ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ 49 ನೇ ವಯಸ್ಸಿನಲ್ಲಿ ಕೂಡ ದಿನಾಲು ಕುಡಿಯುತ್ತಾರಂತೆ. ಇದುವೇ ಅವರ ಸೌಂದರ್ಯದ ಸೀಕ್ರೆಟ್ ಅಂತೆ. ಅವರೇನು ಕುಡಿತಾರೆ ಅನ್ನೋದು ನೀವೆ ಓದಿ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ 49 ನೇ ವಯಸ್ಸಿನಲ್ಲಿ ಕೂಡ ಸಂಪೂರ್ಣವಾಗಿ ಫಿಟ್ ಮತ್ತು ಅಸಾಧಾರಣ ಸೌಂದರ್ಯ ಹೊಂದಿದ್ದಾರೆ. ಶಿಲ್ಪಾ ಫಿಟ್‌ನೆಸ್ ಫ್ರೀಕ್, ವರ್ಕೌಟ್ ಜೊತೆಗೆ ಯೋಗಾಭ್ಯಾಸ ಸಹ ಮಾಡುತ್ತಾರೆ. ಹೀಗಾಗಿ 50ರ ಹರೆಯದ ಸಮೀಪದಲ್ಲೂ 20 ಯುವತಿಯಂತೆ ಕಾಣಿಸುತ್ತಾರೆ. ಆದರೆ ಇವರು ದಿನಾಲೂ ಕುಡಿತಾರೆ. ಒಂದು ದಿನವೂ ಕುಡಿಯದೇ ಇರುವುದೇ ಇಲ್ಲ. ಇದೇ ಅವರ ಸೌಂದರ್ಯದ ಸೀಕ್ರೆಟ್ ಅಂತೆ. ಆ ಡ್ರಿಂಕ್ ಏನು ಮುಂದೆ ಇದೆ ನೋಡಿ.
ಶಿಲ್ಪಾ ಶೆಟ್ಟಿ ಚಳಿಗಾಲ, ಮಳೆಗಾಲ ಮತ್ತು ಬೇಸಿಗೆ ಕಾಲಕ್ಕೆ ಏನೆಲ್ಲಾ ಆಹಾರ ಪದಾರ್ಥಗಳನ್ನು ಸೇವಿಸಬೇಕು ಮತ್ತು ಹೇಗೆ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕೆಂದು ಆರೋಗ್ಯಕರ ಟಿಪ್ಸ್ ಗಳನ್ನು ನೀಡುತ್ತಿರುತ್ತಾರೆ. ದೇಹದ ತೂಕ ಇಳಿಕೆಗೆ ಯಾವ ಆಹಾರವನ್ನು ತೆಗೆದುಕೊಳ್ಳಬೇಕೆಂದು ಹೇಳುತ್ತಿರುತ್ತಾರೆ.
undefined
ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವ ಬಗ್ಗೆ ಐವಿಎಫ್ ತಜ್ಞೆ ಅನುಮಾನ, ಬೇಬಿ ಬಂಪ್ ಶೇಪ್ ಬಗ್ಗೆ ಕಮೆಂಟ್!
ಶಿಲ್ಪಾ ಶೆಟ್ಟಿ ಬ್ಯೂಟಿ ಸೀಕ್ರೆಟ್ ಬಿಸಿನೀರು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಸೇವಿಸದೆ ಇರುವುದೇ ಇಲ್ಲ. ಒಂದು ದಿನವೂ ಇದನ್ನು ತಪ್ಪಿಸಿಲ್ಲ. ಇತ್ತೀಚೆಗೆ Instagram ನಲ್ಲಿ ಶಿಲ್ಪಾ ಶೆಟ್ಟಿ ಅವರ "ಮೆಚ್ಚಿನ ಪಾನೀಯ" ವನ್ನು ಬಹಿರಂಗಪಡಿಸಿದ್ದಾರೆ; ಗೆಸ್ ದಿ ಡ್ರಿಂಕ್ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ Instagram ನಲ್ಲಿ 'Ask-Me-Anything' (ಏನಾದರೂ ಕೇಳಿ) ಎಂದು ಪೋಸ್ಟ್ ಹಾಕಿದ್ದರು. ಇದರಲ್ಲಿ ತಮ್ಮ ನೆಚ್ಚಿನ ಪಾನೀಯದ ಬಗ್ಗೆ ಹಂಚಿಕೊಂಡಿದ್ದಾರೆ. ಬಿಸಿನೀರು ಹೆಚ್ಚು ಕುಡಿಯುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ.
ದೇಹವನ್ನು ಹೈಡ್ರೀಕರಿಸಿದಂತೆ ಶೋ ನಡೆಸುವಾಗಲೂ ಶಿಲ್ಪಾ ತನ್ನ ಪಕ್ಕದಲ್ಲಿ ಯಾವಾಗಲೂ ಬಿಸಿನೀರು ಇಟ್ಟುಕೊಂಡಿರುತ್ತೇನೆ ಎಂದು ಬಹಿರಂಗಪಡಿಸಿದರು. ಬಿಸಿ ನೀರು ಡಿಟಾಕ್ಸ್ ಸಹಾಯಕಾರಿ, ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ತೂಕ ಇಳಿಕೆಯನ್ನು ಉತ್ತೇಜಿಸುತ್ತದೆ.
ಸಂತಾನ ಭಾಗ್ಯವಿಲ್ಲದ್ದಕ್ಕೆ ಐವಿಫ್ ಮತ್ತು ಸರೋಗಸಿ ಮೂಲಕ ಮಕ್ಕಳನ್ನು ಪಡೆದ ತಾರೆಯರು
ಪ್ರತಿದಿನ ಬೆಳಗ್ಗೆ ಪಪ್ಪಾಯಿಯನ್ನು ಶಿಲ್ಪಾ ಶೆಟ್ಟಿ ಸೇವಿಸುತ್ತಾರೆ. ಬೇಯಿಸಿದ ಮೊಟ್ಟೆ ಮತ್ತು ಗಂಜಿ, ತರಕಾರಿಗಳು , ಮೀನು ಈಕೆಯ ಆಹಾರದಲ್ಲಿ ಇದ್ದೇ ಇದೆ. ಜೀರ್ಣಕ್ರಿಯೆಗೆ ಸಹಕಾರಿ ಆಗಲೆಂದು ಮಧ್ಯಾಹ್ನ ಊಟದ ನಂತರ ಶಿಲ್ಪಾ ತುಂಡು ಬೆಲ್ಲ ಸೇವಿಸುತ್ತಾರಂತೆ. ಸಂಜೆ ಹಸಿವಾದರೆ ಮಜ್ಜಿಗೆ, ರಾತ್ರಿಗೆ ಸೀಸನಲ್ ತರಕಾರಿಗಳ ಸಲಾಡ್, ಸೂಪ್ ಸೇವಿಸುತ್ತಾರಂತೆ.
ಇನ್ನು ಶುಂಠಿಗೆ ಬಿಸಿ ನೀರನ್ನು ಬೆರೆಸಿ ಕೂಡ ಶಿಲ್ಪಾ ಕುಡಿಯುತ್ತಾರೆ. ಇದು ಉತ್ತಮ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿಯನ್ನು ಸುಧಾರಣೆ, ಹೊಟ್ಟೆಯ ತೊಂದರೆಯನ್ನು ನಿವಾರಿಸುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಇನ್ನು ತುಳಸಿ ನೀರನ್ನು ಕೂಡ ಶಿಲ್ಪಾ ಸೇವಿಸುತ್ತಾರೆ. ಇದರಲ್ಲಿ ಅನೇಕ ಆರೋಗ್ಯ ಉಪಯೋಗಗಳಿವೆ. ಚಯಾಪಚಯ ಕ್ರಿಯೆಗಳು, ಮೆಟಬಾಲಿಸಮ್ ಲೆವೆಲ್ ಹೆಚ್ಚಿಸುತ್ತದೆ.
ಬೇಸಿಗೆ ಕಾಲದಲ್ಲಿ ಶಿಲ್ಪಾ ಕುಡಿಯುವ ಪಾನಿಯಗಳು ಇಂತಿದೆ:
ಮಿಂಟ್ ನಿಂಬು ಪಾನಿ: ನಿಂಬು (ಒಂದೂವರೆ ನಿಂಬು ರಸ), 4 ಸ್ಫೋನ್ ಬೆಲ್ಲದ ನೀರು, ನೆನೆಸಿದ ಸಬ್ಜಾ ಬೀಜಗಳು, ಶುಂಠಿ ಜ್ಯೂಸ್ (1 ಟೇಬಲ್ ಸ್ಫೂನ್), ಕಾಳುಮೆಣಸಿನ ಪುಡಿ ಕಾಲು ಸ್ಫೂನ್, ಉಪ್ಪು ಕಾಲು ಸ್ಫೂನ್, 10 ಎಲೆ ಪುದೀನ, ಇಷ್ಟನ್ನು 2 ಗ್ಲಾಸ್ ನೀರು ಮತ್ತು ಅರ್ಧ ಕಪ್ ಐಸ್ ಕ್ಯೂಬ್ ಜೊತೆಗೆ ಮಿಕ್ಸಿಂಗ್ ಮಾಡಿ ಕುಡಿಯಿರಿ. ಪುದೀನ ಎಲೆ ಚೆನ್ನಾಗಿ ಬ್ಲೇಂಡ್ ಆಗುವವರೆಗೂ ಮಿಕ್ಸಿ ಮಾಡಿ.
ಪುದೀನ ಮಜ್ಜಿಗೆ ರೆಸಿಪಿ: ಅರ್ಧ ಕಪ್ ಗಟ್ಟಿ ಮೊಸರು , ಸೋಂಪು ಕಾಳು ಅರ್ಧ ಟೀ ಸ್ಫೋನ್, ಹುರಿದ ಮೆಂತ್ಯೆ ಕಾಳು ಅರ್ಧ ಟೀ ಸ್ಫೋನ್, ಪುದೀನ 10 ಎಲೆ, ಕಪ್ಪು ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು ಕಾಲು ಕಪ್ಪು, 1 ಹಸಿಮೆಣಸಿನಕಾಯಿ ಹಾಕಿ ರುಬ್ಬಿ ನಿಮ್ಮ ಹದಕ್ಕೆ ನೀರು ಹಾಕಿ ಕುಡಿಯಿರಿ.