
ನಮ್ಮ ದೇಹದಲ್ಲಿ ಏನಾಗುತ್ತಿರುತ್ತದೆಯೋ ನಮಗೆ ಗೊತ್ತಾಗುವುದೇ ಇಲ್ಲ. ಏನೋ ಸಮಸ್ಯೆ ಆಗುತ್ತಿದೆ ಎನ್ನುವುದು ಅರ್ಥವಾಗುತ್ತದೆಯೇ ವಿನಾ, ನಿಜಕ್ಕೂ ಯಾವ ಭಾಗದಲ್ಲಿ ಏನು ಸಮಸ್ಯೆ ಆಗುತ್ತಿದೆ ಎಂದು ತಿಳಿದುಕೊಳ್ಳಬೇಕು ಎಂದರೆ ವೈದ್ಯರ ಬಳಿ ಓಡಬೇಕು. ಕೆಲವೊಮ್ಮೆ ಏನೂ ಸಮಸ್ಯೆ ಇರುವುದಿಲ್ಲ, ಆಗ ಸುಮ್ಮನೆ ಗಾಬರಿ ಬೀಳಬೇಕಾಗುತ್ತದೆ. ಆದರೆ ಕೆಲವೊಂದು ಗಂಭೀರ ಸಮಸ್ಯೆ ಇದ್ದರೂ ಅದರ ಮೂಲ ತಿಳಿಯದೇ ಕೊನೆಗೆ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ದೇಹದಲ್ಲಿ ಏನು ನಿಜವಾಗಿಯೂ ಸಮಸ್ಯೆ ಇದೆ ಎನ್ನುವುದನ್ನು ಈ ಲಕ್ಷಣಗಳ ಮೂಲಕವೇ ಸುಲಭದಲ್ಲಿ ತಿಳಿದುಕೊಳ್ಳಬಹುದಾಗಿದೆ.
- ಹೆಚ್ಚು ಆಕಳಿಕೆ ಪದೇಪದೇ ಬರುತ್ತಿದೆ ಎಂದರೆ ನಿಮಗೆ ಆಮ್ಲಜನಕದ ಕೊರತೆ ಎಂದರ್ಥ.
- ಅಸಾಮಾನ್ಯ ದುರ್ವಾಸನೆ ಎಂದರೆ ನಿಮಗೆ ಕರುಳಿನ ಸಮಸ್ಯೆ ಇದೆ ಎಂದರ್ಥ.
-ಕಿವಿಗಳಲ್ಲಿ ನಿರಂತರವಾಗಿ ರಿಂಗಣಿಸುತ್ತಿದ್ದರೆ ಅಧಿಕ ರಕ್ತದೊತ್ತಡ ಇದೆ ಎಂದರ್ಥ.
-ಭಾರೀ ಕೂದಲು ಉದುರುತ್ತಿದ್ದರೆ ಕಬ್ಬಿಣದ ಅಂಶದ ಕೊರತೆಯನ್ನು ಸೂಚಿಸುತ್ತದೆ.
- ನಿಮಗೆ ಕಾಲುಗಳು ಊದಿಕೊಂಡಿದ್ದರೆ, ಅದು ಹೃದಯ ಅಥವಾ ಮೂತ್ರಪಿಂಡದ ಸಮಸ್ಯೆಗಳ ಪ್ರತೀಕವಾಗಿದೆ.
- ರಾತ್ರಿ ಸಮಯದಲ್ಲಿ ತುಂಬಾ ದೇಹದ ಭಾಗಗಳಲ್ಲಿ ಸೆಳೆತವು ಖಂಡಿತವಾಗಿಯೂ ಕಡಿಮೆ ಮೆಗ್ನೀಸಿಯಮ್ ಮಟ್ಟವನ್ನು ಸೂಚಿಸುತ್ತದೆ.
-ನಿಶ್ಚೇಷ್ಟಿತ ಬೆರಳುಗಳು ನಿಮ್ಮದಾಗಿದ್ದರೆ, ಅಂದರೆ ಬೆರಳುಗಳಲ್ಲಿ ಶಕ್ತಿಯೇ ಇಲ್ಲ ಎಂದು ಎನ್ನಿಸುತ್ತಿದ್ದರೆ ನಿಮಗೆ B12( ಕೊರತೆ ಇದೆ ಎಂದರ್ಥ
-ಪದೇ ಪದೇ ಸಿಹಿ ತಿನ್ನಬೇಕು ಎನ್ನಿಸಿದರೆ, ನಿಮಗೆ ಮೆಗ್ನೀಷಿಯಮ್ ಕೊರತೆ ಇದೆ ಎಂದರ್ಥ.
- ಮೇಲಿಂದ ಮೇಲೆ ತಲೆನೋವು ಬರುತ್ತಿದ್ದರೆ, ಅದು ದೇಹದಲ್ಲಿ ನಿರ್ಜಲೀಕರಣವನ್ನು ಸೂಚಿಸುತ್ತದೆ
- ನಿಮ್ಮ ಕೈಗಳು ಮತ್ತು ಪಾದಗಳು ಪದೇ ಪದೇ ತಣ್ಣಗಾಗುತ್ತಿದ್ದರೆ ಇದು ನಿಮಗೆ ಇರುವ ಕಳಪೆ ರಕ್ತ ಪರಿಚಲನೆಯನ್ನು ಸೂಚಿಸುತ್ತದೆ.
- ನಾಲಿಗೆ ಉರಿಯುವುದು ಬಿ ವಿಟಮಿನ್ ಕೊರತೆಯನ್ನು ಸೂಚಿಸುತ್ತದೆ
- ನಿಮಗೆ ಯಾವುದಾದ್ದಾದರೂ ಪರಿಮಳ, ವಾಸನೆ ಬರದಿದ್ದರೆ ಅದು ನಿಮಗೆ ಸತುವಿನ ಕೊರತೆಯನ್ನು ಸೂಚಿಸುತ್ತದೆ.
- ಒಸಡುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅದು ವಿಟಮಿನ್ ಸಿ ಕೊರತೆಯನ್ನು ಸೂಚಿಸುತ್ತದೆ.
- ಯಾವಾಗಲೂ ದಣಿದ ಮತ್ತು ಆಲಸ್ಯದಿಂದ ನೀವು ಕೂಡಿದ್ದರೆ ಅದರ ಅರ್ಥ ನಿಮಗೆ ವಿಟಮಿನ್ ಡಿ ಕೊರತೆ ಇದೆ ಎನ್ನುವುದು.
- ಆಗಾಗ್ಗೆ ತಲೆತಿರುಗುವಿಕೆ ಇದ್ದರೆ ನಿಮಗೆ ರಕ್ತದಲ್ಲಿ ಕಡಿಮೆ ಸಕ್ಕರೆ ಮಟ್ಟ ಇದೆ ಎನ್ನುವುದನ್ನು ಸೂಚಿಸುತ್ತದೆ.
- ಹಳದಿ ಕಣ್ಣುಗಳು ಯಕೃತ್ತಿನ ತೊಂದರೆಗಳನ್ನು ಸೂಚಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.