
ಜಗತ್ತು ಕೊರೊನಾದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಕೊರೊನಾ ದಾಳಿಗೆ ಲಕ್ಷಾಂತರ ಮಂದಿ ಬಲಿಯಾಗಿದ್ದು, ಈಗ್ಲೂ ಅದರ ಹೊಸ ಹೊಸ ರೂಪಾಂತರಗಳು ವಿಶ್ವವನ್ನು ಕಾಡುತ್ತಿವೆ. ಈ ಮಧ್ಯೆ ವಿಜ್ಞಾನಿಗಳು ಇನ್ನೊಂದು ವೈರಸ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕೊರೊನಾಗಿಂತ ಅಪಾಯಕಾರಿ ವೈರಸ್ ಒಂದರ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಜಗತ್ತಿಗೆ ವಿನಾಶವನ್ನು ಉಂಟುಮಾಡುವ ಈ ವೈರಸ್ ಆರ್ಕ್ಟಿಕ್ ಮತ್ತು ಇತರ ಸ್ಥಳಗಳಲ್ಲಿ ಹಿಮದ ಶಿಖರಗಳ ಅಡಿಯಲ್ಲಿ ಹೂತುಹೋಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಅಪಾಯಕಾರಿ ಮತ್ತು ವಿನಾಶಕಾರಿ ವೈರಸ್‌ನ ಹೆಸರು ಜೊಂಬಿ ವೈರಸ್.
ಜಾಗತಿಕ (Global) ತಾಪಮಾನ ಏರಿಕೆಯಿಂದಾಗಿ ತಾಪಮಾನ (Temperature) ಹೆಚ್ಚಾಗುತ್ತಿದೆ. ಇದರಿಂದ ಹೆಪ್ಪುಗಟ್ಟಿದ ಹಿಮ ಕರಗಲು ಪ್ರಾರಂಭಿಸಿದೆ. ಹೀಗೆ ಹಿಮ ಕರಗಿದಲ್ಲಿ ಆರ್ಕ್ಟಿಕ್ ಪರ್ಮಾಫ್ರಾಸ್ಟ್ (Permafrost ) ನಿಂದ ಜೊಂಬಿ ವೈರಸ್‌ಗಳು ಹೊರಹೊಮ್ಮಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ವೈರಸ್ ವಿಶ್ವದಲ್ಲಿ ದುರಂತ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದ್ದಾರೆ.
ವೆಬ್ ಸೀರೀಸ್ ನೋಡೋದಕ್ಕೆ ರಾತ್ರಿಯೆಲ್ಲಾ ಎಚ್ಚರ ಇರೋರಿಗೆ ಇದು ಎಚ್ಚರಿಕೆಯ ಕರೆಗಂಟೆ!
ಪರ್ಮಾಫ್ರಾಸ್ಟ್ ಎಂದರೇನು? : ಭೂಮಿಯ ಮೇಲ್ಮೈ ಮೇಲೆ ಅಥವಾ ಕೆಳಗೆ ಶಾಶ್ವತವಾಗಿ ಹೆಪ್ಪುಗಟ್ಟಿದ ಪದರವನ್ನು ಪರ್ಮಾಫ್ರಾಸ್ಟ್ ಎಂದು ಕರೆಯಲಾಗುತ್ತದೆ. ಈ ಪದರವು ಮಣ್ಣು, ಜಲ್ಲಿ ಮತ್ತು ಮರಳನ್ನು ಒಳಗೊಂಡಿದೆ. ಇದನ್ನು ಸಾಮಾನ್ಯವಾಗಿ ಮಂಜುಗಡ್ಡೆಯಿಂದ ಒಟ್ಟಿಗೆ ಹಿಡಿದಿಟ್ಟುಕೊಳ್ಳಲಾಗುತ್ತದೆ. ಪರ್ಮಾಫ್ರಾಸ್ಟ್ ಉತ್ತರ ಗೋಳಾರ್ಧದ ಐದನೇ ಭಾಗವನ್ನು ಆವರಿಸುತ್ತದೆ. ದೀರ್ಘಕಾಲದವರೆಗೆ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಮಣ್ಣಿನಿಂದ ಮಾಡಲ್ಪಟ್ಟಿದೆ. ಕೆಲವು ಪದರಗಳು ನೂರಾರು ಸಾವಿರ ವರ್ಷಗಳಿಂದ ಹೆಪ್ಪುಗಟ್ಟಿದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಈ ಪ್ರದೇಶವು ಜಾಗತಿಕ ತಾಪಮಾನ ಏರಿಕೆಯ ಸರಾಸರಿ ದರಕ್ಕಿಂತ ಹಲವಾರು ಪಟ್ಟು ವೇಗವಾಗಿ ಬಿಸಿಯಾಗುತ್ತಿದೆ. ಇದು ಗಮನಾರ್ಹವಾಗಿ ಆತಂಕವನ್ನು ಉಂಟುಮಾಡುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೆನಡಾ, ಸೈಬೀರಿಯಾ ಮತ್ತು ಅಲಾಸ್ಕಾದಲ್ಲಿ ಹಿಮ ವೇಗವಾಗಿ ಕರಗುತ್ತಿರುವ ಕಾರಣ ಪರ್ಮಾಫ್ರಾಸ್ಟ್ ವೇಗವಾಗಿ ಬದಲಾಗುತ್ತಿದೆ ಎಂದು ಹವಾಮಾನಶಾಸ್ತ್ರಜ್ಞರು ಹೇಳುತ್ತಾರೆ.
ಹಿಂದಿನ ವರ್ಷ ನಡೆದಿತ್ತು ಸಂಶೋಧನೆ : ಕಳೆದ ವರ್ಷ ವಿಜ್ಞಾನಿಯೊಬ್ಬರು ಅಪಾಯವನ್ನು ಅರ್ಥಮಾಡಿಕೊಳ್ಳಲು ಸೈಬೀರಿಯನ್ ಪರ್ಮಾಫ್ರಾಸ್ಟ್‌ನಿಂದ ತೆಗೆದ ಮಾದರಿಗಳಿಂದ ಸಂಶೋಧನೆ ಮಾಡಿದ್ದರು. ಏಳು ವಿಭಿನ್ನ ಸೈಬೀರಿಯನ್ ಸ್ಥಳಗಳಿಂದ ಹಲವಾರು ವೈರಸ್‌ಗಳನ್ನು ಅವರು ಪತ್ತೆ ಮಾಡಿದ್ದರು. ಇವು ಸೋಂಕನ್ನು ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಹಿರಂಗಪಡಿಸಿದ್ದರು. ಈ ವೈರಸ್ ಮಾದರಿಗಳಲ್ಲಿ ಒಂದು 48,500 ವರ್ಷಗಳಷ್ಟು ಹಳೆಯದು. ಮಾನವ ಮತ್ತು ಅನೇಕ ಪ್ರಾಣಿ ಪ್ರಭೇದಗಳಿಗಿಂತ ಹಳೆಯದಾಗಿದೆ. ಪ್ರತ್ಯೇಕಿಸಲಾದ ವೈರಸ್‌ಗಳು ಅಮೀಬಾಗಳನ್ನು ಮಾತ್ರ ಸೋಂಕಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಮನುಷ್ಯರಿಗೆ ಅಪಾಯವಲ್ಲ ಎಂದು ಕ್ಲಾವೆರಿ ವರದಿ ಮಾಡಿತ್ತು.
ರೋಟರ್‌ಡ್ಯಾಮ್‌ನ ಎರಾಸ್ಮಸ್ ವೈದ್ಯಕೀಯ ಕೇಂದ್ರದ ವಿಜ್ಞಾನಿ ಮರಿಯನ್ ಕೂಪ್‌ಮ್ಯಾನ್ಸ್, ಪರ್ಮಾಫ್ರಾಸ್ಟ್‌ನಲ್ಲಿ ಯಾವ ವೈರಸ್‌ಗಳು ಇರುತ್ತವೆ ಎಂದು ನಮಗೆ ತಿಳಿದಿಲ್ಲ. ಆದರೆ ಯಾರಾದರೂ ವೈರಸ್ ಅನ್ನು ಪ್ರಚೋದಿಸಿದರೆ ದೊಡ್ಡ ಅಪಾಯ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಇದರಿಂದ ದೊಡ್ಡ ಸಾಂಕ್ರಾಮಿಕ ರೋಗ ಬರಬಹುದು. ಅದು ಏನೇ ಆಗಿರಬಹುದು. ಇದು ಪೋಲಿಯೊದ ಪ್ರಾಚೀನ ರೂಪವಾಗಿರಬಹುದು. ಸಾವಿರಾರು ವರ್ಷಗಳಿಂದ ಪರ್ಮಾಫ್ರಾಸ್ಟ್‌ನಲ್ಲಿ ಹೂಳಲ್ಪಟ್ಟಿದ್ದರೂ ಸಹ ಲೈವ್ ವೈರಸ್‌ಗಳು ಏಕಕೋಶೀಯ ಜೀವಿಗಳಿಗೆ ಸೋಂಕು ತರಬಹುದು ಎಂದವರು ಹೇಳಿದ್ದಾರೆ.
ಸ್ಮೋಕಿಂಗ್ ಮಾಡ್ತೀರಾ?... ಸೆಕ್ಸ್ ಲೈಫ್ ಹಾಳಾಗೋಗುತ್ತೆ !
ಜೊಂಬಿ ವೈರಸ್ ಹೇಗೆ ಸೋಂಕಿಗೆ ಒಳಗಾಗಬಹುದು? : ವಿಜ್ಞಾನಿಗಳು ಹೇಳುವಂತೆ ವೈರಸ್‌ಗಳು ಅಮೀಬಾಗಳಿಗೆ ಮಾತ್ರ ಸೋಂಕು ತಗುಲುತ್ತವೆ ಮತ್ತು ಅವು ಪ್ರತ್ಯೇಕವಾಗಿರುವುದರಿಂದ ಮನುಷ್ಯರಿಗೆ ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ. ಆದಾಗ್ಯೂ, ಹವಾಮಾನ ಬದಲಾವಣೆಗಳೊಂದಿಗೆ, ಪ್ರಸ್ತುತ ಪರ್ಮಾಫ್ರಾಸ್ಟ್‌ನಲ್ಲಿ ಹೆಪ್ಪುಗಟ್ಟಿದವುಗಳು ಯೋಚಿಸಲಾಗದದನ್ನು ಮಾಡಬಹುದು ಎನ್ನುತ್ತಾರೆ ವಿಜ್ಞಾನಿಗಳು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.