ದೇಶದಲ್ಲಿ H3N2 ವೈರಸ್ ಭೀತಿ, ಆ್ಯಂಟಿಬಯೋಟಿಕ್ಸ್‌ ಅತಿಯಾಗಿ ಬಳಸದಂತೆ ತಜ್ಞರ ಎಚ್ಚರಿಕೆ

By Vinutha Perla  |  First Published Mar 5, 2023, 12:31 PM IST

ಬರೋಬ್ಬರಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಕೊರೋನಾ ವೈರಸ್ ಜಗತ್ತನ್ನೇ ಕಂಗೆಡಿಸಿತ್ತು. ಈಗ ಮತ್ತೊಂದು ಹೊಸ ವೈರಸ್ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ. ದೇಶದಾದ್ಯಂತ ಈಗ ಕೋವಿಡ್ ಲಕ್ಷಣಗಳನ್ನೇ ಹೋಲುವ ಇನ್‌ಫ್ಲೂಯೆಂಜಾ ಎಚ್‌3ಎನ್‌2 ಉಪ ಮಾದರಿ ವೈರಸ್ ಸೋಂಕು ಹರಡುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಕಳೆದ ಕೆಲವು ವಾರಗಳಿಂದ ದೇಶದ ಅನೇಕ ಭಾಗಗಳಲ್ಲಿ ಇನ್‌ಫ್ಲುಯೆಂಜಾ ಮಾದರಿಯ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೋವಿಡ್ ಸಾಂಕ್ರಾಮಿಕದ ಎರಡು ವರ್ಷಗಳ ಹೋರಾಟದ ಬಳಿಕ ಈಗಷ್ಟೇ ಚೇತರಿಸಿಕೊಂಡಿರುವ ಹೊಸ ವೈರಸ್ ಭೀತಿ ಮೂಡಿಸುತ್ತಿದೆ. ನಿರಂತರ ಕೆಮ್ಮು, ಬಿಡದ ಜ್ವರ ಕಾಣಿಸಿಕೊಳ್ಳುತ್ತಿದೆ. ದೇಶದಾದ್ಯಂತ ಕಳೆದ ಎರಡು ತಿಂಗಳುಗಳಿಂದಶೀತ ಜ್ವರ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ. ದೀರ್ಘ ಕಾಲದ ಅನಾರೋಗ್ಯ, ಕೆಮ್ಮುವಿಗೆ ಕಾಣವಾಗುವುದರ ಜತೆಗೆ ರೋಗಲಕ್ಷಣಗಳೂ (Symptoms) ಹೆಚ್ಚು ಕಾಣಿಸುತ್ತಿವೆ. 

H3N2 ವೈರಸ್ ಕುರಿತು ಐಸಿಎಂಆರ್ ಸೂಚನೆಯನ್ನು ಬಿಡುಗಡೆ ಮಾಡಿದೆ. ಎಚ್​3ಎನ್​2 ವೈರಸ್​ನಿಂದ ಉಂಟಾಗುವ ಸೋಂಕು ಪ್ರಕರಣಗಳಲ್ಲಿ ಇತರ ಉಪ ತಳಿಗಳ ಸೋಂಕುಗಳಿಗಿಂತಲೂ ಆಸ್ಪತ್ರೆಗೆ (Hospital) ದಾಖಲಾಗುವವರ ಸಂಖ್ಯೆ ಹೆಚ್ಚಿದೆ. ಕಳೆದ 2-3 ತಿಂಗಳುಗಳಲ್ಲಿ ಈ ಸೋಂಕು ಹರಡುವಿಕೆ ಹೆಚ್ಚಾಗಿದೆ ಎಂದು ಐಸಿಎಂಆರ್ ತಜ್ಞರು ಹೇಳಿದ್ದಾರೆ.

Latest Videos

undefined

ಮತ್ತೆ ಶುರುವಾಯ್ತಾ ಬೆಂಗಳೂರಿಗೆ ಕೊರೊನಾ ಕಾಟ!

H3N2 ಲಕ್ಷಣಗಳೇನು?
-ಕೆಮ್ಮು
-ವಾಕರಿಕೆ
- ವಾಂತಿ
- ಗಂಟಲು ನೋವು
- ಸ್ನಾಯು ಸೆಳೆತ 
 -ಅತಿಸಾರ

ಎಚ್​3ಎನ್​2 ಇನ್​ಫ್ಲುಯೆಂಜಾ ವೈರಸ್​ನಿಂದಾಗಿ ಸೋಂಕು ಉಂಟಾದವರಲ್ಲಿ ಕಫ, ವಾಕರಿಕೆ, ವಾಂತಿ, ಗಂಟಲು ಕಿರಿಕಿರಿ, ಜ್ವರ, ಮೈಕೈ ನೋವು, ಭೇದಿ ಲಕ್ಷಣಗಳು ಮುಖ್ಯವಾಗಿ ಕಾಣಿಸಿಕೊಳ್ಳುತ್ತಿವೆ. ಇತ್ತೀಚೆಗೆ ವರದಿಯಾದ ಪ್ರಕರಣಗಳಲ್ಲಿ ಸೋಂಕಿತರು ದೀರ್ಘ ಕಾಲದ ವರೆಗೆ ರೋಗ ಲಕ್ಷಣ ಹೊಂದಿರುವುದು ಕಂಡುಬಂದಿದೆ. ಸೋಂಕು ಸಾಮಾನ್ಯವಾಗಿ ಐದರಿಂದ ಏಳು ದಿನಗಳವರೆಗೆ ಇರುತ್ತದೆ. ಜ್ವರವು ಮೂರು ದಿನಗಳಲ್ಲಿ ಕಡಿಮೆಯಾಗುತ್ತದೆ. ಆದರೆ, ಕೆಮ್ಮು ಮಾತ್ರ ಮೂರು ವಾರಗಳವರೆಗೆ ಇರುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.

H3N2 ವೈರಸ್ ತಗುಲದಂತೆ ಸುರಕ್ಷಿತವಾಗಿರುವುದು ಹೇಗೆ?
-ಸೋಪು, ನೀರು ಬಳಸಿ ಆಗಾಗ ಕೈಗಳನ್ನ ತೊಳೆಯಬೇಕು
- ಮಾಸ್ಕ್ ಧರಿಸಿ, ಜನ ಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಓಡಾಟ ಬೇಡ
- ಪದೇ ಪದೇ ಮೂಗು, ಬಾಯಿ ಮುಟ್ಟಬೇಡಿ. ನೀರು ಜಾಸ್ತಿ ಸೇವಿಸಿ
- ಜ್ವರ , ಮೈ ಕೈ ನೋವು ಇದ್ರೆ ಪ್ಯಾರಸಿಟಮಾಲ್ ಸೇವಿಸಿ

ಆ್ಯಂಟಿಬಯೋಟಿಕ್ಸ್‌ ಅತಿಯಾದ ಬಳಕೆ ಬೇಡ ಎಂದ ತಜ್ಞರು
ಜ್ವರ, ಶೀತ, ಕಫ ಮತ್ತಿತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಆಂಟಿಬಯಾಟಿಕ್​ಗಳನ್ನು ಸೇವಿಸಬಾರದು ಎಂದ ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ಅನಿವಾರ್ಯವಲ್ಲದ ಹೊರತು ಆಂಟಿಬಯಾಟಿಕ್​ಗಳನ್ನು ತೆಗೆದುಕೊಳ್ಳಬೇಡಿ. ವೈದ್ಯರು ಕೂಡ ರೋಗಿಗಳಿಗೆ ಆಯಂಟಿಬಯಾಟಿಕ್ಸ್​ ತೆಗೆದುಕೊಳ್ಳುವಂತೆ ಸಲಹೆ ನೀಡಬಾರದು ಎಂದು ಭಾರತೀಯ ವೈದ್ಯಕೀಯ ಸಂಘ ಈಗಾಗಲೇ ಎಚ್ಚರಿಕೆ ನೀಡಿದೆ. ಇದನ್ನು ಐಸಿಎಂಆರ್ ಕೂಡ ಸ್ಪಷ್ಟಪಡಿಸಿದೆ.

Health Tips: ಅಧಿಕ ತೂಕದಿಂದ ಹೃದ್ರೋಗ ಮಾತ್ರವಲ್ಲ ಚರ್ಮದ ಸಮಸ್ಯೆಯೂ ಉಂಟಾಗುತ್ತೆ ಜೋಕೆ!

H3N2 ಬಗ್ಗೆ ಎಚ್ಚರ ವಹಿಸಬೇಕಾದವರು ಯಾರು ಗೊತ್ತಾ?
H3N2 ವೈರಸ್‌ಗೆ ಅತಿ ಹೆಚ್ಚು ಸೊಂಕಿಗೆ ಒಳಗಾಗುತ್ತಿರೋದು ಯಾವ ವಯೋಮಾನದವರು ಎಂಬ ಪ್ರಶ್ನೆ ಮೂಡಬಹುದು. ಮಕ್ಕಳು, ಹಿರಿಯ ನಾಗರೀಕರು ಅತಿ ಹೆಚ್ಚು ಜಾಗೃತೆ ವಹಿಸಲೇಬೇಕು. 15 ವರ್ಷ ಒಳಪಟ್ಟ ಮಕ್ಕಳು, 50 ವರ್ಷ ಮೇಲ್ಪಟ್ಟ ಹಿರಿಯರು ಜಾಗೃತಿ ವಹಿಸಲೇಬೇಕು. ಈ ಎರಡು ಬಗೆಯ ವಯೋಮಾನದವರಲ್ಲಿ ಇಮ್ಯುನಿಟಿ ಪವರ್ ಕಡಿಮೆ ಇರುವ ಸಾಧ್ಯತೆ ಹೆಚ್ಚಿದ್ದು, ವೈರಸ್ ಹರಡುವ ಸಾಧ್ಯತೆ ಇದೆ. ಅಸ್ತಮಾ ರೋಗಿಗಳು, ನ್ಯುಮೋನಿಯಾ ದಂತ ಖಾಯಿಲೆಗಳಿಗೆ ತುತ್ತಾಗಿರುವವರು ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

H3N2  ಇತರ ಇನ್ಫ್ಲುಯೆನ್ಸ ಉಪವಿಧಗಳಿಗಿಂತ ಈ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ/ H3N2 ಸೋಂಕು ಪತ್ತೆಯಾದವರಲ್ಲಿ ಆಸ್ಪತ್ರೆಗೆ ದಾಖಲಾದ SARI ರೋಗಿಗಳಲ್ಲಿ, ಸುಮಾರು 92% ರಷ್ಟು ಜ್ವರ, 86% ಕೆಮ್ಮು, 27% ಉಸಿರಾಟದ ತೊಂದರೆ, 16% ಉಬ್ಬಸದಿಂದ ಬಳಲುತ್ತಿದ್ದಾರೆ. ಹೆಚ್ಚುವರಿಯಾಗಿ, 16% ಜನರು ನ್ಯುಮೋನಿಯಾದ ವೈದ್ಯಕೀಯ ಚಿಹ್ನೆಗಳನ್ನು ಹೊಂದಿದ್ದರು ಮತ್ತು 6% ನಷ್ಟು ರೋಗಗ್ರಸ್ತವಾಗುವಿಕೆಗಳನ್ನು ಹೊಂದಿದ್ದಾರೆ. H3N2 ಹೊಂದಿರುವ 10% SARI ರೋಗಿಗಳಿಗೆ ಆಮ್ಲಜನಕದ ಅಗತ್ಯವಿದೆ. 7% ICU ಆರೈಕೆಯ ಅಗತ್ಯವಿದೆ ಎಂದು ತಿಳಿಸಲಾಗಿದೆ.

click me!