
ಗಂಟೆಗಟ್ಟಲೆ ಕುಳಿತಲ್ಲಿಯೇ ಕುಳಿತಿರುವುದು ಇವತ್ತಿನ ಜನರೇಷನ್‌ನ ದೊಡ್ಡ ಪ್ರಾಬ್ಲೆಮ್. ಕೂತಲ್ಲಿಯೇ ಕೂತು ಮೊಬೈಲ್ ನೋಡುವುದು, ಟಿವಿ ನೋಡುವುದು, ಗೇಮ್ ಆಡುವುದು ಮೊದಲಾದವುಗಳನ್ನೆಲ್ಲಾ ಮಾಡುತ್ತಾರೆ. ಎದ್ದು ಓಡಾಡಿ ಇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಹಿಂಜರಿಯುತ್ತಾರೆ. ಆಲಸೀತನದಿಂದಲೇ ಮನುಷ್ಯನ ಜೀವನ ಕುಳಿತಲ್ಲಿಯೇ ಮುಗಿಯುತ್ತಿದೆ. ಕುಳಿತಲ್ಲಿಯೇ ಕೆಲಸ, ಊಟ, ತಿಂಡಿ ಮಾಡುವ ಪದ್ಧತಿಯಿಂದ ಆರೋಗ್ಯ ಸಮಸ್ಯೆಯೂ ಹೆಚ್ಚುತ್ತಿದೆ. ಇದರಲ್ಲಿ ಮುಖ್ಯವಾದುದು ಸ್ಥೂಲಕಾಯದ ಸಮಸ್ಯೆ.
ಕುಳಿತಲ್ಲಿಯೇ ಗಂಟೆಗಟ್ಟಲೆ ಕುಳಿತರೆ ಆರೋಗ್ಯಕ್ಕೆ ಹಾನಿ
ಕಾಲ ಬದಲಾಗಿದೆ. ಮನುಷ್ಯನ ಜೀವನಶೈಲಿ (Lifestyle) ಯೂ ಬದಲಾಗಿದೆ. ಹೀಗಾಗಿಯೇ ಕಾಯಿಲೆ (Disease) ಯೂ ಹೆಚ್ಚಾಗಿದೆ. ಹಿಂದೆಲ್ಲಾ ಜನರು ದೈಹಿಕ ಚಟುವಟಿಕೆಗಳನ್ನು ಒಳಗೊಂಡ ಕೆಲಸಗಳನ್ನು ಹೆಚ್ಚು ಮಾಡುತ್ತಿದ್ದರು. ಆದರೆ ಕಾಲ ಬದಲಾದಂತೆ ಮನುಷ್ಯನಿಗೆ ಆಲಸೀತನ (Lazy) ಹೆಚ್ಚಿದೆ. ದೈಹಿಕ ಚಟುವಟಿಕೆ ಆಗಿರಲಿ, ಮೈ ಬಗ್ಗಿಸಿ ಕಷ್ಟದ ಕೆಲಸ (Work) ಮಾಡುವುದಕ್ಕೂ ಮನುಷ್ಯ ಹಿಂಜರಿಯುತ್ತಿದ್ದಾನೆ. ರೊಬೋಟ್ (Robot)ನಂತೆ ಕುಳಿತಲ್ಲೇ ಕುಳಿತು ಮಾಡುವ ಕೆಲಸಗಳೇ ಮನುಷ್ಯನಿಗೆ ಹೆಚ್ಚು ಪ್ರಿಯವಾಗುತ್ತಿವೆ. ಬೆಳಗ್ಗಿನಿಂದ ಸಂಜೆಯವರೆಗೆ ಒಂದೇ ಕಡೆ ಕುಳಿತು ಕಂಪ್ಯೂಟರ್ ಮುಂದೆಯೇ ಮಾಡುವ ಕೆಲಸ ಕಣ್ಣು, ಮೆದುಳು, ಸ್ನಾಯುಗಳು, ಎಲ್ಲದಕ್ಕೂ ಹಾನಿಯನ್ನುಂಟು ಮಾಡುತ್ತಿದೆ. ಮುಖ್ಯವಾಗಿ ಒಂದೇ ಸ್ಥಳದಲ್ಲಿ ಕುಳಿತು ಮಾಡುವ ಕೆಲಸ ಆರೋಗ್ಯದ (Health) ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತಿದೆ.
ಈ ರೀತಿ ಆಹಾರ ತಯಾರಿಸಿದ್ರೆ ತೂಕ ಇಳಿಯೋದು ಗ್ಯಾರಂಟಿ!
ಕಂಪ್ಯೂಟರ್‌ನಲ್ಲಿ ಕೆಲಸ ಮಾಡ್ತಿದ್ರೂ ಹೆಚ್ಚುತ್ತೆ ತೂಕ
ಅದರಲ್ಲೂ ಅಚ್ಚರಿಯ ವಿಷಯ ಗೊತ್ತಾ ? ಒಂದೇ ಸ್ಥಳದಲ್ಲಿ 30 ನಿಮಿಷಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವುದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ ಎನ್ನುತ್ತದೆ ಸಂಶೋಧನೆ. ಆದರೆ ಇವತ್ತಿನ ಕಾಲದಲ್ಲಿ ಹೆಚ್ಚಿನ ಕೆಲಸದ ಶೈಲಿಯೂ ಕುಳಿತಲ್ಲೇ ಕುಳಿತು ದಿನಪೂರ್ತಿ ಕೆಲಸ ಮಾಡುವಂತಿರುತ್ತದೆ. ವಿಶ್ವಸಂಸ್ಥೆಯ ಹೊಸ ವರದಿಯ ಪ್ರಕಾರ ಭಾರತದಲ್ಲಿ ಬೊಜ್ಜು ಸ್ಥೂಲಕಾಯದಿಂದ ಬಳಲುತ್ತಿರುವ ವಯಸ್ಕರ ಸಂಖ್ಯೆ 1.38 ಬಿಲಿಯನ್ ಗಿಂತಲೂ ಹೆಚ್ಚಿದೆ ಎಂದು ತಿಳಿದುಬಂದಿದೆ.
2012ರಲ್ಲಿ ಕೇವಲ 25.2 ಮಿಲಿಯನ್ ಇದ್ದ ಈ ಸಂಖ್ಯೆ 2016ರಲ್ಲಿ 34.3 ಮಿಲಿಯನ್‌ಗೆ ಏರಿದೆ. 2012ರಲ್ಲಿ ಶೇ.3.1ರಷ್ಟಿದ್ದ ಸ್ಥೂಲಕಾಯತೆ 2016ರಲ್ಲಿ ಶೇ.3.9ಕ್ಕೆ ಏರಿಕೆಯಾಗಿದೆ. ಹೀಗಾಗಿ ಕುಳಿತಲ್ಲೇ ಕುಳಿತು ಕೆಲಸ ಮಾಡುವ ಶೈಲಿಗೂ ಸ್ಥೂಲಕಾಯತೆಗೂ ನೇರ ಸಂಬಂಧವಿದೆ ಎಂದು ನಂಬಲಾಗಿದೆ.
2030ರ ವೇಳೆಗೆ, ದೇಶದಲ್ಲಿ 27 ದಶಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಸ್ಥೂಲಕಾಯ
ಇನ್ನಷ್ಟು ಗಾಬರಿಯಾಗುವ ವಿಚಾರವೆಂದರೆ ಈ ವರ್ಷದ ಆರಂಭದಲ್ಲಿ, ವಿಶ್ವ ಸ್ಥೂಲಕಾಯ ಒಕ್ಕೂಟವು 2030ರ ವೇಳೆಗೆ, ಭಾರತದಲ್ಲಿ 27 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಸ್ಥೂಲಕಾಯದಿಂದ ಬಳಲುವ ನಿರೀಕ್ಷೆಯಿದೆ ಎಂದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಒಕ್ಕೂಟದ ವರದಿಯ ಪ್ರಕಾರ, ಈ ಅಂಕಿಅಂಶವು ಈ ಪ್ರದೇಶದ ಅರ್ಧಕ್ಕಿಂತ ಹೆಚ್ಚು ಸ್ಥೂಲಕಾಯದ ಮಕ್ಕಳನ್ನು ಮತ್ತು ಜಾಗತಿಕವಾಗಿ ಎಲ್ಲಾ ಸ್ಥೂಲಕಾಯದ ಮಕ್ಕಳಲ್ಲಿ 10 ರಲ್ಲಿ ಒಬ್ಬರನ್ನು ಪ್ರತಿನಿಧಿಸುತ್ತದೆ. ಹೀಗಾಗಿಯೇ ಜನರು ನಿರ್ಧಿಷ್ಟ ಜಾಗದಲ್ಲಿ ಕುಳಿತು ಕೆಲಸ ಮಾಡುವ ಶೈಲಿಯನ್ನು ಅವಾಯ್ಡ್ ಮಾಡಬೇಕಿದೆ.
ತೂಕ ಹೆಚ್ಚಾಗೋ ಭಯದಿಂದ ಕರಿದ ತಿಂಡಿ ತಿನ್ತಿಲ್ವಾ ? ಫ್ಯಾಟ್ ಫ್ರೀ ಸ್ನ್ಯಾಕ್ಸ್ ತಿನ್ನಿ
ಮುಂದಿನ ದಿನಗಳಲ್ಲಿ ಬದಲಾಗಿರುವ ಈ ವರ್ಕಿಂಗ್ ಸ್ಟೈಲ್ ಮತ್ತು ಜೀವನಶೈಲಿಯಿಂದ ಹೆಚ್ಚೆಚ್ಚು ಆರೋಗ್ಯ ಸಮಸ್ಯೆಗಳು ಕಾಡುವ ಭೀತಿ ಎದುರಾಗಿದೆ. ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸಕರೊಬ್ಬರು ವರ್ಷಗಳಲ್ಲಿ ಬದಲಾದ ಜೀವನಶೈಲಿ ಇದಕ್ಕೆ ಕಾರಣ ಎಂದು ಹೇಳಿದರು. ಫರಿದಾಬಾದ್ನ ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆಯ ಮಹಾನಿರ್ದೇಶಕ ಡಾ.ಬ್ರಹ್ಮ್ ದತ್ ಪಾಠಕ್ ಮಾತನಾಡಿ, 'ಇಂದು ನಮ್ಮ ಜೀವನಶೈಲಿ ವಿಶೇಷವಾಗಿ ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿದೆ. ಯಾರೂ ಆರೋಗ್ಯಕರ ಆಹಾರ ತಿನ್ನುವುದಿಲ್ಲ, ವ್ಯಾಯಾಮ ಮಾಡುವುದಿಲ್ಲ. ಇದು ಹಲವು ಸಮಸ್ಯೆಗೆ ಕಾರಣವಾಗ್ತಿದೆ ಎಂದು ತಿಳಿಸಿದ್ದಾರೆ. ಆಹಾರವನ್ನು ಆರ್ಡರ್ ಮಾಡುತ್ತೇವೆ. ಕುಳಿತಲ್ಲೇ ಕುಳಿತು ತಿನ್ನುತ್ತೇವೆ ಇದು ಸ್ಥೂಲಕಾಯತೆಯನ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತೆ ಎಂದು ತಜ್ಞರು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.