ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವ ಬಗ್ಗೆ ಐವಿಎಫ್ ತಜ್ಞೆ ಅನುಮಾನ, ಬೇಬಿ ಬಂಪ್‌ ಶೇಪ್ ಬಗ್ಗೆ ಕಮೆಂಟ್‌!

By Gowthami K  |  First Published Jul 1, 2024, 4:13 PM IST

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವೈದ್ಯೆ, ಬೇಬಿ ಬಂಪ್‌ ಆರ್ಟಿಫಿಶಲ್ ಆಗಿರಬಹುದು ಎಂದಿದ್ದಾರೆ.


ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಗರ್ಭಿಣಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.  ಸೆಪ್ಟೆಂಬರ್​ ತಿಂಗಳಿನಲ್ಲಿ ಮಗು ಹುಟ್ಟುತ್ತಿರುವುದಾಗಿ  ನಟಿ ಈಚೆಗೆ ಖುದ್ದು ಸೋಷಿಯಲ್‌ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು. ಮಂಗಳೂರು ಮೂಲದವರಾಗಿರುವ ದೀಪಿಕಾ ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. 

ಆದರೆ ಅವರು ಗರ್ಭಿಣಿಯಾಗಿರುವ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಫೇಕ್‌ ಬೇಬಿ ಬಂಪ್ ಇಟ್ಟುಕೊಂಡಿದ್ದಾರೆ ಎಂದೆಲ್ಲ ಸುದ್ದಿಯಾಗಿತ್ತು. ಇದಕ್ಕೆ ಅವರದ್ದೇ ಆಗ ಕಾರಣಗಳನ್ನು ಹಲವು ಮಂದಿ ನೀಡಿದ್ದಾರೆ.

Tap to resize

Latest Videos

ಸಂತಾನ ಭಾಗ್ಯವಿಲ್ಲದ್ದಕ್ಕೆ ಐವಿಫ್‌ ಮತ್ತು ಸರೋಗಸಿ ಮೂಲಕ ಮಕ್ಕಳನ್ನು ಪಡೆದ ತಾರೆಯರು

ಈ ಬಗ್ಗೆ ಈಗ ಇನ್‌ಸ್ಪೈಯರ್ ಅಪ್‌ಲಿಫ್ಟ್ ಎಂಬ ಪಾಡ್‌ಕಾಸ್ಟ್ ನಲ್ಲಿ ಚರ್ಚೆಯಾಗಿದೆ. IVF ಎಕ್ಸ್‌ಪರ್ಟ್ ಡಾ. ಗೌರಿ ಅಗರ್ವಾಲ್ ಎಂಬಾಕೆ ಐವಿಎಫ್ ಮತ್ತು ಐಯುಐ ಬಗ್ಗೆ ಇದರಲ್ಲಿ ಮಾತನಾಡಿದ್ದು, ದೀಪಿಕಾ ಗರ್ಭಿಣಿಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಾಲಿವುಡ್‌ನಲ್ಲಿ ಅನೇಕ ನಟಿಯರಿಗೆ ಲೇಟಾಗಿ ಮಕ್ಕಳು ಆಗುವುದು ಯಾಕೆ ಎಂಬ ಬಗ್ಗೆ ಮಾತನಾಡಿದ್ದಾರೆ.

ಬಾಲಿವುಡ್‌ ನಲ್ಲಿ ಅನೇಕ ನಟಿಯರು ತುಂಬಾ ಯಂಗ್ ಆಗಿದ್ದರೆ ನಾರ್ಮಲ್‌ ಮಗು ಹೆರುತ್ತಾರೆ. ಆದರೆ ಕೆಲವು ನಟಿಯರು ವಯಸ್ಸಾಗಿದೆ ಎಂದರೆ ಅವರು ಐವಿಎಫ್ ಮೊರೆ ಹೋಗುತ್ತಾರೆ.  ದೀಪಿಕಾ ಪಡುಕೋಣೆ ಈಗ ಗರ್ಭಿಣಿ ಎಂಬುದು ವಿವಾದದಲ್ಲಿದೆ. ಬಾಲಿವುಡ್‌ ಅಂಗಳದಲ್ಲಿ ದೀಪಿಕಾ ಪ್ರಗ್ನೆಂಟ್‌ ಅಥವಾ ಸರೋಗಸಿ ಮೂಲಕ ಮಗು ಹೆಡೆಯುತ್ತಾರೆ ಎಂಬುದು  ಒಂದು ಚರ್ಚಿತ ವಿಷಯವಾಗಿದೆ ಎಂದಿದ್ದಾರೆ.

2024ರಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿ, ಸಿಹಿ ಸುದ್ದಿ ಹಂಚಿಕೊಂಡ 9 ಕನ್ನಡ ಸೆಲೆಬ್ರಿಟಿಗಳು

ಅದಕ್ಕೆ ನಿರೂಪಕ ಅವರು ಬೇಬಿ ಬಂಪ್ ಹೊಂದಿರುವ ಫೋಟೋ ವಿಡಿಯೋಗಳನ್ನು ದಿನಾಲು ನೋಡುತ್ತಿದ್ದೇವೆ  ಎಂದಿದ್ದಕ್ಕೆ ಉತ್ತರಿಸಿದ ಡಾ. ಗೌರಿ ಅಗರ್ವಾಲ್ ಅವರನ್ನು ನೋಡುವಾಗ  ಆರ್ಟಿಫಿಶಲ್ ಬೇಬಿ ಬಂಪ್ ಆಗಿರುವ ಸಾಧ್ಯತೆ ಹೆಚ್ಚಿದೆ. ಆದ್ರೆ ಹೇಳಲಾಗುವುದಿಲ್ಲ ನಿಜವೂ ಆಗಿರಬಹುದು ಎಂದು ಕೂಡ ಸೇರಿಸಿದ್ದಾರೆ. ಅಂದರೆ ದೀಪಿಕಾ ಹೊಟ್ಟೆಯು ಗರ್ಭಿಣಿಯರಿಗೆ ಇರುವ ಹೊಟ್ಟೆಯಂತೆ ಇಲ್ಲ ಎಂಬುದು ಅವರ ಮಾತುಗಳಲ್ಲಿ ಹೇಳಿದಂತಿದೆ.

ಅವರೆಲ್ಲ ಹಿರೋಯಿನ್‌ ಗಳು ಅವರ ಫಿಗರ್ ಮೇಂಟೇನ್ ಮಾಡಲೇಬೇಕು ಎಂಬ ಯೋಚನೆ ಇರುತ್ತದೆ. ಗರ್ಭಿಣಿ ಆದ ತಕ್ಷಣ ದೇಹದಲ್ಲಿ ಕೊಬ್ಬಿನ ಅಂಶಗಳು ಸಹಜವಾಗಿ ಏರಿಕೆಯಾಗುತ್ತದೆ. ದೇಹವೂ ಒಂದೇ ತರ ಇರಲು ಸಾಧ್ಯವೇ ಇಲ್ಲ. ಮುಖದಲ್ಲೂ ಕೂಡ ಲಕ್ಷಣಗಳು ಬದಲಾಗುತ್ತದೆ. ಹೀಗಾಗಿ ಹೆಚ್ಚಿನ ಬಾಲಿವುಡ್‌ ನಟಿಯರು ಸರೋಗಸಿ ಮೂಲಕ ಮಗು ಪಡೆಯುತ್ತಾರೆ. 

ಮಹಿಳೆಯರಿಗೆ 50 ವರ್ಷವಾಗುವವರೆಗೂ ಐವಿಎಫ್ ಮಾಡುವ ಅವಕಾಶ ಇದೆ ಎಂದಿದ್ದಾರೆ. ಭಾರತದಲ್ಲಿ ಐವಿಎಫ್ ಮಾಡುವುದಕ್ಕೆ ಹಲವಾರು ಕಾನೂನು ಮತ್ತು ನಿಯಮಗಳಿವೆ. ಹೆಣ್ಣು ಮತ್ತು ಗಂಡು ಮಕ್ಕಳಲ್ಲಿ ಇಂತಹದ್ದೇ ಮಗು ಬೇಕೆಂದು ಬೇಡಿಕೆ ಇಡುವಂತಿಲ್ಲ. ವಿದೇಶದಲ್ಲಿ ಕೆಲವು ಕಡೆ ಇದು ಇರಬಹುದು ಆದರೆ ಭಾರತದಲ್ಲಿ ಎಲ್ಲವೂ ಕಠಿಣ ನಿಯಮಗಳನ್ನು ಒಳಗೊಂಡಿದೆ ಎಂದಿದ್ದಾರೆ.

ಸದ್ಯ ದೀಪಿಕಾ ಪಡುಕೋಣೆಗೆ 38 ವರ್ಷ ವಯಸ್ಸಾಗಿದೆ. ಈ ವಯಸ್ಸಿನಲ್ಲಿ ಈಗಿನ ಜೀವನ ಶೈಲಿಗೆ ಮಕ್ಕಳಾಗುವ ಸಾಧ್ಯತೆ ಕಡಿಮೆ. ಉತ್ತಮ  ಆರೋಗ್ಯವಂತ ಮಹಿಳೆಗೆ 45 ವರ್ಷಗಳ ತನಕ ಆರಾಮವಾಗಿ ಮಗುವ ಹೆರುವ ಸಾಮರ್ಥ್ಯ ಇದೆ. ದೀಪಿಕಾ ಐವಿಫ್‌ ಮೂಲಕ ಮಗು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಜೊತೆಗೆ ಸರೋಗಸಿ ಮೂಲಕ ಪಡೆಯುತ್ತಾರೆ ಎನ್ನಲಾಗುತ್ತಿದ್ದು, ಈಗ ದೀಪಿಕಾ ಫೇಕ್ ಬೇಬಿ ಬಂಪ್ ಹಾಕಿಕೊಂಡಿದ್ದಾರೆ ಎಂದು ಚರ್ಚೆಗಳು ಇದ್ದೇ ಇದೆ. ಬಾಲಿವುಡ್‌ ನಲ್ಲಿ ಅನೇಕ ಮಂದಿ ಐವಿಎಫ್ ಮತ್ತು ಸರೋಗಸಿ ಮೂಲಕ ಮಗುವನ್ನು ಪಡೆದವರು ಇದ್ದಾರೆ. 

ಅದೇನೇ ಇರಲಿ ದೀಪಿಕಾ ಮತ್ತು ರಣವೀರ್​ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಜೋಡಿ,  25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿತ್ತು.  ಮದುವೆಯಾಗಿ ಸುಮಾರು 5 ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿಯಾಗಿರುವ ಬಗ್ಗೆ ಕೇಳಿಬರುತ್ತಿರುವ ಮಾತುಗಳ ಬಗ್ಗೆ ಯಾವುದೇ ಚಿಂತೆ ಮಾಡದೆ ತಮ್ಮಷ್ಟಕ್ಕೆ ತಾವು ಬೇಬಿ ಬಂಪ್ ತೋರಿಸಿಕೊಂಡೇ ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆ. 

click me!