Health Tips: ಕ್ಯಾನ್ಸರ್‌ನಿಂದ ಸಾಯಬಾರ್ದು ಅಂದ್ರೆ ಬೇಗ ಮದುವೆಯಾಗಿ ಅಂತಾರೆ ತಜ್ಞರು

By Suvarna NewsFirst Published Jul 11, 2022, 5:00 PM IST
Highlights

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಅನೇಕ ಬಗೆಯ ಕ್ಯಾನ್ಸರ್ ಪತ್ತೆಯಾಗ್ತಿದೆ. ಹಾಗೆ ಸಂಶೋಧಕರು ಇದಕ್ಕೆ ಸಂಬಂಧಿಸಿದಂತೆ ಕೆಲ ಸಂಶೋಧನೆ ಮಾಡ್ತಿದ್ದಾರೆ. ಒಂದು ಸಂಶೋಧನೆಯಲ್ಲಿ ವಿಭಿನ್ನ ವಿಷ್ಯ ಹೊರ ಬಿದ್ದಿದೆ.
 

ಮದುವೆ ಬರೀ ಸಂಗಾತಿ, ವಂಶಾಭಿವೃದ್ಧಿ, ಪ್ರೀತಿ, ಸಂತೋಷನ್ನು ಮಾತ್ರ ನೀಡೋದಿಲ್ಲ. ಆರೋಗ್ಯವನ್ನೂ ನೀಡುತ್ತದೆ. ಈ ಬಗ್ಗೆ ಸಂಶೋಧನೆಯೊಂದು ನಡೆದಿದೆ. ಸಂಶೋಧನೆಯಲ್ಲಿ ಅವಿವಾಹಿತರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಅವಿವಾಹಿತ ಪುರುಷರಿಗೆ ಹೊಟ್ಟೆ ಕ್ಯಾನ್ಸರ್ ಹೆಚ್ಚಾಗಿ ಕಾಡುತ್ತದೆಯಂತೆ. ಹಾಗೆ ಸಂಗಾತಿ ಜೊತೆ ವಾಸವಾಗಿರುವ ಪುರುಷರು ಕ್ಯಾನ್ಸರ್‌ನಿಂದ ಗುಣಮುಖವಾಗುವುದು ಹೆಚ್ಚು ಎಂದು ಸಂಶೋಧಕರು ಹೇಳಿದ್ದಾರೆ. ಹಾಗೆ ಮದುವೆಯಾದ್ರೆ ಸಣ್ಣ ವಯಸ್ಸಿನಲ್ಲಿ ಸಾವನ್ನಪ್ಪುವ ಅಪಾಯ ಕಡಿಮೆ ಎಂದು ಅನೇಕ ಸಂಶೋಧನೆಗಳು ಹೇಳಿವೆ. ವಿವಾಹಿತ ಪುರುಷರಲ್ಲಿ ಕ್ಯಾನ್ಸರ್ ನಂತ್ರ ಬದುಕುಳಿಯುವಿಕೆಯ ಪ್ರಮಾಣ ತುಂಬಾ ಹೆಚ್ಚಾಗಿದೆ. ಈ ಪಟ್ಟಿಯಲ್ಲಿ ಅವಿವಾಹಿತರು ಎರಡನೇ ಸಾಲಿನಲ್ಲಿ ಬರ್ತಾರೆ. ಮದುವೆಯಾಗಿದ್ದರೂ ಸಂಗಾತಿಯಿಂದ ದೂರವಿರುವವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಬರ್ತಾರೆ. ಮದುವೆಯಾದ ಜನರು ಸಾಮಾನ್ಯವಾಗಿ ಆರ್ಥಿಕವಾಗಿ ಸದೃಢವಾಗಿರ್ತಾರೆ. ಹಾಗೆ ಸಂಗಾತಿಯಿಂದ ಭಾವನಾತ್ಮಕ ಬೆಂಬಲ ಅವರಿಗೆ ಸಿಗುತ್ತದೆ ಎಂದು ಅನ್ಹುಯಿ Medical University ಪ್ರೊಫೆಸರ್ ಅಮನ್ ಕ್ಸು ಹೇಳಿದ್ದಾರೆ. ಹೊಟ್ಟೆ ಕ್ಯಾನ್ಸರ್ ವಿಶ್ವದ ಸಾವಿಗೆ ಮೂರನೇ ಪ್ರಮುಖ ಕಾರಣವಾಗಿದೆ. ಪ್ರೊಫೆಸರ್ ಅಮನ್ ಕ್ಸು ಹಾಗೂ ಸಂಶೋಧಕರ ತಂಡ ಅಮೆರಿಕಾದ 3,647 ಜನರನ್ನು ಅಧ್ಯಯನ ನಡೆಸಿದೆ. ಕ್ಯಾನ್ಸರ್ ಮೊದಲೆರಡು ಹಂತದಲ್ಲಿದ್ದ ಈ ರೋಗಿಗಳಿಗೆ 2010ರಿಂದ 2015ರೊಳಗೆ ಚಿಕಿತ್ಸೆ ನೀಡಲಾಗಿತ್ತು.

ಈ ಸಂಶೋಧನೆ ವರದಿ ಪ್ರಕಾರ, ವಿವಾಹಿತ ರೋಗಿಗಳಲ್ಲಿ ಶೇಕಡಾ 72ರಷ್ಟು ಮಂದಿ ಕ್ಯಾನ್ಸರ್ ನಿಂದ ಗುಣಮುಖರಾಗಿದ್ದರು. ಅದ್ರಲ್ಲೂ ಪತಿಗಿಂತ ಪತ್ನಿ ಬದುಕುಳಿಯುವ ಸಾಧ್ಯತೆ ಹೆಚ್ಚಿತ್ತಂತೆ. ಪತ್ನಿ ಸಾವನ್ನಪ್ಪಿದ್ದ ರೋಗಿಗಳು ಬದುಕುವ ಪ್ರಮಾಣ ಶೇಕಡಾ 51ರಷ್ಟಿತ್ತು ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ: ಸಂತಾನಹರಣ ಶಸ್ತ್ರಚಿಕಿತ್ಸೆಗೆ ಪುರುಷರ ಹಿಂದೇಟು: ಹೆಂಡತಿಯರಿಂದಲೇ ವಿರೋಧ..!

ಹೊಟ್ಟೆ ಕ್ಯಾನ್ಸರ್ ಅಂದ್ರೇನು? : ನಾವು ತಿಂದ ಆಹಾರ ನಮ್ಮ ಹೊಟ್ಟೆ ಸೇರುತ್ತದೆ. ಹೊಟ್ಟೆಯಲ್ಲಿ ಆಹಾರ ಜೀರ್ಣವಾಗುತ್ತದೆ. ಆದ್ರೆ ಕೆಲವೊಮ್ಮೆ ಹೊಟ್ಟೆಯ ಒಳಪದರದಲ್ಲಿ ಕ್ಯಾನ್ಸರ್ ಕೋಶಗಳು ರೂಪುಗೊಳ್ಳುತ್ತವೆ. ಈ ಜೀವಕೋಶಗಳು ಗೆಡ್ಡೆಗಳಾಗಿ ಬೆಳೆಯಬಹುದು. ಇದನ್ನು ಗ್ಯಾಸ್ಟ್ರಿಕ್ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಈ ಕ್ಯಾನ್ಸರ್ ನಿಧಾನವಾಗಿ ಬೆಳೆಯುತ್ತದೆ. 60ರಿಂದ 80 ವರ್ಷದಲ್ಲಿ ಈ ಕ್ಯಾನ್ಸರ್ ದೊಡ್ಡದಾಗಿ ಕಾಣಿಸಿಕೊಳ್ಳುವುದು ಹೆಚ್ಚು. ಈ ಗಡ್ಡೆ ದೇಹದ ಇತರ ಭಾಗಗಳಿಗೆ ಹರಡುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: ಯೋಗದೊಂದಿಗೆ ಸಂಗೀತ: ದೇಹ, ಮನಸ್ಸನ್ನು ಹಗುರಗೊಳಿಸೋ ಕಸರತ್ತು!

ಹೊಟ್ಟೆ ಕ್ಯಾನ್ಸರ್ ಲಕ್ಷಣ : ಆಹಾರ ನುಂಗಲು ತೊಂದರೆ, ತಿಂದಾಗ ಹೊಟ್ಟೆ ಊದಿಕೊಳ್ಳುವುದು, ಸ್ವಲ್ಪ ತಿಂದಾಗಲೇ ಹೊಟ್ಟೆ ತುಂಬಿದ ಅನುಭವ, ಹೊಟ್ಟೆ ಉರಿ, ಅಜೀರ್ಣ, ಸುಸ್ತು, ಹೊಟ್ಟೆ ನೋವು, ಕಾರಣವಿಲ್ಲದೆ ತೂಕ ಇಳಿಕೆ, ವಾಂತಿ ಇವೆಲ್ಲವೂ ಹೊಟ್ಟೆ ಕ್ಯಾನ್ಸರ್ ಲಕ್ಷಣವಾಗಿದೆ.ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (GERD), ಇದರಲ್ಲಿ ಹೊಟ್ಟೆಯ ಆಮ್ಲವು ಆಹಾರದ ಪೈಪ್‌ನಲ್ಲಿ ಮತ್ತೆ ಸಂಗ್ರಹಗೊಳ್ಳುತ್ತದೆ. ತೂಕ ಹೆಚ್ಚಳ, ಆಹಾರದಲ್ಲಿ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಸೇರಿಸದೆ ಇರುವುದು, ಆಹಾರದಲ್ಲಿ ಹೆಚ್ಚು ಉಪ್ಪು ಮತ್ತು ಬಿಸಿಯಾದ ಆಹಾರ ಸೇವನೆ ಇದಕ್ಕೆ ಕಾರಣವಾಗಬಹುದು. ಕರುಳಿನ ಕ್ಯಾನ್ಸರ್ ಗೆ ಕುಟುಂಬದ ಇತಿಹಾಸ ಕೂಡ ಕಾರಣವಾಗಿರುತ್ತದೆ. ನಿಮ್ಮ ಕುಟುಂಬದಲ್ಲಿ ಯಾರಿಗಾದ್ರೂ ಈ ಸಮಸ್ಯೆ ಇದ್ದರೆ ಅದು ನಿಮಗೆ ಕಾಣಿಸಿಕೊಳ್ಳಬಹುದು. ಹೊಟ್ಟೆಯಲ್ಲಿ ದೀರ್ಘಕಾಲ ಸುಡುವ ಅನುಭವ, ಧೂಮಪಾನ ಇವೆಲ್ಲವೂ ಕರುಳಿನ ಕ್ಯಾನ್ಸರ್ ಅಪಾಯವನ್ನು ಇನ್ನಷ್ಟು ಹೆಚ್ಚಿಸಬಹುದು. ಲಕ್ಷಣ ಕಾಣಿಸಿಕೊಳ್ಳುತ್ತಿದ್ದಂತೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿಯಾಗ್ಬೇಕು. ಆರಂಭದಲ್ಲಿಯೇ ರೋಗ ಪತ್ತೆಯಾದ್ರೆ ಅದನ್ನು ಕಡಿಮೆ ಮಾಡುವುದು ಸುಲಭ. ಮೊದಲೇ ಹೇಳಿದಂತೆ ನೀವು ವಿವಾಹಿತರಾಗಿದ್ದು, ಸಂಗಾತಿ ಜೊತೆಗಿದ್ದರೆ ಮತ್ತಷ್ಟು ಬೇಗ ಕ್ಯಾನ್ಸರ್ ಗೆದ್ದು ಬರಬಹುದು. 

click me!