Health Tips : ಕುಡಿದ ನಶೆಯಂತೆ ಏರುವ ಈ ಖಾಯಿಲೆ ಯಾವ್ದು ಗೊತ್ತಾ?

Published : Feb 21, 2023, 02:58 PM ISTUpdated : Feb 21, 2023, 03:01 PM IST
Health Tips : ಕುಡಿದ ನಶೆಯಂತೆ ಏರುವ ಈ ಖಾಯಿಲೆ ಯಾವ್ದು ಗೊತ್ತಾ?

ಸಾರಾಂಶ

ಮದ್ಯಪಾನ ಮಾಡಿದಾಗ ಅಮಲೇರೋದು ಸಾಮಾನ್ಯ ಸಂಗತಿ. ಕೆಲವರಿಗೆ ಆಲ್ಕೋಹಾಲ್ ಮುಟ್ಟದೆ ಮತ್ತೇರಿರುತ್ತದೆ. ಇದಕ್ಕೆ ಕಾರಣ ನಮ್ಮ ಕರುಳಿನ ಸೋಂಕು. ನಾವಿಂದು ಈ ಅಪರೂಪದ ಖಾಯಿಲೆ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.  

ಮದ್ಯಪಾನಿಗಳ ಸಂಖ್ಯೆ ಇತ್ತೀಚಿಗೆ ಹೆಚ್ಚಾಗಿದೆ. ಡ್ರಿಂಕ್ ಆಂಡ್ ಡ್ರೈವ್ ವಿರುದ್ಧ ಕಠಿಣ ಕಾನೂನಿದ್ದರೂ ಜನರು ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡ್ತಾರೆ. ಕೆಲವರು ಇಷ್ಟಪಟ್ಟು ಕುಡಿದ್ರೆ ಮತ್ತೆ ಕೆಲವರು ಒತ್ತಾಯಕ್ಕೆ ಮದ್ಯ ಸೇವನೆ ಮಾಡ್ತಾರೆ. ಕುಡಿಯೋಕೆ ಕಾರಣ ಏನೇ ಇರಲಿ, ಕುಡಿದ್ಮೇಲೆ ನಶೆ ಏರೋದು ಮಾಮೂಲಿ. ಆದ್ರೆ ನಾವೊಂದು ವಿಷ್ಯ ಹೇಳ್ತೆವೆ ನಿಮಗೆ. ಒಂದು ಹನಿ ಕೂಡ ನೀವು ಮದ್ಯ ಸೇವನೆ ಮಾಡದೆ ನಿಮಗೆ ಮದ್ಯ ಸೇವನೆ ಮಾಡಿದಂತಹ ನಶೆ ಏರಿದ್ರೆ? ಛೇ ಛೇ ಅದು ಹೇಗಾಗೋಕೆ ಸಾಧ್ಯ ಅಂತ ನೀವು ಕೇಳ್ಬಹುದು. ಆದ್ರೆ ಇಂಥ ಒಂದು ಖಾಯಿಲೆಯಿದೆ. ಅದನ್ನೇ ಆಟೋ ಬ್ರೂವರಿ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. 

ವರ್ಷಗಳ ಹಿಂದೆ ನ್ಯೂಯಾರ್ಕ್‌ (New York) ನ ಬಫಲೋ ಪ್ರದೇಶದ 35 ವರ್ಷದ ಮಹಿಳೆಯೊಬ್ಬಳನ್ನು ಡ್ರಿಂಕ್ ಆಂಡ್ ಡ್ರೈವ್ ಪ್ರಕಣದಲ್ಲಿ ಬಂಧಿಸಲಾಗಿತ್ತು. ಪ್ರಕಣದ ವಿಚಾರಣೆ ನಂತ್ರ ಆಕೆಯನ್ನು ಬಿಡಲಾಗಿತ್ತು. ಆಕೆಯನ್ನು ಬಿಡುಗಡೆಗೊಳಿಸಲು ಕಾರಣವಾಗಿದ್ದು ಆಟೋ ಬ್ರೂವರಿ ಸಿಂಡ್ರೋಮ್ (Auto Brewery Syndrome). ಮಹಿಳೆ ಈ ಖಾಯಿಲೆಯಿಂದ ಬಳಲುತ್ತಿದ್ದಳಂತೆ. ಆಕೆಗೆ ದೇಹದಲ್ಲಿ ಮದ್ಯ ಸೇವನೆ ಮಾಡದೆ ಆಲ್ಕೋಹಾಲ್ (Alcohol) ಉತ್ಪತ್ತಿಯಾಗುತ್ತದೆಯಂತೆ. ಆ ದಿನ ಕೂಡ ಆಕೆ ರಕ್ತದಲ್ಲಿ ಶೇಕಡಾ 0.33ರಷ್ಟು ಆಲ್ಕೋಹಾಲ್ ಪತ್ತೆಯಾಗಿತ್ತು. 

DIET TIPS : ಮಾಂಸಹಾರದ ಡಯಟ್ ಶುರು ಮಾಡುವ ಮುನ್ನ ಇದು ತಿಳಿದಿರಲಿ

ಆಟೋ ಬ್ರೂವರಿ ಸಿಂಡ್ರೋಮ್ ಎಂದರೇನು? : ಇದು ಒಂದು ರೀತಿಯ ಕರುಳಿನ ಸೋಂಕು. ಈ ರೋಗಲಕ್ಷಣದಿಂದ ಬಳಲುತ್ತಿರುವ ಜನರು ಸಾಮಾನ್ಯ ಆಹಾರವನ್ನು ಸೇವಿಸಿದ ನಂತರವೂ ಸರಾಸರಿಗಿಂತ ಹೆಚ್ಚು ಯೀಸ್ಟ್ ಅನ್ನು ಉತ್ಪಾದಿಸುತ್ತಾರೆ. ಇದು ಆಲ್ಕೋಹಾಲ್ ಆಗಿ ಪರಿವರ್ತನೆಯಾಗುವ ಸಣ್ಣ ಕರುಳಿನಲ್ಲಿ ಸಂಗ್ರಹವಾಗುತ್ತದೆ. ಇಲ್ಲಿಂದ ನೇರವಾಗಿ ರಕ್ತದಲ್ಲಿ ಬೆರೆಯುತ್ತದೆ. ರಕ್ತವನ್ನು ಪರೀಕ್ಷಿಸಿದ ನಂತರ ದೇಹದಲ್ಲಿ ಆಲ್ಕೋಹಾಲ್ ಪ್ರಮಾಣವು ಅಧಿಕವಾಗಿರುವುದು ಪತ್ತೆಯಾಗುತ್ತದೆ. ಈ ರೋಗಲಕ್ಷಣವನ್ನು ಗಟ್ ಫರ್ಮೆಂಟೇಶನ್ ಸಿಂಡ್ರೋಮ್ ಎಂದೂ ಕರೆಯಲಾಗುತ್ತದೆ. ಇದು ಅಪರೂಪದ ಸಮಸ್ಯೆ. 

ಆಟೋ ಬ್ರೂವರಿ ಸಿಂಡ್ರೋಮ್ ಲಕ್ಷಣ ಯಾವುದು? : ಆಟೋ ಬ್ರೂವರಿ ಸಿಂಡ್ರೋಮ್ ದಿಂದ ಬಳಲುತ್ತಿರುವ ಜನರು ಸಾರ್ವಕಾಲಿಕ ಮಾದಕತೆಯನ್ನು ಅನುಭವಿಸುತ್ತಾನೆ. ತಲೆತಿರುಗುವಿಕೆ, ತಲೆನೋವು, ಗೊಂದಲ, ಕೆಂಪು ಚರ್ಮ, ವಾಕರಿಕೆ ಮತ್ತು ವಾಂತಿ, ಒಣ ಬಾಯಿ, ಸುಸ್ತು, ಜ್ಞಾಪಕಶಕ್ತಿ ಸಮಸ್ಯೆಗಳು ಕಂಡುಬರುತ್ತವೆ. ವ್ಯಕ್ತಿಯ ಮನಸ್ಥಿತಿಯಲ್ಲೂ ಬದಲಾವಣೆ ಕಂಡುಬರುತ್ತದೆ.

ಯಾರನ್ನು ಹೆಚ್ಚಾಗಿ ಕಾಡುತ್ತೆ ಈ ರೋಗ : ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ, ಆಲ್ಕೊಹಾಲ್ಯುಕ್ತವಲ್ಲದ ಸ್ಟೀಟೊಹೆಪಟೈಟಿಸ್ ನಂತಹ ಯಕೃತ್ತಿನ ಸಮಸ್ಯೆಗಳನ್ನು ಹೊಂದಿರುವ ಜನರಲ್ಲಿ, ಕರುಳಿನ ಸಮಸ್ಯೆ ಇರುವವರು, ಗ್ಯಾಸ್ಟ್ರೋಪಾರೆಸಿಸ್, ಮಧುಮೇಹಿಗಳಲ್ಲಿ ಆಟೋ ಬ್ರೂವರಿ ಸಿಂಡ್ರೋಮ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. 

Health Tips : ಸದ್ದಿಲ್ಲದೆ ಬರುವ ಈ ಖಾಯಿಲೆ ತುಂಬಾ ಅಪಾಯಕಾರಿ

ಆಟೋ ಬ್ರೂವರಿ ಸಿಂಡ್ರೋಮ್ ಗೆ ಚಿಕಿತ್ಸೆ : ಕಡಿಮೆ ಕಾರ್ಬ್ ಆಹಾರ ಸೇವನೆಯಿಂದ ಈ ರೋಗ ಲಕ್ಷಣವನ್ನು ನಿಯಂತ್ರಿಸಬಹುದಾಗಿದೆ. ಇದು ಭಯಪಡುವಂತಹ ಖಾಯಿಲೆಯಲ್ಲ. ಆಟೋ ಬ್ರೂವರಿ ಸಿಂಡ್ರೋಮ್ ವನ್ನು ಗುಣಪಡಿಸಬಹುದು. ಕಾರ್ಬೋಹೈಡ್ರೇಟ್‌ಗಳ ಪ್ರಮಾಣವನ್ನು ಕಡಿಮೆ ಮಾಡಲು ವೈದ್ಯರು ಸಲಹೆ ನೀಡಬಹುದು. ಕರುಳಿನಲ್ಲಿ ಶಿಲೀಂಧ್ರದ ಸಮತೋಲನವನ್ನು ಕಾಪಾಡಲು ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಆಂಟಿಫಂಗಲ್ ಔಷಧಿಗಳನ್ನು ವೈದ್ಯರು ನೀಡುವ ಸಾಧ್ಯತೆಯಿರುತ್ತದೆ. ಔಷಧಿಗಳ ಸೇವನೆ ಜೊತೆಗೆ ಆಹಾರದಲ್ಲಿ ನಿಯಂತ್ರಣ ಮುಖ್ಯವಾಗುತ್ತದೆ. ಕೆಲ ಆಹಾರದಿಂದ ದೂರವಿರಬೇಕು. ಸಕ್ಕರೆ, ಕಾರ್ಬೋಹೈಡ್ರೇಟ್ ಮತ್ತು ಮದ್ಯ ಸೇವನೆಯನ್ನು ಸಂಪೂರ್ಣ ನಿಲ್ಲಿಸುವುದು ಒಳ್ಳೆಯದು. ಅಲ್ಲದೆ ಕಾರ್ನ್ ಸಿರಪ್, ಬಿಳಿ ಬ್ರೆಡ್ ಮತ್ತು ಪಾಸ್ತಾ, ಬಿಳಿ ಅಕ್ಕಿ, ಆಲೂಗೆಡ್ಡೆ ಚಿಪ್ಸ್,ಗ್ಲೂಕೋಸ್ ನಿಂದ ದೂರವಿರಬೇಕು.

ಆಟೋ ಬ್ರೂವರಿ ಸಿಂಡ್ರೋಮ್ ಗೆ ಯಾವ ಆಹಾರ ಬೆಸ್ಟ್ : ಕಂದು ಅಕ್ಕಿ, ತಾಜಾ ಬೇಯಿಸಿದ ತರಕಾರಿಗಳು, ಡ್ರೈ ಫ್ರೂಟ್ಸ್, ಓಟ್ಸ್, ಬಾರ್ಲಿ, ನವಣೆ ಅಕ್ಕಿಯನ್ನು ನೀವು ಸೇವನೆ ಮಾಡಬೇಕು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ