ನಕಲಿ ಹೆಸರಿನಲ್ಲಿ ವೀರ್ಯ ದಾನ, 60ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾದ ವ್ಯಕ್ತಿ!

By Vinutha Perla  |  First Published Feb 21, 2023, 3:08 PM IST

ವೀರ್ಯ ದಾನ ಇತ್ತೀಚಿಗೆ ಸಾಮಾನ್ಯ ವಿಷಯವಾಗಿದೆ. ಆದರೆ ಕೆಲವೊಬ್ಬರು ಇದನ್ನೇ ಬಿಸಿನೆಸ್‌ನಂತೆ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾದಲ್ಲೊಬ್ಬ ವ್ಯಕ್ತಿ ನಕಲಿ ಹೆಸರುಗಳನ್ನು ಬಳಸಿಕೊಂಡು 60ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗಿದ್ದಾನೆ.


ವಿವಿಧ ನಕಲಿ ಹೆಸರುಗಳನ್ನು ಬಳಸಿಕೊಂಡು 60ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾದ ವೀರ್ಯ ದಾನಿಯ ಅಸಲೀಯತ್ತು ಎಲ್ಲಾ ಮಕ್ಕಳ ಮುಖ ಚಹರೆ ಒಂದೇ ರೀತಿಯಿದ್ದ ಕಾರಣ ಬಯಲಾಗಿದೆ.  ಆಸ್ಟ್ರೇಲಿಯಾದಿಂದ ಬಂದಿರುವ ಹೆಸರಿಲ್ಲದ ವ್ಯಕ್ತಿ, LGBTQ+ ಸಮುದಾಯದ ಸದಸ್ಯರಿಗೆ ವೀರ್ಯವನ್ನು ದಾನ ಮಾಡಲು ನಾಲ್ಕು ವಿಭಿನ್ನ ಗುಪ್ತನಾಮಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ಎಲ್ಲಾ ಮಕ್ಕಳು ಒಂದೇ ರೀತಿ ಕಾಣುತ್ತಾರೆ ಎಂದು ಕೆಲವು ಪೋಷಕರು ಅರಿತುಕೊಂಡ ನಂತರ 60ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾದ ವೀರ್ಯ ದಾನಿಯ ಅಸಲೀಯತ್ತು ಬಹಿರಂಗಗೊಂಡಿದೆ.

ಮಕ್ಕಳು (Children) ಮುಖ ಒಂದೇ ರೀತಿ ಇರುವುದನ್ನು ಗಮನಿಸಿ, ಪೋಷಕರು (Parents) ಆಸ್ಟ್ರೇಲಿಯಾದಾದ್ಯಂತ IVF ಕ್ಲಿನಿಕ್‌ಗಳಿಗೆ ಕರೆ ಮಾಡಿದರು. ದಾನಿಯು ಸಿಡ್ನಿಯಲ್ಲಿ ಫರ್ಟಿಲಿಟಿ ಫಸ್ಟ್ ಅನ್ನು ಮಾತ್ರ ಬಳಸಿದ್ದಾನೆ ಎಂದು ಅವರು ಕಂಡುಕೊಂಡರು. ಆದರೆ ಫೇಸ್‌ಬುಕ್‌ನಲ್ಲಿ ಅವರ ವೀರ್ಯ (Sperm)ವನ್ನು ಮಾರಾಟ ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಂಡರು. ಆಸ್ಟ್ರೇಲಿಯಾದಲ್ಲಿ ಮಾನವ ಅಂಗಾಂಶ ಕಾಯಿದೆಯ ಅಡಿಯಲ್ಲಿ, ಮಾನವ ವೀರ್ಯಕ್ಕಾಗಿ ಪಾವತಿಸುವುದು ಅಥವಾ ಉಡುಗೊರೆ (Gift)ಗಳನ್ನು ನೀಡುವುದು ಕಾನೂನುಬಾಹಿರವಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಅಪರಾಧವು 15 ವರ್ಷಗಳ ವರೆಗೆ ಜೈಲು ಶಿಕ್ಷೆ (Punishment)ಯನ್ನು ಹೊಂದಿರುತ್ತದೆ. 

Latest Videos

undefined

ಹೆಣ್ಣಿನ್ನು ರಿಲ್ಯಾಕ್ಸ್ ಆಗಬಹುದು, ಗಂಡಿಗೇ ಬಂದಿದೆ ಗರ್ಭ ನಿರೋಧಕ ಮಾತ್ರೆ!

ವೀರ್ಯ ದಾನ ಮಾಡಿ..ದುಡ್ಡು ಗಳಿಸಿ, ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ಕೊಟ್ಟ ಚೀನಾ
ಚೀನಾದಲ್ಲಿ ಜನಸಂಖ್ಯೆಯು ಕಡಿಮೆಯಾಗುತ್ತಿರುವುದು ಈಗ ರಹಸ್ಯವಾಗಿ ಉಳಿದಿಲ್ಲ. ಹೀಗಾಗಿ ಇದು ಚೀನಾದ ಆತಂಕಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಚೀನಾದಲ್ಲಿ ವಯಸ್ಸಾದವರ ಜನಸಂಖ್ಯೆಯು ಹೆಚ್ಚುತ್ತಿದೆ. ಹೀಗಾಗಿ ಒಟ್ಟು ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ತಿದೆ. ಹಲವಾರು ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಜನಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ವೀರ್ಯ ದಾನ ಮಾಡುವಂತೆ ಸ್ಪರ್ಮ್‌ ಬ್ಯಾಂಕ್‌ಗಳು ಮನವಿ ಮಾಡಿಕೊಂಡಿವೆ.

ದೇಶದ ಕ್ಷೀಣಿಸುತ್ತಿರುವ ಜನನ ದರವನ್ನು ಎದುರಿಸಲು ಸಹಾಯ ಮಾಡಲು ವಿದ್ಯಾರ್ಥಿಗಳನ್ನು (Students) ಕೇಳಲಾಗುತ್ತದೆ. ಇದೇ ಅಭಿಯಾನ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು ಟಾಕ್ ಆಫ್ ಟೌನ್ ಆಗಿದೆ. ಚೀನಾದ ರಾಜಧಾನಿ ಬೀಜಿಂಗ್ ಮತ್ತು ಶಾಂಘೈ ಸೇರಿದಂತೆ ದೇಶಾದ್ಯಂತ ವೀರ್ಯ ದಾನ ಕ್ಲಿನಿಕ್‌ಗಳು ವೀರ್ಯ ದಾನಕ್ಕೆ (Sperm donate) ವಿದ್ಯಾರ್ಥಿಗಳನ್ನು ಒತ್ತಾಯಿಸಿವೆ.

ಅಬ್ಬಬ್ಬಾ..31ನೇ ವಯಸ್ಸಿನಲ್ಲಿ 57 ಮಕ್ಕಳ ತಂದೆ, ತಿಂಗಳಿಗೆ ಐದು ಮಹಿಳೆಯರನ್ನು ಪ್ರೆಗ್ನೆಂಟ್ ಮಾಡ್ತಾನಂತೆ!

ಫೆಬ್ರವರಿ 2ರಂದು, ನೈಋತ್ಯ ಚೀನಾದ ಯುನ್ನಾನ್ ಹ್ಯೂಮನ್ ಸ್ಪರ್ಮ್ ಬ್ಯಾಂಕ್ ಮೊದಲ ಬಾರಿಗೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ವೀರ್ಯ ದಾನಕ್ಕಾಗಿ ಮನವಿ ಮಾಡಿತು. ಮನವಿಯ ಸಮಯದಲ್ಲಿ, ಅವರು ವೀರ್ಯ ದಾನದ ಪ್ರಯೋಜನಗಳ ವಿಧಗಳು, ನೋಂದಣಿಯ ಷರತ್ತುಗಳು ಮತ್ತು ಸಬ್ಸಿಡಿಗಳ ಬಗ್ಗೆ ಚರ್ಚಿಸಿದರು. ಗ್ಲೋಬಲ್ ಟೈಮ್ಸ್‌ನ ವರದಿಯ ಪ್ರಕಾರ, ಜನರು ಈ ಕೊಡುಗೆಯ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳು ಇದನ್ನು ಚರ್ಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. 2022ರಲ್ಲಿ ಚೀನಾದ ಜನಸಂಖ್ಯೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಇದು ಆರು ದಶಕಗಳಲ್ಲಿ ಮೊದಲ ಕುಸಿತವಾಗಿದೆ. 61 ವರ್ಷಗಳಲ್ಲಿ ಮೊದಲ ಬಾರಿಗೆ ಚೀನಾದ ಜನಸಂಖ್ಯೆಯು (Population) 2022 ರಲ್ಲಿ 850,000 ರಷ್ಟು ಕಡಿಮೆಯಾಗಿದೆ ಎಂದು ಚೀನಾದ ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ (NBS) ಮಾಹಿತಿ ನೀಡಿದೆ.

ಯುನ್ನಾನ್‌ನ ವೀರ್ಯ ಬ್ಯಾಂಕ್‌ನ ಪ್ರಕಾರ, ದಾನಿಗಳು 20ರಿಂದ 40ರ ನಡುವಿನ ವಯಸ್ಸಿನವರಾಗಿರಬೇಕು ಮತ್ತು 165 ಸೆಂ.ಮೀ ಗಿಂತ ಹೆಚ್ಚಿನ ಎತ್ತರವನ್ನು ಹೊಂದಿರಬೇಕು, ಯಾವುದೇ ಸಾಂಕ್ರಾಮಿಕ ಅಥವಾ ಅನುವಂಶಿಕ ಕಾಯಿಲೆಗಳನ್ನು (Disease) ಹೊಂದಿರಬಾರದು ಎಂದು ತಿಳಿಸಲಾಗಿದೆ.

click me!