ನಟಿ ಸಮಂತಾ ರುತ್ ಪ್ರಭುಗೆ Myositis ಕಾಯಿಲೆ: ಈ ರೋಗದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ..

By BK Ashwin  |  First Published Oct 29, 2022, 7:42 PM IST

ಮೈಯೋಸಿಟಿಸ್, ಎಂಬ ಸ್ಥಿತಿಯು ಒಂದಲ್ಲ, ಆದರೆ ಅಪರೂಪದ ಪರಿಸ್ಥಿತಿಗಳ ಗುಂಪನ್ನು ಸೂಚಿಸುತ್ತದೆ. ಇದು ನಿಮ್ಮ ರೋಗನಿರೋಧಕ ವ್ಯವಸ್ಥೆಯು ಸ್ನಾಯುಗಳ ಮೇಲೆ ದಾಳಿ ಮಾಡುವ ಸ್ಥಿತಿಯಾಗಿದೆ. ಸ್ನಾಯುಗಳಲ್ಲಿ ಉರಿಯೂತಕ್ಕೆ ಕಾರಣವಾಗುವ ಒಂದು ಅಥವಾ ಹೆಚ್ಚಿನ ಬಹು ಪರಿಸ್ಥಿತಿಗಳಿಂದ ಈ ರೋಗವು ಉಂಟಾಗಬಹುದು.


ಕಾಲಿವುಡ್‌ ನಟಿ (Kollywood Actress) ಸಮಂತಾ ರುತ್‌ ಪ್ರಭು (Samantha Ruth Prabhu) ಅವರಿಗೇನೋ ಆರೋಗ್ಯ ಸಮಸ್ಯೆ (Health Problem) ಇದೆ ಎಂಬ ಬಗ್ಗೆ ಕೆಲವು ದಿನಗಳಿಂದ ಅನುಮಾನ ಕಾಡುತ್ತಿತ್ತು. ಇದೀಗ, ಸ್ವತ: ನಟಿ ಸಮಂತಾ ರುತ್‌ ಪ್ರಭು ಈ ಬಗ್ಗೆ ಬಹಿರಂಗಪಡಿಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ (Instagram) ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ. ತಾನು, ಮೈಯೋಸಿಟಿಸ್ (Myositis) ಎಂಬ ಸ್ವಯಂ ರೋಗ ನಿರೋಧಕ ಸ್ಥಿತಿಯಿಂದ (Auto Immune System) ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದು, ಮತ್ತು ಈಗ ಒಂದೆರಡು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ. ಆಕೆಯ ಸ್ವಯಂ ನಿರೋಧಕ ಸ್ಥಿತಿಯ ಸಮಸ್ಯೆ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದೂ ಅವರು ಹೇಳಿಕೊಂಡಿದ್ದಾರೆ. 

ತನ್ನ ಆರೋಗ್ಯದ ಬಗ್ಗೆ ಅಪ್ಡೇಟ್ಸ್‌ ಹಂಚಿಕೊಂಡ ನಟಿ ಸಮಂತಾ, "ನಾನು ಶೀಘ್ರದಲ್ಲೇ ಸಂಪೂರ್ಣ ಚೇತರಿಸಿಕೊಳ್ಳುತ್ತೇನೆ ಎಂದು ವೈದ್ಯರು ವಿಶ್ವಾಸ ಹೊಂದಿದ್ದಾರೆ" ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಬರೆದುಕೊಂಡಿದ್ದಾರೆ.

Latest Videos

undefined

ಇದನ್ನು ಓದಿ: ಸಮಂತಾಳನ್ನು ಮೊದಲು ಪ್ರೀತಿಸಿದ್ದು ನಾನು: ವಿಜಯ್ ದೇವರಕೊಂಡ ಶಾಕಿಂಗ್ ಹೇಳಿಕೆ

ಆಸ್ಪತ್ರೆಯ ಕೋಣೆಯಲ್ಲಿರುವ ಫೋಟೋವನ್ನು ಸಮಂತಾ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಅಲ್ಲದೆ, “ಯಶೋಧಾ ಟ್ರೈಲರ್‌ಗೆ ನಿಮ್ಮ ಪ್ರತಿಕ್ರಿಯೆ ಅಗಾಧವಾಗಿತ್ತು. ನಾನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಈ ಪ್ರೀತಿ ಮತ್ತು ಸಂಪರ್ಕವೇ ಜೀವನವು ನನ್ನ ಮೇಲೆ ಎಸೆಯುವ ಅಂತ್ಯವಿಲ್ಲದ ಸವಾಲುಗಳನ್ನು ಎದುರಿಸಲು ನನಗೆ ಶಕ್ತಿಯನ್ನು ನೀಡುತ್ತದೆ. ಕೆಲವು ತಿಂಗಳ ಹಿಂದೆ ನನಗೆ ಮೈಯೋಸಿಟಿಸ್ ಎಂಬ ಸ್ವಯಂ ರೋಗ ನಿರೋಧಕ ಸ್ಥಿತಿ ಇರುವುದು ಪತ್ತೆಯಾಯಿತು. ಇದು ಉಪಶಮನವಾದ ನಂತರ ನಾನು ಇದನ್ನು ಹಂಚಿಕೊಳ್ಳುವ ಇಚ್ಛೆ ಹೊಂದಿದ್ದೆ. ಆದರೆ ನಾನು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ. ನಾವು ಯಾವಾಗಲೂ ಬಲವಾಗಿಯೇ ಇರುತ್ತೇವೆ ಎಂದು ತೋರಿಸಿಕೊಳ್ಳುವ ಅಗತ್ಯವಿಲ್ಲ ಎಂದು ನಾನು ನಿಧಾನವಾಗಿ ಅರಿತುಕೊಳ್ಳುತ್ತಿದ್ದೇನೆ. ಈ ದುರ್ಬಲತೆಯನ್ನು ಒಪ್ಪಿಕೊಳ್ಳಲು ನಾನು ಇನ್ನೂ ಹೋರಾಡುತ್ತಿದ್ದೇನೆ. ಶೀಘ್ರದಲ್ಲೇ ನಾನು ಸಂಪೂರ್ಣ ಗುಣಮುಖನಾಗುತ್ತೇನೆ ಎಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದೀಪಿಕಾರಿಂದ ಸಮಂತಾರವರೆಗೆ ತಮ್ಮ ಆರೋಗ್ಯ ಸಮಸ್ಯೆಯಿಂದ ಸುದ್ದಿಯಲ್ಲಿರುವ ಸೆಲೆಬ್ರಿಟಿಗಳು

ನನಗೆ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಒಳ್ಳೆಯ ದಿನಗಳು ಮತ್ತು ಕೆಟ್ಟ ದಿನಗಳು ಇದ್ದವು. ಮತ್ತು ನಾನು ಇನ್ನೂ ಒಂದು ದಿನವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಭಾವಿಸಿದಾಗ ಸಹ, ಹೇಗಾದರೂ ಆ ಕ್ಷಣವು ಹಾದುಹೋಗುತ್ತದೆ. ನಾನು ಚೇತರಿಸಿಕೊಳ್ಳಲು ಇನ್ನೂ ಒಂದು ದಿನ ಹತ್ತಿರವಾಗಿದ್ದೇನೆ ಎಂದು ಮಾತ್ರ ಅರ್ಥೈಸಬಹುದು ಎಂದು ನಾನು ಭಾವಿಸುತ್ತೇನೆ. ಐ ಲವ್‌ ಯೂ.. ಇದು ಕೂಡ ಹಾದುಹೋಗುತ್ತದೆ" ಎಂಬ ದೀರ್ಘವಾದ ಭಾವನಾತ್ಮಕ ಬರಹವನ್ನು ನಟಿ ಸಮಂತಾ ರುತ್‌ ಪ್ರಭು ಹಂಚಿಕೊಂಡಿದ್ದಾರೆ. 
 
ಮೈಯೋಸಿಟಿಸ್ ಎಂದರೇನು?
ಮೈಯೋಸಿಟಿಸ್, ಎಂಬ ಸ್ಥಿತಿಯು ಒಂದಲ್ಲ, ಆದರೆ ಅಪರೂಪದ ಪರಿಸ್ಥಿತಿಗಳ ಗುಂಪನ್ನು ಸೂಚಿಸುತ್ತದೆ. ಇದು ನಿಮ್ಮ ರೋಗನಿರೋಧಕ ವ್ಯವಸ್ಥೆಯು ಸ್ನಾಯುಗಳ ಮೇಲೆ ದಾಳಿ ಮಾಡುವ ಸ್ಥಿತಿಯಾಗಿದೆ. ಸ್ನಾಯುಗಳಲ್ಲಿ ಉರಿಯೂತಕ್ಕೆ ಕಾರಣವಾಗುವ ಒಂದು ಅಥವಾ ಹೆಚ್ಚಿನ ಬಹು ಪರಿಸ್ಥಿತಿಗಳಿಂದ ಈ ರೋಗವು ಉಂಟಾಗಬಹುದು. ಇದರ ಮುಖ್ಯ ಲಕ್ಷಣಗಳು ಸ್ನಾಯು ನೋವು ಮತ್ತು ದೌರ್ಬಲ್ಯ, ಇದು ಕಾಲಾನಂತರದಲ್ಲಿ ಪರಿಸ್ಥಿತಿ ಕೆಡುಕಾಗುತ್ತಾ ಹೋಗುತ್ತದೆ. ಈ ಲಕ್ಷಣಗಳನ್ನು ಹೊಂದಿದವರು ಸಾಕಷ್ಟು ಮುಗ್ಗರಿಸಬಹುದು ಅಥವಾ ಬೀಳಬಹುದು ಅಥವಾ ನಡೆದಾಡಿದ ನಂತರವೂ ಸುಸ್ತಾಗಬಹುದು.
 
WebMD ಪ್ರಕಾರ, ಡರ್ಮಾಟೋಮೈಯೋಸಿಟಿಸ್, ಪಾಲಿಮೈಯೋಸಿಟಿಸ್ ಮತ್ತು ಇನ್ಕ್ಲೂಷನ್ ಬಾಡಿ ಮೈಯೋಸಿಟಿಸ್‌ನಂತಹ ಉರಿಯೂತದ ಪರಿಸ್ಥಿತಿಗಳು ತೀವ್ರವಾದ ಮೈಯೋಸಿಟಿಸ್‌ಗೆ ಕಾರಣವಾಗಬಹುದು. ಲೂಪಸ್, ಸ್ಕ್ಲೀರೋಡರ್ಮಾ ಮತ್ತು ರುಮಟಾಯ್ಡ್ ಸಂಧಿವಾತ ಸಹ ಈ ಸ್ಥಿತಿಯನ್ನು ಉಂಟುಮಾಡಬಹುದು. ಕೆಲವು ಔಷಧಿಗಳು ಮತ್ತು ತೀವ್ರವಾದ ದೈಹಿಕ ಗಾಯಗಳ ಜೊತೆಗೆ ವೈರಲ್ ಸೋಂಕುಗಳು ಸಹ ಈ ಸ್ಥಿತಿಗೆ ಕಾರಣವಾಗಬಹುದು.

ಇದನ್ನೂ ಓದಿ: 'ನೆವರ್ ವಾಕ್ ಅಲೋನ್' ಎಂದ ಸಮಂತಾ: ಮತ್ತೊಂದು ಮದುವೆಗೆ ಗ್ರೀನ್ ಸಿಗ್ನಲ್?
 
ದೌರ್ಬಲ್ಯವನ್ನು ಹೊರತುಪಡಿಸಿ, ಇತರ ರೋಗಲಕ್ಷಣಗಳು ಸಾಮಾನ್ಯವಾಗಿ ರ್ಯಾಷಸ್‌, ಆಯಾಸ, ಕೈಯಲ್ಲಿ ಚರ್ಮದ ದಪ್ಪವಾಗುವುದು, ನುಂಗಲು ಮತ್ತು ಉಸಿರಾಟದಲ್ಲಿ ತೊಂದರೆ, ಹಾಗೆಯೇ ದುರ್ಬಲ, ನೋವಿನ ಅಥವಾ ನೋವುಂಟುಮಾಡುವ ಸ್ನಾಯುಗಳನ್ನು ಒಳಗೊಂಡಿರುತ್ತದೆ. ರೋಗಲಕ್ಷಣಗಳು ಸಾಮಾನ್ಯವಾಗಿ ಕಾಲಾನಂತರದಲ್ಲಿ ಉಲ್ಬಣಗೊಳ್ಳುತ್ತವೆ.

click me!