕೆಲವು ಅಧ್ಯಯನಗಳ ಪ್ರಕಾರ, ಒಂದು ಕಪ್ ಹಸಿ ಮಾವಿನ ರಸವು ವಿಟಮಿನ್ ಎ ಯ ಒಟ್ಟು ದೈನಂದಿನ ಅವಶ್ಯಕತೆಯ ಶೇಕಡಾ 10ರಷ್ಟನ್ನು ಪೂರೈಸುತ್ತದೆ.
ಸಕ್ಕರೆ ಮಟ್ಟ ನಿಯಂತ್ರಣ (Sugar Level Control) : ಬೇರೆ ಹಣ್ಣುಗಳಿಗೆ ಹೋಲಿಸಿದರೆ ಮಾವಿನ ಕಾಯಿಯಲ್ಲಿ ನೈಸರ್ಗಿಕವಾಗಿ ಸಿಗುವ ಸಕ್ಕರೆ ಪ್ರಮಾಣ ಅತ್ಯಂತ ಕಡಿಮೆ ಇರುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ನೀವು ಮಾವಿನ ಕಾಯಿ ಸೇವನೆ ಮಾಡೋದ್ರಿಂದ ನಮ್ಮ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡಬಹುದು.
ಕ್ಯಾನ್ಸರ್ (Cancer) ಅಪಾಯ ಕಡಿಮೆ ಮಾಡುತ್ತೆ ಮಾವಿನ ಕಾಯಿ : ಮಾವಿನ ಕಾಯಿಯಲ್ಲಿ ಪಾಲಿಫಿನಾಲ್ ಇದೆ. ಈ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನಮಗೆ ನೀಡುತ್ತದೆ. ಇದಲ್ಲದೆ ಮಾವಿನ ಕಾಯಿ ಆ್ಯಂಟಿ ಕಾರ್ಸಿನೋಜೆನಿಕ್ ಗುಣ ಹೊಂದಿದ್ದು, ಇದು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಪಾಲಿಫಿನಾಲ್‌ಗಳು ಲ್ಯುಕೇಮಿಯಾ, ಕೊಲೊನ್, ಶ್ವಾಸಕೋಶ, ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್‌ನಂತಹ ವಿವಿಧ ಕ್ಯಾನ್ಸರ್ ಕೋಶಗಳನ್ನು ಹುಟ್ಟದಂತೆ ತಡೆಯುತ್ತದೆ.
ಹೃದಯದ ಆರೋಗ್ಯಕ್ಕೆ (Heart Health) ಬೆಸ್ಟ್ : ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಅಗತ್ಯ ಪೋಷಕಾಂಶಗಳು ಮಾವಿನ ಕಾಯಿಯಲ್ಲಿ ಕಂಡು ಬರುತ್ತವೆ. ಇದು ನಮ್ಮ ಹೃದಯವನ್ನು ಆರೋಗ್ಯವಾಗಿಡುವ ಕೆಲಸ ಮಾಡುತ್ತದೆ. ರಕ್ತದ ಹರಿವನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ಕಡಿಮೆ ರಕ್ತದೊತ್ತಡ ಸಮಸ್ಯೆಯುಳ್ಳವರಿಗೂ ಇದು ಬೆಸ್ಟ್. ಮಾವಿನ ಕಾಯಿಯಲ್ಲಿ ಮ್ಯಾಂಜಿಫೆರಿನ್ ಇದೆ. ಸೂಪರ್ ಆಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಮಾವಿನ ಕಾಯಿ ಸೇವನೆ ಮಾಡೋದ್ರಿಂದ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ ಮಟ್ಟ ಕಡಿಮೆಯಾಗುತ್ತದೆ.