
ದೆಹಲಿ (ಜನವರಿ 7, 2024): ಸಂಜೆಯ ವೇಳೆ ಆಲ್ಕೋಹಾಲ್‌ಯುಕ್ತ ಪಾನೀಯ ಸೇವಿಸುವುದರಿಂದ ನಿದ್ರೆಯ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಮದ್ಯಪಾನ ಕೆಲವು ವ್ಯಕ್ತಿಗಳಿಗೆ ಹೆಚ್ಚು ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆಯಾದರೂ, ಇದು ರಾತ್ರಿಯಿಡೀ ನಿದ್ರೆಯ ಮಾದರಿಯನ್ನು ಅಡ್ಡಿಪಡಿಸುತ್ತದೆ ಎಂದು ಹೇಳಿದೆ.
ಆದ್ದರಿಂದ ನೀವು ಮದ್ಯಪಾನ ಇಲ್ಲದೆ ಪಡೆಯುವ ಪುನಶ್ಚೈತನ್ಯಕಾರಿ ನಿದ್ರೆಯನ್ನು ಆಲ್ಕೋಹಾಲ್ ಸೇವಿಸಿದ್ರೆ ಪಡೆಯುವುದಿಲ್ಲ ಎಂದು ಮದ್ಯಪಾನ ನಿಂದನೆ ಮತ್ತು ಮದ್ಯಪಾನದ ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕರ ಹಿರಿಯ ವೈಜ್ಞಾನಿಕ ಸಲಹೆಗಾರ ಆರನ್ ವೈಟ್ ದಿ ವಾಷಿಂಗ್ಟನ್ ಪೋಸ್ಟ್‌ಗೆ ತಿಳಿಸಿದ್ದಾರೆ. ಅಲ್ಲದೆ, ಒಮ್ಮೆ ಮದ್ಯದ ನಶೆ ಏರಿದರೆ, ಮರುಕಳಿಸುವ ಪರಿಣಾಮವು ಉಂಟಾಗಬಹುದು. ಇದರಿಂದಾಗಿ ಕೆಲವು ಜನರು ಬೇಗನೆ ಎಚ್ಚರಗೊಳ್ಳುತ್ತಾರೆ ಮತ್ತು ಮತ್ತೆ ನಿದ್ರಿಸಲು ತೊಂದರೆ ಪಡುತ್ತಾರೆ ಎಂದೂ ತಿಳಿದುಬಂದಿದೆ.
ಇದನ್ನು ಓದಿ: ಕ್ಯಾನ್ಸರ್ ಸಮಸ್ಯೆ ಬರಲೇ ಬಾರದು ಎಂದಾದ್ರೆ ಈ ಐದು ವಿಷ್ಯಗಳನ್ನು ನೆನಪಿಡಿ!
2022 ರಲ್ಲಿ ನಡೆಸಿದ ಸಂಶೋಧನೆಯ ವಿಮರ್ಶೆಯು ಒಂದು ತಿಂಗಳ ಕಾಲ ಮದ್ಯವನ್ನು ತ್ಯಜಿಸಿದವರ ಮೇಲೆ ಕೇಂದ್ರೀಕರಿಸುತ್ತದೆ. ಈ ಅಧ್ಯಯನದಲ್ಲಿ ಭಾಗಿಯಾದವರು, ತಮ್ಮ ನಿದ್ರೆಯಲ್ಲಿ ಸುಧಾರಣೆಯಾಗಿರುವ ಬಗ್ಗೆ ತಿಳಿಸಿದ್ದಾರೆ ಎಂದು ಅಧ್ಯಯನ ಬಹಿರಂಗಪಡಿಸಿದೆ.
ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಡ್ರೈ ಜನವರಿ ಚಾಲೆಂಜ್‌ನಲ್ಲಿ ಭಾಗಿಯಾದ 4,000 ಕ್ಕೂ ಹೆಚ್ಚು ಜನರ ಪೈಕಿ, 56 ಪ್ರತಿಶತದಷ್ಟು ಜನರು ಆಲ್ಕೋಹಾಲ್ ಇಲ್ಲದೆ ಉತ್ತಮ ನಿದ್ರೆಯನ್ನು ಅನುಭವಿಸಿದ್ದಾಗಿ ಹೇಳಿದ್ದಾರೆ.
63 ವರ್ಷಗಳ ಬಳಿಕ ಗುಜರಾತಲ್ಲಿ ಸಾರಾಯಿ ನಿಷೇಧಕ್ಕೆ ಕೊಂಚ ಸಡಿಲ
ಸಂಭಾವ್ಯ ನಿದ್ರಾ ಭಂಗವನ್ನು ತಗ್ಗಿಸಲು ದೇಹವು ಆಲ್ಕೋಹಾಲ್ ಅನ್ನು ಸಾಕಷ್ಟು ಚಯಾಪಚಯಗೊಳಿಸಲು ಅಗತ್ಯವಿರುವ ಅವಧಿಯು ಸೇವನೆಯ ಪ್ರಮಾಣ ಮತ್ತು ಸಮಯದಂತಹ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಆದರೂ,, ನಿರ್ದಿಷ್ಟ ಸಮಯದ ಚೌಕಟ್ಟು ಅಸ್ಪಷ್ಟವಾಗಿಯೇ ಉಳಿದಿದೆ. ಏಕೆಂದರೆ ಇದು ಪ್ರತಿಯೊಬ್ಬ ವ್ಯಕ್ತಿ ಮತ್ತು ಪರಿಸ್ಥಿತಿಗೆ ಭಿನ್ನವಾಗಿರುತ್ತದೆ. ಅದೇನೇ ಇದ್ದರೂ, ಮಲಗುವ ಸಮಯಕ್ಕೆ ಹತ್ತಿರವಿರುವಾಗ ಮದ್ಯಪಾನ ಸೇವನೆಯು ನಿದ್ರೆಯನ್ನು ಅಡ್ಡಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಜ್ಞರು ಒಪ್ಪಿದ್ದಾರೆ.
ನೀವು ಬೆಳಗ್ಗೆ ಬ್ರಂಚ್ ಜೊತೆಗೆ ಶಾಂಪೇನ್ ಗ್ಲಾಸ್ ಹೊಂದಿದ್ದರೆ, ಅದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ರಾತ್ರಿ ಊಟದ ಜೊತೆಗೆ ಅರ್ಧ ಬಾಟಲ್ ವೈನ್ ಸೇವಿಸಿದರೆ ಅದು ಪರಿಣಾಮ ಬೀರುತ್ತದೆ ಎಂದು ಕ್ಲಿನಿಕಲ್ ಸೈಕಾಲಜಿಸ್ಟ್ ಮತ್ತು ಅಮೆರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ ವಕ್ತಾರ ಜೆನ್ನಿಫರ್ ಮಾರ್ಟಿನ್ ಹೇಳಿದ್ದಾರೆ. ಸಂಜೆಯಲ್ಲಿ ಒಂದು ಗ್ಲಾಸ್ ವೈನ್ ಅನ್ನು ತ್ಯಜಿಸಿದಾಗ ನಾನು ತುಂಬಾ ಚೆನ್ನಾಗಿ ಮಲಗಿದ್ದೇನೆ ಎಂದೂ ಹೇಳಿದರು.
ಆಲ್ಕೋಹಾಲ್ ತ್ಯಜಿಸುವುದರಿಂದ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಬಹುದು. ಆದರೆ, ನಿಯಮಿತವಾಗಿ ಆಲ್ಕೋಹಾಲ್ ಸೇವಿಸುವ ವ್ಯಕ್ತಿಗಳು ತಮ್ಮ ಸೇವನೆಯನ್ನು ಒಂದೇ ಬಾರಿ ನಿಲ್ಲಿಸೋ ಹಾಗಿಲ್ಲ. ಅದರಿಂದಲೂ ನಿದ್ರಾಹೀನತೆ ಅಥವಾ ನಿದ್ರೆಗೆ ಸಂಬಂಧಿಸಿದ ಇತರೆ ಸಮಸ್ಯೆಗಳು ಉಂಟುಮಾಡಬಹುದು ಎಂದೂ ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.