
ಒಂದು ನಿರ್ದಿಷ್ಟ ಪ್ರಮಾಣದ ಒತ್ತಡವು ಮನಸ್ಸಿಗೆ ಒತ್ತಡವನ್ನುಂಟು ಮಾಡುವುದಿಲ್ಲ. ಬದಲಿಗೆ ಮಾನಸಿಕ ಆರೋಗ್ಯ ವೃದ್ಧಿಗೆ ಪ್ರಯೋಜನಕಾರಿಯಾಗಿದೆ. ಈ ಪ್ರಯೋಜನಕಾರಿ ಮಟ್ಟದ ಒತ್ತಡದ ಕೆಲವು ಉದಾಹರಣೆಗಳು ಪರೀಕ್ಷೆಗಾಗಿ ಅಧ್ಯಯನ ಮಾಡುವುದು, ವೃತ್ತಿಪರ ಸಭೆಗಾಗಿ ತಯಾರಿ ಮಾಡುವುದು ಅಥವಾ ಗಡುವನ್ನು ಪೂರೈಸಲು ಸ್ವಲ್ಪ ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿದೆ. ಇತ್ತೀಚಿನ ಸಂಶೋಧನೆಯು ಒತ್ತಡವು ಸೀಮಿತ ಅವಧಿಯವರೆಗೆ ಇದ್ದರೆ ಅದು ನಿಮಗೆ ಧನಾತ್ಮಕವಾಗಿ ಕೆಲಸ ಮಾಡುತ್ತದೆ ಎಂದು ಸೂಚಿಸುತ್ತದೆ. ಒತ್ತಡದಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳೇನ ಎಂಬುದನ್ನು ತಿಳಿದುಕೊಳ್ಳೋಣ.
ಮನೋವಿಜ್ಞಾನಿ ಡಾ.ಬಿಂದಾ ಸಿಂಗ್ ಅವರು ಎರಡು ರೀತಿಯ ಒತ್ತಡದ (Stress) ಬಗ್ಗೆ ವಿವರಿಸುತ್ತಾರೆ. ಒಂದು ಯುಸ್ಟ್ರೆಸ್ ಅನ್ನು ಧನಾತ್ಮಕ ಒತ್ತಡವೆಂದು ಪರಿಗಣಿಸಲಾಗುತ್ತದೆ ಮತ್ತು ಇನ್ನೊಂದು ಒತ್ತಡವನ್ನು ಆರೋಗ್ಯಕ್ಕೆ (Health) ಕೆಟ್ಟದು ಎಂದು ಪರಿಗಣಿಸಲಾಗುತ್ತದೆ. ಅಲ್ಪಾವಧಿಯ ಒತ್ತಡವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ನಿಮ್ಮನ್ನು ಮಾನಸಿಕವಾಗಿ ಬಲಪಡಿಸುತ್ತದೆ ಮತ್ತು ನಿಮ್ಮ ಮೆದುಳಿನ ಚಟುವಟಿಕೆಯನ್ನು ಸುಧಾರಿಸುತ್ತದೆ. ಸ್ವಲ್ಪ ಒತ್ತಡವು ಮೆದುಳನ್ನು (Brain) ಸರಿಯಾದ ರೀತಿಯಲ್ಲಿ ಉತ್ತೇಜಿಸಬಹುದು.
ಯಾವಾಗ್ಲೂ ತಲೆನೋವಾಗ್ತಿದ್ರೆ ಸುಮ್ನಿರ್ಬೇಡಿ, ಯಾವ್ದಾದ್ರೂ ಕಾಯಿಲೆಯಾ ಸೂಚನೆನಾ ತಿಳ್ಕೊಳ್ಳಿ
ಅಲ್ಪಾವಧಿಯ ಒತ್ತಡ ಮತ್ತು ಅದು ನಿಮಗೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದರ ಕುರಿತು ಇನ್ನಷ್ಟು ವಿಚಾರ ತಿಳಿಯೋಣ.
ಧನಾತ್ಮಕ ಒತ್ತಡದ ಕೆಲವು ಪ್ರಯೋಜನಗಳು ಇಲ್ಲಿವೆ:
1. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು: ಒತ್ತಡವು ನಿಮ್ಮನ್ನು ಸೋಂಕಿನಿಂದ ರಕ್ಷಿಸುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಸ್ವಲ್ಪ ಒತ್ತಡವು ದೇಹದಲ್ಲಿ ಇಂಟರ್ಲ್ಯುಕಿನ್ ಅನ್ನು ಉತ್ಪಾದಿಸುತ್ತದೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. 2012ರ ಸ್ಟ್ಯಾನ್‌ಫೋರ್ಡ್ ಸಂಶೋಧನೆಯು ಕಡಿಮೆ ಮಾನಸಿಕ ಒತ್ತಡಕ್ಕೆ ಒಡ್ಡಿಕೊಂಡ ಲ್ಯಾಬ್ ಇಲಿಗಳು ತಮ್ಮ ರಕ್ತಪ್ರವಾಹಗಳಲ್ಲಿ ವಿವಿಧ ರೋಗನಿರೋಧಕ ಕೋಶಗಳನ್ನು ಉತ್ಪಾದಿಸುತ್ತವೆ ಎಂದು ಕಂಡುಹಿಡಿದಿದೆ. ಆದಾಗ್ಯೂ, ದೀರ್ಘಕಾಲದ ಒತ್ತಡವು ಮಾನವ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
2013ರ ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ಮಾಹಿತಿ ಕೇಂದ್ರದ (NCBI) ಸಂಶೋಧನೆಯ ಪ್ರಕಾರ, ಸ್ವಲ್ಪ ಒತ್ತಡವನ್ನು ತೆಗೆದುಕೊಳ್ಳುವಾಗ, ದೇಹವು ಕಾರ್ಟಿಕೊಸ್ಟೆರಾನ್ ಎಂಬ ಒತ್ತಡದ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ, ಇದು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಕಲಿಕೆಯನ್ನು ಸುಲಭಗೊಳಿಸುತ್ತದೆ ಎಂದು ತಿಳಿಸುತ್ತದೆ.
2. ಡಿಎನ್ಎ ಮತ್ತು ಆರ್‌ಎನ್ಎಗಳನ್ನು ರಕ್ಷಿಸುವುದು: ಸೀಮಿತ ಪ್ರಮಾಣದ ಒತ್ತಡವು ದೇಹದಲ್ಲಿ ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಇದು ಡಿಎನ್ಎ ಮತ್ತು ಆರ್ಎನ್ಎಗಳನ್ನು ರಕ್ಷಿಸುತ್ತದೆ. ಆದರೆ ಒತ್ತಡವು ಅಧಿಕವಾಗಿದ್ದರೆ, ಅದರ ಋಣಾತ್ಮಕ ಪರಿಣಾಮವು ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಕ್ಯಾಲಿಫೋರ್ನಿಯಾ ಸ್ಯಾನ್ ಫ್ರಾನ್ಸಿಸ್ಕೋ ವಿಶ್ವವಿದ್ಯಾಲಯದ 2013ರ ಅಧ್ಯಯನವು ದೀರ್ಘಕಾಲದ ಒತ್ತಡವು ನಮ್ಮ ಡಿಎನ್ಎ ಮತ್ತು ಆರ್ಎನ್ಎಗಳ ಆಕ್ಸಿಡೇಟಿವ್ ನಷ್ಟವನ್ನು ಉತ್ತೇಜಿಸುತ್ತದೆ ಎಂದು ಕಂಡುಹಿಡಿದಿದೆ. ಅದೇ ಸಮಯದಲ್ಲಿ, ದೈನಂದಿನ ಜೀವನದಲ್ಲಿ ಮಧ್ಯಮ ಮಟ್ಟದ ಒತ್ತಡವು ವಾಸ್ತವವಾಗಿ ಅದನ್ನು ರಕ್ಷಿಸುತ್ತದೆ.
ಖಿನ್ನತೆಯೇ? ನಿಯಮಿತವಾಗಿ Bhramari Pranayama ಮಾಡಿ, ಪರಿಣಾಮ ನೋಡಿ
3. ಏಕಾಗ್ರತೆಯನ್ನು ಹೆಚ್ಚಿಸುತ್ತದೆ: ಸ್ಟ್ರೆಸ್ ಅಲ್ಪಾವಧಿಗೆ ಒಳ್ಳೆಯದು. ಇದು 'ನ್ಯೂರೋಟ್ರೋಫಿನ್'ಗಳನ್ನು ಉತ್ತೇಜಿಸುತ್ತದೆ. ಇವು ಮೆದುಳಿನ ರಾಸಾಯನಿಕಗಳು, ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ, ಸೃಜನಶೀಲತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
4. ನೀವು ಹೆಚ್ಚು ಹೊಂದಿಕೊಳ್ಳುವಿರಿ: ಒತ್ತಡದ ಸಂದರ್ಭಗಳನ್ನು ನಿಭಾಯಿಸಲು ಕಲಿಯುವುದರಿಂದ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ವಿಷಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಸುಧಾರಿಸಬಹುದು ಎಂದು ಸೈನ್ಸ್ ಆಫ್ ರೆಸಿಲಿಯೆನ್ಸ್ ಅಧ್ಯಯನದ ಪ್ರಕಾರ. ಒತ್ತಡದ ಸಂದರ್ಭಗಳಿಗೆ ಪುನರಾವರ್ತಿತ ಮಾನ್ಯತೆ ದೈಹಿಕ ಮತ್ತು ಮಾನಸಿಕ ನಿಯಂತ್ರಣದ ಅರ್ಥವನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ಒದಗಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.