ಟೆನ್ಶನ್ ಮಾಡದವರು ಯಾರಿದ್ದಾರೆ ಹೇಳಿ. ಎಲ್ಲರಿಗೂ ಒಂದಲ್ಲಾ ಒಂದು ವಿಚಾರಕ್ಕಾಗಿ ಟೆನ್ಶನ್ ಮಾಡೋದು ಇದ್ದೇ ಇರುತ್ತೆ. ಟೆನ್ಶನ್ ಮಾಡೋದ್ರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಅನ್ನೋದು ಹೆಚ್ಚಿನವರಿಗೆ ಗೊತ್ತು. ಆದ್ರೆ ವಿಪರೀತ ಟೆನ್ಶನ್ ತಲೆಯೊಳಗಿಂದೆಲ್ಲಾ ಭಯಂಕರ ಸೌಂಡ್ ಕೇಳುವಂತೆ ಮಾಡುತ್ತೆ ಅನ್ನೋದು ನಿಮ್ಗೆ ಗೊತ್ತಿದ್ಯಾ ?
ಬಿಡುವಿಲ್ಲದ ಧಾವಂತದ ಬದುಕಿನಲ್ಲಿ ಎಲ್ಲರೂ ಒತ್ತಡದಿಂದ ಬಳಲುತ್ತಿದ್ದಾರೆ. ಮನೆ ಕಿರಿಕಿರಿ, ಆಫೀಸ್ ಟೆನ್ಶನ್, ಲೋನ್, ಕಮಿಂಟ್‌ಮೆಂಟ್ ಹೀಗೆ ಒಂದಲ್ಲಾ ಒಂದು ತಲೆನೋವು ಕಾಡುತ್ತಿರುತ್ತದೆ. ಆದ್ರೆ ವಿಪರೀತ ಟೆನ್ಶನ್ ಏನೆಲ್ಲಾ ಸಮಸ್ಯೆ ಕಾಡಬಹುದು ಅನ್ನೋದಕ್ಕೆ ಇಲ್ಲಿದೆ ಸ್ಪಷ್ಟ ಉದಾಹರಣೆ. 2013ರ ಅಕ್ಟೋಬರ್‌ನಲ್ಲಿ ರಾತ್ರಿ ದೆಹಲಿಯ 24 ವರ್ಷದ ಗೌರವ್ ಗೋಲಾ ಅವರು ಅಪರಿಚಿತ ಶಬ್ದವನ್ನು ಕೇಳಿದರು. ಧ್ವನಿಯು ನಿರಂತರವಾಗಿದ್ದು ಅತ್ಯಂತ ಸೂಕ್ಷ್ಮವಾಗಿತ್ತು. ಈ ಸದ್ದು ದೂರದರ್ಶನದಿಂದ ಅಥವಾ ಕೆಳಗಿನ ನೆಲ ಮಹಡಿಯಿಂದ ಕೇಳುತ್ತಿದ್ದೆಯೇ, ಅಲ್ಲ ಮನೆಯ ಸೀಲಿಂಗ್ ಫ್ಯಾನ್‌ನಿಂದ ಕೇಳುತ್ತಿದೆಯೇ ಎಂದು ಗೋಲಾ ಗೊಂದಲಕ್ಕೊಳಗಾದರು. ಈ ಎಲ್ಲಾ ಸ್ಥಳಗಳನ್ನು ಪರಿಶೀಲಿಸಿದರು. ಸ್ಪಲ್ಪ ಹೊತ್ತಿನಲ್ಲೇ ಅವರಿಗೆ ಶಬ್ದವು ತಮ್ಮ ತಲೆಯಿಂದಲೇ ಬರುತ್ತಿದೆ ಎಂಬುದು ಗೊತ್ತಾಯಿತು.
ಗೋಲಾ ತಮ್ಮ ತಲೆಯಿಂದಲೇ ಶಬ್ದ (Sound) ಬರುತ್ತಿದೆ ಎಂದು ತಿಳಿದು ವಿಪರೀತ ಗಾಬರಿಗೊಂಡರು. ಚಿಂತೆಯಿಂದ ತುಂಬಿದ್ದ ಅವರಿಗೆ ರಾತ್ರಿಯಿಡೀ ನಿದ್ದೆ ಬರಲಿಲ್ಲ. ಆದ್ರೆ ಕುಟುಂಬ ಸದಸ್ಯರು ಇವರ ಮಾತನ್ನು ನಂಬಲ್ಲಿಲ್ಲ. ಗೋಲಾ ಅತಿಯಾಗಿ ಯೋಚಿಸುತ್ತಿದ್ದಾರೆ ಎಂದು ಸಿಟ್ಟುಕೊಂಡರು. ಆದರೆ ಮರುದಿನ ಗೋಲಾ ಇಎನ್‌ಟಿ ತಜ್ಞರನ್ನು ಸಂಪರ್ಕಿಸಿದರು. ಈ ಸಂದರ್ಭದಲ್ಲಿ ಒತ್ತಡದ (Pressure) ಕಾರಣದಿಂದ ಈ ಶಬ್ದವು ಕೇಳಿ ಬರುತ್ತಿದೆ ಎಂದು ವೈದ್ಯರು ಹೇಳಿದರು. ಚಿಕಿತ್ಸೆಗಾಗಿ ಕೆಲವೊಂದು ಮಾತ್ರೆಗಳನ್ನು ಕೊಟ್ಟರೂ, ಆದರೂ ಆರೋಗ್ಯ (Health)ದಲ್ಲಿ ಯಾವುದೇ ಬದಲಾವಣೆ ಆಗಲ್ಲಿಲ್ಲ. ಇದು ಟಿನ್ನಿಟಸ್ ಕಾಯಿಲೆ.
Mental Health: ದಿನಪೂರ್ತಿ ಟೆನ್ಶನ್ನಾ ? ಬಿ ಕೂಲ್, ಫ್ರೆಂಡ್ಸ್ ಜೊತೆ ಸಮಯ ಕಳೆಯಿರಿ
ಟಿನ್ನಿಟಸ್ ಕಾಯಿಲೆ ಎಂದರೇನು ?
ವಿಪರೀತ ಒತ್ತಡದಿಂದಾಗಿ ತಲೆಯೊಳಗಿಂದ ಭಯಂಕರ ಸೌಂಡ್ ಕೇಳಿದ ಅನುಭವವಾಗುವುದು ಟಿನ್ನಿಟಸ್ ಕಾಯಿಲೆಯಾಗಿದೆ. ಟಿನ್ನಿಟಸ್, ಇದು ಒಂದು ಕಿವಿ (Ear) ಅಥವಾ ಎರಡರ ಮೇಲೆ ಪರಿಣಾಮ ಬೀರಬಹುದು. ಇದು ಪೀಡಿತ ವ್ಯಕ್ತಿಯು ನಿಲ್ಲದ ಶಬ್ದವನ್ನು ಕೇಳುವ ಸ್ಥಿತಿಯಾಗಿದೆ. ಆದರೆ ಉಳಿದವರಿಗೆ ಈ ಸದ್ದು ಕೇಳುವುದಿಲ್ಲ. ಗೋಲಾ ಟಿನ್ನಿಟಸ್ ಕಾಯಿಲೆ (Disease)ಯಿಂದ ಹೊರಬರಲಾಗದೆ ಸುಮಾರು ಒಂದು ವರ್ಷ ಖಿನ್ನತೆಗೆ (Anxiety) ಒಳಗಾಗಿದ್ದರು.ಇದು ಈಗ ನನ್ನ ಜೀವನದ ಭಾಗವಾಗಿದೆ ಎಂದು ಗೋಲಾ ಹೇಳುತ್ತಾರೆ. ಗೋಲಾ, 33 ವರ್ಷ ವಯಸ್ಸಿನವರು ಮತ್ತು ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ.
ಟಿನ್ನಿಟಸ್ ವಿಧಗಳು
ಟಿನ್ನಿಟಸ್ ಮೂಲಭೂತವಾಗಿ ಕಿವಿಯಲ್ಲಿ ಬರುವ ಶಬ್ದವಾಗಿದೆ ಎಂದು ಹರ್ಯಾಣದ ಫರಿದಾಬಾದ್‌ನ ಅಮೃತಾ ಆಸ್ಪತ್ರೆಯ ಪ್ರೊಫೆಸರ್ ಮತ್ತು ಎಚ್‌ಒಡಿ ಡಾ ಎನ್‌ಎನ್ ಮಾಥೂರ್ ಹೇಳುತ್ತಾರೆ. ಇವು ರೂಪುಗೊಂಡ ಶಬ್ದಗಳಲ್ಲ. ಟಿನ್ನಿಟಸ್‌ನಲ್ಲಿ ಎರಡು ವಿಧಗಳಿವೆ. ವಸ್ತುನಿಷ್ಠ ಮತ್ತು ವ್ಯಕ್ತಿನಿಷ್ಠ. ಅವರು ಟಿನ್ನಿಟಸ್ ವಿಧಗಳನ್ನು ಹೀಗೆ ವಿವರಿಸುತ್ತಾರೆ.
ಮನುಷ್ಯನಿಗೆ ಟೆನ್ಶನ್ ಆದ್ರೆ ನಾಯಿಗೂ ಗೊತ್ತಾಗುತ್ತಾ ?
ಆಬ್ಜೆಕ್ಟಿವ್ ಟಿನ್ನಿಟಸ್: ಕೆಲವು ಸಂದರ್ಭಗಳಲ್ಲಿ, ಪೀಡಿತ ವ್ಯಕ್ತಿಯ ಕಿವಿಗೆ ಸ್ಟೆತೊಸ್ಕೋಪ್ ಹಾಕುವ ಮೂಲಕ ವೈದ್ಯರು ಟಿನ್ನಿಟಸ್ ಅನ್ನು ಕೇಳಬಹುದು. ಇದು ಕಿವಿಯಲ್ಲಿನ ವೈದ್ಯಕೀಯ ಸ್ಥಿತಿ, ಗಡ್ಡೆ, ಕುತ್ತಿಗೆಯ ಮೇಲಿರುವ ಅನ್ಯೂರಿಸ್ಮ್ ಅಥವಾ ಪ್ಯಾಲಟಲ್ ಮಯೋಕ್ಲೋನಸ್ ಕಾರಣದಿಂದಾಗಿರಬಹುದು. ಅದು ಕ್ಲಿಕ್-ಕ್ಲಿಕ್ ಶಬ್ದಕ್ಕೆ ಕಾರಣವಾಗಬಹುದು. ಆದರೆ ಇದು ತಾತ್ಕಾಲಿಕವಾಗಿದೆ ಮತ್ತು ವೈದ್ಯಕೀಯ ಸ್ಥಿತಿಗೆ ಚಿಕಿತ್ಸೆ ನೀಡಿದಾಗ ಶಬ್ದವು ನಿಲ್ಲುತ್ತದೆ. ಯಾವುದಾದರೂ ಒಂದು ಗೆಡ್ಡೆಯನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆ (Operation ನಡೆಸಿದ ಮೇಲೆ ಆರೋಗ್ಯ ಸರಿಯಾಗುತ್ತದೆ.
ಸಬ್ಜೆಕ್ಟಿವ್ ಟಿನ್ನಿಟಸ್: ಸಾಮಾನ್ಯವಾಗಿ ಟಿನ್ನಿಟಸ್ ವ್ಯಕ್ತಿನಿಷ್ಠ ಅಥವಾ ಇಡಿಯೋಪಥಿಕ್ ಟಿನ್ನಿಟಸ್ ಆಗಿದ್ದು ಅಲ್ಲಿ ನಮಗೆ ಕಾರಣ ತಿಳಿದಿಲ್ಲ. ಬಹುಪಾಲು ಜನರು ಈ ಪ್ರಕಾರದಿಂದ ಬಳಲುತ್ತಿದ್ದಾರೆ. ಯಾವುದೇ ಕಾರಣವನ್ನು ಕಂಡುಹಿಡಿಯಲಾಗುವುದಿಲ್ಲ. ಟಿನ್ನಿಟಸ್ಗೆ ಕಾರಣವಾಗುವ ಅಂಶಗಳಿವೆ. ಆದರೆ ಅದು ಎಲ್ಲಿಂದ ಉದ್ಭವಿಸುತ್ತದೆ ಎಂಬುದನ್ನು ಕಂಡುಹಿಡಿಯುವುದು ಅಸಾಧ್ಯ. ಸ್ಟೆತಸ್ಕೋಪ್ ಕಿವಿಗೆ ಹಾಕಿಕೊಂಡರೆ ಏನೂ ಕೇಳುವುದಿಲ್ಲ. ಇದರಲ್ಲಿ ಪೀಡಿತ ವ್ಯಕ್ತಿಗೆ ಮಾತ್ರ ಶಬ್ದ ಕೇಳಬಹುದು ಮತ್ತು ಬೇರೆ ಯಾರಿಗೂ ಇಲ್ಲ. ಇದು ಶಾಶ್ವತ ಸ್ಥಿತಿಯಾಗಿ ಉಳಿಯುತ್ತದೆ.
ಹೀಗಿದ್ದೂ, ಟಿನ್ನಿಟಸ್ ಸಮಸ್ಯೆ ಉಂಟಾಗಲು ಯಾವುದೇ ಸಂಭವನೀಯ ಕಾರಣವಿದೆಯೇ ಎಂದು ಕಂಡುಹಿಡಿಯಲು ವೈದ್ಯರು ತನಿಖೆ ನಡೆಸುತ್ತಾರೆ. ಟಿನ್ನಿಟಸ್ ಒಳಗಿನ ಕಿವಿಯಿಂದ ಮೆದುಳಿ (Brain)ನವರೆಗೆ ಯಾವುದೇ ಬಿಂದುವಿನಿಂದ ಉದ್ಭವಿಸಬಹುದು ಎಂದು ಡಾ.ಮಾಥುರ್ ಹೇಳುತ್ತಾರೆ. ಇದು ಒಳಗಿನ ಕಿವಿಯಿಂದ ಆಗಿರಬಹುದು ಅಥವಾ ಗ್ಯಾಂಗ್ಲಿಯಾನ್ ಆಗಿರಬಹುದು.