RIP Spandana Vijay: ಕೋವಿಡ್‌ ಬಳಿಕ ಹೃದಯಾಘಾತದಲ್ಲಿ ದಿಢೀರ್‌ ಏರಿಕೆ, ಐಸಿಎಂಆರ್‌ ಅಧ್ಯಯನ!

By Santosh Naik  |  First Published Aug 7, 2023, 1:01 PM IST

Spandana Vijay Raghavendra No More: ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.  ಕೋವಿಡ್‌ ಬಳಿಕ ಹೃದಯಾಘಾತದಲ್ಲಿ ದಿಢೀರ್‌ ಏರಿಕೆ ಆಗಿರುವುದು ಆಘಾತಕಾರಿ ಸಂಗತಿಯಾಗಿದೆ.


ಬೆಂಗಳೂರು (ಆ.7): ಪುನೀತ್‌ ರಾಜ್‌ಕುಮಾರ್‌.. ಚಿರಂಜೀವಿ ಸರ್ಜಾ...ಶೇನ್‌ ವಾರ್ನ್‌ ಈಗ ಸ್ಪಂದನಾ ವಿಜಯ್‌ ರಾಘವೇಂದ್ರ. ಇವರೆಲ್ಲರಿಗೂ ಇರುವ ಸಾಮ್ಯತೆಯೇನೆಂದರೆ ಎಲ್ಲರೂ ಕೂಡ ಹೃದಯಾಘಾತದಿಂದ ಸಾವು ಕಂಡವರು. ಪುನೀತ್‌ ರಾಜ್‌ಕುಮಾರ್‌ ಹಾಗೂ ಚಿರಂಜೀವಿ ಸರ್ಜಾ ಕೋವಿಡ್‌ ಸುಳಿಯ ನಡುವೆಯೇ ಹೃದಯಾಘಾತದಿಂದ ಸಾವು ಕಂಡಿದ್ದರೆ, ಶೇನ್‌ ವಾರ್ನ್‌ ವರ್ಷದಿಂದೀಚೆಗೆ ಸಾವು ಕಂಡಿದ್ದಾರೆ. ಈಗ ಸ್ಪಂದನಾ ವಿಜಯ್‌ ರಾಘವೇಂದ್ರ ಕೂಡ ಹೃದಯಾಘಾತದಲ್ಲಿ ಸಾವು ಕಂಡದ್ದಾರೆ. ಅದರಲ್ಲೂ ಯುವಕರಲ್ಲಿ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಮಾಣ ತೀರಾ ಏರಿಕೆಯಾಗಿದೆ. ಹೃದಯಾಘಾತಗಳ ಪ್ರಮಾಣ ಏರಿಕೆ ಆಗುತ್ತಿರುವ ಟ್ರೆಂಡ್‌ಅನ್ನು ಗಮನಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ಐಸಿಎಂಆರ್‌) ಈ ಕುರಿತಾಗಿ ಈಗಾಗಲೇ ಅಧ್ಯಯನವನ್ನೂ ಆರಂಭಿಸಿದೆ. ಕೋವಿಡ್‌ ನಂತರ ಹೃದಯಾಘಾತದ ಸಂಖ್ಯೆಯಲ್ಲಿ ಏರಿಕೆ ಆಗಿತ್ತಿರೋದಕ್ಕೆ ಕಾರಣವೇನು ಅನ್ನೋದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡಿದೆ.

ಕೋವಿಡ್‌ ಅಲೆಗಳು ದೇಶದಲ್ಲಿ ಭೀಕರ ಪರಿಣಾಮ ಉಂಟು ಮಾಡಿತ್ತು. ಬಹುತೇಕ ಕೋವಿಡ್‌ ಸೋಂಕಿಗೆ ತುತ್ತಾಗದೇ ಇದ್ದವರು ಬಹಳ ಕಡಿಮೆ. ಆದರೆ, ಕೋವಿಡ್‌ ನಂತರ ಹೃದಯಾಘಾತದ ಸಮಸ್ಯೆ ಏರಿಕೆ ಆಗೋದಕ್ಕೆ ಕಾರಣವೇನು ಅನ್ನೋದು ಇನ್ನೂ ಅರ್ಥವಾಗಿಲ್ಲ. ಕೆಲವರು ಕೋವಿಡ್‌ ಲಸಿಕೆ ಇದಕ್ಕೆ ಕಾರಣ ಎಂದರೂ, ಐಸಿಎಂಆರ್‌ ಲಸಿಕೆಯಿಂದ ಹೃದಯಾಘಾತ ಆಗುವ ಪ್ರಮಾಣ ಬಹಳ ಕಡಿಮೆ ಎಂದಿದೆ. ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಕೋವಿಡ್‌ ಪಾಸಿಟಿವಿಟಿ ಪ್ರಮಾಣ ಶೇ. 1ಕ್ಕಿಂತ ಕಡಿಮೆ ಪ್ರಮಾಣದಿಂದ ಶೇ. 2.73ರ ಪ್ರಮಾಣಕ್ಕೆ ಏರಿತ್ತು. ಆದರೆ, ಕೋವಿಡ್‌ ಸೋಂಕಿಗಿಂತ ಹೆಚ್ಚಾಗಿ, ಕೋವಿಡ್‌ ನಂತರದಲ್ಲಿ ಕಾರ್ಡಿಯಾಕ್‌ ಅರೆಸ್ಟ್‌ ಅಥವಾ ಹೃದಯಸ್ತಂಭನದಂಥ ಕೇಸ್‌ಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಕಾರ್ಡಿಯಾಕ್‌ ಅರೆಸ್ಟ್‌ ಹಾಗೂ ಹಾರ್ಟ್‌ ಅಟ್ಯಾಕ್‌ನಂಥ ಕೇಸ್‌ಗಳು ಏರಿಕೆ ಆಗಿರುವ ನಡುವೆ ಭಾರತದ ಅಗ್ರ ಹೆಲ್ತ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌ ಆಗಿರುವ ಐಸಿಎಂಆರ್‌ ಈ ಬಗ್ಗೆ ಅಧ್ಯಯನ ಮಾಡಲು ಮುಂದಾಗಿದೆ. ಹೃದಯಾಘಾತ, ಹೃದಯಸ್ತಂಭನದಂಥ ಕೇಸ್‌ಗಳಲ್ಲಿ ದಿಢೀರ್‌ ಏರಿಕೆಯಾಗಲು ಕಾರಣವೇನು ಅನ್ನೋದರ ಬಗ್ಗೆ ಈ ಅಧ್ಯಯನ ಗಮನ ನೀಡಲಿದೆ.

ಮುಂದಿನ ತಿಂಗಳ ವೇಳೆಗೆ ಐಸಿಎಂಆರ್‌ ಈ ಅಧ್ಯಯನವನ್ನು ಪೂರ್ಣ ಮಾಡುವ ಸಾಧ್ಯತೆ ಇದ್ದು, ಇತ್ತೀಚಿನ ವರ್ಷಗಳಲ್ಲಿ ಆಗಿರುವ ಹೃದಯಘಾತ ಹಾಗೂ ಹೃದಯಸ್ತಂಭನದ ಕೇಸ್‌ಗಳ ಮಾಹಿತಿಯನ್ನು ಪಡೆದು ವರದಿ ನೀಡಲಿದೆ. ದೆಹಲಿ ಏಮ್ಸ್‌ ಆಸ್ಪತ್ರೆಯಲ್ಲಿ ಸಂಶೋಧಕರು ಹಾರ್ಟ್‌ ಅಟ್ಯಾಕ್‌ ಕೇಸ್‌ಗಳ ಡೇಟಾಗಳ ಪರಿಶೀಲನೆ ಮಾಡಲಿದ್ದಾರೆ. 'ಈ ವಿಷಯದ ಬಗ್ಗೆ ವಿಜ್ಞಾನಿಗಳೊಂದಿಗೆ ಮೂರು ಸಭೆಗಳನ್ನು ನಡೆಸಿದ್ದೇನೆ ಮತ್ತು ಐಸಿಎಂಆರ್ ಅಧ್ಯಯನವನ್ನು ಪ್ರಾರಂಭಿಸಿದೆ. ವ್ಯಾಕ್ಸಿನೇಷನ್ ಮತ್ತು ಕೊಮೊರ್ಬಿಡಿಟಿಯ ಡೇಟಾ ನಮ್ಮ ಬಳಿ ಇದೆ. ಇವುಗಳನ್ನು ಅಧ್ಯಯನ ಮಾಡಿ ಸಂಶೋಧಕರು ವರದಿ ನೀಡಲಿದ್ದಾರೆ' ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯಾ ಲೋಕಸಭೆಯಲ್ಲಿ ತಿಳಿಸಿದ್ದರು.

Tap to resize

Latest Videos

ಚಿನ್ನಾರಿಮುತ್ತನ ಚಿನ್ನದಂಥ ಕುಟುಂಬಕ್ಕೆ ಬರಸಿಡಿಲು, ಸ್ಪಂದನಾ-ವಿಜಯ್‌ ಜೋಡಿಯ ಸುಂದರ ಚಿತ್ರಗಳು!

ಲಸಿಕೆ ಕಾರಣವಲ್ಲ: ಸಂಶೋಧಕರು ಈವರೆಗೂ ನೀಡಿರುವ ಮಾಹಿತಿಯ ಪ್ರಕಾರ, ಕೋವಿಡ್‌-19 ಲಸಿಕೆಗಳಿಂದ ಹೃದಯಾಘಾತದಲ್ಲಿ ದಿಢೀರ್‌ ಏರಿಕೆ ಆಗುತ್ತಿದೆ ಎನ್ನುವುದಕ್ಕೆ ಯಾವುದೇ ದೃಢವಾದ ದಾಖಲೆಗಳಿಲ್ಲ. ಆದರೆ, ಕೋವಿಡ್‌ ನಂತರ ಕಾರ್ಡಿಯಾಕ್‌ ಅರೆಸ್ಟ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಿರುವುದು ನಿಜ. ದೀರ್ಘಾವಧಿಯ ಕೋವಿಡ್‌ನ ಪ್ರಮುಖ ಲಕ್ಷಣವೆಂದರೆ ಅದು ಜನರ ಹೃದಯದ ಮೇಲೆ ಸಾಕಷ್ಟು ಒತ್ತಡ ಉಂಟು ಮಾಡಿರುವುದು' ಎಂದು ಹೇಳಿದ್ದಾರೆ. ಇದರ ನಡುವೆ ದೇಶದ ಅಗ್ರ ಹೃದ್ರೋಗ ತಜ್ಞರು ಕೂಡ ಜಿಮ್‌ನಲ್ಲಿ ಭಾರೀ ಪ್ರಮಾಣದಲ್ಲಿ ಮೈ ದಂಡಿಸುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಇನ್ನೊಂದು ಅಧ್ಯಯನದ ಪ್ರಕಾರ ಫ್ಲೂನಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಹಾರ್ಟ್‌ ಅಟ್ಯಾಕ್‌ ಆಗುವ ಪ್ರಮಾಣ ಶೇ.6ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ ಎಂದಿದೆ.

Spandana Vijay Death: ಸ್ಪಂದನಾ ವಿಜಯರಾಘವೇಂದ್ರ ನಿಧನ, ದೊಡ್ಡಪ್ಪ ಬಿಕೆ ಹರಿಪ್ರಸಾದ್ ರಿಯಾಕ್ಷನ್

click me!