Health Tips: ರಾತ್ರಿ ನಿದ್ರೆ ಹಾಳ್ಮಾಡುವ ಕಾಲ್ನೋವಿಗೆ ಇಲ್ಲಿದೆ ಪರಿಹಾರ

By Suvarna NewsFirst Published Aug 8, 2022, 1:00 PM IST
Highlights

ಕಾಲು ನೋವು ಕೂಡ ಹಿಂಸೆ ನೀಡುತ್ತದೆ. ಒಂದು ಕಡೆ ನೋವು, ಇನ್ನೊಂದು ಕಡೆ ನಿದ್ರೆ ಭಂಗ. ಈ ಎರಡರಿಂದ ಹೊರಬರಲು ಕಷ್ಟವಾಗುತ್ತದೆ. ಮಾತ್ರೆ ಸೇವನೆ ಬದಲು ಮನೆ ಮದ್ದಿನ ಮೂಲಕ ಸಮಸ್ಯೆ ಬಗೆಹರಿಸಿಕೊಂಡ್ರೆ ಒಳ್ಳೆಯದು. 
 

ರಾತ್ರಿ ಸರಿಯಾಗಿ ನಿದ್ರೆ ಬಂದ್ರೆ ಆರೋಗ್ಯ ಸರಿಯಾಗಿರುತ್ತೆ. ಇದ್ರಲ್ಲಿ ಎರಡು ಮಾತಿಲ್ಲ. ಆದ್ರೆ ನಿದ್ರೆ ಸರಿಯಾಗಿ ಆಗಿಲ್ಲವೆಂದ್ರೆ ಇಡೀ ದಿನ ಕಿರಿಕಿರಿ ತಪ್ಪಿದ್ದಲ್ಲ. ನಿತ್ಯದ ಕೆಲಸಕ್ಕೆ ತೊಂದರೆಯಾಗುತ್ತದೆ. ಇದಲ್ಲದೆ ಅನೇಕ ಆರೋಗ್ಯ ಸಮಸ್ಯೆ ಶುರುವಾಗುತ್ತದೆ. ರಾತ್ರಿ ನಿದ್ರೆ ಭಂಗಕ್ಕೆ ಕಾಲಿನ ನೋವು ಕೂಡ ಕಾರಣ. ಅನೇಕ ಮಹಿಳೆಯರಿಗೆ ಮಧ್ಯರಾತ್ರಿ ವಿಪರೀತ ಕಾಲು ನೋವಿನಿಂದ ಎಚ್ಚರವಾಗುತ್ತದೆ. ಇದರಿಂದಾಗಿ ರಾತ್ರಿಯಿಡೀ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಮೊದಲೇ ಹೇಳಿದಂತೆ ನಿದ್ರೆ ಆಗಿಲ್ಲ ಅಂದ್ಮೇಲೆ ಇಡೀ ದಿನ ಬಳಲಿಕೆ ಸಾಮಾನ್ಯ. ನಿದ್ರೆ ಕೊರತೆಯಿಂದ ಕಣ್ಣಿನ ಕೆಳಗೆ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಮುಖ ಕಾಂತಿ ಕಳೆದುಕೊಳ್ಳುವುದಲ್ಲದೆ ಮುಖದ ಮೇಲೆ ಮೊಡವೆ ಮೂಡಲು ಶುರುವಾಗುತ್ತದೆ. ಕಾಲು ನೋವಿಗೆ ತಕ್ಷಣ ಪರಿಹಾರವೆಂದ್ರೆ ನೋವಿನ ಮಾತ್ರೆ. ಕೆಲವರು ನೋವಿನ ಮಾತ್ರೆ ನುಂಗಿ ಮಲಗಿದ್ರೆ ಮತ್ತೆ ಕೆಲವರು ನಿದ್ರೆ ಮಾತ್ರೆ ಸೇವನೆ ಮಾಡಿ ಮಲಗ್ತಾರೆ. ಇವೆರಡೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಕಾಲು ನೋವಿನಿಂದ ನಿದ್ರೆ ಹಾಳಾಗಬಾರದು ಎಂದಾದ್ರೆ ಕೆಲವು ಉಪಾಯಗಳನ್ನು ಮಾಡ್ಬೇಕು. ಕೆಲ ಮನೆಮದ್ದುಗಳ ಮೂಲಕ ಕಾಲು ನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇಂದು ನಾವು ರಾತ್ರಿ ಕಾಡುವ ಕಾಲು ನೋವಿಗೆ ಮನೆ ಮದ್ದು ಏನು ಎಂಬುದನ್ನು ಹೇಳ್ತೇವೆ.  

ಕಾಲು (Foot) ನೋವು (Pain) ಕಡಿಮೆಯಾಗ್ಬೇಕೆಂದ್ರೆ ಹೇಗೆ ಮಾಡಿ : 
ಸಾಸಿವೆ (Mustard) ಎಣ್ಣೆ :
ರಾತ್ರಿಯಾಗ್ತಿದ್ದಂತೆ ಕಾಲಿನಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ನೀವು ಔಷಧಿಯಾಗಿ ಸಾಸಿವೆ ಎಣ್ಣೆಯನ್ನು ಬಳಸಬಹುದು. ಸಾಸಿವೆ ಎಣ್ಣೆಯನ್ನು ನಿಮ್ಮ ಪಾದಗಳಿಗೆ ಹಚ್ಚಿ ಮಸಾಜ್  ಮಾಡಬೇಕು. ಇದರಿಂದ ನಿಮಗೆ ತಕ್ಷಣ ಪರಿಹಾರ ಸಿಗುತ್ತದೆ. ಕಾಲು ನೋವು ಕಡಿಮೆಯಾಗುತ್ತದೆ. ನಿಮಗೆ ಆರಾಮವಾಗಿ ನಿದ್ರೆ ಮಾಡಲು ನೆರವಾಗುತ್ತದೆ. ಇದು ಹಿಂದಿನಿಂದಲೂ ಬಳಕೆಯಲ್ಲಿರುವ ಮನೆ ಮದ್ದಾಗಿದೆ.

ಪಿರಿಯಡ್ಸ್‌ನಲ್ಲಿ ಬೆಂಬಿಡದೇ ಕಾಡೋ ಬೆನ್ನು ನೋವಿಗೆ ಇಲ್ಲಿದೆ ಪರಿಹಾರ

ಆಪಲ್ ವಿನೆಗರ್ : ಆಪಲ್ ಸೈಡರ್ ವಿನೆಗರ್ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ಕಾಲು ನೋವನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಆಪಲ್ ಸೈಡರ್ ವಿನೆಗರ್ ನೋವು ನಿವಾರಕ ಗುಣಗಳನ್ನು ಹೊಂದಿದೆ.  ಇದು ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ನೀವು ಎರಡು ಚಮಚ ವಿನೆಗರ್‌ನಲ್ಲಿ ಜೇನುತುಪ್ಪವನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ ಮಾಡಿದ್ರೆ ನೋವು ಕಡಿಮೆಯಾಗಿ, ನಿಮ್ಮ ಸಮಸ್ಯೆ ನೀಗುತ್ತದೆ.

ಮೆಂತ್ಯ : ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವ ಸಾಮಾನುಗಳಲ್ಲಿ ಮೆಂತ್ಯ ಕೂಡ ಒಂದು. ಇದನ್ನು ಅನೇಕ ಆಹಾರ ತಯಾರಿಕೆ ಬಳಸ್ತಾರೆ. ಮೆಂತ್ಯದಲ್ಲಿ ಔಷಧಿ ಗುಣವಿದೆ. ಇದು ಕಹಿ ಎನ್ನುವ ಕಾರಣಕ್ಕೆ ಅನೇಕರು ಇದನ್ನು ಬಳಸುವುದಿಲ್ಲ. ಆದ್ರೆ ಮೆಂತ್ಯವು ನೋವು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ನೀವು ಮಾಡಬೇಕಾಗಿರುವುದು ಏನೆಂದ್ರೆ ಒಂದು ಚಮಚ ಮೆಂತ್ಯ ಕಾಳುಗಳನ್ನು ರಾತ್ರಿಯಿಡೀ ನೆನೆಸಿಡಿ. ನಂತರ ನೀವು ಅದನ್ನು ಬೆಳಿಗ್ಗೆ ತಿನ್ನಿ. ಹೀಗೆ ಮಾಡುವುದರಿಂದ ಕಾಲು ನೋವು ನಿವಾರಣೆಯಾಗುತ್ತದೆ.

ನೋವಿಗೆ ಪರಿಹಾರ ನೀಡುತ್ತೆ ಈ Cupping Therapy!

ಯೋಗ (Yoga) : ಇದಲ್ಲದೇ ಯೋಗ ಮಾಡುವುದರಿಂದ ಕಾಲು ನೋವಿಗೆ ಸಾಕಷ್ಟು ಪರಿಹಾರ ಸಿಗುತ್ತದೆ. ಪ್ರತಿ ನಿತ್ಯ ಯೋಗಾಭ್ಯಾಸ ಮಾಡುವುದರಿಂದ ದೇಹ (body) ದಲ್ಲಿ ರಕ್ತಸಂಚಾರ ಚೆನ್ನಾಗಿ ಆಗುತ್ತದೆ ಮತ್ತು ದೇಹದಲ್ಲಿ ಫ್ಲೆಕ್ಸಿಬಿಲಿಟಿ (Flexibility) ಇರುತ್ತದೆ. ರಾತ್ರಿ (Night) ಮಲಗಿದಾಗ ನಿಮ್ಮನ್ನು ಕಾಡುವ ಕಾಲು ನೋವಿಗೆ ಪರಿಹಾರ ಬೇಕು ಎನ್ನುವವರು ಸಾಮಾನ್ಯ ಅರ್ಥ ಪಿಂಚ ಮಯೂರಾಸನ, ಗರುಡಾಸನ, ತ್ರಿಕೋನಾಸನ, ವೀರಭದ್ರಾಸನ ಸೇರಿದಂತೆ ಕಾಲು ನೋವಿಗೆ ಸಂಬಂಧಿಸಿದ ಯೋಗವನ್ನು ಪ್ರತಿ ದಿನ ಮಾಡಬೇಕು. ಆಗ ಸಮಸ್ಯೆ ಕಡಿಮೆಯಾಗುತ್ತದೆ. 
 

click me!