ದಿಢೀರ್ ತೂಕ ಕಡಿಮೆ ಮಾಡಿಕೊಳ್ಳಲು ಈ ಆಸನ ಮಾಡಿ ಸಾಕು

By Suvarna News  |  First Published Jun 24, 2022, 4:30 PM IST

ಯೋಗ (Yoga) ನಮ್ಮ ಆರೋಗ್ಯ (Health) ಹಾಗೂ ಮನಸ್ಸಿನ ಬೀರುವ ಸಕಾರಾತ್ಮಕ ಪರಿಣಾಮಗಳು ಒಂದೆರಡಲ್ಲ. ಆದರೆ, ಎಲ್ಲಾ ಆಸನ (Asana)ಗಳನ್ನೂ ಒಳಗೊಂಡಿರುವ ಸೂರ್ಯ ನಮಸ್ಕಾರ (Surya Namaskar) ಮಾಡುವುದರಿಂದ ಲಾಭ ಮತ್ತಷ್ಟು ಹೆಚ್ಚುತ್ತದೆ. ಸೂರ್ಯ ನಮಸ್ಕಾರದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನವೇನು ?


ಯೋಗಾಸನ (Yogasana)ದ ಹೆಸರು ಬಂದಾಗ ಮೊದಲು ಎಲ್ಲರಿಗೂ ನೆನಪಾಗುವುದು ಸೂರ್ಯ ನಮಸ್ಕಾರ (Surya Namaskar). ಪ್ರತಿ ನಿತ್ಯ ಸೂರ್ಯ ನಮಸ್ಕಾರ ಮಾಡುವುದ್ರಿಂದ ಸಾಕಷ್ಟು ಲಾಭವಿದೆ. ಇದು ಇಡೀ ದೇಹ (Body)ಕ್ಕೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ಸೂರ್ಯ ನಮಸ್ಕಾರದಿಂದ ದೇಹವು ಸದೃಢವಾಗಿರುತ್ತದೆ. ಹೃದಯ, ಹೊಟ್ಟೆ, ಎದೆ, ಕರುಳು ಮತ್ತು ಕಾಲುಗಳನ್ನು ಹೊರತುಪಡಿಸಿ ದೇಹದ ಇತರ ಭಾಗಗಗಳಿಗೂ ಸೂರ್ಯ ನಮಸ್ಕಾರದಿಂದ ಹೆಚ್ಚಿನ ಪ್ರಯೋಜನವಾಗುತ್ತದೆ. 

ಶಾರೀರಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ (Surya Namaskar).ಇದಕ್ಕೆ ವೇದ ಕಾಲದಿಂದಲೂ ತನ್ನದೇ ಆದ ಮಹತ್ವವಿದೆ. ಇದನ್ನು ವ್ಯಾಯಾಮ ಎಂದಷ್ಟೇ ಕರೆಯದೆ ಪ್ರಾರ್ಥನೆಯೆಂಬಂತೆ ಪರಿಗಣಿಸಲಾಗುತ್ತದೆ. ಹೀಗಾಗಿ ಹಿರಿಯರು ದೈನಂದಿನ ಚಟುವಟಿಕೆಯ ಒಂದು ಭಾಗವಾಗಿ ಇದನ್ನು ಸ್ವೀಕರಿಸಿದ್ದಾರೆ. ಹಠಯೋಗದಲ್ಲಿ ಸೂರ್ಯ ನಮಸ್ಕಾರದ ಪ್ರಸ್ತಾಪವಿದ್ದು, ಇದೊಂದು ಹನ್ನೆರಡು ಯೋಗಾಸನಗಳ ಒಂದು ಚಕ್ರ. ಸೂರ್ಯ ದೇವನಿಗೆ ಸಂಬಂದಿಸಿದ ಬೀಜ ಮಂತ್ರವನ್ನು ಉಚ್ಛರಿಸುತ್ತಾ ಪ್ರಾಣಾಯಾಮದ (Pranayama) ರೀತಿಯಲ್ಲಿ ಉಸಿರನ್ನೆಳೆದುಕೊಂಡು ಅದನ್ನು ಬಿಗಿ ಹಿಡಿದುಕೊಂಡು ಮತ್ತೆ ಹೊರಗೆ ಬಿಡುತ್ತ ಮಾಡಬಹುದಾದ ವ್ಯಾಯಾಮವೇ ಸೂರ್ಯ ನಮಸ್ಕಾರ.

Tap to resize

Latest Videos

Yogasana Tips: ಈ ಆಸನ ಮಿಸ್ ಮಾಡಿದ್ರೆ ಸೂರ್ಯ ನಮಸ್ಕಾರ ಮಾಡಿದ್ರೂ ವೇಸ್ಟ್!

ಯೋಗ (Yoga)ದಲ್ಲಿ ಸೂರ್ಯದೇವರನ್ನು ನಮಸ್ಕರಿಸಿ, ಆ ಜೀವ ಕೊಡೋ ಶಕ್ತಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸಲು, ಸೂರ್ಯ ನಮಸ್ಕಾರವನ್ನು ಮಾಡಲಾಗುತ್ತದೆ. ಸೂರ್ಯ, ಶಕ್ತಿ ಮತ್ತು ಚೈತನ್ಯದ ಪ್ರತೀಕ. ಸೂರ್ಯ ನಮಸ್ಕಾರವನ್ನು ಮುಂಜಾನೆ (Morning), ಸೂರ್ಯೋದಯದ ಮುಂಚೆ ಮಾಡುವುದು ಸೂಕ್ತ. ಇದನ್ನು ಮಾಡುವ ವಿಧಾನ ಹಾಗೂ ಅದರಿಂದ ಸಿಗೋ ಪ್ರಯೊಜನಗಳ ಮಾಹಿತಿ ಇಲ್ಲಿದೆ.

ಸೂರ್ಯ ನಮಸ್ಕಾರದಿಂದ ಸಿಗುವ ಪ್ರಯೋಜನಗಳು

- ದೈಹಿಕ ಹಾಗು ಮಾನಸಿಕ ಶಕ್ತಿ ಹೆಚ್ಚುತ್ತದೆ
- ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
- ತೂಕವನ್ನು ಕಡಿಮೆ ಮಾಡುತ್ತದೆ
- ಮಾಂಸಖಂಡವನ್ನು ಸದೃಢಗೊಳಿಸುತ್ತದೆ
- ದೇಹದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ
- ನಿದ್ರಾಹೀನತೆಯ ಸಮಸ್ಯೆ ಹೋಗಲಾಡಿಸುತ್ತದೆ
- ಮಹಿಳೆಯರ ಋತುಚಕ್ರ ಸಮಸ್ಯೆ ಸರಿಪಡಿಸುತ್ತದೆ
- ನರಮಂಡಲದ ಆರೋಗ್ಯಕ್ಕೆ ಉತ್ತಮ
- ಮಧುಮೇಹದ ರೋಗಿಗಳ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡುತ್ತದೆ
- ಮಣಿಪುರ ಚಕ್ರವನ್ನು ಸಕ್ರಿಯಗೊಳಿಸುತ್ತದೆ
- ಮನಶಾಂತಿ ದೊರಕುತ್ತದೆ

ಸೂರ್ಯ ನಮಸ್ಕಾರವನ್ನು ಮಾಡುವುದು ಹೇಗೆ ?

ಸೂರ್ಯ ನಮಸ್ಕಾರವೆಂದರೆ 8 ಆಸನಗಳ ಮಿಶ್ರಣವನ್ನು 12-ಹಂತಗಳಲ್ಲಿ ಮಾಡಲಾಗುತ್ತದೆ. ಸೂರ್ಯ ನಮಸ್ಕಾರವನ್ನು ಯಾವಾಗಲೂ ಬಲಭಾಗದಿಂದಲೇ ಶುರು ಮಾಡಬೇಕು. ಎರಡೂ ಭಾಗಗಳನ್ನು ಮುಗಿಸಿದಾಗ, ಒಂದು ಸುತ್ತನ್ನು ಮುಗಿಸಿದಂತೆ ಲೆಕ್ಕ. ಪ್ರತಿಯೊಂದು ಆಸನಕ್ಕೂ ಅದರದ್ದೇ ಆದ ಉಸಿರಾಟದ ರೀತಿ ಇರುತ್ತದೆ. ಈ 12 ಆಸನಗಳು ಕೆಳಗಿನ ಕ್ರಮದಲ್ಲಿ ಮಾಡಲಾಗುತ್ತದೆ:

ಸೂರ್ಯ ನಮಸ್ಕಾರದೊಂದಿಗೆ ಈ ಯೋಗಾಸನ ಮಾಡಿದ್ರೆ ಉತ್ತಮ ಅರೋಗ್ಯ

1. ಪ್ರಣಾಮ ಆಸನ
2. ಹಸ್ತ ಉತ್ತಾನಾಸನ
3. ಪದಹಸ್ತಾನಾಸನ
4. ಅಶ್ವ ಸಂಚಾಲಾಸನ
5. ಸಂತೋಲನಾಸನ
6. ಅಷ್ಟಾಂಗ ನಮಸ್ಕಾರಾಸನ
7. ಭುಜಂಗಾಸನ
8. ಅಧೋಮುಖ ಶ್ವಾನಾಸನ
9. ಅಶ್ವ ಸಂಚಾಲಾಸನ
10. ಪದಹಸ್ತಾನಾಸನ
11. ಹಸ್ತ ಉತ್ತಾನಾಸನ
12. ಪ್ರಣಾಮ ಆಸನ

ಭುಜಂಗಾಸನವನ್ನು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅತ್ಯುತ್ತಮ ಆಸನವೆಂದು ಪರಿಗಣಿಸಲಾಗುತ್ತದೆ. ಈ ಅಸನ ಮಾಡುವಾಗ ನಿಧಾನವಾಗಿ ಉಸಿರನ್ನು ಹೊರಬಿಟ್ಟು ಎದೆಯನ್ನು ಮುಂದಕ್ಕೆ ಚಲಿಸಿ. ನಿಮ್ಮ ಕೈಗಳನ್ನು ನೇರವಾಗಿ ನೆಲದ ಮೇಲೆ ಇರಿಸಿ. ಕುತ್ತಿಗೆಯನ್ನು ಹಿಂದಕ್ಕೆ ಬಾಗಿಸಿ ಮತ್ತು ಎರಡೂ ಕಾಲುಗಳನ್ನು ನೇರವಾಗಿ ನಿಲ್ಲುವಂತೆ ಮಾಡಬೇಕು. ನಿಯಮಿತವಾಗಿ ಈ ಆಸನ ಮಾಡಿದರೆ ಸುಲಭವಾಗಿ ತೂಕ ಕಳೆದುಕೊಳ್ಳಬಹುದು.

click me!