ಕರೆಂಟ್ ಹೋದಾಗ ಮೊದಲು ನಾವು ಸರ್ಚ್ ಮಾಡೋದು ಮೇಣದಬತ್ತಿಯನ್ನು. ಆದ್ರೆ ಈ ಮೇಣದಬತ್ತಿ ಹೊಗೆ ನಮ್ಮ ಆರೋಗ್ಯ ಹಾಳು ಮಾಡುತ್ತೆ. ಅಷ್ಟೇ ಅಲ್ಲ ನಾವು ಅಡುಗೆ ಮಾಡೋವಾಗ ಹೆಚ್ಚು ಹೊಗೆ ಕಟ್ಟಿಕೊಳ್ಳೋಕೆ ಬಿಟ್ರೂ ಅಪಾಯ ಕಟ್ಟಿಟ್ಟಬುತ್ತಿ.
ಪ್ರತಿಯೊಂದು ಕೆಲಸಕ್ಕೂ ಈಗ ವಿದ್ಯುತ್ ಬೇಕು. ಒಂದರ್ಧ ಗಂಟೆ ಕರೆಂಟ್ ಇಲ್ಲವೆಂದ್ರೆ ಜನರು ಚಡಪಡಿಸುತ್ತಾರೆ. ರಾತ್ರಿ ಕರೆಂಟ್ ಹೋದ್ರೆ ನಾವು ಮೇಣದಬತ್ತಿಯ ಹುಡುಕಾಟ ನಡೆಸುತ್ತೇವೆ. ಹಿಂದೆ ಪ್ರತಿ ಮನೆಯಲ್ಲೂ ಸೀಮೆ ಎಣ್ಣೆಯ ದೀಪ ಉರಿಯುತ್ತಿತ್ತು. ಕಾಲ ಬದಲಾದಂತೆ ಸೀಮೆ ಎಣ್ಣೆ ದೀಪದ ಬದಲು ಮೇಣದಬತ್ತಿ ಲಗ್ಗೆ ಇಡ್ತು. ಈಗ ನಗರ – ಹಳ್ಳಿ ಸೇರಿದಂತೆ ಎಲ್ಲ ಕಡೆ ಯುಪಿಎಸ್ ಬಂದಿದೆ. ಅನೇಕರ ಮನೆಯಲ್ಲಿ ನೀವು ಇದನ್ನು ನೋಡಬಹುದು. ಮತ್ತೆ ಕೆಲವರು ಚಾರ್ಜಿಂಗ್, ಸೆಲ್ ಹಾಕಬಲ್ಲ ದೀಪವನ್ನು ತುರ್ತುಪರಿಸ್ಥಿತಿಗೆ ಇಟ್ಟುಕೊಂಡಿರುತ್ತಾರೆ. ಹಾಗಂತ ಮೇಣದಬತ್ತಿ ತನ್ನ ಸ್ಥಾನ ಕಳೆದುಕೊಂಡಿಲ್ಲ.
ದೀಪಾವಳಿ, ಕ್ರಿಸ್ ಮಸ್ ಸಂದರ್ಭದಲ್ಲಿ ಮೇಣದಬತ್ತಿ (Candles) ಗೆ ಬೇಡಿಕೆ ಹೆಚ್ಚು. ನಾವು ಬೆಳಕು ನೀಡಲಿ ಎಂದು ಬೆಳಗಿಸುವ ಈ ಮೇಣದಬತ್ತಿ ಕೂಡ ನಮ್ಮ ಆರೋಗ್ಯ (Health)ವನ್ನು ಹಾಳು ಮಾಡುತ್ತದೆ ಅಂದ್ರೆ ನೀವು ನಂಬಲೇಬೇಕು. ನೀವೂ ಮನೆಯಲ್ಲಿ ಮೇಣದ ಬತ್ತಿಯನ್ನು ಬೆಳಗಿಸುತ್ತಿದ್ದರೆ ಈಗ ನಾವು ಹೇಳುವ ಮುಖ್ಯ ವಿಷ್ಯವನ್ನು ನೆನಪಿಟ್ಟುಕೊಳ್ಳಿ.
undefined
ಅತಿಯಾದ ಸೆಕ್ಸ್ ಬಯಕೆಗೆ ಇದೇ ಕಾರಣ, ಇದೊಂದು ಮಾನಸಿಕ ಸಮಸ್ಯೆಯೇ?
ನಮ್ಮ ಶ್ವಾಸಕೋಶ (Lung)ದ ಆರೋಗ್ಯ ಬಹಳ ಮುಖ್ಯ. ಅನಾರೋಗ್ಯ ಶ್ವಾಸಕೋಶ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಎಕ್ಸ್ ರೇ ಮಾಡಿದಾಗ ನಿಮ್ಮ ಶ್ವಾಸಕೋಶ ಆರೋಗ್ಯವಾಗಿದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ಹೇಳ್ಬಹುದು. ಧೂಮಪಾನ ಮಾಡಿದಾಗ, ಮಾಲಿನ್ಯದಿಂದ, ಕೆಟ್ಟ ಆಹಾರ ಸೇವನೆ ಶ್ವಾಸಕೋಶದ ಆರೋಗ್ಯವನ್ನು ಹಾಳು ಮಾಡುತ್ತದೆ. ಇದ್ರಿಂದ ಶ್ವಾಸಕೋಶ ಕಪ್ಪಾಗುತ್ತದೆ. ಬರೀ ವಾಯು ಮಾಲಿನ್ಯ ನಿಮ್ಮ ಮನೆಯ ಹೊರಗೆ ಆಗಬೇಕಾಗಿಲ್ಲ. ನಿಮ್ಮ ಮನೆಯೊಳಗೆ ನೀವು ಬೆಳಗುವ ಮೇಣದಬತ್ತಿ ಹೊಗೆ ಕೂಡ ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಹಾಳು ಮಾಡುತ್ತದೆ. ಈ ಬಗ್ಗೆ ಆರ್ಹಸ್ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆರೋಗ್ಯ ವಿಭಾಗ ಅಧ್ಯಯನ ನಡೆಸಿದೆ. ಅಧ್ಯಯನದ ವರದಿ ಪ್ರಕಾರ, ಮೇಣದಬತ್ತಿ ಹೊಗೆ ಅಸ್ತಮಾ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂಬುದು ಪತ್ತೆಯಾಗಿದೆ.
100 ವರ್ಷ ಬದುಕಿ ಬಾಳಿದವರಿಂದ ಪಡೆದ್ಕೊಳ್ಳಿ ಅಡುಗೆ ಟಿಪ್ಸ್!
ಇವರ ಮುಂದೆ ಮೇಣದಬತ್ತಿ ಹಚ್ಚಬೇಡಿ : ಅಸ್ತಮಾದಿಂದ ಬಳಲುವ ಜನರು ಮನೆಯಲ್ಲಿದ್ದರೆ ಮೇಣದಬತ್ತಿಯನ್ನು ಉರಿಸಬೇಡಿ. ಈ ಹೊಗೆ ಶ್ವಾಸಕೋಶದಲ್ಲಿ ನೆಲೆಗೊಳ್ಳಬಹುದು ಮತ್ತು ಉಸಿರಾಟದ ತೊಂದರೆ, ನಿರಂತರ ಕೆಮ್ಮು, ಉಸಿರುಗಟ್ಟುವಿಕೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. ಮೇಣದಬತ್ತಿಯ ಹೊಗೆ ಡಿಎನ್ಎಗೆ ಹಾನಿ ಮಾಡುತ್ತದೆ ಮತ್ತು ರಕ್ತದ ಉರಿಯೂತವನ್ನು ಉಂಟುಮಾಡುತ್ತದೆ ಎಂದು ಅಧ್ಯಯನದಲ್ಲಿ ಪತ್ತೆ ಮಾಡಲಾಗಿದೆ.
ಅಧ್ಯಯನದಲ್ಲಿ ಅಚ್ಚರಿಯ ವರದಿ : 18 ರಿಂದ 25 ವರ್ಷದ ಯುವಕರ ಮೇಲೆ ಅಧ್ಯಯನ ನಡೆದಿದೆ. ಸೌಮ್ಯ ಅಸ್ತಮಾ ಹೊಂದಿದ್ದ ಯುವಕರು ಮೇಣದಬತ್ತಿ ಹೊಗೆಯಿಂದ ಸಮಸ್ಯೆ ಎದುರಿಸಿದ್ರು. ವಯಸ್ಕರು ಹೆಚ್ಚು ಫಿಟ್ ಆಗಿರ್ತಾರೆ ಎನ್ನುವ ಕಾರಣಕ್ಕೆ ಅವರ ಮೇಲೆ ಪ್ರಯೋಗ ನಡೆಸಲಾಗಿತ್ತು. ಆದ್ರೆ ಮೇಣದಬತ್ತಿ ಹೊಗೆ ಅವರ ಮೇಲೇ ಪರಿಣಾಮ ಬೀರುತ್ತಿದೆ ಅಂದ್ಮೇಲೆ ಮಕ್ಕಳು ಹಾಗೂ ವೃದ್ಧರ ಮೇಲೆ ಅದ್ರ ಪರಿಣಾಮ ಹೆಚ್ಚಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬರೀ ಮೇಣದಬತ್ತಿ ಹೊಗೆ ಮಾತ್ರವಲ್ಲ ಅಡುಗೆ ಮಾಡುವಾಗ ಬರುವ ಹೊಗೆ ಕೂಡ ಅಸ್ತಮಾ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ ಎಂದು ಅಧ್ಯಯನದಲ್ಲಿ ಉಲ್ಲೇಖ ಮಾಡಲಾಗಿದೆ. ಬರೀ ಅಸ್ತಮಾ ರೋಗಿಗಳಿಗೆ ಮಾತ್ರವಲ್ಲ ಆರೋಗ್ಯವಂತ ವ್ಯಕ್ತಿಗಳ ಆರೋಗ್ಯವನ್ನೂ ಇದು ಹಾಳು ಮಾಡುವ ಸಾಧ್ಯತೆಯಿದೆ. ಮೇಣದ ಬತ್ತಿಯ ದೀಪ ಬೆಳಗಿಸುವ ವೇಳೆ ಅದ್ರ ಹೊಗೆ ಮನೆಯಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳುವುದು ಮುಖ್ಯ. ಮನೆಯ ಕಿಟಕಿ, ಬಾಗಿಲುಗಳನ್ನು ತೆರೆದಿರಬೇಕು. ಚಳಿಗಾಲದಲ್ಲಿ ಮನೆಯ ಎಲ್ಲ ಬಾಗಿಲನ್ನು ಹಾಕಿ ನೀವು ಮೇಣದಬತ್ತಿ ಉರಿಸಿದರೆ ಅಪಾಯ ಹೆಚ್ಚು. ಅಡುಗೆ ಮಾಡುವಾಗ ಬರುವ ಹೊಗೆ ಕೂಡ ಮನೆಯಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಹೊಗೆ ಹೊರಗೆ ಹೋಗಲು ಸೂಕ್ತ ವ್ಯವಸ್ಥೆ ಮಾಡ್ಬೇಕು ಎನ್ನುತ್ತಾರೆ ತಜ್ಞರು.