ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತ್ತೆ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು (ಮಾ.5) : ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತ್ತೆ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ನಗರದಲ್ಲಿ ಶನಿವಾರ 79 ಜನರಲ್ಲಿ ಕೊರೋನಾ ಸೋಂಕು(Corona virus) ದೃಢಪಟ್ಟಿದೆ. ಪಾಸಿಟಿವಿಟಿ ದರ( positivity rate) ಶೇ.7.06 ದಾಖಲಾಗಿದೆ. ಸೋಂಕಿನಿಂದ 62 ಮಂದಿ ಗುಣಮುಖರಾಗಿದ್ದು, ಮೃತಪಟ್ಟ ವರದಿಯಾಗಿಲ್ಲ.
undefined
Heart Attack : ಕೊರೊನಾ ನಂತ್ರ ಹೆಚ್ಚಾಯ್ತಾ ಹೃದಯಾಘಾತ?
ಸದ್ಯ ನಗರದಲ್ಲಿ 266 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 21 ಮಂದಿ ಆಸ್ಪತ್ರೆಯಲ್ಲಿದ್ದು, ಓರ್ವ ಐಸಿಯು ವೆಂಟಿಲೇಟರ್, 6 ಮಂದಿ ಐಸಿಯು ಮತ್ತು 3 ಜನ ಎಚ್‌ಡಿಯು ಮತ್ತು 11 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 772 ಮಂದಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು, 155 ರಾರಯಪಿಡ್ ಆ್ಯಂಟಿಜಿನ್ ಪರೀಕ್ಷೆಗೆ ಮತ್ತು 617 ಮಂದಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದರು.
31 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 4 ಮಂದಿ ಮೊದಲ ಡೋಸ್, 15 ಮಂದಿ ಎರಡನೇ ಡೋಸ್ ಮತ್ತು 12 ಮಂದಿ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಇಂದಿನ 04/03/2023 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/gpEd2iBLJC pic.twitter.com/Kx9yoXoQbR
— K'taka Health Dept (@DHFWKA)