ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸೀತಾ ರಾಮ' ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ಮುದ್ದಾದ ನಾಯಕ-ನಾಯಕಿಯ ಪ್ರೇಮಕಥೆ ನಡುವೆ ಕ್ಯೂಟ್ ಮಗು ಸಿಹಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಆದರೆ ಈ ಸೀರಿಯಲ್‌ನಲ್ಲಿ ಮಗುವಿಗೆ ಡಯಾಬಿಟಿಸ್ ಇದೆ ಅನ್ನೋದು ಸೀರಿಯಲ್ ನೋಡಿದವರಿಗೆ ತಿಳಿದಿರುತ್ತದೆ. ಅಷ್ಟಕ್ಕೂ ಮಕ್ಕಳನ್ನು ಕಾಡೋ ಡಯಾಬಿಟಿಸ್ ಹೇಗಿರುತ್ತೆ?
ಇವತ್ತಿನ ದಿನಗಳಲ್ಲಿ ಮಧುಮೇಹ ಅನ್ನೋದು ಸಾಮಾನ್ಯ ಆರೋಗ್ಯ ಸಮಸ್ಯೆ ಎಂಬಂತಾಗಿ ಬಿಟ್ಟಿದೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರೂ ಸಹ ಈ ತೊಂದರೆ ಅನುಭವಿಸುತ್ತಾರೆ. ಮಧುಮೇಹವು ಗುಣಪಡಿಸಲಾಗದ ಕಾಯಿಲೆಯಾಗಿದೆ ಮತ್ತು ನಮ್ಮ ಕೆಟ್ಟ ಜೀವನಶೈಲಿಯೊಂದಿಗೆ ಸಂಬಂಧ ಹೊಂದಿದೆ. ಅದರಲ್ಲೂ ಮಕ್ಕಳಲ್ಲೂ ಈ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಗಾಬರಿಯಾಗುವುದು ಸಹಜ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸೀತಾ ರಾಮ' ಧಾರಾವಾಹಿಯಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ತಿರೋ ಡಯಾಬಿಟಿಸ್ ಬಗ್ಗೆ ಹೇಳಲಾಗಿದೆ. ಸೀರಿಯಲ್‌ನಲ್ಲಿ ಮುದ್ದಾದ ನಾಯಕ-ನಾಯಕಿಯ ಪ್ರೇಮಕಥೆಯ ನಡುವೆ ಕ್ಯೂಟ್ ಮಗು ಸಿಹಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಆದರೆ ಈ ಸೀರಿಯಲ್‌ನಲ್ಲಿ ಮಗುವಿಗೆ ಡಯಾಬಿಟಿಸ್ ಇದೆ ಅನ್ನೋದು ಸೀರಿಯಲ್ ನೋಡಿದವರಿಗೆ ತಿಳಿದಿರುತ್ತದೆ. ಅಷ್ಟಕ್ಕೂ ಮಕ್ಕಳನ್ನು ಕಾಡೋ ಡಯಾಬಿಟಿಸ್ ಹೇಗಿರುತ್ತೆ?
ಇತ್ತೀಚಿನ ಅಧ್ಯಯನದಿಂದ ಭಾರತದಲ್ಲಿ ಅತಿ ಹೆಚ್ಚು ಮಧುಮೇಹ (Diabetes) ರೋಗಿಗಳಿದ್ದಾರೆ ಎಂಬುದು ತಿಳಿದುಬಂದಿದೆ. ಆದರೆ ಆಘಾತಕಾರಿ ವಿಷಯವೆಂದರೆ ಮೊದಲು ಈ ರೋಗವು (Disease) ವಯಸ್ಸಾದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು, ಆದರೆ ಇಂದು ಮಕ್ಕಳು (Children) ಮತ್ತು ಯುವಕರು ಸಹ ಇದಕ್ಕೆ ಬಲಿಯಾಗುತ್ತಿದ್ದಾರೆ. ಸಿಹಿ ಇಷ್ಟಪಟ್ಟು ತಿನ್ನೋ ವಯಸ್ಸಿನಲ್ಲಿ ಮಕ್ಕಳು ಡಯಾಬಿಟಿಸ್‌ನಿಂದ ಬಳಲುತ್ತಾರೆ. ಮಕ್ಕಳಲ್ಲಿ ಮಧುಮೇಹವಿದ್ದಾಗ ಯಾವೆಲ್ಲಾ ರೋಗ ಲಕ್ಷಣಗಳು (Symptoms) ಕಾಣಿಸಿಕೊಳ್ಳುತ್ತವೆ. ಇಲ್ಲಿದೆ ಮಾಹಿತಿ.
ಬ್ಲಡ್ ಶುಗರ್ ಲೆವೆಲ್ ಕಡಿಮೆ ಮಾಡ್ಕೊಳ್ಳೋಕೆ ಸಿಂಪಲ್ ಮನೆಮದ್ದು
ಮಧುಮೇಹದ ಆರಂಭಿಕ ಲಕ್ಷಣಗಳು ಹೇಗಿರುತ್ತವೆ?
ಬೇಗ ಸುಸ್ತಾಗುವುದು
ಡಯಾಬಿಟಿಸ್ ಇದ್ದಾಗ ದೇಹಕ್ಕೆ ಬೇಗ ಸುಸ್ತಾಗುತ್ತದೆ. ದೇಹವು ಸಾಕಷ್ಟು ಪ್ರಮಾಣದ ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗದಿದ್ದಾಗ ಅಥವಾ ಅದನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಲು ಸಾಧ್ಯವಾಗದಿದ್ದಾಗ ಮಕ್ಕಳಲ್ಲಿ ತೀವ್ರ ಆಯಾಸ ಕಾಣಿಸಿಕೊಳ್ಳುತ್ತದೆ. ಇಂಥಾ ಸಂದರ್ಭದಲ್ಲಿ ಇದು ಮಧುಮೇಹ ಅಥವಾ ಇತರ ಯಾವುದೇ ಆರೋಗ್ಯ ಸಮಸ್ಯೆಗಳ (Health problem) ಸಂಕೇತವಾಗಿರಬಹುದು. ಹೀಗಾಗಿ ವೈದ್ಯರ ಬಳಿಕ ಕರೆದೊಯ್ದು ಪರಿಶೀಲಿಸುವುದು ಒಳಿತು.
ಅತಿಯಾದ ಬಾಯಾರಿಕೆ
ಮಧುಮೇಹ ರೋಗಿಗಳು ಹೆಚ್ಚು ಬಾಯಾರಿಕೆಯನ್ನು ಅನುಭವಿಸುತ್ತಾರೆ. ಹೀಗಾಗಿ ನಿಮಗೆ ಮತ್ತೆ ಮತ್ತೆ ಬಾಯಾರಿಕೆಯಾಗುತ್ತಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಅಥವಾ ನಿಮ್ಮ ಮಗುವಿಗೆ ಹೀಗೆ ಆಗುತ್ತಿದ್ದರೆ ಪರಿಶೀಲಿಸುವುದು ಒಳ್ಳೆಯದು. ರಕ್ತದಲ್ಲಿನ ಸಕ್ಕರೆ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಆಗಾಗ ಬಾಯಾರಿಕೆಯಾಗುವುದು ಮಧುಮೇಹವೇ ಆಗಿರಬೇಕೆಂದಿಲ್ಲ. ಇದನ್ನು ಪರೀಕ್ಷೆ ಮಾಡಿ ತಿಳಿದುಕೊಳ್ಳುವುದು ಒಳ್ಳೆಯದು.
ಪದೇ ಪದೇ ಸೋಂಕಿಗೆ ಒಳಗಾಗುವುದು
ಪದೇ ಪದೇ ಸೋಂಕಿಗೆ ಒಳಗಾಗುವುದು ಮಧುಮೇಹದ ಆರಂಭಿಕ ಲಕ್ಷಣವಾಗಿದೆ. ರಕ್ತದಲ್ಲಿನ ಸಕ್ಕರೆಯ ಹೆಚ್ಚಳದಿಂದಾಗಿ, ಪ್ರತಿರಕ್ಷಣಾ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಪುನರಾವರ್ತಿತ ಸೋಂಕುಗಳು ಸಂಭವಿಸಬಹುದು. ಮಕ್ಕಳಲ್ಲಿ ಈ ರೀತಿಯಿದ್ದರೆ ಇದು ಮಧುಮೇಹದ ಸೂಚನೆಯೂ ಆಗಿರಬಹುದು.
Health Tips: ಶುಗರ್ ಲೆವೆಲ್ ಹೆಚ್ಚಾದ್ರೆ ಆಗೋ ಅನಾಹುತ ಒಂದೆರಡಲ್ಲ, ಹುಷಾರು
ನಿಧಾನ ಚೇತರಿಕೆ
ಮಧುಮೇಹವಿದ್ದಾಗ ಸಾಮಾನ್ಯವಾಗಿ ಗಾಯ ಗುಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ದೇಹದಲ್ಲಿ ಸಕ್ಕರೆಯ ಮಟ್ಟವು (Sugar level) ಹೆಚ್ಚಾದಾಗ, ಪ್ರತಿರಕ್ಷಣಾ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ, ಇದರಿಂದಾಗಿ ಗಾಯವನ್ನು ಸರಿಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳಲ್ಲಿ ಈ ರೀತಿಯಾಗುತ್ತಿದ್ದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಅತಿಯಾಗಿ ತಿನ್ನುವ ಅಭ್ಯಾಸ
ಅತಿಯಾದ ಹಸಿವು, ಮಧುಮೇಹದ ಇನ್ನೊಂದು ಲಕ್ಷಣವಾಗಿದೆ. ಚಿಕ್ಕ ವಯಸ್ಸಿನಲ್ಲಿ ಹೆಚ್ಚು ಹಸಿವು ಅನುಭವಿಸುವುದು ಸಾಮಾನ್ಯವಾಗಿದೆ. ಆದರೂ ಸಾಮಾನ್ಯಕ್ಕಿಂತ ಅತಿ ಹೆಚ್ಚು ತಿನ್ನುವುದು ನಿಮ್ಮ ಗಮನಕ್ಕೆ ಬಂದರೆ ನಂತರ ವೈದ್ಯರನ್ನು ಭೇಟಿ ಮಾಡಲು ವಿಳಂಬ ಮಾಡಬೇಡಿ.
'ಸೀತಾ ರಾಮ' ಧಾರಾವಾಹಿಯಲ್ಲಿಯೂ ಮಕ್ಕಳನ್ನು ಕಾಡೋ ಈ ಡಯಾಬಿಟಿಸ್ ಬಗ್ಗೆಯೇ ವಿವರಿಸಲಾಗಿದೆ. ಮುದ್ದು ಮಗು ಸಿಹಿ ವರ್ಷಕ್ಕೊಮ್ಮೆ ಕೇವಲ ತನ್ನ ಬರ್ತ್‌ಡೇ ದಿನ ಮಾತ್ರ ಸ್ವೀಟ್ ತಿನ್ನುತ್ತಾಳೆ. ಬಿ ಮಧುಸೂದನ್ ನಿರ್ದೇಶನದಲ್ಲಿ ಮೂಡಿಬರಲಿರುವ 'ಸೀತಾ ರಾಮ' ಧಾರಾವಾಹಿ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು, ಇದರಲ್ಲಿ ಖ್ಯಾತ ನಟಿ ವೈಷ್ಣವಿ ಗೌಡ, ನಾಯಕ ರಾಮನಾಗಿ ಗಗನ್ ಚಿನ್ನಪ್ಪ ಮತ್ತು ಇವರಿಬ್ಬರಿಗೆ ಸೇತುವೆಯಾಗುವ ಪುಟಾಣಿ ಸಿಹಿ ಪಾತ್ರದಲ್ಲಿ ಡ್ರಾಮಾ ಜೂನಿಯರ್ಸ್ ಖ್ಯಾತಿಯ ರಿತು ಸಿಂಗ್ ಕಾಣಿಸಿಕೊಂಡಿದ್ದಾರೆ.