ಖ್ಯಾತ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಲೋ ಬಿಪಿ ಕಾರಣಕ್ಕೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಲೋ ಬಿಪಿ ಕಾರಣವಂತೆ. ಬಿಪಿ ಕಡಿಮೆ ಆಗೋದು ಆ ಪರಿ ಡೇಂಜರಾ? ಲೋ ಬಿಪಿ ಲಕ್ಷಣಗಳೇನು? ಪರಿಹಾರ ಹೇಗೆ?
ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ ಶಿವರಾಮ್ ಅವರ ಮಗಳು ಸ್ಪಂದನಾ. ನಟ ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಅವರದ್ದು ಹಿರಿಯರು ಒಪ್ಪಿ ಆದ ವಿವಾಹ. 2007ರ ಆಗಸ್ಟ್ 26ರಂದು ಇವರು ಹಸಮಣೆ ಏರಿದ್ದರು. ಇನ್ನು, 19 ದಿನ ಕಳೆದಿದ್ದರೆ ಈ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವುದರಲ್ಲಿತ್ತು. ಅದಕ್ಕೂ ಮೊದಲೇ ವಿಧಿ ಇವರ ಬಾಳಲ್ಲಿ ಆಟವಾಡಿದೆ. ಹೃದಯಾಘಾತದಿಂದ ಸ್ಪಂದನಾ ಸಾವನ್ನಪ್ಪಿದ್ದಾರೆ. ಅಷ್ಟಕ್ಕೂ ಸ್ಪಂದನಾ ಅವರ ಈ ಹೃದಯಾಘಾತಕ್ಕೆ ಕಾರಣವಾದದ್ದು ಲೋ ಬಿಪಿ. ಅಂದರೆ ರಕ್ತದೊತ್ತಡ ಕಡಿಮೆ ಆಗೋದು. ಇದೊಂಥರಾ ಸೈಲೆಂಟ್ ಕಿಲ್ಲರ್ ಇದ್ದ ಹಾಗೆ. ಒಂಚೂರು ಸುಸ್ತು, ಕೈ ಕಾಲು ನೋವು, ಉಸಿರಾಡುವಾಗ ಕೊಂಚ ಕಷ್ಟವಾದಂತಾಗೋದು.. ಈ ಥರದ ಸಮಸ್ಯೆ ಸಾಮಾನ್ಯ. ಎಲ್ಲೋ ವೀಕ್ ನೆಸ್ ಆಗಿರುತ್ತೆ. ಕೆಲಸದ ಸ್ಟ್ರೆಸ್ ಜಾಸ್ತಿ ಆಯ್ತು ಅಂದ್ಕೊಂಡು ಬಿಡುತ್ತೇವೆ. ಆದರೆ ಈ ಗುಣಲಕ್ಷಣವನ್ನು ನೆಗ್ಲೆಕ್ಟ್ ಮಾಡುವಂತಿಲ್ಲ. ನೆಗ್ಲೆಕ್ಟ್ ಮಾಡಿ ಗ್ರಹಚಾರ ಕೆಟ್ಟರೆ ಇದರಿಂದ ಸ್ಟ್ರೋಕ್ ಆಗಬಹುದು, ಹೃದಯಾಘಾತ ಉಂಟಾಗಬಹುದು.
ಅಷ್ಟಕ್ಕೂ ಈ ಲೋ ಬಿಪಿ ಹೇಗೆ ಉಂಟಾಗುತ್ತೆ ಅಂದರೆ ಅದಕ್ಕೆ ವೈದ್ಯಲೋಕ ಒಂದು ರೀಸನ್ ಕೊಡುತ್ತೆ. ಅಧಿಕ ರಕ್ತದ ಒತ್ತಡದಿಂದ (High Blood Pressure) ಬಳಲುತ್ತಿರುವ ಜನರಂತೆ ಕಡಿಮೆ ರಕ್ತದ ಒತ್ತಡದಿಂದಲೂ ಜನ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಈ ಲೋ ಬಿಪಿ ಸಮಸ್ಯೆ ವೈದ್ಯಕೀಯ ಭಾಷೆಯಲ್ಲಿ 'ಹೈಪೋಟೆಂಶನ್' ಎಂದು ಕರೆಯುತ್ತಾರೆ. ರಕ್ತ ಸಂಚಾರದಲ್ಲಿ (Blood Circulation) ಏರುಪೇರಾದಾಗ ಅಂದರೆ, ದೇಹದ ಮುಖ್ಯ ಅಂಗಗಳಾದ ಹೃದಯಕ್ಕೆ (Heart), ಮೆದುಳಿಗೆ (Brain), ಸರಿಯಾಗಿ ರಕ್ತ ಸಂಚಾರವಾಗದೇ ಇದ್ದರೆ, ವ್ಯಕ್ತಿಯಲ್ಲಿ ಸಡನ್ ಆಗಿ ತಲೆಸುತ್ತು ಬರುವುದು, ವಾಕರಿಕೆ, ವಾಂತಿ ಸಮಸ್ಯೆ ಕಂಡು ಬರಬಹುದು. ಇದು ಲೋ ಬಿಪಿ ಗುಣಲಕ್ಷಣ. ಇನ್ನು ಆತಂಕದ ವಿಚಾರ ಎಂದರೆ ಕೆಲವೊಮ್ಮೆ ಯಾವುದೇ ಗುಣ ಲಕ್ಷಣಗಳು ಕಂಡು ಬರುವುದಿಲ್ಲ! ಹಾಗಂತ ಅಪಾಯವಂತೂ ಇದ್ದೇ ಇದೆ. ಈ ಲೋ ಬಿಪಿ ಸಮಸ್ಯೆಯಿಂದ ಉಂಟಾಗುವ ಇಂತಹ ಸಮಸ್ಯೆಗಳು ಅಧಿಕ ರಕ್ತದ ಒತ್ತಡದ ಸಮಸ್ಯೆಗಳಿಗಿಂತ ಕೂಡ ಭಯಾನಕವಾಗಿರುತ್ತದೆ. ಹಾರ್ಟ್ ಅಟ್ಯಾಕ್, ಸ್ಟ್ರೋಕ್ ಆಗಿ ಪ್ರಾಣ ತೆಗೆಯುವ ಮಟ್ಟಕ್ಕೂ ಇದು ಹೋಗಬಹುದು.
ನಮ್ದು ಲವ್ ಮ್ಯಾರೇಜ್ ಅಲ್ಲ ಪಕ್ಕಾ ಅರೇಂಜ್ಡ್ ಮ್ಯಾರೇಜ್; ವಿಜಯ್ ರಾಘವೇಂದ್ರ-ಸ್ಪಂದನಾ ಮ್ಯಾರೇಜ್ ಸ್ಟೋರಿ!
ಲೋ ಬಿಪಿ ಇದ್ದಾಗ ಹೆಚ್ಚಿನವರು ನೆಗ್ಲೆಕ್ಟ್ ಮಾಡ್ತಾರೆ. ಆದರೆ ಈ ನಿರ್ಲಕ್ಷ್ಯ ಜೀವ ತೆಗೆಯಬಹುದು, ಇಲ್ಲಾ ಸ್ಟ್ರೋಕ್ ಆಗಿ ಪಡಬಾರದ ಹಿಂಸೆ ಪಡುವಂತೆ ಮಾಡಬಹುದು. ಲೋ ಬಿಪಿ ಆದಾಗ ಅದನ್ನು ನಿಯಂತ್ರಿಸಲು ಕೆಲವು ಸಿಂಪಲ್ ಟೆಕ್ನಿಕ್ಸ್ ಇವೆ. ಈ ಸಮಯದಲ್ಲಿ ಉಪ್ಪು ಅಥವಾ ಉಪ್ಪಿನಾಂಶ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು. ಉದಾಹರಣೆಗೆ ಉಪ್ಪಿನಾಂಶ ಇರುವ ಉಪ್ಪಿನಕಾಯಿ. ಈ ಸಮಸ್ಯೆ ಆದಾಗ ಸಡನ್ ಆಗಿ ತಲೆ ಸುತ್ತು ಅಥವಾ ವಾಕರಿಕೆ ಬಂದಂತಾಗುತ್ತದೆ ಆ ಕ್ಷಣದಲ್ಲಿ ಉಪ್ಪಿನ ನೀರು ಸೇವಿಸುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಅರ್ಧ ಟೀ ಚಮಚದಷ್ಟು ಉಪ್ಪನ್ನು (Salt) ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕದಡಿ ಕುಡಿಯಿರಿ. ಹೀಗೆ ಕುಡಿದ ಐದರಿಂದ ಹತ್ತು ನಿಮಿಷದ ಬಳಿಕ, ದೇಹದಲ್ಲಿ ಕಡಿಮೆ ಇರುವ ರಕ್ತದ ಒತ್ತಡ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.
ಕಾಫಿಯೂ ಲೋ ಬಿಪಿಯನ್ನು ನಾರ್ಮಲೈಸ್ ಮಾಡುತ್ತೆ. ಉಸಿರಾಟದ ತೊಂದರೆ (Breathing Problem) ಅಥವಾ ತಲೆತಿರುಗುವಿಕೆ (Guiddiness) ಬಂದಾಗ ಚಹಾ ಅಥವಾ ಕಾಫಿ ಕುಡಿಯಿರಿ.
ತುಳಸಿಯಲ್ಲಿರುವ ಯುಜೆನಾಲ್ ಕಡಿಮೆ ರಕ್ತದೊತ್ತಡವನ್ನು ಸಾಮಾನ್ಯಗೊಳಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ತುಳಸಿ ಎಲೆಗಳನ್ನು ಜಗಿಯುವುದರಿಂದಲೂ ರಕ್ತದೊತ್ತಡವನ್ನು ನಿಯಂತ್ರಿಸಬಬಹುದು. ತುಳಸಿಯಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಇದೆ. ಇವು ಕಡಿಮೆ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರುತ್ತವೆ. ನೀವು ತುಳಸಿ ಕಷಾಯ ಮತ್ತು ತುಳಸಿ ಚಹಾವನ್ನು ಸಹ ಕುಡಿಯಬಹುದು.
ಮಜ್ಜಿಗೆ ಕುಡಿಯುವುದರಿಂದ ನಿರ್ಜಲೀಕರಣ ಕಡಿಮೆಯಾಗುತ್ತದೆ. ಜೊತೆಗೆ ಕಡಿಮೆ ರಕ್ತದೊತ್ತಡವನ್ನು ತಡೆಯಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಮಜ್ಜಿಗೆ ಕುಡಿಯುತ್ತಾರೆ. ರಕ್ತದೊತ್ತಡ ಕಡಿಮೆಯಾದಾಗಲೆಲ್ಲಾ ಮಜ್ಜಿಗೆ ಕುಡಿಯುತ್ತಿರಿ. ಉಪ್ಪು ಮತ್ತು ಹುರಿದ ಜೀರಿಗೆ ಪುಡಿಯೊಂದಿಗೆ ಬೆರೆಸಿದ ಮಜ್ಜಿಗೆ ನಿರ್ಜಲೀಕರಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಜೊತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
RIP Spandana Vijay: ಸ್ಪಂದನಾ ನಿಧನಕ್ಕೆ ಗಣ್ಯರ ಸಂತಾಪ, ಥಾಯ್ಲೆಂಡ್‌ನಲ್ಲಿ ಮರಣೋತ್ತರ ಪರೀಕ್ಷೆ