ಸತತ ಎಂಟು ಗಂಟೆ ಒಂದೇ ಕಡೆ ಕುಳಿತು ಕೆಲಸ ಮಾಡುವುದು ನಮ್ಮ ಆಯಸ್ಸನ್ನು ಕಡಿಮೆ ಮಾಡುತ್ತದೆ. ದೇಹ ದಪ್ಪಗಾದ್ರೆ ಮೆದುಳು ದುರ್ಬಲವಾಗುತ್ತದೆ. ಕುಳಿತು ಕೆಲಸ ಮಾಡೋರ ನೆನಪಿನ ಶಕ್ತಿ ಕೂಡ ವೀಕ್ ಆಗುತ್ತೆ.
ಒಂದೇ ಕಡೆ ಕುಳಿತು ಕೆಲಸ ಮಾಡುವುದು ನಮ್ಮ ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಹಾನಿಯುಂಟು ಮಾಡುತ್ತದೆ. ಈ ಸಂಗತಿ ಬಹುತೇಕರಿಗೆ ತಿಳಿದಿದೆ. ದೈಹಿಕ ಕೆಲಸ ಕಡಿಮೆಯಾಗುವ ಕಾರಣ ನಮ್ಮ ತೂಕದಲ್ಲಿ ಏರಿಕೆಯನ್ನು ನಾವು ಕಾಣಬಹುದು. ಇದಲ್ಲದೆ ರಕ್ತದೊತ್ತಡದ ಮೇಲೆ ನಕಾರಾತ್ಮಕ ಪರಿಣಾಮವುಂಟಾಗುತ್ತದೆ. ದೈಹಿಕ ಸಮಸ್ಯೆ ಮಾತ್ರವಲ್ಲ ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವವರ ಮಾನಸಿಕ ಆರೋಗ್ಯ ಕೂಡ ಹದಗೆಡುತ್ತದೆ ಎಂಬುದು ಇತ್ತೀಚಿನ ಅಧ್ಯಯನಗಳಿಂದ ಬಹಿರಂಗವಾಗಿದೆ.
ಕಚೇರಿ (Office) ಯಲ್ಲಿ ಕೆಲಸ ಮಾಡುವ ಜನರು ಹಾಗೂ ದೀರ್ಘ ಕಾಲದವರೆಗೆ ಕುಳಿತು ಕೆಲಸ ಮಾಡುವವರು ಆಗಾಗ ನಡೆದಾಡುವಂತೆ ತಜ್ಞರು (Experts) ಸಲಹೆ ನೀಡ್ತಾರೆ. ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡನ್ನೂ ಕಾಪಾಡಿಕೊಳ್ಳಲು ನೆರವಾಗುತ್ತದೆ. ನಾವಿಂದು ಒಂದೇ ಕಡೆ ದೀರ್ಘಕಾಲ ಕುಳಿತು ಕೆಲಸ ಮಾಡುವುದ್ರಿಂದ ಏನೆಲ್ಲ ಮಾನಸಿಕ (Mental) ಸಮಸ್ಯೆ ನಿಮ್ಮನ್ನು ಕಾಡುತ್ತದೆ ಎಂದು ಹೇಳ್ತೆವೆ.
undefined
ಬುದ್ಧಿವಂತಿಕೆ, ಜ್ಞಾಪಕ (Memory) ಶಕ್ತಿ ಮೇಲೆ ಪರಿಣಾಮ : ಸತತ ಏಳರಿಂದ ಎಂಟು ಗಂಟೆಗಳ ಕಾಲ ನಿರಂತರವಾಗಿ ಕುಳಿತುಕೊಳ್ಳುವ ಅಭ್ಯಾಸ ಕಾಲಾನಂತರದಲ್ಲಿ ಹೊಸ ವಿಷ್ಯಗಳನ್ನು ಸಂಗ್ರಹಿಸುವ ಮೆದುಳಿನ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಇದು ಜ್ಞಾಪಕ ಶಕ್ತಿ ಮೇಲೂ ಪರಿಣಾಮ ಬೀರುತ್ತದೆ. ದೀರ್ಘಕಾಲ ಕುಳಿತುಕೊಳ್ಳುವ ಜನರ ಸ್ಮರಣೆ ಶಕ್ತಿ ದುರ್ಬಲಾಗುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.
Sleep Postureನಲ್ಲೇ ಭಂಗಿಯಿಂದಲೇ ದಂಪತಿ ಸಂಬಂಧ ಹೇಗಿದೆ ಅನ್ನೋದು ತಿಳಿಯುತ್ತೆ!
ಅಧ್ಯಯನದ ವಿವರ : ಸೆಮಲ್ ಇನ್‌ಸ್ಟಿಟ್ಯೂಟ್ ಫಾರ್ ನ್ಯೂರೋಸೈನ್ಸ್ ಅಂಡ್ ಹ್ಯೂಮನ್ ಬಿಹೇವಿಯರ್‌ನ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಎಷ್ಟು ಸಮಯ ಒಂದೇ ಕಡೆ ಕುಳಿತುಕೊಳ್ಳುವುದು ದೇಹ ಮತ್ತು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ಕಂಡುಹಿಡಿಯಲು ಅಧ್ಯಯನ ನಡೆಸಿದರು. ಇದಕ್ಕಾಗಿ 45 ರಿಂ 75 ವರ್ಷ ವಯಸ್ಸಿನ 35 ಜನರನ್ನು ಅಧ್ಯಯನ ನಡೆಸಿದ್ರು.
ಎಷ್ಟು ಸಮಯ ಕುಳಿತು ಕೆಲಸ ಮಾಡ್ತಾರೆ ಮತ್ತು ಅವರ ದೈಹಿಕ ಚಟುವಟಿಕೆ ಏನು ಎಂಬುದನ್ನು ಪ್ರಶ್ನೆ ಮಾಡಲಾಯ್ತು. ಹಾಗೆಯೇ ಅವರನ್ನು ಎಂಆರ್ ಐ ಸ್ಕ್ಯಾನ್ ಗೆ ಒಳಪಡಿಸಲಾಯ್ತು. ದೀರ್ಘಕಾಲ ಕುಳಿತುಕೊಳ್ಳುವುದ್ರಿಂದ ಅವರ ಮೆದುಳಿಗೆ ಯಾವ ರೀತಿ ಹಾನಿಯಾಗುತ್ತದೆ ಎಂಬುದನ್ನು ಪತ್ತೆ ಮಾಡುವ ಪ್ರಯತ್ನವನ್ನು ತಜ್ಞರು ಮಾಡಿದ್ರು. ವಿಜ್ಞಾನಿಗಳು ಹಲವು ಹಂತಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಆಘಾತಕಾರಿ ಸಂಗತಿಗಳು ತಿಳಿದು ಬಂದವು.
ಮೆದುಳಿನಲ್ಲಿ ಆಗುತ್ತೆ ಬದಲಾವಣೆ : ಅಧ್ಯಯನದ ವರದಿ ಪ್ರಕಾರ, ದೀರ್ಘಕಾಲ ಕುಳಿತುಕೊಳ್ಳುವ ಜನರ ಮೆದುಳಿನ ಮೇಲೆ ಕಾಲಾನಂತರದಲ್ಲಿ ಪರಿಣಾಮ ಕಂಡು ಬರುತ್ತದೆ. ಮಧ್ಯವಯಸ್ಕ ಮತ್ತು ವಯಸ್ಸಾದ ಜನರ ಮೆದುಳಿನ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಬುದ್ಧಿಮಾಂದ್ಯತೆಯ ಅಪಾಯ ಕೂಡ ಹೆಚ್ಚಿರುತ್ತದೆ. ಬುದ್ಧಿಮಾಂದ್ಯತೆಯು ಮೆದುಳಿನ ರಚನೆಯಲ್ಲಿ ಆಗುವ ಬದಲಾವಣೆಗಳಿಂದ ಉಂಟಾಗುತ್ತದೆ. ಇದು ನಮ್ಮ ಆಲೋಚನೆ, ನೆನಪಿನ ಶಕ್ತಿ ಮತ್ತು ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ.
Work From Home: ಕೆಲ್ಸ ಸರಿಯಾಗಿ ಆಗ್ತಿಲ್ವಾ ? ಕೂತ್ಕೊಳ್ಳೋ ಭಂಗಿ ಸರಿಯಿದ್ಯಾ ಚೆಕ್ ಮಾಡ್ಕೊಳ್ಳಿ
ದಿನಕ್ಕೆ ಎಂಟು ಗಂಟೆ ಕುಳಿತು ಕೆಲಸ ಮಾಡುವ ವ್ಯಕ್ತಿ ನಾಲ್ಕರಿಂದ ಐದು ಗಂಟೆ ಕುಳಿತು ಕೆಲಸ ಮಾಡುವ ವ್ಯಕ್ತಿಗಿಂತ ತೆಳ್ಳಗಿನ ಟೆಂಪೊರಲ್ ಲೋಬ್ ಹೊಂದಿರುತ್ತಾನೆಂದು ಸಂಶೋಧಕರು ಹೇಳಿದ್ದಾರೆ. ಟೆಂಪೊರಲ್ ಲೋಬ್ ಎಂಬುದು ಮೆದುಳಿನ ಭಾಗವಾಗಿದೆ. ಅದು ನೆನಪಿನ ಶಕ್ತಿ ಮತ್ತು ಶಬ್ಧಗಳ ಜವಾಬ್ದಾರಿ ಹೊತ್ತಿರುತ್ತದೆ. ಪ್ರತಿ ನಿತ್ಯ ವ್ಯಾಯಾಮ ಮಾಡ್ತಿದ್ದರೂ ನೀವು 8 ಗಂಟೆ ಕುಳಿತು ಕೆಲಸ ಮಾಡುವವರಾಗಿದ್ದರೆ ಮೆದುಳಿನಲ್ಲಾಗುವ ಅಪಾಯ ತಪ್ಪಿಸುವುದು ಕಷ್ಟ. ಹಾಗಾಗಿ ಕುಳಿತು ಕೆಲಸ ಮಾಡುವವರು ಸ್ವಲ್ಪ ಸಮಯ ನಿಂತು ಕೆಲಸ ಮಾಡಿ. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಎನ್ನುತ್ತಾರೆ ತಜ್ಞರು.